ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಕೀವೇ ಹಂಗೇರಿಯನ್ ಮೋಟಾರ್‌ಸೈಕಲ್ ತಯಾರಕರಾಗಿದ್ದು, ಇದು ಪ್ರಸ್ತುತ ಚೀನಾದ ಮೋಟಾರ್‌ಸೈಕಲ್ ತಯಾರಕರಾದ ಕ್ಯೂಜೆ ಮೋಟಾರ್ಸ್ ಜೊತೆಗೆ ಬೆನೆಲ್ಲಿಯ ಒಡೆತನದಲ್ಲಿದೆ. ಕೀವೇ ಬ್ರ್ಯಾಂಡ್ ಜಾಗತಿಕ ಅಸ್ತಿತ್ವವನ್ನು ಹೊಂದಿರುವ ಬ್ರ್ಯಾಂಡ್ ಆಗಿದೆ.

Recommended Video

ಬೆಂಗಳೂರಿನಲ್ಲಿ ಮೊತ್ತೊಂದು ಹೊಸ BMW Motorrad ಡೀಲರ್‌ಶಿಪ್ ಆರಂಭ | Bikes Price Range, Showroom Walkaround

ಕೀವೇ ಸ್ಕೂಟರ್‌ಗಳು ಯುರೋಪ್‌ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಮೂರು ಹೊಸ ದ್ವಿಚಕ್ರ ವಾಹನಗಳನ್ನು ಪ್ರದರ್ಶಿಸುವ ಮೂಲಕ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಇದೀಗ ಕೀವೇ ಕಂಪನಿಯು ಹೊಸ ವಿ302ಸಿ ಬಾಬರ್-ಶೈಲಿಯ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಕೀವೇ ವಿ302ಸಿ ಬೈಕಿನ ಬೆಲೆಯು ರೂ.3,89,000 ದಿಂದ ಪ್ರಾರಂಭವಾಗಲಿದೆ. ಈ ಕೀವೇ ವಿ302ಸಿ ಬೈಕ್ ಭಾರತೀಯ ಮಾರುಕಟ್ಟೆಗೆ ಬ್ರ್ಯಾಂಡ್‌ನಿಂದ ನಾಲ್ಕನೇ ಮಾದರಿಯಾಗಿದೆ. ಹೊಸ ಕೀವೇ ವಿ302 ಬೈಕ್ ಬಾಬರ್-ಶೈಲಿಯೊಂದಿಗೆ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಹೊಸ ಬೈಕ್ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಬಣ್ಣದ ಆಯ್ಕೆಗಳು ಈ ಬೈಕಿನ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ಕೀವೇ ವಿ302ಸಿ ಬೈಕಿನ ಗ್ರೇ ಬಣ್ಣದ ಮಾದರಿಗೆ ರೂ.3.89 ಲಕ್ಷವಾದರೆ, ಬ್ಲ್ಯಾಕ್ ಬಣ್ಣದ ಮಾದರಿಗೆ ರೂ.3.99 ಲಕ್ಷವಾಗಿದೆ ಇನ್ನು ರೆಡ್ ಬಣ್ಣದ ಮಾದರಿಗೆ ರೂ.4.09 ಲಕ್ಷವಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಹೊಸ ಕೀವೇ ವಿ302ಸಿ ಬೈಕ್ ಸ್ಟೈಲಿಂಗ್ ಅಂಶಗಳಲ್ಲಿ ಕಡಿಮೆ ನಿಲುವು, ಅಗಲವಾದ ಫ್ಲಾಟ್ ಬಾರ್, ಚಾರ್ಪಡ್ ಫೆಂಡರ್ ಮತ್ತು ಬಾರ್-ಎಂಡ್ ಮಿರರ್‌ಗಳು ಮತ್ತು ಅಗಲವಾದ ಹಿಂಬದಿ ವ್ಹೀಲ್ ಸೇರಿವೆ. ಈ ಬೈಕಿನ ವೈಶಿಷ್ಟ್ಯದ ಪಟ್ಟಿಯು ಎಲ್ಇಡಿ ಲೈಟಿಂಗ್, ಸಂಪೂರ್ಣ-ಡಿಜಿಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಹೊಸ ಕೀವೇ ವಿ302ಸಿ ಬೈಕಿನಲ್ಲಿ 298ಸಿಸಿ ಟ್ವಿನ್-ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 29.5 ಬಿಹೆಚ್‍ಪಿ ಪವರ್ ಮತ್ತು 26.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಚೀನಾದಲ್ಲಿ ಮಾರಾಟವಾಗುವ ಮಾದರಿಯಲ್ಲಿ ಲಭ್ಯವಿರುವ ಅಂಕಿಅಂಶಗಳಿಗಿಂತ ಸ್ವಲ್ಪ ಭಿನ್ನವಾಗಿವೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಇಲ್ಲಿ ಹೈಲೈಟ್ ವಿ-ಟ್ವಿನ್ ಸಿಲಿಂಡರ್ ಕಾನ್ಫಿಗರೇಶನ್ ಆಗಿದ್ದು ಅದು ಬೈಕ್‌ಗೆ ಉತ್ತಮ ಎಕ್ಸಾಸ್ಟ್ ನೋಟ್ ಅನ್ನು ನೀಡಿದೆ. ಚಿಕ್ಕದಾದ ಕೆ-ಲೈಟ್ 250V ಪ್ರಸ್ತುತ ಭಾರತದಲ್ಲಿ ಅತ್ಯಂತ ಕೈಗೆಟುಕುವ ವಿ-ಟ್ವಿನ್ ಬೈಕ್ ಗಳಲ್ಲಿ ಒಂದಾಗಿದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಅದು ಸ್ಲಿಪ್ಪರ್ ಕ್ಲಚ್ ಅನ್ನು ಸಹ ಹೊಂದಿದೆ. ಅತ್ಯುತ್ತಮ ಕ್ರೂಸಿಂಗ್ ಸಾಮರ್ಥ್ಯಗಳ ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಕೀವೇ ವಿ302ಸಿ ಬೈಕ್ ಅನ್ನು ಬೆನೆಲ್ಲಿ/ಕೀವೇ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುವುದು ಮತ್ತು ಡೆಲಿವರಿಗಳು ಸೆಪ್ಟೆಂಬರ್ 2022 ರಿಂದ ಪ್ರಾರಂಭವಾಗಲಿದೆ. ಈ ಹೊಸ ಕೀವೇ ವಿ302ಸಿ ಬೈಕ್ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದಾರೆ. ಈ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ರೂ. 