ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ದೇಶಾದ್ಯಂತ ಇವಿ ವಾಹನಗಳ ಮಾರಾಟವು ವೇಗ ಪಡೆದುಕೊಳ್ಳುತ್ತಿದ್ದು, ಗ್ರಾವ್‌ಟನ್ ಮೋಟಾರ್ಸ್ ಕಂಪನಿಯು ತನ್ನ ಭವಿಷ್ಯ ಇವಿ ವಾಹನಗಳಿಗಾಗಿ ಬ್ಯಾಟರಿ ಉತ್ಪಾದನಾ ಕಂಪನಿಯಾಗಿರುವ ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಪ್ರಕಟಸಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಹೈದ್ರಾಬಾದ್ ಮೂಲದ ಗ್ರಾವ್‌ಟನ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ನಮ್ಮ ಬೆಂಗಳೂರು ಮೂಲದ ಲಾಗ್9 ಮೆಟೀರಿಯಲ್ಸ್ ಕಂಪನಿಯು ತನ್ನ ವಿಶೇಷ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಒದಗಿಸಲಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಲಾಗ್9 ಮೆಟೀರಿಯಲ್ಸ್ ಕಂಪನಿಯ ಪ್ರಕಾರ, ಗ್ರಾವ್‌ಟನ್ ಮೋಟಾರ್ಸ್ ಜೊತೆಗೆ ದೀರ್ಘಾವಧಿಯ ಪಾಲುದಾರಿಕೆ ಪ್ರಕಟಿಸಿದ್ದು, ಈ ಹೊಸ ಪಾಲುದಾರಿಕೆಯ ಯೋಜನೆ ಅಡಿಯಲ್ಲಿ ಗ್ರಾವ್‌ಟನ್ ಮೋಟಾರ್ಸ್ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಪ್ರೇರಿತ ಇನ್‌ಸ್ಟಾಚಾರ್ಜ್(InstaCharge) ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸಲಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಲಾಗ್9 ಕಂಪನಿಯು ತನ್ನದೆ ಆದ ಹೊಸ ತಂತ್ರಜ್ಞಾನ ಅಭಿವೃದ್ದಿ ಯೋಜನೆ ಅಡಿ ಪ್ರಮುಖ ಇವಿ ವಾಹನ ತಯಾರಕ ಕಂಪನಿಗಳಿಗೆ ಇನ್‌ಸ್ಟಾಚಾರ್ಜ್ ಬ್ಯಾಟರಿ ತಂತ್ರಜ್ಞಾನ ಒದಗಿಸುತ್ತಿದ್ದು, ಜೊತೆಗೆ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಸೇವೆಯನ್ನು ಒದಗಿಸುತ್ತಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಹೀಗಾಗಿ ಲಾಗ್9 ಕಂಪನಿಯ ಜೊತೆ ಕೈಜೋಡಿಸಿರುವ ಪ್ರಮುಖ ಇವಿ ತಯಾರಕ ಕಂಪನಿಗಳು ಇನ್ಮುಂದೆ ಇನ್‌ಸ್ಟಾಚಾರ್ಜ್ ಬ್ಯಾಟರಿ ಪ್ಯಾಕ್ ಅಳವಡಿಸಿಕೊಳ್ಳಲಿದ್ದು, ಇವು ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಕೇವಲ 15 ನಿಮಿಷಗಳಲ್ಲಿ ಶೇ.100 ರಷ್ಟು ಚಾರ್ಜಿಂಗ್ ವೈಶಿಷ್ಟ್ಯತೆ ಒಳಗೊಂಡಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಲಾಗ್9 