ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಭಾರತದಲ್ಲಿ ಇವಿ ವಾಹನಗಳಿಗೆ ಉತ್ತಮ ಮಾರುಕಟ್ಟೆಯಿದ್ದರೂ ಬೆಲೆ ಹೆಚ್ಚಳ ಕಾರಣಕ್ಕೆ ಗ್ರಾಹಕರು ಹೊಸ ಇವಿ ವಾಹನ ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಇವಿ ಬ್ಯಾಟರಿ ಸಂಪನ್ಮೂಲ ಲಭ್ಯತೆಯಲ್ಲಿ ಬೆಲೆ ಹೆಚ್ಚಳವು ಅನಿವಾರ್ಯವಾಗಿದ್ದು, ಇದು ಮುಂಬರುವ ದಿನಗಳಲ್ಲಿ ಸುಧಾರಿಸುವ ಸಾಧ್ಯತೆಗಳಿವೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಎಲೆಕ್ಟ್ರಿಕ್ ವಾಹನಗಳ ಮುಖ್ಯ ತಾಂತ್ರಿಕ ಅಂಶವಾಗಿರುವ ಬ್ಯಾಟರಿ ಪ್ಯಾಕ್‌ ಖರೀದಿಸಲು ದೇಶಿಯ ಮಾರುಕಟ್ಟೆಯಲ್ಲಿನ ಬಹುತೇಕ ವಾಹನ ತಯಾರಕ ಕಂಪನಿಗಳು ವಿದೇಶಿ ಮಾರುಕಟ್ಟೆಗಳನ್ನು ಅವಲಂಬಿಸಿದ್ದು, ಇದೇ ಕಾರಣಕ್ಕೆ ಇವಿ ವಾಹನಗಳ ಬೆಲೆಗಳನ್ನು ಸಾಮಾನ್ಯ ವಾಹನಗಳ ಬೆಲೆ ಮಟ್ಟಕ್ಕೆ ಇಳಿಕೆ ಮಾಡಲು ಸಾಧ್ಯವಾಗುತ್ತಿಲ್ಲ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಈ ನಿಟ್ಟಿನಲ್ಲಿ ಮಹತ್ವದ ಯೋಜನೆ ರೂಪಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಮುಂಬರುವ ಕೆಲವೇ ತಿಂಗಳಿನಲ್ಲಿ ಭಾರತದಲ್ಲಿಯೇ ಉತ್ಪಾದನೆ ಮಾಡಲಾದ ಲಿಥೀಯಂ ಅಯಾನ್ ಬ್ಯಾಟರಿ ಬಳಕೆಗೆ ಸಿದ್ದವಾಗುತ್ತಿದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಒಂದು ವೇಳೆ ಭಾರತದಲ್ಲಿಯೇ ಉತ್ಪಾದನೆಯಾದ ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಬಳಕೆ ಮಾಡಿದ್ದಲ್ಲಿ ಇವಿ ಸ್ಕೂಟರ್‌ಗಳ ಬೆಲೆಯನ್ನು ಶೇ.25 ರಿಂದ ಶೇ.30 ಇಳಿಕೆ ಮಾಡಬಹುದು ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಓಲಾ ಕಂಪನಿಯು ಭಾರತದಲ್ಲಿ ಇವಿ ಬ್ಯಾಟರಿ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದಿತ ಬ್ಯಾಟರಿ ಅಲಭ್ಯತೆಯೇ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತಿದ್ದು, ಓಲಾ ತನ್ನ ಸ್ಥಾವರದಲ್ಲಿ ತಯಾರಿಸಿದ ಬ್ಯಾಟರಿ ಪ್ಯಾಕ್ ಅನ್ನು ಪ್ರಮುಖ ದ್ವಿಚಕ್ರ ವಾಹನಗಳಲ್ಲಿ ಬಳಸಲು ಸಿದ್ದವಾಗುತ್ತಿದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಸಂದರ್ಶನವೊಂದರಲ್ಲಿ ಮಾತನಾಡಿರುವ ಓಲಾ ಹಿರಿಯ ಅಧಿಕಾರಿಯೊಬ್ಬರುವ ಎಲೆಕ್ಟ್ರಿಕ್ ವಾಹನಗಳ ಬೆಲೆಯನ್ನು ಕಡಿಮೆ ಮಾಡಲು ಮತ್ತು