Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಕರ್ಷಕ ಫೀಚರ್ಸ್ ಹೊಂದಿರುವ ಎಎಂ1 ಇವಿ ಸ್ಕೂಟರ್ ಬಿಡುಗಡೆ ಮಾಡಿದ ಮೊಬ್-ಅಯಾನ್
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಪ್ರಮುಖ ಇವಿ ಸ್ಟಾರ್ಟ್ಅಪ್ ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಆವೃತ್ತಿಗಳನ್ನು ಪರಿಚಯಿಸುವ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ದುಬಾರಿ ಇಂಧನಗಳ ದರ ಪರಿಣಾಮ ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಇವಿ ವಾಹನಗಳ ಮಾರಾಟವು ಸಾಕಷ್ಟು ಏರಿಕೆಯಾಗಿದೆ. ಹೀಗಾಗಿ ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಮಾದರಿಯ ಹಲವಾರು ಇವಿ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಫ್ರೆಂಚ್ ಸ್ಟಾರ್ಟ್ಅಪ್ ಕಂಪನಿಯಾಗಿರುವ ಮೊಬ್-ಅಯಾನ್ ಕೂಡಾ ಹೊಸ ಮಾದರಿಯ ಇವಿ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಗ್ರಾಹಕರ ಬೇಡಿಕೆ ವಿವಿಧ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಗೊಳಿಸುವಲ್ಲಿ ಸ್ಟಾರ್ಟ್ ಕಂಪನಿಗಳು ಯಶಸ್ವಿಯಾಗುತ್ತಿವೆ.

ಫ್ರೆಂಚ್ ಸ್ಟಾರ್ಟ್ಅಪ್ ಮೊಬ್ ಅಯಾನ್ ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್ಗಳ ಅಭಿವೃದ್ದಿಗೆ ಚಾಲನೆ ನೀಡಿದ್ದು, ಇದೀಗ ಕಂಪನಿಯು ತನ್ನ ಮೊದಲ ಇವಿ ಸ್ಕೂಟರ್ ಮಾದರಿಯಾದ ಎಎಂ1 ಇವಿ ಸ್ಕೂಟರ್ ಅನಾವರಣಗೊಳಿಸಿತು.

ಹೊಸ ಎಎಂ1 ಇವಿ ಸ್ಕೂಟರ್ ಮಾದರಿಯು ಸುಧಾರಿತ ತಂತ್ರಜ್ಞಾನ, ಉನ್ನತೀಕರಿಸಿ ಬ್ಯಾಟರಿ ಪ್ಯಾಕ್ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಪ್ರಸ್ತುತ ಈ ಸ್ಕೂಟರ್ ಫ್ರಾನ್ಸ್ನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಿದೆ.

ಕಂಪನಿಯು ಮೊದಲ ಹಂತದಲ್ಲಿ ಫ್ರಾನ್ಸ್ನಲ್ಲಿ ಮಾತ್ರ ಮಾರಾಟ ಹೊಂದಿದ್ದರೂ ಮುಂದಿನ ಕೆಲವೇ ವರ್ಷಗಳಲ್ಲಿ ಹಲವು ಅಂತರಾಷ್ಟ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸುವ ಯೋಜನೆಯಲ್ಲಿದ್ದು, ಹೊಸ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗುವ ಯೋಜನೆ ಕುರಿತಂತೆ ಯಾವುದೇ ಖಚಿತ ಮಾಹಿತಿಯಿಲ್ಲ.

ಹೊಸ ಎಎಂ1 ಮಾದರಿಯು ಹೈ ಸ್ಪೀಡ್ ಸಿಟಿ ಸ್ಕೂಟರ್ ಆಗಿದ್ದು, ಇದರ ಗರಿಷ್ಠ ವೇಗ ಗಂಟೆಗೆ 45 ಕಿ.ಮೀ ಗಳಾಗಿದೆ. ಟಾಪ್ ಸ್ಪೀಡ್ ಕಡಿಮೆ ಇದ್ದರೂ ಕ್ವಿಕ್ ಹೈ ಸ್ಪೀಡ್ ಹೊಂದಿರುವುದರಿಂದ ವೇಗದ ಚಾಲನೆಯ ಅನುಭವವನ್ನೇ ನೀಡಲಿದ್ದು, ಪ್ರತಿ ಚಾರ್ಜ್ಗೆ ಗರಿಷ್ಠ 140 ಕಿ.ಮೇ ಮೈಲೇಜ್ ಹಿಂದಿರುಗಿಸಲಿದೆ.

ಎಎಂ1 ಮಾದರಿಯ ಬ್ಯಾಟರಿ, ರೇಂಜ್ ಮತ್ತು ಚಾರ್ಜಿಂಗ್ ಸೌಲಭ್ಯದ ಬಗೆಗೆ ಹೇಳುವುದಾರರೇ ಇದು 3kW ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟರ್ನಿಂದ ಚಾಲಿತವಾಗಲಿದ್ದು, ಸ್ಕೂಟರಿನ ಸೀಟ್ ಒಳಗಿನ ಭಾಗದಲ್ಲಿ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದನ್ನು ಚಾರ್ಜಿಂಗ್ ಸಾಕೆಟ್ ಮೂಲಕ ಇಲ್ಲವೇ ನೇರವಾಗಿ ತೆಗೆದುಹಾಕುವುದರ ಮೂಲಕವೂ ಚಾರ್ಜ್ ಮಾಡಬಹುದ್ದು, ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 2 ಗಂಟೆ ತೆಗೆದುಕೊಳ್ಳುತ್ತದೆ.

