ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ (Royal Enfield) ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಕಳೆದ ತಿಂಗಳ ಮಾರಾಟದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಉತ್ತಮ ಬೆಳವಣಿಗೆಯನ್ನು ಸಾಧಿಸುವಲ್ಲಿ ಯಶ್ವಸಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಇದೀಗ ಚೆನ್ನೈ ಮೂಲದ ದ್ವಿಚಕ್ರ ವಾಹನಗಳ ತಯಾರಕರ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಕ್ಲಾಸಿಕ್ 350 ಮತ್ತು ಮೆಟಿಯರ್ 350 ಬೈಕ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ, ರಾಯಲ್ ಎನ್‌ಫೀಲ್ಡ್‌ನ ಟಾಪ್-ಸೆಲ್ಲಿಂಗ್ ಬೈಕ್ ಕ್ಲಾಸಿಕ್ 350 ಬೆಲೆಯು ರೂ.3,332 ವರೆಗೆ ಹೆಚ್ಚಿಸಲಾಗಿದೆ, ಈ 2021ರ ಕ್ಲಾಸಿಕ್ 350 ಬೈಕ್ ಅನ್ನು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇತ್ತೀಚೆಗೆ ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಉತ್ಪಾದನೆಯು 1 ಲಕ್ಷ ಮೈಲಿಗಲ್ಲನ್ನು ದಾಟಿದೆ. ಈ ಹೊಸ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿಯು ಮಾರಾಟವಾಗುತ್ತಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಈ ಹೊಸ ಕ್ಲಾಸಿಕ್ 350 ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ಇದರ ಪರಿಣಾಮವಾಗಿ ಕಾಯುವ ಅವಧಿಯು ಹೆಚ್ಚಾಗುತ್ತಿದೆ. ಇದರ ನಡುವೆ ರಾಯಲ್ ಎನ್‌ಫೀಲ್ಡ್‌ ಕ್ಲಾಸಿಕ್ 350 ಬೈಕಿನ ಬೆಲೆ ಏರಿಕೆಯನ್ನು ಮಾಡಿದ. ಬೆಲೆ ಏರಿಕೆಯಾದ ಬಳಿಕ ಹೊಸ ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Classic 350

New Price Old Price Difference
Redditch ₹1,87,246 ₹1,84,374 ₹2,872
Halcyon ₹1,95,125 ₹1,93,123 ₹2,002
Signals ₹2,07,539 ₹2,04,367 ₹3,172
Dark ₹2,14,743 ₹2,11,465 ₹3,278
Chrome ₹2,18,450 ₹2,15,118 ₹3,332
ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಈ ಹೊಸ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಮಾದರಿಯು ರೆಡ್‌ಡಿಚ್, ಹಾಲ್ಕೈನ್, ಸಿಗ್ನಲ್ಸ್, ಡಾರ್ಕ್ ಮತ್ತು ಕ್ರೋಮ್ ಎಂಬ ಐದು ವೆರಿಯೆಂಟ್ ಗಳಲ್ಲಿ ಲಭ್ಯವಿದೆ, ಈ ಹೊಸ ಬೈಕ್ J1A ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗಿದೆ. ಇನ್ನು ಈ ಬೈಕ್ ಕ್ರೋಮ್ ರೆಡ್, ಕ್ರೋಮ್ ಬ್ರೊಂಜ್, ಡಾರ್ಕ್ ಸ್ಟೆಲ್ತ್ ಬ್ಲ್ಯಾಕ್, ಡಾರ್ಕ್ ಗನ್‌ಮೆಟಲ್ ಗ್ರೇ, ಸಿಗ್ನಲ್ಸ್ ಮಾರ್ಷ್ ಗ್ರೇ, ಸಿಗ್ನಲ್ಸ್ ಸ್ಯಾಂಡ್ ಸ್ಟಾರ್ಮ, ಹಾಲ್ಸಿಯಾನ್ ಗ್ರೀನ್, ಹಾಲ್ಸಿಯಾನ್ ಬ್ಲ್ಯಾಕ್, ಹಾಲ್ಸಿಯಾನ್ ಗ್ರೇ, ರೆಡ್‌ಡಿಚ್ ಗ್ರೀನ್ ಮತ್ತು ರೆಡ್‌ಡಿಚ್ ಗ್ರೇ ಎಂಬ ಬಣ್ಣಗಳನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಹೊಸ ಬೈಕ್ ಮಾದರಿಯು ಇತ್ತೀಚೆಗೆ ಬಿಡುಗಡೆಯಾಗಿರುವ ಮಿಟಿಯೊರ್ 350 ಮಾದರಿಯಿಂದಲೂ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಾಗಿದೆ. 2021ರ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಸಸ್ಷೆಂಷನ್ ಸೆಟಪ್ ಮತ್ತು ಬ್ರೇಕಿಂಗ್ ಸಿಸ್ಟಂ ಅನ್ನು ಸಂಪೂರ್ಣವಾಗಿ ಬದಲಾವಣೆಗೊಳಿಸಿದೆ, ಈ ಹೊಸ ಬೈಕಿನಲ್ಲಿ ಫ್ಯೂಲ್ ಗೇಜ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಪ್ರಮುಖ ಆಕರ್ಷಣೆಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಈ ಹೊಸ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ,

