ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಇವಿ ಬೈಕ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ರಿವೋಲ್ಟ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ತನ್ನ ಮಾರಾಟ ಮಳಿಗೆಗಳನ್ನು ದೇಶದ ಪ್ರಮುಖ ನಗರಗಳಿಗೆ ವಿಸ್ತರಿಸುತ್ತಿದ್ದು, ರಿವೋಲ್ಟ್ ಕಂಪನಿಯು ಇದುವರೆಗೆ ದೇಶಾದ್ಯಂತ 30ಕ್ಕೂ ಹೆಚ್ಚು ಮಾರಾಟ ಮಳಿಗೆಗಳ ಸ್ಥಾಪಿಸಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಆರಂಭದಲ್ಲಿ ರಿವೋಲ್ಟ್ ಕಂಪನಿಯು ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಹೆಚ್ಚಿನ ಮಟ್ಟದ ಮಾರಾಟ ಮಳಿಗೆಗಳನ್ನು ತೆರೆದಿತ್ತು. ಇದೀಗ ಕಂಪನಿಯು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟ ಮಳಿಗೆಗಳನ್ನು ಆರಂಭಿಸುತ್ತಿದ್ದು, ಕಳೆದ ಕೆಲ ತಿಂಗಳ ಹಿಂದಷ್ಟೇ ನಮ್ಮ ಬೆಂಗಳೂರಿನಲ್ಲೂ ಮಾರಾಟ ಮಳಿಗೆ ಆರಂಭಿಸಿದ್ದ ಕಂಪನಿಯು ಇದೀಗ ಆಂಧ್ರಪ್ರದೇಶದಲ್ಲಿ ಮತ್ತೆರಡು ಹೊಸ ಶೋರೂಂಗಳಿಗೆ ಚಾಲನೆ ನೀಡಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಸದ್ಯ ರಿವೋಲ್ಟ್ ಮೋಟಾರ್ಸ್ ಕಂಪನಿಯು ಅಗ್ರಸ್ಥಾನದಲ್ಲಿದ್ದು, ದೇಶಾದ್ಯಂತ ಪ್ರಮುಖ ರಾಜ್ಯಗಳಲ್ಲಿ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದು ಮತ್ತಷ್ಟು ಬೇಡಿಕೆ ಪಡೆದುಕೊಳ್ಳಲು ಸಹಕಾರಿಯಾಗಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಕಂಪನಿಯು ಸದ್ಯ ದೇಶದ ಪ್ರಮುಖ ಮೆಟ್ರೊ ನಗರಗಳಲ್ಲಿ ಇವಿ ಬೈಕ್ ಮಾರಾಟ ಸೌಲಭ್ಯವನ್ನು ತೆರೆಯುತ್ತಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ಹೊಸದಾಗಿ ದೇಶಾದ್ಯಂತ ಪ್ರಮುಖ ನಗರಗಳಲ್ಲಿ 40 ಹೊಸ ಮಾರಾಟ ಮಳಿಗೆಗಳನ್ನು ತೆರೆಯುವ ಗುರಿಹೊಂದಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಹೊಸ ಮಾರಾಟ ಮಳಿಗೆಗಳನ್ನು ವಿನೂತನವಾಗಿ ವಿನ್ಯಾಸಗೊಳಿಸಿರುವ ಕಂಪನಿಯು ಹೊಸ ಮಾರಾಟ ಮಳಿಗೆಯನ್ನು ರಿವೋಲ್ಟ್ ಕೆಫೆ ಎಂದು ಹೆಸರಿಸಿದ್ದು, ಹೊಸ ಮಾರಾಟ ಮಳಿಗೆಗಳೊಂದಿಗೆ ಕಂಪನಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಿವೋಲ್ಟ್ ಕಂಪನಿಯು ಆರ್‌ವಿ400 ಇವಿ ಬೈಕ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯನ್ನು ಆಧರಿಸಿ ಆರ್‌ವಿ300 ಮಾದರಿಯನ್ನು ಸ್ಥಗಿತಗೊಳಿಸಿ ಆರ್‌ವಿ400 ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಫೇಮ್ 2 ಯೋಜನೆಯಡಿ ಗರಿಷ್ಠ ಸಬ್ಸಡಿಯೊಂದಿಗೆ ರಿವೋಲ್ಟ್ ಬೈಕ್ ಮಾದರಿಗಳು ಮಾರಾಟಗೊಳ್ಳುತ್ತಿದ್ದು, ಆರಂಭದಲ್ಲಿ ಆರ್‌ವಿ300 ಮತ್ತು ಆರ್‌ವಿ400 ಮಾದರಿಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯು ಸದ್ಯಕ್ಕೆ ಆರ್‌ವಿ400 ಮಾದರಿಯ ಮೇಲೆ ಹೆಚ್ಚಿನ ಗಮನಹರಿಸಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಕೇಂದ್ರ ಸರ್ಕಾರ ಫೇಮ್ 2 ಸಬ್ಸಡಿ ಒಳಗೊಂಡು ಹೊಸ ಬೈಕ್ ಮಾದರಿಯು ರೂ. 1.25 ಲಕ್ಷ ಬೆಲೆ ಹೊಂದಿದ್ದು, ಕೇಂದ್ರದ ಫೇಮ್ 2 ಸಬ್ಸಡಿ ಜೊತೆಗೆ ಕೆಲವು ರಾಜ್ಯಗಳು ತಮ್ಮ ರಾಜ್ಯದ ವಾಹನ ಖರೀದಿದಾರರಿಗಾಗಿ ಹೆಚ್ಚಿನ ಮಟ್ಟದ ಸಬ್ಸಡಿ ಒದಗಿಸುತ್ತವೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಹೊಸ ಆರ್‌ವಿ400 ಮಾದರಿಯು ರೆಬಲ್ ರೆಡ್, ಮಿಸ್ಟ್ ಗ್ರೆ ಮತ್ತು ಕಾಸ್ಮಿಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆ ಹೊಂದಿದ್ದು, ಹೊಸ ಬೈಕಿನಲ್ಲಿ 3.24kW ಲಿಥೀಯಂ-ಅಯಾನ್ ಬ್ಯಾಟರಿ ಪ್ಯಾಕ್ ಜೊತೆಗೆ 3kW ಎಲೆಕ್ಟ್ರಿಕ್ ಮೋಟಾರ್ ಜೋಡಣೆ ಮಾಡಲಾಗಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಆರ್‌ವಿ400 ಮಾದರಿಯು ಪ್ರತಿ ಗಂಟೆಗೆ 85 ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 156ಕಿ.ಮಿ ಮೈಲೇಜ್ ನೀಡಲಿದ್ದು, ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ತಾಂತ್ರಿಕ ಸೌಲಭ್ಯಗಳು ಈ ಬೈಕಿನಲ್ಲಿವೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಸಿಟಿ, ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಹೊಸ ಇವಿ ಬೈಕ್‌ನಲ್ಲಿ ನೀಡಲಾಗಿದ್ದು, ಜೀಯೋ ಫೆನ್ಸಿಂಗ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಟರ್ನ್ ಬೈ ಟರ್ನ್ ನೆವಿಗೆಷನ್, ರಿಯಲ್ ಟೈಮ್ ವೆಹಿಕಲ್ ಮತ್ತು