ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಕಂಪನಿಯು ಕಳೆದ ವರ್ಷ ನವೆಂಬರ್‌ನಿಂದ ಸ್ಕೂಟರ್‌ಗಳನ್ನು ವಿತರಿಸಲು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೆ 50,000ಕ್ಕೂ ಹೆಚ್ಚು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಹಾಗಾಗಿ ಓಲಾ ಎಲೆಕ್ಟ್ರಿಕ್ ಸಂಸ್ಥಾಪಕ ಭವಿಶ್ ಅಗರ್ವಾಲ್ ಕಂಪನಿಯ ಫ್ಯೂಚರ್ ಕಾರ್ಖಾನೆಗೆ ಭೇಟಿ ನೀಡಲು 50,000 ಗ್ರಾಹಕರನ್ನು ಆಹ್ವಾನಿಸಿದ್ದಾರೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಇತ್ತೀಚೆಗೆ, ಟ್ವಿಟರ್‌ನಲ್ಲಿ ಭವಿಶ್ ಅವರು ಓಲಾ ಎಸ್ 1 ಸ್ಕೂಟರ್‌ನ 1,000 ಗ್ರಾಹಕರಿಗೆ ಕರೆ ಮಾಡಲು ಯೋಜಿಸಿದ್ದರು. ಆದರೆ ಈಗ ಅವರು ಫ್ಯೂಚರ್ ಕಾರ್ಖಾನೆಗೆ ಭೇಟಿ ನೀಡಲು 50,000 ಗ್ರಾಹಕರನ್ನು ಆಹ್ವಾನಿಸಿದ್ದಾರೆ. Ola S1 ಸ್ಕೂಟರ್‌ನ ಗ್ರಾಹಕರು ಜೂನ್ 19 ರಂದು ಫ್ಯೂಚರ್ ಕಾರ್ಖಾನೆಗೆ ಭೇಟಿ ನೀಡಬಹುದಾಗಿದೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಓಲಾ ಫ್ಯೂಚರ್ ಫ್ಯಾಕ್ಟರಿ ತಮಿಳುನಾಡಿನಲ್ಲಿದ್ದು, ಇದು ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸೌಲಭ್ಯವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಯಾವುದೇ ಭಾರತೀಯ ವಾಹನ ತಯಾರಕ ಸಂಸ್ಥೆಯು ತನ್ನ ಕಾರ್ಖಾನೆಗೆ ಭೇಟಿ ನೀಡಲು ಇಷ್ಟು ಜನರನ್ನು ಆಹ್ವಾನಿಸುತ್ತಿರುವುದು ಇದೇ ಮೊದಲು ಎಂದು ಭವಿಶ್ ಹೇಳಿದ್ದಾರೆ. ಕಂಪನಿಯು ಜೂನ್ 19 ರಂದು ತನ್ನ ಇ-ಸ್ಕೂಟರ್‌ಗಾಗಿ Move2OS ಅನ್ನು ಪ್ರಾರಂಭಿಸಲಿದೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಅತೃಪ್ತ ಗ್ರಾಹಕರು

ಕಳೆದ ಕೆಲವು ತಿಂಗಳುಗಳಿಂದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸುದ್ದಿಯಲ್ಲಿದೆ. ಓಲಾ ಸ್ಕೂಟರ್‌ನ ಅನೇಕ ಗ್ರಾಹಕರು ಅದರ ಆಕರ್ಷಕ ಶ್ರೇಣಿ ಮತ್ತು ವಿನ್ಯಾಸವನ್ನು ಶ್ಲಾಘಿಸುತ್ತಿದ್ದರೂ, ಕೆಲವರು ಮಾತ್ರ ಅತೃಪ್ತಗೊಂಡಿದ್ದಾರೆ. Ola S1 Pro ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸಮಯಕ್ಕೆ ತಲುಪಿಸದಿರುವ ಬಗ್ಗೆ ಅನೇಕ ಗ್ರಾಹಕರು ದೂರಿದರೆ, ಹೆಚ್ಚಿನ ಗ್ರಾಹಕರು ಉತ್ತಮ ಫಿಟ್ ಮತ್ತು ಫಿನಿಶ್ ಹೊಂದಿರುವ ಸ್ಕೂಟರ್ ಅನ್ನು ನೀಡಲಿಲ್ಲ ಎಂದು ಆಗ್ರಹಿಸುತ್ತಿದ್ದಾರೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಮತ್ತೊಂದೆಡೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಹಲವು ಪ್ರಕರಣಗಳು ವರದಿಯಾಗಿವೆ. ಇದು ಗ್ರಾಹಕರಲ್ಲಿ ಭಾರೀ ಆತಂಕ ಹುಟ್ಟಿಸಿದ್ದು, ವಾಹನ ಮಾರಾಟದಲ್ಲಿ ಏರುಪೇರಾಗಿತ್ತು. ಕಂಪನಿಯು ಕೂಡ ಮುಂದನ ದಿನಗಳಲ್ಲಿ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿತ್ತು.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಬೆಲೆ ಏರಿಕೆ