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಈ ಹಿಂದಿನ ಮಾದರಿಗಳಲ್ಲಿ ಇದ್ದ ವೈಬ್ರೆಷನ್ ಪ್ರಮಾಣವು ಗಣನೀಯವಾಗಿ ಸುಧಾರಣೆಯಾಗಿದೆ. ಜೊತೆಗೆ ಎಲೆಕ್ಟ್ರಾನಿಕ್ಸ್ ಸೌಲಭ್ಯಗಳು ಬೈಕ್ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಹೊಸ ಮಾದರಿಯ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಎಲ್‌ಸಿಡಿ ಜೊತೆಗೆ ಪ್ರತ್ಯೇಕವಾದ ಫ್ಯೂಲ್ ಗೇಜ್ ಮತ್ತು ಟ್ರಿಪ್ಲರ್ ಮೀಟರ್ ನೀಡಲಾಗಿದ್ದು, ಮಿಟಿಯೊರ್ ಮಾದರಿಯಲ್ಲಿರುವಂತೆ ಪ್ರತ್ಯೇಕವಾದ ಟ್ವಿನ್ ಪಾಡ್ ನೀಡದೆ ಇಂಟ್ರಾಗ್ರೆಟೆಡ್ ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಟಾಪ್ ಎಂಡ್ ಮಾದರಿಗಳಿಗಾಗಿ ಮಾತ್ರವೇ ಕಂಪನಿಯು ಟ್ರಿಪ್ಪರ್ ಮೀಟರ್ ಅನ್ನು ಜೋಡಣೆ ಮಾಡಿದ್ದು, ಈ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಹೊಸ ಬೈಕಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು ಎಲ್ಇಡಿ ಹೆಡ್‌ಲ್ಯಾಂಪ್‌ಗಳ ಬದಲಾಗಿ ಹಾಲೊಜೆನ್ ಬಲ್ಬ್ ಬಳಕೆ ಮಾಡಿದ್ದು, ಹೆಡ್‌ಲ್ಯಾಂಪ್ ಮಾತ್ರವಲ್ಲ ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಹಾಲೊಜೆನ್ ಬಲ್ಬ್ ಸಹ ಒಳಗೊಂಡಿದೆ,

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಇನ್ನು ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 349ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 20.2-ಬಿಎಚ್‌ಪಿ ಪವರ್ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಈ ಬೈಕಿನ ಹೊಸ ಬೆಲೆ ಬಗ್ಗೆ ಮಾಹಿತಿ ಇಲ್ಲಿದೆ.

Meteor 350 New Price Old Price Difference
Fireball Red / Yellow ₹2,01,620 ₹1,99,109 ₹2,511
Fireball White / Black ₹2,03,456 ₹2,00,945 ₹2,511
Stellar Blue / Red / Black ₹2,07,700 ₹2,05,099 ₹2,601
Stellar Pure Black ₹2,09,537 ₹2,06,936 ₹2,601
Supernova Brown / Blue ₹2,17,836 ₹2,15,084 ₹2,752
Supernova Silver / Custom ₹2,19,674 ₹2,16,922 ₹2,752
ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಈ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇನ್ನು ಇದರೊಂದಿಗೆ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಮಿಟಿಯೊರ್ 350 ಬೈಕ್ ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ. ಈ ಬೈಕಿನ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಮುಂಭಾಗ 19-ಇಂಚಿನ ಮತ್ತು ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಜೋಡಿಸಲಾಗಿದೆ. ಇದು ಕ್ರಮವಾಗಿ 100 / 90-19 57 ಪಿ ಮತ್ತು 140 / 70-17 66 ಪಿ ಸಿಯೆಟ್ ಟ್ಯೂಬ್‌ಲೆಸ್ ಟೈರ್ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield Classic 350, Meteor 350 ಬೈಕ್‌ಗಳು

ಮೆಟಿಯೊರ್ 350 ಬೈಕ್‌ ಅನ್ನು ಸಹ ವಿಶ್ವದ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕ್‌ಗಳನ್ನು ಥೈಲ್ಯಾಂಡ್, ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಈ ಬೈಕ್ ಉತ್ತಮವಾಗಿ ಮಾರಾಟವಾಗುತ್ತಿದೆ. ಇನ್ನು ಈ ಜನಪ್ರಿಯ ಬೈಕ್‌ಗಳ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುವುದು ನೋಡಬೇಕಾಗಿದೆ.

Most Read Articles

Kannada
English summary
Royal enfield hiked classic 350 meteor 350 prices from 2022 january new price list details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X