ಬ್ಯಾಟರಿ ನಿರ್ವಹಣಾ ಸೌಲಭ್ಯಗಳು ಕೂಡಾ ಪ್ರಮುಖವಾಗಿವೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಬೈಕಿನ ತಾಂತ್ರಿಕ ಸೌಲಭ್ಯಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಆ್ಯಪ್ ಕೂಡಾ ನೀಡಲಾಗಿದ್ದು, ಆ್ಯಪ್ ಮೂಲಕವೇ ಹೊಸ ಬೈಕಿನ ವೇಗ, ಶಬ್ದ, ಬ್ಯಾಟರಿ ಲಭ್ಯತೆ ಸೇರಿದಂತೆ ಸಂಪೂರ್ಣ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಇದಲ್ಲದೆ ರಿವೋಲ್ಟ್ ಕಂಪನಿಯು ಹೊಸ ಬೈಕಿನಲ್ಲಿ ಮೊದಲ ಬಾರಿಗೆ ಕೀ ಲೆಸ್ ಎಂಟ್ರಿ ಫೀಚರ್ಸ್ ಅಳವಡಿಸಿದ್ದು, ಹೊಸ ಕೀ ಲೆಸ್ ಎಂಟ್ರಿ ಫೀಚರ್ಸ್ ಮೂಲಕ ಬೈಕ್ ಮಾಲೀಕರು ಕೀ ಇಲ್ಲದೆಯೇ ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್‌ನಲ್ಲಿ 'ಸ್ವೈಪ್ ಟು ಸ್ಮಾರ್ಟ್' ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ರಿವೋಲ್ಟ್ ಮೊಬೈಲ್ ಅಪ್ಲಿಕೇಷಶನ್ ಮೂಲಕ 'ಸ್ವೈಪ್ ಟು ಸ್ಮಾರ್ಟ್' ಮಾತ್ರವಲ್ಲದೇ ಲಾಕ್/ಅನ್‌ಲಾಕ್, ಬ್ಯಾಟರಿ ಲಭ್ಯತೆ, ಚಾರ್ಜಿಂಗ್ ನಿಲ್ದಾಣಗಳ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆ ಸಲ್ಲಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಇವಿ ವಾಹನಗಳ ಖರೀದಿ ಮೇಲೆ ಈ ಹಿಂದೆ ನೀಡಲಾಗುತ್ತಿದ್ದ ಕೆಲವು ಆಫರ್‌ಗಳು ಇದೀಗ ನಿಧಾನವಾಗಿ ಕಡಿತಗೊಳಿಸಲಾಗುತ್ತಿದ್ದು, ರಿವೋಲ್ಟ್ ಕಂಪನಿಯು ಸಹ ಆರಂಭದಲ್ಲಿ ನೀಡಲಾಗಿದ್ದ ಕೆಲವು ಆಫರ್‌ಗಳನ್ನು ಕಡಿತಗೊಳಿಸಿ ಬೆಲೆ ಹೆಚ್ಚಳ ನಿರ್ಧಾರ ಕೈಗೊಂಡಿದೆ.

ದಕ್ಷಿಣ ಭಾರತದಲ್ಲಿ ಮತ್ತೆರಡು ಹೊಸ ಶೋರೂಂ ಆರಂಭಿಸಿದ ರಿವೋಲ್ಟ್ ಮೋಟಾರ್ಸ್

ಜೊತೆಗೆ ಕಂಪನಿಯು ಹೊಸ ಬೈಕಿನ ಬ್ಯಾಟರಿ ಮೇಲೆ ನೀಡಲಾಗುತ್ತಿದ್ದ 8 ವರ್ಷ ಅಥವಾ 1.50 ಲಕ್ಷ ಕಿ.ಮೀ ಮೇಲೆ ವಾರಂಟಿ ಅವಧಿಯನ್ನು ಇದೀಗ 6 ವರ್ಷ ಅಥವಾ 1 ಲಕ್ಷ ಕಿ.ಮೀ ಗೆ ವಾರಂಟಿ ಅವಧಿ ಇಳಿಕೆ ಮಾಡಿದ್ದು, ಬೇಡಿಕೆ ಹೆಚ್ಚಿದ್ದಂತೆ ಕೆಲವು ವಿನಾಯ್ತಿಗಳನ್ನು ಹಿಂಪಡೆದಿದೆ.

Most Read Articles

Kannada
English summary
Revolt motors opens two new retail stores details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X