Ola S1 Pro ಬೆಲೆಯನ್ನು ಹೆಚ್ಚಿಸಿದೆ. ಸ್ಕೂಟರ್ ಈಗ 1.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಈ ಹಿಂದೆ ಸ್ಕೂಟರ್ ಬುಕ್ ಮಾಡಿದ ಗ್ರಾಹಕರಿಗೆ ಮೊದಲು ಸ್ಕೂಟರ್ ಖರೀದಿಸುವ ಅವಕಾಶವನ್ನು ಕಂಪನಿ ನೀಡುತ್ತಿತ್ತು. ಈಗಾಗಲೇ ಸ್ಕೂಟರ್ ಬುಕ್ ಮಾಡಿರುವ ಗ್ರಾಹಕರಿಗೆ ಇ-ಮೇಲ್ ಮೂಲಕ ಸ್ಕೂಟರ್ ಬೆಲೆ ಪಾವತಿಸಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗುವುದು ಎಂದು ಓಲಾ ಹೇಳಿದೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಇದಲ್ಲದೆ, ಓಲಾ 5 ನಗರಗಳಲ್ಲಿ ಸ್ಕೂಟರ್‌ಗಳ ಟೆಸ್ಟ್ ರೈಡ್ ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸಿದೆ. ಈಗ ಗ್ರಾಹಕರು ಸ್ಕೂಟರ್ ಅನ್ನು ಖರೀದಿಸುವ ಮೊದಲು ಅದರ ಪರೀಕ್ಷಾ ಸವಾರಿಯನ್ನು ತೆಗೆದುಕೊಳ್ಳುವ ಮೂಲಕ ಸವಾರಿಯ ಗುಣಮಟ್ಟವನ್ನು ಅನುಭವಿಸಬಹುದು. ಇದಲ್ಲದೇ ಸ್ಕೂಟರ್‌ಗಳ ವಿತರಣೆಯೂ ವೇಗವಾಗಿ ನಡೆಯಲಿದೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

Ola 'MoveOS 2' ಪ್ರಾರಂಭ

Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ 'MoveOS 2' ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಈ ಅಪ್‌ಗ್ರೇಡ್‌ನೊಂದಿಗೆ, ಸ್ಕೂಟರ್‌ಗೆ ಅನೇಕ ಹೊಸ ವೈಶಿಷ್ಟ್ಯಗಳು ಮತ್ತು ಇಕೋ ಮೋಡ್ ಅನ್ನು ಸೇರಿಸಲಾಗಿದೆ. ಈ ಹೊಸ ಇಕೋ ಮೋಡ್‌ನಲ್ಲಿ ಸ್ಕೂಟರ್‌ನ ಗರಿಷ್ಠ ವೇಗವು ಈಗ 45 ಕಿ.ಮೀ/ಗಂ ಆಗಲದೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಅದೇ ಸಮಯದಲ್ಲಿ, ಸ್ಕೂಟರ್ ಈ ಮೋಡ್‌ನಲ್ಲಿ 170 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಈಗ ಕೆಲವು ಗ್ರಾಹಕರು ಈ ಮೋಡ್‌ನಲ್ಲಿ ಸ್ಕೂಟರ್‌ನಿಂದ 200 ಕಿ.ಮೀ ವ್ಯಾಪ್ತಿಯನ್ನು ಪಡೆಯಬಹುದು. ಎರಡೂ Ola ಎಲೆಕ್ಟ್ರಿಕ್ ಸ್ಕೂಟರ್‌ಗಳು 3.9 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿವೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಇದರ ಎಲೆಕ್ಟ್ರಿಕ್ ಮೋಟಾರ್ 8.5 kW ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. 750W ಸಾಮರ್ಥ್ಯದ ಪೋರ್ಟಬಲ್ ಚಾರ್ಜರ್‌ನೊಂದಿಗೆ ಓಲಾ ಸ್ಕೂಟರ್‌ನ ಬ್ಯಾಟರಿಯನ್ನು ಸುಮಾರು 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇದಲ್ಲದೇ, ವೇಗದ ಚಾರ್ಜರ್‌ನೊಂದಿಗೆ ಕೇವಲ 18 ನಿಮಿಷಗಳಲ್ಲಿ ಶೇ75 ವರೆಗೆ ಚಾರ್ಜ್ ಆಗುತ್ತದೆ.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

