Just In
- 54 min ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 14 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 15 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 15 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- News
ಆಗಸ್ಟ್ 17ರಂದು ಭಾರತದ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಬೆಂಗಳೂರಿನಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್
ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿದೆ, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ.

ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತಿದ್ದಂತೆ, ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳದ ಬಜಾಜ್ ಆಟೋ, ಟಿವಿಎಸ್ ಮೋಟಾರ್ ಸಹ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಈಗಾಗಲೇ ಬಿಡುಗಡೆಗೊಳಿಸಿವೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್ನಂತಹ ಸ್ಕೂಟರ್ಗಳು ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದರ ನಡುವೆ ಬೆಂಗಳೂರಿನಲ್ಲಿ ಹೊಸ ಹೋಂಡಾ ಬೆನ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ.

ಹೊಸ ಹೋಂಡಾ ಬೆನ್ಲಿ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಗೆ ತರಲಿದೆಯೇ? ಹೇಳುವುದು ಕಷ್ಟ. ಈ ಸ್ಕೂಟರ್ ಅನ್ನು ಹೋಂಡಾ ಮೋಟಾರ್ಸೈಕಲ್ಸ್ ಮತ್ತು ಸ್ಕೂಟರ್ ಇಂಡಿಯಾಗೆ ನೋಂದಾಯಿಸಲಾಗಿದೆ. ಆದರೆ, ಇದು ಬೆಂಗಳೂರಿನ ಜಯನಗರದಲ್ಲಿ ನೋಂದಣಿಯಾಗಿದೆ. ಭಾರತದಲ್ಲಿ ಹೋಂಡಾದ ಹೊಸ - ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಇದೇ ಪ್ರದೇಶದಲ್ಲಿದೆ.

ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾವು ಬೆನ್ಲಿ ಇ ಬ್ಯಾಟರಿ ಪ್ಯಾಕ್ಗಳನ್ನು ಪರೀಕ್ಷಿಸುತ್ತಿರುವಂತೆ ತೋರುತ್ತಿದೆ. ಆಮದು ಮಾಡಿಕೊಂಡ ಸ್ಕೂಟರ್ ಹೋಂಡಾ ಮೊಬೈಲ್ ಪವರ್ ಪ್ಯಾಕ್ ಲಿಥಿಯಂ-ಐಯಾನ್ ಬ್ಯಾಟರಿಗಳಿಂದ ಚಾಲಿತವಾಗಿದೆ.

ಹೋಂಡಾದ ಹೊಸ ವರ್ಟಿಕಲ್ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಹಿಂದೂಸ್ತಾನ್ ಪೆಟ್ರೋಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಬೆಂಗಳೂರು ಮೆಟ್ರೋದಂತಹ ವಿವಿಧ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಬ್ಯಾಟರಿ ಪ್ಯಾಕ್ಗಳನ್ನು ನೀಡಲು ಸ್ವಾಪಿಂಗ್ ಸ್ಟೇಷನ್ಗಳು ಕಾರ್ಯನಿರ್ವಹಿಸುತ್ತವೆ. ಹೋಂಡಾ ಪವರ್ ಪ್ಯಾಕ್ ಇಂಡಿಯಾ ಭಾರತದಲ್ಲಿ ತನ್ನ ಸೇವೆಗಳನ್ನು ಇನ್ನೂ ಪ್ರಾರಂಭಿಸದಿದ್ದರೂ, 2022ರಲ್ಲೇ ಸೇವೆಗಳು ಪ್ರಾರಂಭವಾಗಬಹುದು ಎಂದು ಸಂಸ್ಥೆ ಬಹಿರಂಗಪಡಿಸಿದೆ. ಶೀಘ್ರದಲ್ಲೇ ಹೋಂಡಾ ಸೇವೆಗಳ ಪ್ರಾರಂಭವಾಗಬಹುದು.

ಹೋಂಡಾ ಬೆನ್ಲಿ ವಾಣಿಜ್ಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಹೋಂಡಾ ಕ್ಲಿಕ್ ನೆನಪಿದೆಯೇ ಬೆನ್ಲಿ ಇ ಕೂಡ ಇದೇ ರೀತಿಯ ವಾಣಿಜ್ಯ ಸ್ಕೂಟರ್ ಆಗಿದೆ. ಸ್ಕೂಟರ್ ಅನ್ನು ಸುರಕ್ಷಿತವಾಗಿ ಸಾಧ್ಯವಾದಷ್ಟು ಸರಕುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ ಹೋಂಡಾ ಬೆನ್ಲಿ ಇ ಸರಣಿಯಲ್ಲಿ ಬೆನ್ಲಿ ಇ ಐ, ಬೆನ್ಲಿ ಇ ಐ ಪ್ರೊ, ಬೆನ್ಲಿ ಇ II ಮತ್ತು ಬೆನ್ಲಿ ಇ II ಪ್ರೊ ಎಂಬ ನಾಲ್ಕು ಎಲೆಕ್ಟ್ರಿಕ್ ಮಾದರಿಗಳನ್ನು ಒಳಗೊಂಡಿದೆ.