ಆದರೆ ಫಾಸ್ಟ್ ಚಾರ್ಜರ್ ಸಹಾಯದಿಂದ ಇದನ್ನು 1 ಗಂಟೆಯಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದ್ದು, ಇದರ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮೂಲಕ ಬ್ಯಾಟರಿ ಸಂಬಂದಿತ ತಾಂತ್ರಿಕ ಅಂಶಗಳನ್ನು ಪಡೆದುಕೊಳ್ಳಬಹುದಾಗಿದ್ದು, ಅದು ಬ್ಯಾಟರಿಯ ಮಟ್ಟ, ಉಳಿದಿರುವ ಶ್ರೇಣಿ, ಇತ್ಯಾದಿಗಳಂತಹ ಪ್ರಮುಖ ಮಾಹಿತಿಯನ್ನು ಪ್ರದರ್ಶಿಸುತ್ತದೆ.

ಇದರಲ್ಲಿ ಎಲ್ಇಡಿ ಹೆಡ್ಲೈಟ್ಗಳು, ಜಿಪಿಎಸ್ ಆಧಾರಿತ ಪಾರ್ಕಿಂಗ್ ವ್ಯವಸ್ಥೆ, ರಿವರ್ಸ್ ಗೇರ್ ಮತ್ತು ಆಂಟಿ ಥೆಫ್ಟ್ ಸಿಸ್ಟಮ್ ಅನ್ನು ಒಳಗೊಂಡಿದ್ದು, ಸ್ಕೂಟರ್ ಕಂಪ್ಯೂಟರ್ ಅಥವಾ ಸ್ಮಾರ್ಟ್ಫೋನ್ ಮೂಲಕ ರಿಮೋಟ್ ಶಟ್ಡೌನ್ ಸೌಲಭ್ಯದೊಂದಿಗೆ ಬರುತ್ತದೆ.

ಇನ್ನು ಹೊಸ ಸ್ಕೂಟರ್ 92 ಕೆಜಿ ತೂಗಲಿದ್ದು, ಇದು ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಕ್ಕೆ ಕಡಿಮೆ. ಸ್ಕೂಟರ್ನ ಒಟ್ಟು ಲೋಡಿಂಗ್ ಸಾಮರ್ಥ್ಯವು 260 ಕೆ.ಜಿ ಸಾಗಿಸಬಹುದಾಗಿದೆ. ಹಾಗೆಯೇ ಹೊಸ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ನೀಡಲಾಗಿದ್ದು, ಸಿಂಗಲ್-ಸೀಟರ್ ಮತ್ತು ಡಬಲ್-ಸೀಟರ್ ಮಾದರಿಗಳನ್ನು ಖರೀದಿ ಮಾಡಬಹುದು.

ಡಬಲ್ ಸೀಟರ್ ಮಾದರಿಯನ್ನು ಸಾಮಾನ್ಯ ಗ್ರಾಹಕರಿಗೆ ಮತ್ತು ಸಿಂಗಲ್ ಸೀಟರ್ ಮಾದರಿಯನ್ನು ಡೆಲಿವರಿ ಸ್ಕೂಟರ್ ಆಗಿಯೂ ಬಳಸಬಹುದು. ಡೆಲಿವರಿ ಮಾದರಗಳಿಗೆ ಕಂಪನಿಯೇ ಲಗೇಜ್ ಬಾಕ್ಸ್ ಜೋಡಿಸಲಿದ್ದು, ಕಸ್ಟಮೈಜ್ಡ್ ಮೂಲಕ ಹೊಸ ವಿನ್ಯಾಸ ಪಡೆದುಕೊಳ್ಳಬಹುದು.

ಮೊಬ್-ಅಯಾನ್ ಬೆಲೆಯು ಎಎಂ1 ಮಾದರಿಗೆ 3,582 ಯುರೋ (ಅಂದಾಜು ರೂ. 3.04 ಲಕ್ಷ) ಬೆಲೆ ನಿಗದಿಪಡಿಸಲಾಗಿದ್ದು, ಇದು ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ಗಳಿಗಿಂತಲೂ ಹೆಚ್ಚು ದುಬಾರಿಯಾಗಿದೆ.

ಇವಿ ಸ್ಕೂಟರ್ ಖರೀದಿ ಪ್ರಕ್ರಿಯೆ ಹೆಚ್ಚಿಸಲು ಫ್ರೆಂಚ್ ಇವಿ ಸ್ಟಾರ್ಟ್ಅಪ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾಸಿಕ ಚಂದಾದಾರಿಕೆ ಶುಲ್ಕವನ್ನು 99 ಯುರೋಗೆ ನಿಗದಿಪಡಿಸಿದ್ದು, ಈ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಲಿದೆಯೇ ಅಥವಾ ಇಲ್ಲವೇ ಎನ್ನುವುದರ ಮಾಹಿತಿ ಲಭ್ಯವಿಲ್ಲವಾದರೂ ಹೊಸ ಸ್ಕೂಟರ್ ಮುಂಬರುವ ದಿನಗಳಲ್ಲಿ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.