Just In
- 1 hr ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 14 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 15 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 16 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- News
UIDAI ಹೊಸ ಸುತ್ತೋಲೆ: ಸರ್ಕಾರಿ ಸವಲತ್ತು, ಸಬ್ಸಿಡಿ ಪಡೆಯಲು ಆಧಾರ್ ಕಡ್ಡಾಯ
- Travel
ವಿಶ್ವದ ಅತ್ಯಂತ ತೇವವಾದ ಸ್ಥಳಗಳು: ಭೂಮಿಯ ಮೇಲಿನ ಮಳೆಯ ಸ್ಥಳಗಳ ಪಟ್ಟಿ
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
ಭಾರತದಲ್ಲಿ ಬಿಡುಗಡೆಯಾಗಲಿದೆ ಹೀರೋ ಎಕ್ಸ್ಪಲ್ಸ್ 200 4ವಿ ರ್ಯಾಲಿ ಎಡಿಷನ್
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ತನ್ನ ಹೀರೋ ಎಕ್ಸ್ಪಲ್ಸ್ 200 4ವಿ ರ್ಯಾಲಿ ಎಡಿಷನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಬೈಕಿನ ಅನುಮೋದನೆ ಪ್ರಮಾಣಪತ್ರವು ಆನ್ಲೈನ್ನಲ್ಲಿ ಸೋರಿಕೆಯಾಗಿದೆ.

ಈಗಾಗಲೇ ಮಾರಾಟದಲ್ಲಿರುವ ಹೀರೋ ಎಕ್ಸ್ಪಲ್ಸ್ 200 4ವಿ ಸ್ಟಾಕ್ ಯಂತ್ರಕ್ಕೆ ಹೋಲಿಸಿದರೆ ಹೆಚ್ಚು ಸಾಮರ್ಥ್ಯದ ಆಫ್-ರೋಡರ್ ಆಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೀರೋ ಎಕ್ಸ್ಪಲ್ಸ್ 200 4ವಿ ರ್ಯಾಲಿ ಎಡಿಷನ್ ಮುಂಬರುವ ವಾರಗಳಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇದು ಸಾಮಾನ್ಯ ಮಾದರಿಯೊಂದಿಗೆ ಹಲವಾರು ಸಾಮಾನ್ಯತೆಯನ್ನು ಹೊಂದಿರುತ್ತದೆ. ಇದನ್ನು ಹೊಸ ಸರಣಿಯ -ಟಾಪ್ ವೇರಿಯಂಟ್ ಆಗಿ ನೀಡಬಹುದು.

ಮುಂಬರುವ ಬೈಕ್ ಸ್ಟ್ಯಾಂಡರ್ಡ್ ರೂಪಾಂತರಕ್ಕೆ ಹೋಲಿಸಿದರೆ ದೊಡ್ಡ ಬದಲಾವಣೆಯನ್ನು ಹೊಂದಿರುತ್ತದೆ. ಆನ್ಲೈನ್ನಲ್ಲಿ ಸೋರಿಕೆಯಾದ ಪ್ರಮಾಣಪತ್ರದ ಪ್ರಕಾರ ಉದ್ದ 2,255 ಎಂಎಂ, ಸೀಟ್ ಎತ್ತರ 850 ಎಂಎಂ ಮತ್ತು ವೀಲ್ಬೇಸ್ ಉದ್ದ 1,427 ಎಂಎಂ ಎಂದು ಸೂಚಿಸುತ್ತದೆ.

ಪ್ರಸ್ತುತ ಹೀರೋ ಎಕ್ಸ್ಪಲ್ಸ್ 200 4ವಿ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.32 ಲಕ್ಷವಾಗಿದೆ. ಹೊಸ ಎಕ್ಸ್ಪಲ್ಸ್ 200 4ವಿ ರ್ಯಾಲಿ ಎಡಿಷನ್ ಮಾದರಿಗೆ ರೂ.40,000 ವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿರುತ್ತದೆ.

