ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಹೋಂಡಾ ವಿಶ್ವಾದ್ಯಂತ ಅದರ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಎಷ್ಟರಮಟ್ಟಿಗೆ ಎಂದರೆ ಇಲ್ಲಿ ಭಾರತದಲ್ಲಿಯೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ. ಎಲ್ಲಾ ಜಾಗತಿಕ ಮಾರುಕಟ್ಟೆಗಳಲ್ಲಿ ಒಟ್ಟು ಮಾರಾಟ ಮತ್ತು ಉತ್ಪಾದನೆಯನ್ನು ಪರಿಗಣಿಸಿದಾಗ ಹೋಂಡಾ ಇದೀಗ ವಿಶ್ವದ ಅತ್ಯಂತ ಮೌಲ್ಯಯುತ ಮೋಟಾರ್‌ಸೈಕಲ್ ಕಂಪನಿಗಳಲ್ಲಿ ಒಂದಾಗಿದೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಭಾರತದಲ್ಲಿ, ಹೋಂಡಾ ಆಕ್ಟಿವಾ ಸರಣಿಯ ಸ್ಕೂಟರ್‌ಗಳಿಗೆ ಹೆಸರುವಾಸಿಯಾಗಿದೆ ಆದರೆ ಹೀರೋ ಮೋಟೋಕಾರ್ಪ್ ಇನ್ನೂ ಮೋಟಾರ್‌ಸೈಕಲ್ ವಿಭಾಗದಲ್ಲಿ ಅಷ್ಟು ಯಶಸ್ವಿಯನ್ನು ಗಳಿಸಿಲ್ಲ. ಹೋಂಡಾದ ಸಿಬಿಆರ್ ಸರಣಿಯನ್ನು ಸಾಮಾನ್ಯವಾಗಿ ಸ್ಪೋರ್ಟಿ ಫೇರ್ಡ್ ಮೋಟಾರ್‌ಸೈಕಲ್‌ಗಳಿಗಾಗಿ ಕಾಯ್ದಿರಿಸಲಾಗಿದೆ. ಇವುಗಳಲ್ಲಿ, ಕ್ವಾರ್ಟರ್-ಲೀಟರ್ ಸಿಬಿಆರ್ ಮೋಟಾರ್‌ಸೈಕಲ್‌ಗಳು ಕಾರ್ಯಕ್ಷಮತೆ ಮತ್ತು ಮಿತವ್ಯಯದ ಸರಿಯಾದ ಸಮತೋಲನವನ್ನು ನೀಡುತ್ತವೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಹೋಂಡಾದ ಪರಿಭಾಷೆಯಲ್ಲಿ, ಹೆಚ್ಚು ಆರ್ ಎಂದರೆ ಸ್ಪೋರ್ಟಿಯರ್ ಮತ್ತು ಹೆಚ್ಚು ಕಾರ್ಯಕ್ಷಮತೆ. ಜಾಗತಿಕ ಮಾರುಕಟ್ಟೆಗಳಲ್ಲಿ 2016 ರಲ್ಲಿ ಮೊದಲು ಅನಾವರಣಗೊಂಡ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು 2023ಕ್ಕೆ ಅದನ್ನು ನವೀಕರಿಸುವ ಮೂಲಕ ಹೋಂಡಾ ಉತ್ಪನ್ನವನ್ನು ತಾಜಾವಾಗಿರಿಸಿಕೊಳ್ಳುತ್ತಿದೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅಪ್‌ಡೇಟ್ ಕೇವಲ ತಾಜಾ ವಿನ್ಯಾಸವನ್ನು ತರುತ್ತದೆ, ಈ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದರ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯ ವಿನ್ಯಾಸವು ಹೆಚ್ಚು ಅಗ್ರೇಸಿವ್ ಆಗಿರುತ್ತದೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಈ ಹೊಸ ಬೈಕಿನ ಹಿಂಭಾಗದ ಸೀಟ್ ಕೌಲ್ ಜೊತೆಗೆ ಉಳಿದ ಬಾಡಿಯ ಪ್ಯಾನೆಲ್‌ಗಳು ಸಹ ಹೊಸದಾಗಿವೆ. 2023ರ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಗ್ರಾಫಿಕ್ಸ್ ಮತ್ತು ಬಣ್ಣದ ಯೋಜನೆಗಳು ಸಹ ಹೊಸದು. ಸ್ಟ್ಯಾಂಡರ್ಡ್ ಎಲ್ಇಡಿ ಲೈಟಿಂಗ್ ಮತ್ತು ಟರ್ನ್ ಇಂಡಿಕೇಟರ್ಸ್ ಗಳನ್ನು ಹೆಡ್ ಲೈಟ್ ಗಳ ಮೇಲೆ ಇರಿಸಲಾಗುತ್ತದೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಹೋಂಡಾ ಸಿಬಿಆರ್250ಆರ್‌ಆರ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಈ ಬೈಕ್ ಗೋಲ್ಡನ್ ಬಣ್ಣದ ಯುಎಸ್ಡಿ ಫೋರ್ಕ್‌ಗಳನ್ನು ಪಡೆಯುತ್ತದೆ. ಇವು ಶೋವಾ ಎಸ್‌ಎಫ್‌ಎಫ್-ಬಿಪಿ (ಪ್ರತ್ಯೇಕ ಫೋರ್ಕ್ ಫಂಕ್ಷನ್ - ಬಿಗ್ ಪಿಸ್ಟನ್), ಆದರೆ ಹಿಂಭಾಗದ ಸಸ್ಪೆಕ್ಷನ್ ಮೊನೊ-ಶಾಕ್‌ನಿಂದ ನೋಡಿಕೊಳ್ಳಲಾಗುತ್ತದೆ,

