ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿ ತಂದಿರುವ ಓಲಾ ಎಲೆಕ್ಟ್ರಿಕ್ ಈಗ ಭಾರತವೊಂದೇ ಅಲ್ಲದೇ ವಿದೇಶಗಳಲ್ಲೂ ತನ್ನ ಉತ್ಪನ್ನಗಳಿಂದ ಸದ್ದು ಮಾಡಲು ಹೊರಟಿದೆ. ಇತ್ತೀಚೆಗೆ ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ವಿದೇಶದಲ್ಲಿಯೂ ಮಾರಾಟ ಮಾಡಲು ಮುಂದಾಗಿರುವುದಾಗಿ ಸಿಇಒ ಭವಿಶ್ ಅಗರ್ವಾಲ್ ತಿಳಿಸಿದ್ದರು.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಅದರಂತೆ ಭಾರತದ ನಂತರ ಓಲಾ ಎಲೆಕ್ಟ್ರಿಕ್ ಈಗ ಯುನೈಟೆಡ್ ಕಿಂಗ್‌ಡಮ್ (ಯುಕೆ)ನಲ್ಲಿ ತನ್ನ ಕಾರ್ಖಾನೆಯನ್ನು ನಿರ್ಮಿಸುತ್ತಿರುವ ಚಿತ್ರಗಳನ್ನು ಸಿಇಒ ಭವಿಶ್ ಅಗರ್ವಾಲ್ ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಕಾರ್ಖಾನೆ ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಕಂಪನಿಯು ಈ ಕಾರ್ಖಾನೆಗೆ 'ಫ್ಯೂಚರ್ ಫೌಂಡ್ರಿ' ಎಂದು ನಾಮಕರಣ ಮಾಡಿದೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ತಮಿಳುನಾಡಿನ ಕಾರ್ಖಾನೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಓಲಾ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರನ್ನು ಇತ್ತೀಚೆಗೆ ಬಹಿರಂಗಪಡಿಸಿತ್ತು. ಓಲಾ ತನ್ನ ಯುಕೆ ಕಾರ್ಖಾನೆಯಲ್ಲಿ ಈ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಲಿದೆ ಎಂದು ಹೇಳಲಾಗುತ್ತಿದೆ. ಈ ಕಾರ್ಖಾನೆಯಲ್ಲಿ ಬ್ಯಾಟರಿ ಸೆಲ್ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯವೂ ನಡೆಯಲಿದೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಓಲಾ ತನ್ನ ಮುಂಬರುವ ಎಲೆಕ್ಟ್ರಿಕ್ ಕಾರನ್ನು ಆಗಸ್ಟ್ 15, 2022 ರಂದು ಅನಾವರಣಗೊಳಿಸಲಿದೆ. ಓಲಾದ ಈ ಎಲೆಕ್ಟ್ರಿಕ್ ಕಾರು 5 ಆಸನಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಪೂರ್ಣ ಚಾರ್ಜ್‌ನಲ್ಲಿ 500 ಕಿ.ಮೀ ಮೈಲೇಜ್ ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರಿನ ಬಗ್ಗೆ ಹೆಚ್ಚಿನ ವಿವರಗಳನ್ನು ಅದರ ಪರಿಚಯದೊಂದಿಗೆ ಬಹಿರಂಗಪಡಿಸಲಾಗುವುದು.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಓಲಾ ಐದು ವರ್ಷಗಳಲ್ಲಿ ಈ ಕಾರ್ಖಾನೆಯಲ್ಲಿ 750 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಕಂಪನಿಯು ಗಾಗ್ವಾರ್‌ನಲ್ಲಿ ಕೆಲಸ ಮಾಡಿದ ಮಾಜಿ ವಿನ್ಯಾಸಕರನ್ನೇ ನೇಮಿಸಿಕೊಂಡಿದೆ, ಅವರು ಓಲಾ ಮುಂಬರುವ ವಾಹನಗಳನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಓಲಾ ಎಲೆಕ್ಟ್ರಿಕ್‌ನ ಯುಕೆ ಕಾರ್ಖಾನೆಯು ವಾಹನವನ್ನು ವಿನ್ಯಾಸಗೊಳಿಸಲು ಭಾರತದಲ್ಲಿನ ಫ್ಯೂಚರ್ ಫ್ಯಾಕ್ಟರಿಯೊಂದಿಗೆ ಸಹಕರಿಸಲಿದೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಓಲಾ ಎಲೆಕ್ಟ್ರಿಕ್ ಪ್ರಸ್ತುತ ಭಾರತದಲ್ಲಿ ತನ್ನ ಫ್ಯೂಚರ್ ಫ್ಯಾಕ್ಟರಿಯಲ್ಲಿ ಎಸ್1 ಮತ್ತು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತಿದೆ. Ola S1 ಮತ್ತು S1 Pro ಕ್ರಮವಾಗಿ ರೂ. 99,999 ಮತ್ತು ರೂ. 1.30 ಲಕ್ಷ (ಎಕ್ಸ್ ಶೋ ರೂಂ) ಬೆಲೆ ಹೊಂದಿದೆ. ಎರಡೂ Ola ಎಲೆಕ್ಟ್ರಿಕ್ ಸ್ಕೂಟರ್‌ಗಳು 3.9 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿವೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಇದರ ಎಲೆಕ್ಟ್ರಿಕ್ ಮೋಟಾರ್ 8.5 kWನ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. 750W ಸಾಮರ್ಥ್ಯದ ಪೋರ್ಟಬಲ್ ಚಾರ್ಜರ್‌ನೊಂದಿಗೆ ಓಲಾ ಸ್ಕೂಟರ್‌ನ ಬ್ಯಾಟರಿಯನ್ನು ಸುಮಾರು 6 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇದಲ್ಲದೇ, ವೇಗದ ಚಾರ್ಜರ್‌ನೊಂದಿಗೆ ಕೇವಲ 18 ನಿಮಿಷಗಳಲ್ಲಿ ಶೇ75 ರಷ್ಟು ಚಾರ್ಜ್ ಆಗುತ್ತದೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