ಪ್ರಸ್ತುತ ಹೀರೋ ಎಕ್ಸ್ಪಲ್ಸ್ 200 4ವಿ ಯಾವಾಗಲೂ ನೈಜ ಆಫ್-ರೋಡ್ ಸಾಮರ್ಥ್ಯ ಹೊಂದಿರುವ ಅತ್ಯಂತ ಸಮರ್ಥ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿದೆ. ಹೀರೋ ಎಕ್ಸ್ಪಲ್ಸ್ 200 ಕಡಿಮೆ ತೂಕ ಮತ್ತು ವೇಗದ ಆಫ್-ರೋಡ್ ಸಾಮರ್ಥ್ಯದೊಂದಿಗೆ ಸಾಕಷ್ಟು ಜನಪ್ರಿಯ ಮಾದರಿಯಾಗಿದೆ. ಹೀರೋ ಮೋಟೋಕಾರ್ಪ್ ಎಕ್ಸ್ಪಲ್ಸ್ 200 ಅನ್ನು ಹೆಚ್ಚಿನ ಕಾರ್ಯಕ್ಷಮತೆಯನ್ನು ನೀಡಲು ನವೀಕರಿಸಿತು.

ಈ ಹೀರೋ ಎಕ್ಸ್ಪಲ್ಸ್ 200 4ವ್ಯಾಲ್ಸ್ ಬೈಕ್ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ. ಅಲ್ಲದೇ ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಭಾರತದ ಹೆಚ್ಚಿನ ಆಫ್-ರೋಡ್ ಪ್ರೇಮಿಗಳನ್ನು ಈ ಬೈಕ್ ಸೆಳದುಕೊಂಡಿದೆ. ಈ ನವೀಕರಿಸಿದ ಈ ಬೈಕ್ ಇಂಜಿನ್ನ ನಾಲ್ಕು ವಾಲ್ವ್ ಸಿಲಿಂಡರ್ ಹೆಡ್ ಅನ್ನು ಒಳಗೊಂಡಿದೆ.

ಈ ಹೊಸ ಹೀರೋ ಎಕ್ಸ್ಪಲ್ಸ್ 200 4 ವಾಲ್ವ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಹೀರೋ ಎಕ್ಸ್ಪಲ್ಸ್ 200 ಈಗ 200 ಸಿಸಿ, ನಾಲ್ಕು ವಾಲ್ವ್, ಆಯಿಲ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್ಪಿಎಂನಲ್ಲಿ 19 ಬಿಎಚ್ಪಿ ಪವರ್ ಮತ್ತು 6,500 ಆರ್ಪಿಎಂನಲ್ಲಿ 17.35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಶೇಕಡಾ 6 ರಷ್ಟು ಪವರ್ ಮತ್ತು 5 ಶೇಕಡಾ ಟಾರ್ಕ್ ಹೆಚ್ಚು ಸೇರಿಸಿದೆ. ಈ ಹೀರೋ ಮೋಟೋಕಾರ್ಪ್ ಪ್ರಕಾರ, ನಾಲ್ಕು-ವಾಲ್ವ್, ಆಯಿಲ್-ಕೂಲ್ಡ್ ಎಂಜಿನ್ ಮಧ್ಯಮ ಮತ್ತು ಟಾಪ್-ಎಂಡ್ ವೇಗದ ಶ್ರೇಣಿಯಲ್ಲಿ ಉತ್ತಮ ಶಕ್ತಿಯನ್ನು ಒದಗಿಸುತ್ತದೆ. ಆದರೆ ಕಂಪನಗಳನ್ನು ನಿಯಂತ್ರಿಸುವಾಗ ಹೆಚ್ಚಿನ ವೇಗದಲ್ಲಿಯೂ ಒತ್ತಡ ರಹಿತ ಎಂಜಿನ್ ಕಾರ್ಯಕ್ಷಮತೆ ನೀಡುತ್ತದೆ.

