ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಸ್1 ಮತ್ತು ಎಸ್1 ಪ್ರೊ ಮಾದರಿಗಳೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಇವಿ ಸ್ಕೂಟರ್‌ಗಳಿಗೆ ಆಕ್ಸೆಸರಿಸ್ ಪ್ಯಾಕೇಜ್ ನೀಡಲು ಸಿದ್ದವಾಗುತ್ತಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ವಿವಿಧ ಸೌಲಭ್ಯಗಳನ್ನು ಒಳಗೊಂಡ ಆಕ್ಸೆಸರಿಸ್ ಪ್ಯಾಕೇಜ್ ಸಿದ್ದಪಡಿಸಿರುವ ಓಲಾ ಕಂಪನಿಯು ತನ್ನ ಹೊಸ ಅನುಭವ ಕೇಂದ್ರ ಮೂಲಕ ಗ್ರಾಹಕರನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ತಲುಪುವ ಗುರಿಹೊಂದಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ದೇಶಾದ್ಯಂತ 200 ಇವಿ ಅನುಭವ ಕೇಂದ್ರಗಳನ್ನು ತೆರೆಯುವುದಾಗಿ ಹೇಳಿಕೊಂಡಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಇವಿ ಅನುಭವ ಕೇಂದ್ರಗಳ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ಹೊಸ ಉತ್ಪನ್ನಗಳ ಕುರಿತಾದ ಮಾಹಿತಿಯನ್ನು ನೀಡುವುದರ ಜೊತೆ ಆಸಕ್ತ ಗ್ರಾಹಕರಿಗೆ ಟೆಸ್ಟ್ ರೈಡ್ ಸೌಲಭ್ಯಗಳನ್ನು ಒದಗಿಸಲಿವೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಟೆಸ್ಟ್ ರೈಡ್ ನಂತರ ಅಲ್ಲಿಯೇ ಹೊಸ ಸ್ಕೂಟರ್‌ಗಳ ಖರೀದಿಗಾಗಿ ಬುಕಿಂಗ್ ದಾಖಲಿಸಬಹುದಾಗಿದ್ದು, ಇವಿ ಸ್ಕೂಟರ್ ಖರೀದಿ ಸಹಕಾರಿಯಾಗುವಂತೆ ಗ್ರಾಹಕರಿಗೆ ಸಮಗ್ರ ಮಾಹಿತಿಯನ್ನು ನೀಡಲು ಅನುಭವಿ ತಂಡವನ್ನು ನಿಯೋಜನೆ ಮಾಡಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಹೊಸ ಇವಿ ಸ್ಕೂಟರ್ ಮೌಲ್ಯವರ್ಧನೆಗಾಗಿ ಕಂಪನಿಯು ಇದೀಗ ಅನುಭವ ಕೇಂದ್ರಗಳಲ್ಲಿ ಆಕ್ಸೆಸರಿಸ್ ಸಹ ಪ್ರದರ್ಶನ ಮಾಡುತ್ತಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಖರೀದಿಗೆ ಶೀಘ್ರದಲ್ಲಿಯೇ ಲಭ್ಯವಿರಲಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಎಸ್1 ಮತ್ತು ಎಸ್1 ಪ್ರೊ ಗ್ರಾಹಕರಿಗೆ ಕಸ್ಟಮೈಜ್ಡ್ ಮಾಡಲಾದ ಹೆಲ್ಮೆಟ್, ಫುಟ್‌ರೆಸ್ಟ್, ಗ್ರಾಬ್ ಹ್ಯಾಂಡಲ್, ಸೆಂಟರ್ ಸ್ಟ್ಯಾಂಡ್ ಮತ್ತು ಪ್ರೊಟೆಕ್ಷನ್ ಗಾರ್ಡ್ ಲಭ್ಯವಿರಲಿದ್ದು, ಆಕ್ಸೆಸರಿಸ್ ಪ್ಯಾಕೇಜ್ ಗಾಗಿ ಗ್ರಾಹಕರು ಹೆಚ್ಚುವರಿ ಹಣ ಪಾವತಿ ಮಾಡಬೇಕಾಗುತ್ತದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಇದರ ಜೊತೆಗೆ ಕಂಪನಿಯು ದೇಶಾದ್ಯಂತ ತನ್ನ ಗ್ರಾಹಕರಿಗೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುವುದಕ್ಕಾಗಿ ಬರೋಬ್ಬರಿ 4 ಸಾವಿರ ಹೈಪರ್ ಚಾರ್ಜರ್ ಕೇಂದ್ರಗಳನ್ನು ನಿರ್ಮಾಣಗೊಳಿಸುತ್ತಿದ್ದು, ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಸಹಭಾಗೀತ್ವ ಯೋಜನೆ ಅಡಿ ನಿಯೋಜನೆ ಮಾಡುತ್ತಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಇನ್ನು ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಹೊಸ ಮಾದರಿಯ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದೆ. ಇದು ಎಸ್1 ಪ್ರೊ ಮಾದರಿಗಿಂತ ತುಸು ಕಡಿಮೆ ಫೀಚರ್ಸ್‌ಗಳ ಜೊತೆಗೆ ಕಡಿಮೆ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 3KWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಮೂಲಕ ARAI ಪ್ರಮಾಣೀಕೃತ 131 ಕಿಮೀ ಮೈಲೇಜ್ ಹಿಂದಿರುಗಿಸಲಿದೆ. ಇದು ಇಕೋ ಮೋಡ್‌ನಲ್ಲಿ ಗರಿಷ್ಠ 128 ಕಿಮೀ, 101 ಕಿ.ಮೀ ನಾರ್ಮಲ್ ಮೋಡ್‌ನಲ್ಲಿ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಕನಿಷ್ಠ 90 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಪ್ರಕಾರ, ಎಸ್1 ಮಾದರಿಯ ಗರಿಷ್ಠ ವೇಗವು 95 ಕಿ.ಮೀ ಆಗಿದ್ದು, ಈ ಕಾರಣದಿಂದಾಗಿ ಈ ಸ್ಕೂಟರ್ ಅನ್ನು ಹೆದ್ದಾರಿಗಳಲ್ಲಿಯೂ ಸುಲಭವಾಗಿ ಓಡಿಸಬಹುದಾಗಿದೆ. ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ರೆಡ್, ಜೆಟ್ ಬ್ಲಾಕ್, ಬ್ರೊಸಲಿನ್ ವೈಟ್, ನಿಯೋ ಮಿಂಟ್, ಲಿಕ್ವಿಡ್ ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರು ಪೂರ್ಣ ಮೊತ್ತದೊಂದಿಗೆ ಇಲ್ಲವೆ ವಿವಿಧ ಹಣಕಾಸು ಸೌಲಭ್ಯಗಳೊಂದಿಗೆ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇವೆಡರ ಜೊತೆಗೆ ಕಂಪನಿಯು ತನ್ನದೇ ಆದ ಓಲಾ ಫೈನಾನ್ಸ್ ಮೂಲಕವೂ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಎಸ್1 ಇವಿ ಸ್ಕೂಟರ್ ಖರೀದಿಗಾಗಿ ರೂ. 2,999 ಗಳಗೆ ಲಭ್ಯವಿರುವ ಇಎಂಐನೊಂದಿಗೆ ಸಾಲ-ಸೌಲಭ್ಯಗಳು ಲಭ್ಯವಿದ್ದು, ಓಲಾ ಕಂಪನಿಯೊಂದಿನ ಪಾಲುದಾರಿಕೆ ಬ್ಯಾಂಕ್‌ಗಳಿಂದಲೂ ಸುಲಭ ಹಣಕಾಸು ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ಇವಿ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಸಬ್ಸಡಿ ಆಧರಿಸಿ ತುಸು ಹೆಚ್ಚಳವಾಗಲಿದ್ದು, ಹೊಸ ಇವಿ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 499 ಮುಂಗಡ ಹಣದೊಂದಿಗೆ ಬುಕಿಂಗ್ ಮಾಡಬಹುದಾಗಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್‌ (https://book.olaelectric.com/) ಮೂಲಕ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದ್ದು, ಉತ್ಪಾದನೆ ಹೆಚ್ಚಿರುವುದರಿಂದ ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದೆ.

ಇವಿ ಸ್ಕೂಟರ್ ಆಕ್ಸೆಸರಿಸ್ ಜೊತೆಗೆ 200 ಅನುಭವ ಕೇಂದ್ರಗಳನ್ನು ತೆರೆಯಲಿದೆ ಓಲಾ ಎಲೆಕ್ಟ್ರಿಕ್

2021ರ ಅಗಸ್ಟ್ 15ರಂದೇ ಬಿಡುಗಡೆಯಾಗಿದ್ದ ಎಸ್1 ಮಾದರಿಯನ್ನು ಕಂಪನಿಯು ಕಾರಣಾಂತರಗಳಿಂದ ವಿತರಣೆ ಮಾಡಿರಲಿಲ್ಲ. ತದನಂತರ ಕೆಲವು ಹೊಸ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಳಿಸುವ ಮೂಲಕ ಇದೀಗ ಮತ್ತೆ ಮರುಬಿಡುಗಡೆ ಮಾಡಲಾಗಿದೆ.

Most Read Articles

Kannada
English summary
Ola electric plans to launch new ev scooter accessories soon
Story first published: Tuesday, September 20, 2022, 20:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X