ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಪ್ರೊ ಮಾದರಿಯ ಮೂರನೇ ಹಂತದ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಕಂಪನಿಯು ವಿತರಣೆ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ. ಉತ್ಪಾದನಾ ಪ್ರಮಾಣವು ದ್ವಿಗುಣಗೊಂಡಿರುವುದರಿಂದ ಕಂಪನಿಯು ವಿತರಣೆಯನ್ನು ತಗ್ಗಿಸುತ್ತಿದ್ದು, ಖರೀದಿ ಪ್ರಕ್ರಿಯೆ ಮುಗಿಸುತ್ತಿರುವ ಗ್ರಾಹಕರಿಗೆ ಅತಿಕಡಿಮೆ ಅವಧಿ ವಾಹನಗಳನ್ನು ವಿತರಿಸಲಾಗುತ್ತಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ ಮಾದರಿಯ ವಿತರಣಾ ಪ್ರಕ್ರಿಯೆ ಕುರಿತಂತೆ ಮಾತನಾಡಿರುವ ಓಲಾ ಎಲೆಕ್ಟ್ರಿಕ್ ಅಧ್ಯಕ್ಷ ಭಾವಿಶ್ ಅಗರವಾಲ್ ಹೊಸ ಇವಿ ಸ್ಕೂಟರ್ ಮಾದರಿಯನ್ನು ಖರೀದಿ ಮಾಡಿದ 24 ಗಂಟೆಯೊಳಗೆ ವಿತರಣೆ ಮಾಡುವುದಾಗಿ ಹೇಳಿಕೊಂಡಿದ್ದು, ವಿತರಣೆ ಪ್ರಕ್ರಿಯೆಯನ್ನು ತೀವ್ರಗೊಳಿಸಿರುವ ಉತ್ಪಾದನಾ ವಿಭಾಗದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಹೊಸ ಇವಿ ಸ್ಕೂಟರ್ ಖರೀದಿಗಾಗಿ ಇದುವರೆಗೆ ಸುಮಾರು 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ಸಲ್ಲಿಸಿದ್ದು, ಕಂಪನಿಯು ಹಂತ-ಹಂತವಾಗಿ ಬುಕಿಂಗ್ ಆಧರಿಸಿ ಖರೀದಿ ಪ್ರಕ್ರಿಯೆಗೆ ಅವಕಾಶ ನೀಡುತ್ತಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಸದ್ಯ ತೆರೆದಿರುವ ಖರೀದಿ ವಿಂಡೋ ಮೂಲಕ ಇವಿ ಸ್ಕೂಟರ್ ಖರೀದಿದಾರರು ಅತಿ ಕಡಿಮೆ ಅವಧಿಯಲ್ಲಿ ವಿತರಣೆ ಪಡೆದುಕೊಳ್ಳಲಿದ್ದು, ಮುಂದಿನ ಖರೀದಿ ವಿಂಡೋ ಖರೀದಿದಾರರಿಗೂ ಅತಿ ಕಡಿಮೆ ಅವಧಿಯಲ್ಲಿ ಸ್ಕೂಟರ್ ವಿತರಣೆಯಾಗಲಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಹೊಸ ಖರೀದಿ ವಿಂಡೋ ಕಂಪನಿಯು ಹೊಸ ಎಸ್1 ಪ್ರೊ ಸ್ಕೂಟರ್ ಬೆಲೆಯನ್ನು ಸಹ ಎಕ್ಸ್‌ಶೋರೂಂ ಪ್ರಕಾರ ರೂ. 1.30 ಲಕ್ಷದಿಂದ ರೂ. 1.40 ಲಕ್ಷಕ್ಕೆ ಏರಿಕೆ ಮಾಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಕಂಪನಿಯು 2.0 ಕನೆಕ್ಟೆಡ್ ಸೌಲಭ್ಯಗಳನ್ನು ನೀಡುತ್ತಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಕಳೆದ ಅಗಸ್ಟ್‌ನಲ್ಲಿ ಇವಿ ಸ್ಕೂಟರ್ ಬಿಡುಗಡೆಯ ನಂತರ ಮೊದಲ ಬಾರಿಗೆ ಬೆಲೆ ಹೆಚ್ಚಿಸಿರುವ ಕಂಪನಿಯು ಬಿಡಿಭಾಗಗಳ ವೆಚ್ಚ ನಿರ್ವಹಣೆ ಮತ್ತು ಹೆಚ್ಚುವರಿ ಫೀಚರ್ಸ್ ಸೇರ್ಪಡೆ ಮಾಡಿರುವ ಗ್ರಾಹಕರಿಗೆ ಹೊರೆಯಾದರೂ ಹೊಸ ಫೀಚರ್ಸ್ ರೈಡಿಂಗ್ ಅನುಭವ ಹೆಚ್ಚಿಸಲಿವೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಹೊಸ ಇವಿ ಸ್ಕೂಟರ್ ಖರೀದಿದಾಗಿ ಓಲಾ ಕಂಪನಿಯು ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡುತ್ತಿದ್ದು, ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದಾಗಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯಕ್ಕೆ ಎಸ್1 ಪ್ರೊ ಮಾದರಿಯನ್ನು ಮಾತ್ರವೇ ಉತ್ಪಾದನೆಗೊಳಿಸುತ್ತಿದ್ದು, ಎಸ್1 ಮಾದರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈಗಾಗಲೇ ಎಸ್1 ಮಾದರಿಗಾಗಿ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಕಂಪನಿಯು ಎಸ್1 ಬದಲಾಗಿ ಎಸ್1 ದರಯಲ್ಲಿಯೇ ಎಸ್1 ಪ್ರೊ ಮಾದರಿಯನ್ನೇ ವಿತರಣೆ ಮಾಡುತ್ತಿದ್ದು, ಕೆಲವು ಪ್ರೀಮಿಯಂ ಫೀಚರ್ಸ್‌ಗಳು, ಸಾಫ್ಟ್‌ವೇರ್ ಅಪ್‌ಡೇಟ್, ಅಧಿಕ ಮೈಲೇಜ್ ಬ್ಯಾಟರಿ ರೇಂಜ್ ಮಾತ್ರ ನೀಡಲಾಗಿಲ್ಲ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಒಂದು ವೇಳೆ ಎಸ್1 ಮಾದರಿಗಾಗಿ ಬುಕಿಂಗ್ ಮಾಡಿದ್ದರೂ ಅಂತಹ ಗ್ರಾಹಕರಿಗೆ ಕೇವಲ ಎಸ್1 ಪ್ರೊ ಮಾದರಿಯು ಸಾಮಾನ್ಯ ಆವೃತ್ತಿಯನ್ನು ವಿತರಣೆ ನೀಡಲಾಗುತ್ತಿದ್ದು, ಒಂದು ವೇಳೆ ಹೆಚ್ಚುವರಿ ಫೀಚರ್ಸ್ ಮತ್ತು ಅಧಿಕ ಮೈಲೇಜ್ ರೇಂಜ್ ಬಯಸಿದರೆ ಇನ್ನುಳಿದ ಹಣ ಪಾವತಿ ಮಾಡಿ ಹೈ ಎಂಡ್ ಮಾದರಿಗೆ ಉನ್ನತೀಕರಿಸಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಈಗಾಗಲೇ ಎಸ್1 ಪ್ರೊ ಮಾದರಿಗಾಗಿ ಬುಕಿಂಗ್ ಮಾಡಿರುವ ಗ್ರಾಹಕರು ಕಂಪನಿಯು ನಿಗದಿಪಡಿಸಿರುವ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವಾದರೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 2.0 ಸಾಫ್ಟ್‌ವೇರ್ ಅಪ್‌ಡೇಟ್ ಹೊಂದಿರುವ ಎಸ್1 ಪ್ರೊ ಮಾದರಿಯು ಇದೇ ಕಾರಣಕ್ಕೆ ತುಸು ದುಬಾರಿಯಾಗಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿದ್ದು, ಪ್ರತಿ ಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ವೆರಿಯೆಂಟ್‌‌ನಲ್ಲಿ ಓಲಾ ಕಂಪನಿಯು 2.98kWh ಮತ್ತು ಎಸ್1 ಪ್ರೊ ಮಾದರಿಯಲ್ಲಿ 3.97kWh ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಪ್ರತಿ ಚಾರ್ಜ್‌ಗೆ ಎಸ್1 ಮಾದರಿಯು ಗರಿಷ್ಠ 121 ಕಿ.ಮೀ ಮೈಲೇಜ್ ಹಿಂದಿರುಗಿಸಿದರೆ ಎಸ್1 ಪ್ರೊ ಮಾದರಿಯು ಪ್ರತಿ ಚಾರ್ಜ್‌ಗೆ 181 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಇದರಲ್ಲಿ ಎಸ್1 ಮಾದರಿಯು ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದರೆ ಎಸ್1 ಪ್ರೊ ಮಾದರಿಯು ಪ್ರತಿ ಗಂಟೆಗೆ 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದ್ದು, ಎಸ್1 ಮಾದರಿಯಲ್ಲಿ ನಾರ್ಮಲ್ ಮತ್ತು ಸ್ಪೋರ್ಟ್ ರೈಡ್ ಮೋಡ್‌ಗಳಿದ್ದರೆ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಹಾಗೆಯೇ ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಎಸ್1 ಪ್ರೊ ಇವಿ ಖರೀದಿ ಮಾಡಿದ 24 ಗಂಟೆಯೊಳಗೆ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಿದೆ ಓಲಾ ಎಲೆಕ್ಟ್ರಿಕ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

Most Read Articles

Kannada
English summary
Ola ceo says s1 pro ev scooter being delivered within 24 hrs of purchase
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X