ಇದು ಉತ್ತಮ ಶಾಖ ನಿರ್ವಹಣೆಗಾಗಿ, ಕೂಲಿಂಗ್ ವ್ಯವಸ್ಥೆಯನ್ನು 7-ಫಿನ್ ಆಯಿಲ್ ಕೂಲರ್ನೊಂದಿಗೆ ನವೀಕರಿಸಲಾಗಿದೆ. ಗೇರ್ ಅನುಪಾತಗಳನ್ನು ಉತ್ತಮ ಟ್ರ್ಯಾಕ್ಟಬಿಲಿಟಿ ಮತ್ತು ವೇಗವರ್ಧನೆಗಾಗಿ ನವೀಕರಿಸಲಾಗಿದೆ ಮತ್ತು ಒಟ್ಟಾರೆ ಟಾರ್ನ್ ಮಿಷನ್ ಸುಧಾರಿಸಲಾಗಿದೆ. ಸ್ಟಾಕ್ ಹೀರೋ ಎಕ್ಸ್ಪಲ್ಸ್ 200 4ವಿ ದೀರ್ಘ ಸಸ್ಪೆಂಕ್ಷನ್ ಟ್ರ್ಯಾವೆಲ್ ಅನ್ನು ಹೊಂದಿದೆ. ಈ ಬೈಕಿನ ಮುಂಭಾಗದಲ್ಲಿ 190 ಎಂಎಂ ಮತ್ತು ಹಿಂಭಾಗದಲ್ಲಿ 170 ಎಂಎಂ ಟ್ರ್ಯಾವೆಲ್ ಅನ್ನು ಹೊಂದಿಕೊಂಡಿದೆ.

ಈ ಹೀರೋ ಎಕ್ಸ್ಪಲ್ಸ್ 200 ಸಹ ಸ್ಟ್ಯಾಂಡರ್ಡ್ ಅಲ್ಯೂಮಿನಿಯಂ ಸ್ಕಿಡ್ ಪ್ಲೇಟ್ ಜೊತೆಗೆ ಎಂಜಿನ್ ಅನ್ನು ರಕ್ಷಿಸುತ್ತದೆ.ಮತ್ತು ಉತ್ತಮ ಹಿಡಿತಕ್ಕಾಗಿ ಹೊಸ ಹಲ್ಲಿನ ಬ್ರೇಕ್ ಪೆಡಲ್, ಮತ್ತು ನೀರಿನ ಕ್ರಾಸಿಂಗ್ಗಳನ್ನು ಸುಲಭವಾಗಿ ನಿಭಾಯಿಸಲು ಉತ್ಕೃಷ್ಟವಾದ ಎಕ್ಸಾಸ್ಟ್ ಅನ್ನು ನೀಡಿದೆ.

ಈ ಹೀರೋ ಎಕ್ಸ್ಪಲ್ಸ್ 200 ಅಡ್ವೆಂಚರ್ ಬೈಕಿನಲ್ಲಿ ಡ್ಯುಯಲ್-ಪರ್ಪಸ್ ಟೈರ್ಗಳು, 10-ಸ್ಟೆಪ್ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸಸ್ಪೆಂಕ್ಷನ್, 825 ಎಂಎಂ ಪ್ರವೇಶಿಸಬಹುದಾದ ಸೀಟ್ ಎತ್ತರ ಮತ್ತು 220 ಎಂಎಂನ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಎಲ್ಲಾ ರೀತಿಯು ಈ ಬೈಕ್ ಯೋಗ್ಯವಾದ ಆಫ್-ರೋಡ್ ಸಾಮರ್ಥ್ಯವನ್ನು ಒದಗಿಸುತ್ತದೆ. ಈ ಎಕ್ಸ್ಪಲ್ಸ್ 200 ಬೈಕ್ ಹುಕ್ಗಳೊಂದಿಗೆ ಸ್ಟ್ಯಾಂಡರ್ಡ್ ಲಗೇಜ್ ಪ್ಲೇಟ್ನೊಂದಿಗೆ ಬ್ಯಾಗೇಜ್ನಲ್ಲಿ ಸಹ ಪ್ರಯಾಣಿಕರೊಂದಿಗೆ ಲಗೇಜ್ ಸಾಗಿಸಲು ಬರುತ್ತದೆ.

