ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ರಾಯಲ್ ಎನ್‌ಫೀಲ್ಡ್(Royal Enfield) ಕಂಪನಿಯು ತನ್ನ ಬಹುನೀರಿಕ್ಷಿತ ಹಂಟರ್ 350(Hunter 350) ಮಾದರಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಹೊಸ ಮೋಟಾರ್‌ಸೈಕಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.50 ಲಕ್ಷ ಬೆಲೆ ಹೊಂದಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಹಂಟರ್ 350 ಮಾದರಿಯು ಅಸ್ತಿತ್ವದಲ್ಲಿರುವ ರಾಯಲ್ ಎನ್‌ಫೀಲ್ಡ್ ಇತರೆ ಮೋಟಾರ್‌ಸೈಕಲ್ ಮಾದರಿಗಳಿಂತಲೂ ವಿಭಿನ್ನವಾಗಿದ್ದು, ಹೊಸ ಬೈಕ್ ಮಾದರಿಯನ್ನು ಪ್ರೀಮಿಯಂ ಅರ್ಬನ್ ಸ್ಕ್ರ್ಯಾಂಬ್ಲರ್ ಅಥವಾ ಅಡ್ವೆಂಚರ್ ಕ್ರಾಸ್‌ಓವರ್ ಮಾದರಿಯಾಗಿ ಗುರುತಿಸಲಾಗುತ್ತದೆ. ಹೊಸ ಅರ್ಬನ್ ಸ್ಕ್ರ್ಯಾಂಬ್ಲರ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎರಡು ಪ್ರಮುಖ ವೆರಿಯೆಂಟ್‌ಗಳನ್ನು ಹೊಂದಿದ್ದು, ಮೆಟ್ರೋ ಮತ್ತು ರೆಟ್ರೋ ಎನ್ನುವ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಮೆಟ್ರೋ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ರೆಟ್ರೋ ವೆರಿಯೆಂಟ್ ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಆರಂಭಿಕ ಮಾದರಿಯು ರೂ. 1.50 ಲಕ್ಷ ಬೆಲೆ ಹೊಂದಿದ್ದರೆ ಹೈ ಎಂಡ್ ಮಾದರಿಯು ರೂ. 1.69 ಲಕ್ಷ ಬೆಲೆ ಹೊಂದಿರುತ್ತದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