ಮತ್ತಷ್ಟು ಸುರಕ್ಷಿತವಾಗಿಸಲು ಕಂಪನಿಯು ನಿರಂತರವಾಗಿ ಪ್ರಯತ್ನಿಸುತ್ತಿರುವುದಾಗಿ ಮಾಹಿತಿ ನೀಡಿದ್ದು, ಬ್ಯಾಟರಿ ಬೆಲೆ ಇಳಿಕೆಯಾದರೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಸಿಗಲು ನೆರವಾಗಲಿದೆ ಎಂದಿದ್ದಾರೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಇನ್ನು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನಕ್ಕೇರಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗಷ್ಟೇ ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ನೀಡಿತ್ತು. ಇದೀಗ ಕಂಪನಿಯು ಮುಂಬರುವ ದೀಪಾವಳಿ ಹೊತ್ತಿಗೆ ಮೂವ್‌ ಒಎಸ್ 3.0(MoveOS 3) ಅಪ್‌ಡೇಟ್ ನೀಡುವುದಾಗಿ ಘೋಷಣೆ ಮಾಡಿದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ಪ್ರೊ ಮಾದರಿಯಲ್ಲಿ ಸದ್ಯ ಮೂವ್‌ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಗ್ರಾಹಕರಿಗೆ ಗರಿಷ್ಠ ಫೀಚರ್ಸ್ ನೀಡುತ್ತಿದ್ದು, ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಮತ್ತಷ್ಟು ಹೊಸ ಫೀಚರ್ಸ್ ನೀಡುವುದಾಗಿ ಕಂಪನಿಯ ಸಿಇಒ ಭಾವೀಶ್ ಅಗರವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ ಸ್ಕೂಟರ್ ಬಿಡುಗಡೆ ಆರಂಭದಲ್ಲಿ ಕೆಲವೇ ಕೆಲವು ಫೀಚರ್ಸ್‌ಗಳನ್ನು ನೀಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್‌ ಒಎಸ್ 2.0 ಅಪ್‌ಡೇಟ್ ಮೂಲಕ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿತ್ತು. ಇದೀಗ ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಸ್ಕೂಟರ್ ಆರಂಭದಲ್ಲಿ ಘೋಷಣೆ ಮಾಡಲಾಗಿದ್ದ ಎಲ್ಲಾ ಫೀಚರ್ಸ್‌ಗಳನ್ನು ಒದಗಿಸುವ ಭರವಸೆ ನೀಡಿದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್ಒಎಸ್ 2.0 ನವೀಕಣದ ಸಂದರ್ಭದಲ್ಲಿ ಎಸ್1 ಪ್ರೊ ಮಾದರಿಯಲ್ಲಿ ಇಕೋ ಮೋಡ್, ಡಿಜಿಟಲ್ ಲಾಕ್ ಮತ್ತು ಅನ್‌ಲಾಕ್, ಮ್ಯೂಸಿಕ್ ಮತ್ತು ಕ್ರೂಸ್ ಕಂಟ್ರೊಲ್ ಆಯ್ಕೆಗಳನ್ನು ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಗ್ರಾಹಕರ ಬಳಕೆಗೆ ಅನುಮತಿ ನೀಡಿತ್ತು.