ಇನ್ನು ಯಾಂತ್ರಿಕ ನವೀಕರಣಗಳ ಹೊರತಾಗಿ, ಹೀರೋ ಮೋಟೋಕಾರ್ಪ್ ಹೊಸ ಎಕ್ಸ್ಪಲ್ಸ್ 200 4ವಿ ಸ್ವಿಚ್ ಗೇರ್ ಅನ್ನು ಪರಿಷ್ಕರಿಸಿದೆ ಮತ್ತು ಹೊಸ ಮಾದರಿಯು ಸಂಯೋಜಿತ ಸ್ಟಾರ್ಟರ್/ಎಂಜಿನ್ ಕಟ್-ಆಫ್ ಬಟನ್ ಅನ್ನು ಪಡೆಯುತ್ತದೆ. ಇನ್ನು ಉಳಿದ ವೈಶಿಷ್ಟ್ಯಗಳು ಎರಡು-ವಾಲ್ವ್ ರೂಪಾಂತರವನ್ನು ಹೋಲುತ್ತವೆ. ಹೀರೋ ಎಕ್ಸ್ಪಲ್ಸ್ 200 4ವಿಯ ಮುಂಭಾಗದಲ್ಲಿ ಎಲ್ಇಡಿ ಹೆಡ್ಲೈಟ್, ಎಲ್ಇಡಿ ಟೈಲ್ಲೈಟ್, ಬ್ಲೂಟೂತ್-ಸಕ್ರಿಯಗೊಳಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ಇನ್ನು ಭಾರತದಲ್ಲಿ ಹೀರೋ ಮೋಟೋಕಾರ್ಪ್ ಈಎಕ್ಸ್ಪಲ್ಸ್ 200 4ವಿ ಬೈಕ್ಗಾಗಿ ಆಕ್ಸೆಸರೀಸ್ ಗಳನ್ನು ಪರಿಚಯಿಸಿದ್ದಾರೆ. ಈ ಆಕ್ಸೆಸರೀಸ್ ಪಟ್ಟಿಯಲ್ಲಿ, ಮ್ಯಾಗ್ನೆಟಿಕ್ ಟ್ಯಾಂಕ್ ಬ್ಯಾಗ್ ಮತ್ತು ಟೈಲ್ ಬ್ಯಾಗ್ ನಂತಹ ಲಗೇಜ್ ಆಯ್ಕೆಗಳನ್ನು ಆಯ್ಕೆಯ ಎಕ್ಸ್ಟ್ರಾಗಳ ಪಟ್ಟಿಯು ಒಳಗೊಂಡಿದೆ. ಕಂಪನಿಯು ಮೋಟೋಕ್ರಾಸ್ ಹೆಲ್ಮೆಟ್ ಅನ್ನು ನೀಡಲಿದ್ದು, ಇದರಲ್ಲಿ ಎಕ್ಸ್ಪಲ್ಸ್ 200 ಬ್ರ್ಯಾಂಡಿಂಗ್ ಮತ್ತು ಹೊಂದಾಣಿಕೆಯ ಗ್ರಾಫಿಕ್ಸ್ ಇರುತ್ತದೆ. ಮೊಬೈಲ್ ಹೋಲ್ಡರ್ ಆಯ್ಕೆಯ ಪ್ಯಾಕೇಜ್ನ ಭಾಗವಾಗಿದೆ. ಇನ್ನು ಈ ಕ್ಸ್ಪಲ್ಸ್ 200 4ವಿ ಬೈಕ್ ಟ್ಯಾಂಕ್ ಪ್ಯಾಡ್-ಮೌಂಟಡ್ ನೀ ಪ್ಯಾಡ್ಗಳು ಮತ್ತು ನಾಲ್ಕು ಸೀಟ್ ಆಯ್ಕೆಗಳಿವೆ,

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಹೀರೋ ಮೋಟೋಕಾರ್ಪ್ ತನ್ನ ಹೀರೋ ಎಕ್ಸ್ಪಲ್ಸ್ 200 4ವಿ ರ್ಯಾಲಿ ಎಡಿಷನ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಈ ಮುಂಬರುವ ಬೈಕ್ ಸ್ಟ್ಯಾಂಡರ್ಡ್ ರೂಪಾಂತರಕ್ಕೆ ಹೋಲಿಸಿದರೆ ದೊಡ್ಡ ಬದಲಾವಣೆಯನ್ನು ಹೊಂದಿರುತ್ತದೆ.