Just In
- 1 hr ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 1 hr ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- 2 hrs ago ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- 2 hrs ago ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇವಿ ಸ್ಕೂಟರ್ ಮಾದರಿಗಳೊಂದಿಗೆ ಇದೇ ತಿಂಗಳು 29ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ ಎಲ್ಎಂಎಲ್
ಭಾರತದಲ್ಲಿ ಇವಿ ವಾಹನಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಹಲವಾರು ವಾಹನ ತಯಾರಕ ಕಂಪನಿಗಳು ಇವಿ ಉತ್ಪಾದನೆಯತ್ತ ಗಮನಹರಿಸುತ್ತಿವೆ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿರುವ ಎಲ್ಎಂಎಲ್ ಕಂಪನಿಯು ಭವಿಷ್ಯ ವಾಹನಗಳ ಉತ್ಪಾದನೆ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.
ಲೋಹಿಯಾ ಮೋಟಾರ್ಸ್ ಲಿಮಿಟೆಡ್(LML) ಕಂಪನಿಯು ಎಲೆಕ್ಟ್ರಿಕ್ ವಾಹನ ಉದ್ಯಮ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಮಾಹಿತಿಗಳ ಪ್ರಕಾರ ಕಂಪನಿಯು ಇದೇ ತಿಂಗಳು 29ರಂದು ಮಾರುಕಟ್ಟೆ ಪ್ರವೇಶಿಸುವುದು ಖಚಿತವಾಗಿದ್ದು, ಇವಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.
ಹೊಸ ಇವಿ ದ್ವಿಚಕ್ರ ವಾಹನಗಳಿಗಾಗಿ ಕಂಪನಿಯು ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲಿ ಟ್ರೇಡ್ ಮಾರ್ಕ್ ಸಹ ಸಲ್ಲಿಸಿದ್ದು, ಟ್ರೇಡ್ ಮಾರ್ಕ್ ಅರ್ಜಿಯಲ್ಲಿ ಕಂಪನಿಯು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಸ್ಟಾರ್ ಮತ್ತು ಹೈಪರ್ಬೈಕ್ ಹೆಸರುಗಳೊಂದಿಗೆ ಬಿಡುಗಡೆ ಮಾಡುವ ಸುಳಿವು ನೀಡಿದೆ.
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿದ್ದು, ಅನೇಕ ಸ್ಟಾರ್ಟ್ಅಪ್ ಕಂಪನಿಗಳು ತಮ್ಮ ಹೊಸ ಇವಿ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಪ್ರವೇಶಿಸುತ್ತಿವೆ. ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಸದ್ಯ ಎಲೆಕ್ಟ್ರಿಕ್ ಸ್ಕೂಟರ್ಗಳ ಮಾರಾಟವು ಅಗ್ರಸ್ಥಾನದಲ್ಲಿದ್ದು, ಕೆಳದ ಎರಡು ವರ್ಷಗಳಲ್ಲಿ ಹಲವಾರು ಹೊಸ ಇವಿ ಸ್ಕೂಟರ್ಗಳನ್ನು ಬಿಡುಗಡೆಗೊಂಡಿವೆ.
ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೊಸ ನೀರಿಕ್ಷೆಯೊಂದಿಗೆ ಇದೀಗ ಭಾರತದಲ್ಲಿ ವೆಸ್ಪಾ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಲ್ಎಂಎಲ್ ಕಂಪನಿಯು ಕೂಡಾ ಸಹಭಾಗೀತ್ವ ಯೋಜನೆ ಅಡಿ ಇವಿ ದ್ವಿಚಕ್ರ ವಾಹನ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿದೆ.
ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ಮುಂದಿನ ಎರಡು ವರ್ಷದೊಳಗೆಗ ಮೂರು ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಇದಕ್ಕಾಗಿ ಕಂಪನಿಯು ರೂ. 1 ಸಾವಿರ ಕೋಟಿ ಹೂಡಿಕೆಯೊಂದಿಗೆ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ.
1972ರಲ್ಲಿ ಮೊದಲ ಬಾರಿಗೆ ದ್ವಿಚಕ್ರ ವಾಹನಗಳನ್ನು ಆರಂಭಿಸಿದ್ದ ಉತ್ತರಪ್ರದೇಶದ ಕಾನ್ಪುರ್ ಮೂಲದ ಎಲ್ಎಂಎಲ್ ಕಂಪನಿಯು ಹಲವಾರು ಜನಪ್ರಿಯ ವಾಹನಗಳನ್ನು ಬಿಡುಗಡೆ ಮಾಡಿತ್ತು. 1984ರ ವೇಳೆಗೆ ತನ್ನ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿ ಗುರುತಿಸಿಕೊಂಡ ಎಲ್ಎಂಎಲ್ ಕಂಪನಿಯು ತದನಂತರ ವೆಸ್ಪಾ ಸ್ಕೂಟರ್ಗಳನ್ನು ಭಾರತದಲ್ಲಿ ತಯಾರಿಸಲು ಪಿಯಾಜಿಯೊ ಜೊತೆ ಒಪ್ಪಂದ ಮಾಡಿಕೊಂಡಿತ್ತು.