ಮೆಟೀರಿಯಲ್ಸ್ ಕಂಪನಿಯು ವಿವಿಧ ಎಲೆಕ್ಟ್ರಿಕ್ ವಾಹನ ಮಾದರಿಗಳಿಗಾಗಿ ವಿವಿಧ ರೇಂಜ್ ಹೊಂದಿರುವ ಬ್ಯಾಟರಿ ಸೌಲಭ್ಯವನ್ನು ಅಳವಡಿಸಲಿದ್ದು, ಬ್ಯಾಟರಿ ಪ್ಯಾಕ್ ಆಧರಿಸಿ ಚಾರ್ಜಿಂಗ್ ಸಮಯವು ನಿರ್ಧಾರವಾಗುತ್ತದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಮಾಡುವ ಲಾಗ್9 ಇನ್‌ಸ್ಟಾಚಾರ್ಜ್ ಬ್ಯಾಟರಿ ಸೌಲಭ್ಯವು ಸಾಮಾನ್ಯ ಲೀಥಿಯಂ ಅಯಾನ್ ಬ್ಯಾಟರಿಗಿಂತಲೂ 9 ಪಟ್ಟು ಹೆಚ್ಚು ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಹೊಂದಿವೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಲಾಗ್9 ಹೊಸ ಬ್ಯಾಟರಿ ಪ್ಯಾಕ್‌ಗಳು -30 ಡಿಗ್ರಿಯಿಂದ 60 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲೂ ಅಚ್ಚುಕಟ್ಟಾಗಿ ಕಾರ್ಯಾನಿರ್ವಹಿಸುದಲ್ಲದೆ 15 ಸಾವಿರಕ್ಕೂ ಹೆಚ್ಚು ಬಾರಿ ಬ್ಯಾಟರಿ ಚಾರ್ಜಿಂಗ್ ವೈಶಿಷ್ಟ್ಯತೆ ಹೊಂದಿವೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಹೀಗಾಗಿ ಲಾಗ್9 ಹೊಸ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಮಾದರಿಗಾಗಿ ಪ್ರಮುಖ ಇವಿ ಕಂಪನಿಗಳು ಸಹಭಾಗಿತ್ವ ಪ್ರಕಟಿಸುತ್ತಿದ್ದು, ಇದೀಗ ಗ್ರಾವ್‌ಟನ್ ಮೋಟಾರ್ಸ್ ಕಂಪನಿಯು ಸಹ ಹೊಸ ಪಾಲುದಾರಿಕೆ ಯೋಜನೆ ಅಡಿ ಹೊಸ ಯೋಜನೆ ಆರಂಭಿಸಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಇನ್ನು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯವಾಗಿ ಇವಿ ವಾಹನಗಳ ಉತ್ಪಾದನೆ ಹೆಚ್ಚುತ್ತಿದ್ದರೂ ಇವಿ ವಾಹನಗಳ ಮುಖ್ಯ ತಾಂತ್ರಿಕ ಅಂಶವಾಗಿರುವ ಬ್ಯಾಟರಿ ಸೌಲಭ್ಯಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನು ಅವಲಂಬಿಸಿರುವುದೇ ಇವಿ ವಾಹನಗಳು ದುಬಾರಿಯಾಗಿರಲು ಮುಖ್ಯ ಕಾರಣವಾಗಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಭಾರತದಲ್ಲಿ ಸದ್ಯ ಪ್ರಮುಖ ಇವಿ ವಾಹನಗಳ ಕಂಪನಿಗಳು ಇವಿ ವಾಹನ ಉತ್ಪಾದನೆ ಸ್ಥಳೀಕರಣ ಅಳವಡಿಸಿಕೊಂಡರೂ ಬ್ಯಾಟರಿ ಸೌಲಭ್ಯಕ್ಕಾಗಿ ವಿದೇಶಿ ಮಾರುಕಟ್ಟೆಗಳನ್ನು ಅವಲಂಬಿಸಿರುವುದು ಹೆಚ್ಚಿನ ಮಟ್ಟದ ಬೆಲೆ ಹೊಂದಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಸ್ಥಳೀಯವಾಗಿ ಬ್ಯಾಟರಿ ನಿರ್ಮಾಣ ಮಾಡಲು ಸದ್ಯ ಪ್ರಮುಖ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಬ್ಯಾಟರಿ ಉತ್ಪಾದನಾ ಘಟಕಗಳನ್ನು ನಿರ್ಮಾಣ ಮಾಡುತ್ತಿವೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಮುಂಬರುವ ದಿನಗಳಲ್ಲಿ ವಿವಿಧ ಕಂಪನಿಗಳು ಸ್ಥಳೀಯ ಬ್ಯಾಟರಿ ಪ್ಯಾಕ್ ಅಭಿವೃದ್ದಿಪಡಿಸಿದರೂ ಸಹ ಅದಕ್ಕೆ ಮುಖ್ಯವಾಗಿರುವ ಬೇಕಿರುವ ಸೆಲ್ ಅಳವಡಿಕೆಗೆ ಮತ್ತೆ ವಿದೇಶಿ ಕಂಪನಿಗಳನ್ನೇ ಅವಲಂಬನೆ ಮಾಡುಬೇಕಾಗುತ್ತದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಈ ನಿಟ್ಟಿನಲ್ಲಿ ಮಹತ್ವದ ಯೋಜನೆ ಆರಂಭಿಸಿರುವ ನಮ್ಮ ಬೆಂಗಳೂರು ಮೂಲದ ಲಾಗ್9 ಮೆಟೀರಿಯಲ್ಸ್‌ ಕಂಪನಿಯು ಸ್ಥಳೀಯವಾಗಿ ಬ್ಯಾಟರಿ ಸೆಲ್ ಉತ್ಪಾದನೆಯನ್ನು ಆರಂಭಿಸಿದ್ದು, ಪ್ರಾಯೋಗಿಕ ಪರೀಕ್ಷೆಗಳಲ್ಲಿ ಯಶಸ್ವಿ ಹೊಂದಿರುವ ಕಂಪನಿಯು ಇದೀಗ ಬೃಹತ್ ಪ್ರಮಾಣದಲ್ಲಿ ಬ್ಯಾಟರಿ ಸೆಲ್ ನಿರ್ಮಾಣಕ್ಕಾಗಿ ಪ್ರತ್ಯೇಕ ನಿಯಂತ್ರಿತ ಕಾರ್ಖಾನೆಯನ್ನು ಆರಂಭಿಸಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಬೆಂಗಳೂರಿನ ಜಕ್ಕೂರಿನಲ್ಲಿರುವ ಲಾಗ್9 ಮೆಟೀರಿಯಲ್ಸ್‌ ಹೊಸ ಬ್ಯಾಟರಿ ಸೆಲ್ ಅಭಿವೃದ್ದಿ ಕೇಂದ್ರವು ಇವಿ ಬ್ಯಾಟರಿ ಬೇಕಿರುವ ಸೆಲ್ ನಿರ್ಮಾಣಗೊಳಿಸಲಿದ್ದು, ಇದು ಭಾರತದಲ್ಲಿ ಮಾತ್ರವಲ್ಲ ಆಗ್ನೇಯ ಏಷ್ಯಾದಲ್ಲಿ ಅತಿದೊಡ್ಡ ಸೆಲ್ ಉತ್ಪಾದನಾ ಘಟಕವಾಗಿದೆ.

ಲಾಗ್9 ಮೆಟೀರಿಯಲ್ಸ್ ಜೊತೆ ಪಾಲುದಾರಿಕೆ ಘೋಷಿಸಿದ ಗ್ರಾವ್‌ಟನ್ ಮೋಟಾರ್ಸ್

ಲಾಗ್9 ಮೆಟೀರಿಯಲ್ಸ್‌ನಿಂದ ದೇಶದ ಮೊದಲ ಸೆಲ್ ಉತ್ಪಾದನಾ ಘಟಕದ ಉದ್ಘಾಟನಾ ದಿನದಂದು ಕಂಪನಿಯು 'ಡೇ ಝೀರೋ' ಎಂದು ಘೋಷಣೆ ಮಾಡಿದ್ದು, 2015ರಲ್ಲಿ ಈ ದಿನದಂದು ಸ್ಥಾಪನೆಗೊಂಡಿದ್ದ ಕಂಪನಿಯು ತನ್ನ 7ನೇ ವಾರ್ಷಿಕೋತ್ಸದ ವೇಳೆಗೆ ಹೊಸ ಬ್ಯಾಟರಿ ಸೆಲ್ ಅಭಿವೃದ್ದಿ ಕೇಂದ್ರದಲ್ಲಿ ಅಧಿಕೃತ ಉತ್ಪಾದನೆಗೆ ಚಾಲನೆ ನೀಡಿದೆ.

Most Read Articles

Kannada
English summary
Log9 materials partners with gravton motors for electric scooters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X