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಇನ್ನು ಅಲ್ಯೂಮಿನಿಯಂ ಸ್ವಿಂಗರ್ಮ್‌ನಲ್ಲಿ ಅಳವಡಿಸಲಾಗಿದೆ. 1,385 ಎಂಎಂ, ವೀಲ್‌ಬೇಸ್ ಈಗ 4 ಎಂಎಂ ಚಿಕ್ಕದಾಗಿದೆ. ಇನ್ನು ಇದರ ಇಂಜಿನ್‌ಗೆ ಬರುವುದಾದರೆ, ಇದು 249.7ಸಿಸಿ ಸಿಂಗಲ್ ಸಿಲಿಂಡರ್ ಯುನಿಟ್ ಅನ್ನು ಅಳವಡಿಸಲಾಗಿದೆ. ಹೋಂಡಾ ಕಂಪ್ರೆಷನ್ ಸಸ್ಪೆಕ್ಷನ್ ಸ್ವಲ್ಪಮಟ್ಟಿಗೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಈ ಎಂಜಿನ್ 42 ಬಿಹೆಚ್‍ಪಿ ಪವರ್ ಮತ್ತು 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 2020ರ ಮಾದರಿಯೊಂದಿಗೆ, ಕಾರ್ಯಕ್ಷಮತೆಯ ಅಂಕಿಅಂಶಗಳು 40 ಬಿಹೆಚ್‍ಪಿ ಪವರ್ ಮತ್ತು 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತಿತ್ತು.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