Ola S1 ಪೂರ್ಣ ಚಾರ್ಜ್‌ನಲ್ಲಿ 121 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ, ಆದರೆ ಉನ್ನತ-ಮಟ್ಟದ ರೂಪಾಂತರ S1 Pro 181 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಎರಡೂ ಸ್ಕೂಟರ್‌ಗಳ ಉನ್ನತ ವೇಗದ ಕುರಿತು ಹೇಳುವುದಾದರೆ, Ola S1 ಅನ್ನು 90 km/h ವೇಗದಲ್ಲಿ ಓಡಿಸಬಹುದು ಮತ್ತು Ola S1 Pro 115 km/h ವೇಗದಲ್ಲಿ ಓಡಿಸಬಹುದು.

 ತಮ್ಮ ಫ್ಯೂಚರ್ ಫ್ಯಾಕ್ಟರಿಯನ್ನು ನೋಡಲು 50,000 ಗ್ರಾಹಕರಿಗೆ ಆಹ್ವಾನ ನೀಡಿದ ಓಲಾ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಓಲಾದಿಂದ ಇಲ್ಲಿಯವರೆಗೆ 50,000 ವಾಹನಗಳು ಮಾರಾಟವಾಗಿವೆ. ಇವುಗಳಲ್ಲಿ ಸುಮಾರು 30-40 ವಾಹನಗಳಲ್ಲಿ ವ್ಯತ್ಯಯ ಉಂಟಾಗಿ ಬೆಂಕಿ ಕಾಣಿಸಿಕೊಳ್ಳುವುದು, ವಾಹನದ ಸಸ್ಪೆನ್ಷನ್ ಮುರಿದು ಬೀಳುವುದು, ಸ್ಟಾರ್ಟ್ ಆಗದಿರುವುದು, ಕಡಿಮೆ ಮೈಲೇಜ್ ನಂತಹ ಸಮಸ್ಯೆಗಳು ಕಂಡು ಬಂದಿವೆ. 50,000 ವಾಹನಗಳಲ್ಲಿ ಕೇವಲ 30-40 ವಾಹನಗಳ ಸಮಸ್ಯೆಯಿಂದಾಗಿ ಓಲಾ ಅಭಿವೃದ್ಧಿಗೆ ದೊಡ್ಡ ಹೊಡೆತ ಎದುರಾಯಿತು. ಇನ್ನಾದರೂ ಕಂಪನಿ ಯಾವುದಕ್ಕೂ ರಾಜಿಯಾಗದೇ ಪ್ರತಿಯೊಂದು ಮಾದರಿಯನ್ನೂ ಪ್ರಮಾಣಿತವಾಗಿ ನೀಡಿ ಮತ್ತೊಮ್ಮೆ ಇವಿ ವಲಯದಲ್ಲಿ ಸೈ ಎನ್ನಿಸಿಕೊಳ್ಳಲಿದೆಯೇ ನೋಡಬೇಕಿದೆ.

Most Read Articles

Kannada
Read more on ಓಲಾ ola
English summary
Ola invited over 50000 customers to see their Future Factory
Story first published: Monday, June 13, 2022, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X