10,000 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಇನ್ನು ಇತ್ತೀಚೆಗೆ ಕೀವೇ ಕಂಪನಿಯು ಭಾರತದಲ್ಲಿ ಕೆ-ಲೈಟ್ 250ವಿ ಕ್ರೂಸರ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.89 ಲಕ್ಷಗಳಾಗಿದೆ. ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ ಮ್ಯಾಟ್ ಬ್ಲೂ, ಮ್ಯಾಟ್ ಡಾರ್ಕ್ ಗ್ರೇ, ಮ್ಯಾಟ್ ಬ್ಲ್ಯಾಕ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಈ ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ 249ಸಿಸಿ, ಏರ್ ಕೂಲ್ಡ್ ವಿ-ಟ್ವಿನ್ ಎಂಜಿನ್‌ ಅನ್ನು ಹೊಂದಿದೆ. ಪ್ರತಿ ಸಿಲಿಂಡರ್‌ಗೆ 4 ವಾಲ್ವ್‌ಗಳನ್ನು ಹೊಂದಿದೆ. ಇದು ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್ 8,500 ಆರ್‌ಪಿಎಂನಲ್ಲಿ 18.4 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 19 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಅದು ಬೆಲ್ಟ್ ಡ್ರೈವ್ ಮೂಲಕ ಹಿಂದಿನ ವ್ಹೀಲ್ ಪವರ್ ಅನ್ನು ಕಳುಹಿಸುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ 2,230 ಎಂಎಂ ಉದ್ದ, 920 ಎಂಎಂ ಅಗಲ ಮತ್ತು 1,090 ಎಂಎಂ ಎತ್ತರವನ್ನು ಹೊಂದಿದೆ. ಈ ಕ್ರೂಸರ್ 1,530 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ ಮತ್ತು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಈ ಹೊಸ ಕೀವೇ ಕೆ-ಲೈಟ್ 250ವಿ ಕ್ರೂಸರ್ ಫುಲ್ ಟ್ಯಾಂಕ್ 20 ಲೀಟರ್ ಪೆಟ್ರೋಲ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕ್ 179 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಈ ಹೊಸ ಕೀವೇ ಕೆ-ಲೈಟ್ 250ವಿ ಕ್ರೂಸರ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಇನ್ನು ಕ್ರೂಸರ್ ಮೋಟಾರ್‌ಸೈಕಲ್ 120/80-16 (ಮುಂಭಾಗ) ಮತ್ತು 140/70-16 (ಹಿಂಭಾಗ) ಟೈರ್‌ಗಳೊಂದಿಗೆ 16-ಇಂಚಿನ ಅಲಾಯ್ ವ್ಹೀಲ್ ಗಳನ್ನು ಹೊಂದಿವೆ. ಇನ್ನು ಇದರೊಂದಿಗೆ ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ, ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಹೊಸ ಕೀವೇ ವಿ302ಸಿ ಬೈಕ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ತಯಾರಕರು ಅದರ ಪತ್ರಿಕಾ ಪ್ರಕಟಣೆಯಲ್ಲಿ 2022 ರ ಅಂತ್ಯದ ವೇಳೆಗೆ ವಿಭಾಗಗಳಾದ್ಯಂತ ಇನ್ನೂ ನಾಲ್ಕು ಉತ್ಪನ್ನಗಳನ್ನು ಪರಿಚಯಿಸಲು ಯೋಜಿಸಿದ್ದಾರೆ ಎಂದು ದೃಢಪಡಿಸಿದ್ದಾರೆ. ಇವುಗಳಲ್ಲಿ ಎರಡು ರೆಟ್ರೊ ಸ್ಟ್ರೀಟ್ ಕ್ಲಾಸಿಕ್‌ಗಳು, ನೇಕೆಡ್ ಸ್ಟ್ರೀಟ್ ಮತ್ತು ಸ್ಪೋರ್ಟ್ಸ್ ಬೈಕ್ ಕೂಡ ಸೇರಿವೆ.

Most Read Articles

Kannada
Read more on ಕೀವೇ keeway
English summary
New keeway v302c launched in india price features details
Story first published: Tuesday, August 30, 2022, 16:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X