2023ರ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಇತರ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್, ಮೂರು ರೈಡಿಂಗ್ ಮೋಡ್‌ಗಳು, ಕ್ವಿಕ್ ಶಿಫ್ಟರ್, ಸ್ಲಿಪ್ಪರ್ ಕ್ಲಚ್ ಮತ್ತು ಡ್ಯುಯಲ್ ಪಾಡ್ ಎಕ್ಸಾಸ್ಟ್ ಸೇರಿವೆ. ಈ ಬೈಕಿನ 14.5 ಲೀಟರ್ ಫ್ಯೂಯಲ್ ಟ್ಯಾಂಕ್‌ನೊಂದಿಗೆ 168 ಕೆಜಿ ತೂಕವನ್ನು ಹೊಂದಿದೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಈ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಹೋಂಡಾ ಬ್ರೇವರಿ ರೆಡ್ ಬ್ಲಾಕ್, ಮಿಸ್ಟಿಕ್ ಬ್ಲೂ, ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್, ಬ್ಲ್ಯಾಕ್ ಫ್ರೀಡಮ್ ಮತ್ತು ಹೋಂಡಾ ಟೈಕಲರ್ ಎಂಬ ಐದು ಬಣ್ಣಗಳನ್ನು ನೀಡುತ್ತದೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಇನ್ನು ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ (HMSI) ಪ್ರಸ್ತುತ ಭಾರತದಲ್ಲಿ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಆಗಸ್ಟ್ ತಿಂಗಳಿನಲ್ಲಿ, ಒಟ್ಟಾರೆ ಮಾರಾಟದಲ್ಲಿ (ದೇಶೀಯ + ರಫ್ತು) ಅಗ್ರ ಸ್ಥಾನಕ್ಕಾಗಿ ಹೀರೋ ಜೊತೆಗಿನ ಹೋರಾಟದಲ್ಲಿ ಸಣ್ಣ ಅಂತರದಿಂದ ಹಿನ್ನೆಡೆಯಾಗಿದೆ. ಹೀರೋ ಕಂಪನಿಗೆ ಭರ್ಜರಿ ಪೈಪೋಟಿ ನೀಡಿ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪೈಪೋಟಿ ಸಾಧಿಸಲು ಹೊಸ ಮೂರು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಆ ಮೂರು ಮಾದರಿಗಳು 125 ಸಿಸಿ ಸ್ಕೂಟರ್ ವಿಭಾಗ, 160 ಸಿಸಿ ವಿಭಾಗ ಮತ್ತು 300 ಸಿಸಿ ಯಿಂದ 350 ಸಿಸಿ ವಿಭಾಗದಲ್ಲಿ ಬರುತ್ತವೆ ಎಂದು ಹೇಳಲಾಗುತ್ತದೆ. 150 ಸಿಸಿಯಿಂದ 200 ಸಿಸಿ ಬೈಕ್‌ಗಳ ವಿಭಾಗದಲ್ಲಿ ಹೋಂಡಾ ಅಷ್ಟು ಜನಪ್ರಿಯ ಬ್ರಾಂಡ್ ಹೊಂದಿಲ್ಲ. ಬಜಾಜ್ ನಿರಂತರವಾಗಿ ವಿಸ್ತರಿಸುತ್ತಿರುವ ಪಲ್ಸರ್ ಬ್ರ್ಯಾಂಡ್ ಅನ್ನು ಹೊಂದಿದೆ, ಟಿವಿಎಸ್ ಅಪಾಚೆ ಬ್ರ್ಯಾಂಡ್ ಅನ್ನು ಹೊಂದಿದೆ ಮತ್ತು ಯಮಹಾ ಎಫ್‌ಜೆಡ್ ಬ್ರ್ಯಾಂಡ್ ಅನ್ನು ಹೊಂದಿದೆ. ಈ ಬ್ರ್ಯಾಂಡ್‌ಗಳು ಬೃಹತ್ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು, ಹೋಂಡಾದ ಯೂನಿಕಾರ್ನ್ ಮತ್ತು ಹಾರ್ನೆಟ್ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಲು ಸಾಧ್ಯವಾಗಿಲ್ಲ.

ಸ್ಟೈಲಿಶ್ ಲುಕ್‍ನಲ್ಲಿ ಹೊಸ ಹೋಂಡಾ ಸಿಬಿಆರ್250ಆರ್‌ಆರ್ ಬೈಕ್ ಅನಾವರಣ

ಇತ್ತೀಚಿನ ಮಾರಾಟದ ಟ್ರೆಂಡ್‌ಗಳನ್ನು ಗಮನಿಸಿದರೆ, ಯೂನಿಕಾರ್ನ್ 160 ಜುಲೈ 2022 ರಲ್ಲಿ 11,203 ಯುನಿಟ್‌ಗಳನ್ನು ಮಾರಾಟ ಮಾಡಿದರೆ ಜೂನ್ 2022 ರಂದು 1,906 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಿದೆ. 160 ಸಿಸಿ - 180 ಸಿಸಿ ಜಾಗವನ್ನು ಬಜಾಜ್ ಮತ್ತು ಟಿವಿಎಸ್ ನಂತಹ ಪ್ರತಿಸ್ಪರ್ಧಿಗಳು ಬಳಸಿಕೊಳ್ಳುತ್ತಿವೆ.

Most Read Articles

Kannada
English summary
New 2023 honda cbr250rr bike revealed new design details
Story first published: Friday, September 23, 2022, 14:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X