ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಟ್ರೋಲ್‌ಗಳು, ಯಾರಾದರೂ ತಿಳಿದೋ ತಿಳಿಯದೆಯೋ ತಪ್ಪಾಗಿ ಮಾತನಾಡಿದರೆ ಅವರ ವಿರುದ್ಧ ಟ್ರೋಲ್ ಮಾಡಲಾಗುತ್ತದೆ. ಇನ್ನು ಇಂತಹ ವಿಷಯಗಳಲ್ಲಿ ಸೆಲಬ್ರಿಟಿಗಳು ಸಿಕ್ಕರೇ ಅವರ ಪರಿಸ್ಥಿತಿ ಹೇಳಬೇಕಿಲ್ಲ. ಇದೀಗ ಅಂತಹದೇ ಪರಿಸ್ಥಿತಿಯಲ್ಲಿದ್ದಾರೆ ಓಲಾ ಎಲೆಕ್ಟ್ರಿಕ್‌ನ ಸಿಇಒ ಭವಿಶ್ ಅಗರ್ವಾಲ್.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಭವಿಶ್ ಅಗರ್ವಾಲ್ ಅವರು ಟ್ವಿಟರ್‌ನಲ್ಲಿ ತೀರ್ವ ಟ್ರೋಲಿಂಗ್‌ಗೆ ಗುರಿಯಾಗಿದ್ದಾರೆ. ಅವರು ಕೇಳಿದ ಒಂದು ಪ್ರಶ್ನೆಯು ಅನಿರೀಕ್ಷಿತ ಉತ್ತರಗಳಿಗೆ ಕಾರಣವಾಗಿದೆ. ಭವಿಷ್ ಅಗರ್ವಾಲ್ ಇತ್ತೀಚೆಗೆ ತಮ್ಮ ಟ್ವಿಟ್ಟರ್‌ನಲ್ಲಿ ಓಲಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ - ಎಸ್-1 ಮತ್ತು ಎಸ್-1 ಪ್ರೊನಲ್ಲಿ ಯಾವ ಪರಿಕರಗಳನ್ನು (ಅಕ್ಸೆಸರಿಸ್) ಹೊಂದಲು ಬಯಸುತ್ತೀರಾ ಎಂದು ಕೇಳಿದ್ದರು.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಬಹುಶಃ ಅವರು ಕೆಲವು ನೀರೀಕ್ಷಿತ ಪ್ರತಿಕ್ರಿಯೆಗಳನ್ನು ಬಯಸಿರಬಹುದೇನೋ, ಆದರೆ ಅವರ ಅನುಯಾಯಿಗಳು ಮಾತ್ರ ನಿರೀಕ್ಷಿಸದ ಉತ್ತರಗಳನ್ನು ನೀಡಿದ್ದಾರೆ. ಟ್ವೀಟ್‌ಗೆ ಉತ್ತರಿಸಿದ ಅನುಯಾಯಿಗಳು ಅಗ್ನಿಶಾಮಕವನ್ನು ಪರಿಕರವಾಗಿ ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಈ ಉತ್ತರವು ಭವಿಷ್ ಅವರನ್ನು ಮುಜುಗರಕ್ಕೀಡುಮಾಡಿದೆ.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಏಕೆಂದರೆ ಈ ಹಿಂದೆ ವರದಿಯಾದ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ ಅವಘಡ ಪ್ರಕರಣಗಳಲ್ಲಿ ಓಲಾ ಎಲೆಕ್ಟ್ರಿಕ್ ಕೂಡ ಇದೆ. ಇದೊಂದೆ ಪ್ರತಿಕ್ರಿಯೆ ಅಲ್ಲದೇ "100% ಉಚಿತ ಕೂಪನ್", "ಉಡುಗೊರೆಯಾಗಿ ಹೆಚ್ಚುವರಿ ಬ್ಯಾಟರಿ ಉತ್ತಮವಾಗಿರುತ್ತದೆ" ಮತ್ತು "ಬೆಂಕಿ ಹಿಡಿಯದ ಎಂಜಿನ್/ಬ್ಯಾಟರಿ.." ಮುಂತಾದವುಗಳನ್ನು ನೀಡಿ ಎಂದು ಭವಿಶ್ ಅವರಿಗೆ ಸಲಹೆ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಇದರಿಂದ ಭವಿಷ್ ಅಗರ್ವಾಲ್ ಅವರು ತುಸು ಬೇಜಾರಾದರೂ, ಉಳಿದ ಅನುಯಾಯಿಗಳು ಉತ್ತಮ ಪ್ರತಿಕ್ರಿಯೆಗಳನ್ನೇ ನೀಡಿದ್ದಾರೆ. ಸ್ಕೂಟರ್‌ನಲ್ಲಿ ಯಾವೆಲ್ಲಾ ಅಕ್ಸೆಸರಿಗಳನ್ನು ಪಡೆಯಬೇಕೆಂಬ ಅನಿಸಿಕೆಗಳನ್ನು ತಿಳಿಸಿದ್ದಾರೆ. ಈ ಮೂಲಕ ಟ್ರೋಲ್‌ಗಳು ಮಾತ್ರವಲ್ಲದೇ ಕೆಲವರು ಅನುಯಾಯಿಗಳು ಸಿಇಒಗೆ ಉತ್ತಮ ಮತ್ತು ಸಂವೇದನಾಶೀಲ ಪರಿಕರಗಳ ಸಲಹೆಗಳೊಂದಿಗೆ ಪ್ರತ್ಯುತ್ತರಿಸಿದರು.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಇವುಗಳಲ್ಲಿ ವೈಯಕ್ತೀಕರಿಸಿದ ಹೆಲ್ಮೆಟ್‌ಗಳು, ಮಹಿಳಾ ಫುಟ್‌ರೆಸ್ಟ್‌ಗಳು, ಸೆಂಟರ್ ಸ್ಟ್ಯಾಂಡ್‌ಗಳು, ವಾಹನವನ್ನು ಚಲಿಸಲು ಬಳಸಬಹುದಾದ ಗಟ್ಟಿಮುಟ್ಟಾದ ಗ್ರ್ಯಾಬ್ ಹ್ಯಾಂಡಲ್‌ಗಳಂತಹ ಅಕ್ಸೆಸರಿಸ್‌ಗಳನ್ನು ನೀಡುವಂತೆ ಕೇಳಿದ್ದಾರೆ. ಉಳಿದಂತೆ ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗು ಸಲಹೆ ನೀಡಿದ್ದಾರೆ.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಓಲಾ ಯೋಜನೆಗಳು

ಓಲಾ ತನ್ನ ಎಲೆಕ್ಟ್ರಿಕ್ ಕಾರನ್ನು ಸಹ ಸಿದ್ಧಪಡಿಸುತ್ತಿದೆ, ಇದರ ಬೆಲೆ 40 ರಿಂದ 50 ಲಕ್ಷ ರೂ. ಮಧ್ಯೆ ಇರಬಹುದು. ಕಂಪನಿಯು ಇತ್ತೀಚೆಗೆ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದೆ, ಈ ಕಾರು 4 ಸೆಕೆಂಡುಗಳಲ್ಲಿ 0-1000 kmph ಅನ್ನು ತಲುಪುತ್ತದೆ ಎಂದು ಕಂಪನಿ ಹೇಳಿದೆ. ಕಾರು ಬಿಡುಗಡೆಯಾದ ಬಳಿಕ ಭಾರತದಲ್ಲಿ ನಿಸ್ಸಂಶಯವಾಗಿ ಅತ್ಯಂತ ಸ್ಪೋರ್ಟಿ ಕಾರ್ ಆಗಿರುತ್ತದೆ ಎಂದು ಹೇಳಿದೆ.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಇತರ ಓಲಾ ಎಲೆಕ್ಟ್ರಿಕ್ ಸ್ಕೂಟರ್-ಸಂಬಂಧಿತ ಸುದ್ದಿಗಳನ್ನು ನೊಡುವುದಾದರೆ, ಕಂಪನಿಯ ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ನ S1 ಪ್ರೊ ಆವೃತ್ತಿಯು ಇತ್ತೀಚೆಗೆ ಹೊಸ ಬಣ್ಣದ ಸ್ಕೀಮ್ ಆಯ್ಕೆಯನ್ನು ಪಡೆದುಕೊಂಡಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಹೊಸ ಖಾಖಿ ಬಣ್ಣದಲ್ಲಿ ಕೇವಲ 1,947 ಯೂನಿಟ್‌ಗಳನ್ನು ಸೀಮಿತ ಜನರಿಗಾಗಿ ಬಿಡುಗಡೆ ಮಾಡಲಾಯಿತು.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಪ್ರಸ್ತುತ Ola S1 141 ಕಿಲೋಮೀಟರ್‌ಗಳ ARAI- ಪ್ರಮಾಣೀಕೃತ ಶ್ರೇಣಿಯನ್ನು ನೀಡಿದೆ. ಓಲಾ ಎಕೋ ಮೋಡ್‌ನಲ್ಲಿ 128 ಕಿಲೋಮೀಟರ್ ಟ್ರೂ ರೇಂಜ್ ಅನ್ನು ಕ್ಲೈಮ್ ಮಾಡುತ್ತದೆ. ಆದರೆ ಕ್ಲೈಮ್ ಮಾಡಲಾದ ಶ್ರೇಣಿಯು ನಾರ್ಮಲ್ ಮೋಡ್‌ನಲ್ಲಿ 101 ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ 90 ಕಿ.ಮೀಗೆ ಇಳಿಯುತ್ತದೆ.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