ಇದೀಗ ಕಂಪನಿಯು ಹೊಸ ತಲೆಮಾರಿನ ಇವಿ ವಾಹನಗಳೊಂದಿಗೆ ಪ್ರತ್ಯೇಕ ಹೂಡಿಕೆಯ ಮೂಲಕ ಮರಳಿ ಮಾರುಕಟ್ಟೆಗೆ ಪ್ರವೇಶಿಸಲು ಸಿದ್ದವಾಗುತ್ತಿದ್ದು, ಹರಿಯಾಣ ಮೂಲದ ಸೈರಾ ಎಲೆಕ್ಟ್ರಿಕ್ ಆಟೋ ಸಹಯೋಗದಲ್ಲಿ ಎಲ್ಎಂಎಲ್ ಕಂಪನಿಯು ಹೊಸ ಇವಿ ವಾಹನಗಳನ್ನು ಉತ್ಪಾದಿಸಲಿದೆ.
ಹರಿಯಾಣದ ಬವಾಲ್ನಲ್ಲಿರುವ ಈ ಸ್ಥಾವರದಲ್ಲಿ ತಿಂಗಳಿಗೆ 18,000 ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಎಲ್ಎಂಎಲ್ ಕಂಪನಿಯು ಭಾರತದಲ್ಲಿ ಹೀರೋ ಎಲೆಕ್ಟ್ರಿಕ್, ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ ಮತ್ತು ಓಕಿನಾವಾ ಮುಂತಾದ ಪ್ರಮುಖ ಇವಿ ವಾಹನ ತಯಾರಕರೊಂದಿಗೆ ಸ್ಪರ್ಧಿಸಲಿದೆ.
ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ಮುಂದಿನ ಎರಡು ವರ್ಷದೊಳಗೆಗ ಮೂರು ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಮುಂದಿನ ಒಂದು ವರ್ಷದೊಳಾಗಿ ಹೊಸ ಉತ್ಪಾದನಾ ಘಟಕದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
ಹೊಸ ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸಗೊಳಿಸಲು ಜಪಾನ್ ಮತ್ತು ಯುರೋಪ್ನಲ್ಲಿರುವ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಸಹಭಾಗೀತ್ವ ಯೋಜನೆ ಅಡಿ ಹೊಸ ವಾಹನಗಳನ್ನು ಅಭಿವೃದ್ದಿಪಡಿಸಲಾಗುತ್ತಿದ್ದು,ಎಲ್ಎಂಎಲ್ ಕಂಪನಿಯು ಸೈರಾ ಕಂಪನಿಯ ಜೊತೆ ಮಾತ್ರವಲ್ಲದೆ ಇದು ಇರಾಕಿಟ್ ಎಜೆ ಕಂಪನಿಯ ಸಹಯೋಗದಲ್ಲೂ ಭಾರತದಲ್ಲಿ ಎಲೆಕ್ಟ್ರಿಕ್ ಹೈಪರ್ಬೈಕ್ ಅನ್ನು ಉತ್ಪಾದಿಸಲಿದೆ.
ಜರ್ಮನಿ ಮೂಲದ ಇ ರಾಕಿಟ್ ಎಜೆ ವಿಶೇಷ ರೀತಿಯ ಎಲೆಕ್ಟ್ರಿಕ್ ಹೈಪರ್ ಬೈಕ್ಗಳು ಭಾರತದಲ್ಲಿ ಹೊಸ ಸಂಚನ ಮೂಡಿಸಲಿದ್ದು, ಹೊಸ ಹೈಪರ್ ಬೈಕ್ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
ಪೆಡಲಿಂಗ್ ಮೂಲಕವೂ ಚಾಲನೆ ಮಾಡಬಹುದಾದ ಸೌಲಭ್ಯ ಹೊಂದಿರುವ ಇ ರಾಕಿಟ್ ಎಜೆ ಬೈಕ್ ಮಾದರಿಯು ಗಂಟೆಗೆ 90 ಕಿಮೀ ವೇಗದಲ್ಲಿ ಓಡಿಸಬಹುದು. ಈ ಇ-ಬೈಕ್ನಲ್ಲಿ ಅಡ್ವಾನ್ಸ್ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸಲಾಗಿದ್ದು, ಇದರ ಸಹಾಯದಿಂದ ಇದು ಪೂರ್ಣ ಚಾರ್ಜ್ನಲ್ಲಿ 150 ಕಿ.ಮೀ ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಪಡೆಯುತ್ತದೆ.
ಎಲ್ಎಂಎಲ್ ಕಂಪನಿಯು ಇ ರಾಕಿಟ್ ಎಜೆ ಬೈಕ್ ಮಾದರಿಯನ್ನ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಪ್ರಾರಂಭಿಸುವುದಾಗಿ ಈಗಾಗಲೇ ಘೋಷಿಸಿದ್ದು, ಸೈರಾ ಕಂಪನಿಯೊಂದಿಗೆ ಇವಿ ವಾಹನ ಉತ್ಪಾದನೆಯನ್ನು ಆರಂಭಿಸುವ ಯೋಜನೆಯಲ್ಲಿದೆ.