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಇದೀಗ ಕಂಪನಿಯು ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಹಿಲ್ ಹೋಲ್ಡ್, ಪ್ರಾಕ್ಸಿಮಿಟಿ ಅನ್‌ಲಾಕ್, ಮೂಡ್ಸ್, ರೀಜೆನ್ ವಿ2, ಹೈಪರ್ ಚಾರ್ಜಿಂಗ್, ಕಾಲಿಂಗ್, ಕೀ ಶೇರಿಂಗ್ ಸೇರಿದಂತೆ ಹಲವು ಫೀಚರ್ಸ್ ಬಳಕೆಗೆ ಅವಕಾಶ ಸಿಗಲಿದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮುಖ್ಯವಾಗಿ ಬ್ಯಾಟರಿ ಡ್ರಾಪ್ ಅನ್ನು ಪರಿಹರಿಸಲಿದ್ದು, ಇದು ಹೊಸ ಇಕೋ ಮೋಡ್‌ನೊಂದಿಗೆ ಸಂಪೂರ್ಣವಾಗಿ ಬ್ಯಾಟರಿ ಡೌನ್ ಆತಂಕವನ್ನು ದೂರ ಮಾಡುತ್ತದೆ. ಕಂಪನಿಯ ಪರೀಕ್ಷೆಯ ಪ್ರಕಾರ ಇಕೋ-ಮೋಡ್ ಪ್ರತಿ ಚಾರ್ಜ್‌ಗೆ ಕನಿಷ್ಠ 170 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಅಪ್‌ಡೇಟ್ ನಂತರ ಈಗಾಗಲೇ ಹಲವಾರು ಗ್ರಾಹಕರು ಪ್ರತಿ ಚಾರ್ಜ್‌ನಲ್ಲಿಯೇ ಗರಿಷ್ಠ 200 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿದ್ದು, ಇನ್ನುಳಿದ ರೈಡ್ ಮೋಡ್‌ಗಳಲ್ಲೂ ಉತ್ತಮ ಮೈಲೇಜ್ ಜೊತೆಗೆ ಉತ್ತಮ ಪರ್ಫಾಮೆನ್ಸ್ ಕೂಡಾ ಒದಗಿಸಲಿದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಇದರ ಜೊತಗೆ ಹೊಸ ಅಪ್‌ಡೇಟ್ ನಂತರ ಡಿಜಿಟಲ್ ಲಾಕ್‌ನೊಂದಿಗೆ ಬರಲಿದ್ದು, ಇದಕ್ಕಾಗಿ ಕಂಪನಿಯು ಓಲಾ ಎಲೆಕ್ಟ್ರಿಕ್ ಕಂಪ್ಯಾನಿಯನ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಸ್ಕೂಟರ್ ಅನ್ನು ಲಾಕ್, ಅನ್‌ಲಾಕ್ ಮಾಡಲು ಸಹಾಯ ಮಾಡುವುದಲ್ಲದೆ ಇದು ಪ್ರಮುಖ ವಾಹನ ಮೆಟ್ರಿಕ್‌ಗಳನ್ನು ಲಾಗಿನ್‌ ಆಗಲು ಸಹಾಯ ಮಾಡುತ್ತದೆ.

ಇವಿ ಸ್ಕೂಟರ್‌ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಇದರೊಂದಿಗೆ ಹೊಸ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೊದಲ ಬಾರಿಗೆ ಮ್ಯೂಜಿಕ್ ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ನೀಡಲಾಗಿದ್ದು, ಸವಾರರು ಈಗ ಬ್ಲೂಟೂತ್ ಮೂಲಕ ಅವರ ಫೋನ್‌ಗಳನ್ನು ಕನೆಕ್ಟ್ ಮಾಡಿಕೊಂಡು ಪ್ರಯಾಣದಲ್ಲಿರುವಾಗ ಜಿಯೋಸಾವನ್ ಮತ್ತು ಸ್ಪೋರ್ಟಿಫೈಅಪ್ಲಿಕೇಶನ್‌ಗಳ ಮೂಲಕ ಅವರ ನೆಚ್ಚಿನ ಟ್ಯೂನ್‌ಗಳನ್ನು ಆನಂದಿಸಬಹುದಾಗಿದೆ.

Most Read Articles

Kannada
English summary
Ola ev cell to bring down cost of electric vehicles soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X