Ola S1 ಹೈಪರ್ ಮೋಡ್ ಅನ್ನು ಪಡೆಯುವುದಿಲ್ಲ, ಇದು ಹೆಚ್ಚು ದುಬಾರಿ S1 Pro ನಲ್ಲಿ ಪ್ರತ್ಯೇಕವಾಗಿ ನೀಡಲಾಗುತ್ತದೆ. ಇತರ ಬದಲಾವಣೆಗಳಿಗೆ ಸಂಬಂಧಿಸಿದಂತೆ, Ola S1 3 kWh ನ ಚಿಕ್ಕ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಆದರೆ S1 Pro ನಂತೆ 8.5 KW ನ ಅದೇ ಗರಿಷ್ಠ ಶಕ್ತಿಯ ರೇಟಿಂಗ್ ಅನ್ನು ನೀಡುತ್ತದೆ.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

Ola S1 Pro 8.5 kW ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಿದ್ದು, ಇದು 58 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5 ಸೆಕೆಂಡುಗಳಲ್ಲಿ 0-60 km/h ಸ್ಪ್ರಿಂಟ್ ಸಮಯವನ್ನು ನೀಡುತ್ತದೆ. ಹೈಪರ್ ಮೋಡ್‌ನಲ್ಲಿ ಸ್ಕೂಟರ್ ಗರಿಷ್ಠ 115 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಟ್ವಿಟ್ಟರ್‌ನಲ್ಲಿ ತಮ್ಮ ಸ್ಕೂಟರ್ ಕುರಿತು ಪ್ರಶ್ನಿಸಿ ಮುಜುಗರಕ್ಕೀಡಾದ ಓಲಾ ಸಿಇಒ ಭವಿಷ್ ಅಗರ್ವಾಲ್

ಸ್ಕೂಟರ್ ಬೋರ್ಡ್‌ನಲ್ಲಿ 3.97 kWh ಬ್ಯಾಟರಿಯನ್ನು ಹೊಂದಿದೆ. ಇದು ನಿಯಮಿತ ಹೋಮ್ ಚಾರ್ಜರ್ ಮೂಲಕ ಸಂಪೂರ್ಣವಾಗಿ ಚಾರ್ಜ್ ಮಾಡಲು 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇತ್ತೀಚೆಗೆ ಓಲಾ ಎಲೆಕ್ಟ್ರಿಕ್, ತನ್ನ S1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮರುಪ್ರಾರಂಭಿಸಿದ್ದು, ಅದರ ಬೆಲೆ ಎಕ್ಸ್ ಶೋರೂಂ ಪ್ರಕಾರ ರೂ. 99,999 ಇದೆ. ಮತ್ತೊಂದೆಡೆ Ola S1 Pro 1.39 ಲಕ್ಷ ರೂಪಾಯಿಗಳ ಬೆಲೆಯನ್ನು ಹೊಂದಿದೆ.

Most Read Articles

Kannada
English summary
Ola CEO Bhavish Agarwal Embarrassed When Asked About His Scooter On Twitter
Story first published: Tuesday, September 20, 2022, 13:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X