Ola S1 ಪೂರ್ಣ ಚಾರ್ಜ್‌ನಲ್ಲಿ 121 ಕಿ.ಮೀ ಮೈಲೇಜ್ ನೀಡುತ್ತದೆ, ಇದರ ಉನ್ನತ ಮಟ್ಟದ ರೂಪಾಂತರವಾದ S1 Pro 181 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ. ಎರಡೂ ಸ್ಕೂಟರ್‌ಗಳ ಗರಿಷ್ಟ ವೇಗದ ಕುರಿತು ಮಾತನಾಡುವುದಾದರೆ, Ola S1 ಅನ್ನು ಗಂಟೆಗೆ 90 ಕಿ.ಮೀ ವೇಗದಲ್ಲಿ ಓಡಿಸಬಹುದು, ಇನ್ನು Ola S1 Pro ಗಂಟೆಗೆ 115 ಕಿ.ಮೀ ವೇಗವನ್ನು ತಲುಪುತ್ತದೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

Ola ಇತ್ತೀಚೆಗೆ ತನ್ನ S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ 'MoveOS 2' ಅನ್ನು ನವೀಕರಿಸಿದೆ. ಈ ಅಪ್‌ಗ್ರೇಡ್‌ನೊಂದಿಗೆ ಸ್ಕೂಟರ್‌ಗೆ ಅನೇಕ ಹೊಸ ವೈಶಿಷ್ಟ್ಯಗಳು ಮತ್ತು ಇಕೋ ಮೋಡ್ ಎಂಬ ರೈಡಿಂಗ್ ಆಯ್ಕೆಯನ್ನು ನೀಡಿದೆ. ಈ ಹೊಸ ಇಕೋ ಮೋಡ್‌ನಲ್ಲಿ ಸ್ಕೂಟರ್‌ನ ಗರಿಷ್ಠ ವೇಗವು 45 ಕಿ.ಮೀ/ಗಂ ಆಗಿರುತ್ತದೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಸ್ಕೂಟರ್ ಈ ಮೋಡ್‌ನಲ್ಲಿ 170 ಕಿ.ಮೀ ಮೈಲೇಜ್ ನೀಡುತ್ತದೆ. ಅಲ್ಲದೇ ಕೆಲವು ಗ್ರಾಹಕರು ಈ ಮೋಡ್‌ನಲ್ಲಿ ಸ್ಕೂಟರ್‌ನಿಂದ 200 ಕಿ.ಮೀ ಮೈಲೇಜ್ ಪಡೆದುಕೊಂಡಿದ್ದಾರೆ. ಓಲಾ ಕೂಡ 5 ನಗರಗಳಲ್ಲಿ ಸ್ಕೂಟರ್‌ಗಳ ಟೆಸ್ಟ್ ರೈಡ್‌ಗಳನ್ನು ಆರಂಭಿಸಿದೆ. ಈಗ ಗ್ರಾಹಕರು ಸ್ಕೂಟರ್ ಅನ್ನು ಖರೀದಿಸುವ ಮುನ್ನ ಟೆಸ್ಟ್‌ ರೈಡ್ ಮಾಡಬಹುದಾಗಿದೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಇದಲ್ಲದೇ ಬುಕ್ಕಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ಓಲಾ ಸ್ಕೂಟರ್‌ಗಳ ವಿತರಣೆಯ ವೇಗವನ್ನು ಹೆಚ್ಚಿಸಿದೆ, ಈ ಕಾರಣದಿಂದಾಗಿ ಈಗ ಗ್ರಾಹಕರು ಬುಕ್ ಮಾಡಿದ 24 ಗಂಟೆಗಳಲ್ಲಿ ಸ್ಕೂಟರ್‌ಗಳನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಓಲಾ ಕಂಪನಿಯು ಈ ಹಿಂದೆ ದಾಖಲಾಗಿದ್ದ ಕೆಲ ದೋಷಗಳನ್ನು ಗಮನದಲ್ಲಿಟ್ಟುಕೊಂಡು ಗುಣಮಟ್ಟದ ಬ್ಯಾಟರಿಗಳೊಂದಿಗೆ ಗ್ರಾಹಕರ ವಿಶ್ವಾಸರ್ಹತೆ ಪಡೆದುಕೊಳ್ಳುತ್ತಿದೆ.

ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡ ಓಲಾ ಸ್ಕೂಟರ್: ಲಂಡನ್‌ನಲ್ಲಿ ಹೊಸ ಪ್ಲಾಂಟ್ ನಿರ್ಮಾಣ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಓಲಾ ಎಲೆಕ್ಟ್ರಿಕ್ ಹಲವು ಗಂಡಾಂತರಗಳ ನಡುವೆಯು ತನ್ನ ಯಶಸ್ವಿ ಮಾರಾಟವನ್ನು ದಾಖಲಿಸುತ್ತಿದೆ. ಇತ್ತಿಚೆಗೆ ಗ್ರಾಹಕರ ಸಂಖ್ಯೆ ಹೆಚ್ಚಾಗತೊಡಗಿದ್ದು, ಓಲಾ ಪ್ಲಾಂಟ್‌ನಲ್ಲಿ ವಾಹನ ತಯಾರಿ ಕೂಡ ಭರದಿಂದ ಸಾಗುತ್ತಿದೆ. ಇನ್ನು ವಿದೇಶಗಳಲ್ಲಿಯೂ ತನ್ನ ಪ್ರವೇಸದೊಂದಿದೆಗೆ ಉತ್ತಮ ಬೆಳವಣಿಗೆ ಸಾಧಿಸಲು ಸಜ್ಜಾಗುತ್ತಿದೆ. ಓಲಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದಲ್ಲಿ ಕಾರು ವಿಭಾಗದಲ್ಲಿ ದೇಶೀಯ ಹಾಗೂ ವಿದೇಶಿ ಬ್ರಾಂಡ್‌ಗಳೊಂದಿಗೆ ಓಲಾ ಸೆಣಸಾಡಲಿದೆ.

Most Read Articles

Kannada
English summary
Ola set to foray into international market New plant in London
Story first published: Monday, July 4, 2022, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X