ಈ ಹೋಂಡಾ ಬೆನ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ದೊಡ್ಡ ಸ್ಟೋರೇಜ್ ಬಾಸ್ಕೆಟ್, ದೊಡ್ಡ ಹಿಂಭಾಗದ ಕ್ಯಾರಿಯರ್, ನಕಲ್ ಗಾರ್ಡ್ಗಳು ಮತ್ತು ಫುಟ್ ಬ್ರೇಕ್ ಸಿಸ್ಟಂನಂತಹ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಹೆಡ್ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಪವರ್ ಸಾಕೆಟ್ ಅನ್ನು ಹೊಂದಿದೆ.

ಇನ್ನು ಈ ಸ್ಕೂಟರ್ ಫ್ಲಾಟ್ ರಿಯರ್ ಡೆಕ್ ಮತ್ತು ಮುಂಭಾಗದಲ್ಲಿ ದೊಡ್ಡ ಬಾಸ್ಕೆಟ್ ಅನ್ನು ನೀಡಿದೆ, ಇದು 60 ಕೆಜಿ ಲೋಡ್ ವರೆಗೆ ಸಾಗಿಸಬಲ್ಲದು. ಹೋಂಡಾ ಬೆನ್ಲಿ ಇ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ರಾಸ್ ವೈಟ್ನ ಒಂದೇ ಬಣ್ಣದಲಿರುತ್ತದೆ. ಇನ್ನು ಈ ಸ್ಕೂಟರ್ ವರ್ಸ್ ಅಸಿಸ್ಟ್ ಫಂಕ್ಷನ್ನೊಂದಿಗೆ ಬರುತ್ತದೆ, ಇದರಿಂದಾಗಿ ಸ್ಕೂಟರ್ ಅನ್ನು ಕಿರಿದಾದ ಪ್ರದೇಶದಲ್ಲಿ ತಿರುಗಿಸಲು ಸವಾರನಿಗೆ ಸಹಾಯ ಮಾಡುತ್ತದೆ.

ಸ್ಕೂಟರ್ 12 ಇಂಚಿನ ಮುಂಭಾಗದಲ್ಲಿ 90/90 ಸೆಕ್ಷನ್ ಟೈರ್ ಮತ್ತು 10 ಇಂಚಿನ ಹಿಂದಿನ ವ್ಹೀಲ್ ಗಳೊಂದಿಗೆ 110/90 ಸೆಕ್ಷನ್ ಟೈರ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ 125-130 ಜೆಕಿ ತೂಕವನ್ನು ಹೊಂದಿರುತ್ತದೆ. ಈ ಹೋಂಡಾ ಎರಡು ಮೋಟಾರ್ ಆಯ್ಕೆಗಳೊಂದಿಗೆ ಬೆನ್ಲಿ ಇ ಸ್ಕೂಟರ್ ಅನ್ನು ಪರಿಚಯಿಸುತ್ತದೆ. ಬೆನ್ಲಿ ಇ ಐ ಮತ್ತು ಐ ಪ್ರೊ ಮಾದರಿಗಳಲ್ಲಿ 2.8 ಕಿವ್ಯಾಟ್ (3.8 ಪಿಎಸ್) ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರುತ್ತದೆ. ಇದು 13 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಸ್ಕೂಟರ್ 87 ಕಿ.ಮೀ ರೇಂಜ್ ಅನ್ನು ಹೊಂದಿರುತ್ತದೆ ಇನ್ನು. ಹೋಂಡಾ ಬೆನ್ಲಿ ಇ II ಮತ್ತು II ಪ್ರೊ ಮಾದರಿಗಳಲ್ಲಿ 4.2 ಕಿವ್ಯಾಟ್ (5.7 ಎಚ್ಪಿ) ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗುತ್ತದೆ. ಇದು 15 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಮೊಬೈಲ್ ಪವರ್ ಪ್ಯಾಕ್ (ಎಂಪಿಪಿ) ಎಂದು ಕರೆಯಲ್ಪಡುವ ಎರಡು 48ವಿ ಲಿಥಿಯಂ-ಐಯಾನ್ ಬ್ಯಾಟರಿಗಳು ಪ್ರತಿಯೊಂದು ಮೋಟರ್ಗಳಿಗೆ ಪವರ್ ನೀಡುತ್ತವೆ ಮತ್ತು ಅವುಗಳನ್ನು ಬದಲಾಯಿಸಬಹುದಾಗಿದೆ. ಬ್ಯಾಟರಿಗಳನ್ನು ಬೇರ್ಪಡಿಸಬಹುದು ಮತ್ತು ಮೀಸಲಾದ ಚಾರ್ಜರ್ಗಳ ಮೂಲಕ ಪವರ್ ಪಡೆಯಬಹುದು. ಬೆನ್ಲಿ ಇ ಐ ಮತ್ತು ಐ ಪ್ರೊ ಮಾದರಿಗಳಿಗೆ 30 ಕಿ.ಗ್ರಾಂ ಮತ್ತು ಬೆನ್ಲಿ ಇ II ಮತ್ತು II ಪ್ರೊ ಮಾದರಿಗಳುಗೆ 60 ಕಿ.ಗ್ರಾಂ ವರೆಗೆ ವರೆಗೆ ಪೇ ಲೋಡ್ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಈ ಹೋಂಡಾ ಬೆನ್ಲಿ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದಲಿಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಹೋಂಡಾ ಕಂಪನಿಯು ಇತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ,