ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ದುಬಾರಿ ಇಂಧನಗಳ ಬೆಲೆಯಿಂದ ತತ್ತರಿಸಿರುವ ಜನತೆಗೆ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಿಹಿಸುದ್ದಿ ನೀಡಿದ್ದು, ಪೆಟ್ರೋಲ್ (Petrol) ಖರೀದಿಗಾಗಿ ಸಬ್ಸಡಿ ಘೋಷಣೆ ಮಾಡುವ ಮೂಲಕ ಇದೀಗ ಅಧಿಕೃತವಾಗಿ ಜಾರಿಗೆ ತಂದಿದ್ದಾರೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಕೇಂದ್ರ ಸರ್ಕಾರವು ಈ ಹಿಂದೆ ಪೆಟ್ರೋಲ್ ಮೇಲಿನ ಆಮದು ಸುಂಕವನ್ನು ರೂ. 5 ರೂಪಾಯಿ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ರೂ. 10 ತಗ್ಗಿಸುವ ಮೂಲಕ ದೇಶದ ಜನತೆಗೆ ಸಿಹಿಸುದ್ದಿ ನೀಡಿತ್ತು. ಆದರೆ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಪ್ರಮುಖ ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸಾಕಷ್ಟು ಇಳಿಕೆ ಮಾಡಿದರೂ ಕೆಲವು ರಾಜ್ಯಗಳಲ್ಲಿ ಮಾತ್ರ ಇಂಧನಗಳ ಮೇಲಿನ ಸುಂಕ ಇಳಿಕೆ ಹಿಂದೆೇಟು ಹಾಕಿದ್ದವು.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಕೇಂದ್ರ ಸರ್ಕಾರದ ಸಲಹೆ ನಂತರವೂ ಇಂಧನಗಳ ಬೆಲೆ ಇಳಿಕೆಗೆ ಹಿಂದೇಟು ಹಾಕಿದ್ದ ಪ್ರಮುಖ ರಾಜ್ಯಗಳಲ್ಲಿ ಜಾರ್ಖಂಡ್‌ವು ಕೂಡಾ ಒಂದಾಗಿದ್ದು, ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಮನವಿ ಮೇರೆಗೆ ಜಾರ್ಖಂಡ್‌ ಸರ್ಕಾರವು ಸಹ ಇದೀಗ ಪೆಟ್ರೋಲ್ ಮೇಲಿನ ವ್ಯಾಟ್ ಇಳಿಕೆಗೆ ಒಪ್ಪಿಗೆ ಸೂಚಿಸಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಜಾರ್ಖಂಡ್ ಸರ್ಕಾರವು ತನ್ನ ರಾಜ್ಯದ ಜನತೆಗೆ ಸಬ್ಸಡಿ ದರದಲ್ಲಿ ಪೆಟ್ರೋಲ್ ಒದಗಿಸುವ ಉದ್ದೇಶದೊಂದಿಗೆ ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಪ್ರತಿ ಲೀಟರ್‌ ಪೆಟ್ರೋಲ್ ಮೇಲೆ ರೂ. 25 ಸಬ್ಸಡಿ ಘೋಷಣೆ ಮಾಡಿದ್ದು, ಹೊಸ ಸಬ್ಸಡಿ ಘೋಷಣೆಯ ಜೊತೆಗೆ ಸಬ್ಸಡಿ ಯೋಜನೆಗಾಗಿ ನೋಂದಣಿ ಆರಂಭಿಸಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಜನವರಿ 26ರ ಗಣರಾಜ್ಯೋತ್ಸವ ದಿನದಂದೆ ಸಬ್ಸಡಿ ಯೋಜನೆ ಆರಂಭಿಸಲು ನಿರ್ಧರಿಸಿರುವ ಜಾರ್ಖಂಡ್ ಸರ್ಕಾರವು ಸಿಎಂ ಸರ್ಪೊಟ್ (CM Support App) ಮೂಲಕ ಬಿಪಿಎಲ್ ಕಾರ್ಡ್ ನೋಂದಣಿ ಆರಂಭಿಸಿದ್ದು, ಬಳಕೆದಾರರು/ಫಲಾನುಭವಿಗಳು ಸಿಎಂ ಸರ್ಪೊಟ್ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಂಡ ನಂತರ ಎರಡು ಹಂತದ ಪರಿಶೀಲನೆ ಮಾಡಿ ಸಬ್ಸಡಿ ಅರ್ಜಿಯನ್ನು ಮಾನ್ಯ ಮಾಡುತ್ತದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಸಬ್ಸಡಿಗಾಗಿ ಸಿಎಂ ಸರ್ಪೊಟ್ ಅಪ್ಲಿಕೇಶನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಎರಡು ಹಂತದ ಪರಿಶೀಲನೆ ಮಾಡಲಿರುವ ಪಡಿತರ ಇಲಾಖೆಯು ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಸಬ್ಸಡಿ ಹಣವನ್ನು ವರ್ಗಾವಣೆ ಮಾಡಲಿದ್ದು, ಸಬ್ಸಡಿ ಯೋಜನೆ ಅಡಿ ದ್ವಿಚಕ್ರ ವಾಹನ ಮಾಲೀಕರು ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಹೊಸ ಸಬ್ಸಡಿ ಯೋಜನೆ ಅಡಿ ಬೈಕ್ ಮಾಲೀಕರು ಗರಿಷ್ಠ 10 ಲೀಟರ್ ಪೆಟ್ರೋಲ್ ಮೇಲೆ ಮಾತ್ರ ಸಬ್ಸಡಿ ಪಡೆದುಕೊಳ್ಳಬಹುದಾಗಿದ್ದು, ಒಂದು ಬಿಪಿಎಲ್ ಕಾರ್ಡ್‌ಗೆ ಗರಿಷ್ಠ ರೂ.250 ತನಕ ಸಬ್ಸಡಿ ವರ್ಗಾವಣೆ ನಂತರ ಸಾಮಾನ್ಯ ಬೆಲೆಯಲ್ಲಿ ಪೆಟ್ರೋಲ್ ಖರೀದಿಸಬೇಕಾಗುತ್ತದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಜಾರ್ಖಂಡ್‌ದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳ ಪರಿಣಾಮ ಗಡಿ ಪ್ರದೇಶಗಳಲ್ಲಿ ವಾಹನಗಳು ಪೆಟ್ರೋಲ್‌ಗಾಗಿ ಹೊರರಾಜ್ಯಗಳಿಗೆ ಹೊಗಿಬರುತ್ತಿದ್ದು, ಇದರಿಂದ ಸಾಕಷ್ಟು ನಷ್ಟವಾಗುತ್ತಿದೆ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದ ಜಾರ್ಖಂಡ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಪೆಟ್ರೋಲ್ ಮೇಲಿನ ಸುಂಕ ಇಳಿಕೆಗೆ ಮನವಿ ಮಾಡಿತ್ತು.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಆದರೆ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಮನವಿಯನ್ನು ತಳ್ಳಿಹಾಕಿದ ರಾಜ್ಯ ಸರ್ಕಾರವು ಸುಂಕ ಇಳಿಕೆಯ ಬದಲಾಗಿ ಬಡವರಿಗೆ ಅನುಕೂಲಕರವಾಗುವಂತೆ ಸಬ್ಸಡಿ ಘೋಷಣೆ ಮಾಡಿದ್ದು, ಜಾರ್ಖಂಡ್ ಸರ್ಕಾರದ ಹೊಸ ಸಬ್ಸಡಿ ಯೋಜನೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತೈಲ ಬೆಲೆಯ ಸಮರದಿಂದಾಗಿ ದುಬಾರಿಯಾಗುತ್ತಿರುವ ಇಂಧನ ಬೆಲೆಯನ್ನು ನಿಯಂತ್ರಿಸಲು ಹಲವು ಹೊಸ ಕ್ರಮಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರವು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣವನ್ನು ಹೆಚ್ಚಿಸುವ ಮಹತ್ವದ ಯೋಜನೆಯನ್ನು ಜಾರಿ ಮಾಡಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

2023ರ ವೇಳೆಗೆ ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣವನ್ನು ಶೇ. 20ರಷ್ಟು ಹೆಚ್ಚಿಸುವ ಗುರಿ ಹೊಂದಿದ್ದು, ನಿಯಂತ್ರಣ ತಪ್ಪಿರುವ ಪೆಟ್ರೋಲ್ ಬೆಲೆಗೆ ಕಡಿವಾಣ ಹಾಕಲು ಎಥೆನಾಲ್ ಮಿಶ್ರಣ ಪ್ರಮಾಣವನ್ನು ನಿಗದಿತ ಅವಧಿಯೊಳಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಪ್ರಸಕ್ತ ವರ್ಷದ ಎಥೆನಾಲ್ ಪೂರೈಕೆಯಲ್ಲಿ ಭಾರತ ಸರ್ಕಾರವು ಶೇಕಡಾ 15ರಷ್ಟು ಸಂಯೋಜಿತ ಎಥೆನಾಲ್ ಪೆಟ್ರೋಲ್ ಪೂರೈಕೆ ಮಾಡುವ ಗುರಿ ಹೊಂದಿದ್ದು, ಸಂಯೋಜಿತ ಇಂಧನಕ್ಕಾಗಿ ಕನಿಷ್ಠ 4 ಬಿಲಿಯನ್ ಲೀಟರ್ ಎಥೆನಾಲ್ ಅಗತ್ಯವಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಸಾಮಾನ್ಯವಾಗಿ ಎಥೆನಾಲ್‌ ತೈಲಕ್ಕೆ ಬೃಹತ್‌ ಕೈಗಾರಿಕೆಗಳಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚುವರಿ ಸಕ್ಕರೆ ಉತ್ಪಾದನೆಯಿಂದಾಗಿ ನಷ್ಟವಾಗುವ ಸಕ್ಕರೆ ಮತ್ತು ಸಕ್ಕರೆ ಉತ್ಪನ್ನಗಳನ್ನು ಎಥೆನಾಲ್‌ ಆಗಿ ಪರಿವರ್ತಿಸಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲಾಗುತ್ತದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಕರ್ನಾಟಕ ರಾಜ್ಯದಲ್ಲಿಯೇ ಸುಮಾರು 50 ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಪ್ರತಿ ನಿತ್ಯ ಈ ಕಾರ್ಖಾನೆಗಳ ಮೂಲಕ ಸಕ್ಕರೆಯನ್ನು ಉತ್ಪಾದಿಸಲು ಅವಶ್ಯಕವಿರುವ ಕಬ್ಬನ್ನು ಪ್ರತ್ಯೇಕಿಸಿ ನೇರವಾಗಿ ಎಥೆನಾಲ್‌ನ್ನು ಉತ್ಪಾದಿಸಿ 400 ಮಿಲಿಯನ್‌ ಲೀಟರ್‌ ಎಥೆನಾಲ್‌ ಸಂಗ್ರಹಿಸುವ ಸಿದ್ದತೆ ನಡೆದಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಪ್ರಸ್ತುತ ಕರ್ನಾಟಕ ಒಂದರಲ್ಲೇ 30-35 ಮಿಲಿಯನ್‌ ಲೀಟರ್‌(ಶೇ.5)ರಷ್ಟು ಎಥೆನಾಲ್‌ನ್ನು ಮಾತ್ರ ಪೆಟ್ರೋಲ್‌ ಮಿಶ್ರಣಕ್ಕೆ ಬಳಕೆಯಾಗುತ್ತಿದ್ದು, ಉಳಿದಂತೆ ಉತ್ಪಾದನೆಯು ನೆರೆ ರಾಜ್ಯಗಳಲ್ಲಿನ ತೈಲ ಮಿಶ್ರಣಕ್ಕೆ ಉಪಯೋಗವಾಗುತ್ತಿದೆ. ಶರ್ಕರಾಂಶವಿರುವ ಸಸ್ಯಗಳು, ಕೃಷಿ ತ್ಯಾಜ್ಯಗಳು, ಕಬ್ಬಿನ ಸಿಪ್ಪೆ (ಕಾಕಂಬಿ), ಬೆಳೆ ತ್ಯಾಜ್ಯಗಳು, ಭತ್ತದ ಹುಲ್ಲು, ನಿರುಪಯುಕ್ತ ಹಣ್ಣುಗಳು, ಗೇರು ಹಣ್ಣು ಇತ್ಯಾದಿಗಳಿಂದ ಜೈವಿಕ ಎಥೆನಾಲ್‌ ಉತ್ಪಾದಿಸಲು ಸಾಧ್ಯವಿದ್ದು, ವಿವಿಧ ರಾಜ್ಯಗಳಲ್ಲಿನ ಸಕ್ಕರೆ ಕಾರ್ಖಾನೆಗಳ ಮೂಲಕ ಅಗತ್ಯವಿರುವ 4 ಬಿಲಿಯನ್ ಲೀಟರ್ ಎಥೆನಾಲ್ ಉತ್ಪಾದನೆ ಮಾಡಲು ಯೋಜಿಸಲಾಗಿದೆ.

ಪೆಟ್ರೋಲ್ ಬೆಲೆ ಕಡಿತ: ಪ್ರತಿ ಲೀಟರ್‌ಗೆ ರೂ. 25 ಸಬ್ಸಡಿ ಘೋಷಣೆ!

ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ವಾಯುಮಾಲಿನ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ಈಗಾಗಲೇ ತಜ್ಞರು ದೃಡಪಡಿಸಿದ್ದಾರೆ. ಎಥೆನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ರೈತರಿಗೆ ಸಹ ಪ್ರಯೋಜನವಾಗಲಿದೆ ಎಂಬುದು ಗಮನಾರ್ಹವಾಗಿದ್ದು, ಎಥೆನಾಲ್ ಜೊತೆಗೆ ಕೇಂದ್ರ ಸರ್ಕಾರವು ಪರಿಸರ ಸ್ನೇಹಿ ಇಂಧನಗಳಾದ ಸಿಎನ್‌ಜಿ ಹಾಗೂ ಎಲ್‌ಎನ್‌ಜಿ ಬಳಕೆಯನ್ನು ಸಹ ಉತ್ತೇಜಿಸುತ್ತಿದೆ.

Most Read Articles

Kannada
English summary
Petrol prices slashed in jharkhand rs 25 per litre subsidy details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X