350 ಮೋಟಾರ್‌ಸೈಕಲ್ ವಿಭಾಗದಲ್ಲಿ ಇದು ಅತ್ಯುತ್ತಮ ಬೈಕ್ ಮಾದರಿಯಾಗಲಿದೆ ಎಂದಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯು ಪ್ರತಿಸ್ಪರ್ಧಿಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡಿದ್ದು, ಇದು ಯುವ ಗ್ರಾಹಕರ ಹಾಟ್ ಫೇವರಿಟ್ ಮಾದರಿಯಾಗುವ ವಿಶ್ವಾಸ ವ್ಯಕ್ತಪಡಿಸಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಹಂಟರ್ ಬೈಕ್ ಮಾದರಿಯು ಮಿಟಿಯೊರ್ 350 ಮತ್ತು ಕ್ಲಾಸಿಕ್ 350 ಮಾದರಿಯಲ್ಲಿರುವಂತೆಯೇ 349 ಸಿಸಿ ಸಿಂಗಲ್ ಸಿಲಿಂಡರ್, ಟು ವಾಲ್ವ್, ಎಸ್‌ಓಹೆಚ್‌ಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಹೊಂದಿದ್ದು, ಈ ಹೊಸ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಹಂಟರ್ ಬೈಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಇತರೆ ಮೋಟಾರ್‌ಸೈಕಲ್‌ಗಳಿಂತಲೂ ತುಸು ಹಗುರವಾಗಿದ್ದು, ಪ್ರತಿ ಗಂಟೆಗೆ 114 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಲೀಟರ್‌ಗೆ ಗರಿಷ್ಠ 36.1 ಕಿ.ಮೀ ಇಂಧನ ದಕ್ಷತೆ ಖಾತ್ರಿಪಡಿಸಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಬೈಕ್ ಮಾದರಿಯು ಕ್ಲಾಸಿಕ್ ಮತ್ತು ಮಿಟಿಯೊರ್ ರೀತಿಯಲ್ಲಿಯೇ ಡಬಲ್ ಕ್ರೇಡಲ್ ಫ್ರೇಮ್ ಆಧರಿಸಿ ನಿರ್ಮಾಣವಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸಿಂಗಲ್ ಚಾನೆಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್ ಆಯ್ಕೆಗಳನ್ನು ಹೊಂದಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಜೊತೆಗೆ ಹೊಸ ಬೈಕಿನಲ್ಲಿ ಡ್ವಯಲ್ ಟೋನ್ ಹೊಂದಿರುವ ಟಿಯರ್-ಡ್ರಾಪ್ ವಿನ್ಯಾಸದ ಇಂಧನ ಟ್ಯಾಂಕ್, ಉದ್ದವಾದ ಸಿಂಗಲ್-ಪೀಸ್ ಸೀಟ್, ವೃತ್ತಾಕಾರವಾದ ಹಾಲೋಜೆನ್ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ವಿನ್ಯಾಸದೊಂದಿಗೆ ಸ್ಕ್ರ್ಯಾಂಬ್ಲರ್ ಮಾದರಿಯಾಗಿರುವುದು ಸ್ಪಷ್ಟವಾಗುತ್ತದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಇದರೊಂದಿಗೆ ಹೊಸ ಬೈಕಿನಲ್ಲಿ ಬೆಲೆ ಕಡಿತವಾಗಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಹೈ ಎಂಡ್ ಮಾದರಿಯಲ್ಲಿ ಮಾತ್ರ ನೀಡಲಾಗಿದೆ. ಆರಂಭಿಕ ಮಾದರಿಯಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮಾತ್ರ ನೀಡಲಾಗಿದ್ದು, ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಆಕ್ಸೆಸರಿಸ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಇನ್ನು ಕ್ಲಾಸಿಕ್ 350 ಬೈಕಿಗೆ ಹೋಲಿಸಿದರೆ ಹಂಟರ್ ಬೈಕ್ ಮಾದರಿಯು 90 ಎಂಎಂ ಉದ್ದ ಮತ್ತು 35 ಎಂಎಂ ಎತ್ತರದಲ್ಲಿ ಕಡಿಮೆಯಿದ್ದು, 15 ಎಂಎಂ ನಷ್ಟು ಹೆಚ್ಚು ಅಗಲವಾಗಿರುತ್ತದೆ. ಇದರ ವೀಲ್ಹ್ ಬೇಸ್ ಉದ್ದವು ಕ್ಲಾಸಿಕ್‌ಗಿಂತಲೂ 20 ಎಂಎಂ ಉದ್ದವಾಗಿದ್ದು, 181 ಕೆಜಿಯಷ್ಟು ಭಾರವಾಗಿರಲಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಬೈಕ್ ಮಾದರಿಯು 800 ಎಂಎಂ ಸೀಟ್ ಎತ್ತರದೊಂದಿಗೆ 150.5 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್, 13 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದ್ದು, ಮುಂಭಾಗದಲ್ಲಿ 41 ಎನ್ಎಂ ಟೆಲಿಸ್ಕೊಫಿಕ್ ಫೋರ್ಕ್ ಸಸ್ಷೆಷನ್, ಹಿಂಬದಿಯಲ್ಲಿ 6 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ವರ್ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಹಾಗೆಯೇ ಹೊಸ ಬೈಕಿನಲ್ಲಿ 300 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 240-ಎಂಎಂ ರಿಯರ್ ಡಿಸ್ಕ್ ಬ್ರೇಕ್, ಮುಂಭಾಗದಲ್ಲಿ 110/70 17-ಇಂಚಿನ ಟೈರ್ ಮತ್ತು ಹಿಂಬದಿಯಲ್ಲಿ 140/70 17-ಇಂಚಿನ ಟೈರ್ ನೀಡಲಾಗಿದ್ದು, ಹೊಸ ಬೈಕಿನಲ್ಲಿ ಒಟ್ಟು ಆರು ಬಣ್ಣಗಳ ಆಯ್ಕೆ ನೀಡಲಾಗಿದೆ.

ಬಹುನೀರಿಕ್ಷಿತ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಈ ಮೂಲಕ ಹೊಸ ಬೈಕ್ ಮಾದರಿಯು ಹೋಂಡಾ ಸಿಬಿ350ಆರ್‌ಎಸ್, ಜಾವಾ 42, ಯಜ್ಡಿ ರೋಡ್‌ಸ್ಟರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಟಿವಿಎಸ್ ರೋನಿನ್ ಮಾದರಿಗೂ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಬೈಕ್ ಖರೀದಿಗಾಗಿ ಈಗಾಗಲೇ ಅಧಿಕೃತ ಬುಕಿಂಗ್ ಆರಂಭವಾಗಿದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಬಿಡುಗಡೆ

ಹೊಸ ಬೈಕ್ ಕಾರ್ಯಕ್ಷಮತೆ ಕುರಿತಂತೆ ಡ್ರೈವ್‌ಸ್ಪಾರ್ಕ್ ತಂಡವು ಇದೇ ತಿಂಗಳು 10ರಂದು ಫಸ್ಟ್ ರೈಡ್ ರಿವ್ಯೂ ಪ್ರಕಟಿಸಲಿದ್ದು, ಈ ವೇಳೆ ಹೊಸ ಬೈಕ್ ಕುರಿತಾದ ಸಂಪೂರ್ಣ ಮಾಹಿತಿ ಹಂಚಿಕೊಳ್ಳಲಿದ್ದೇವೆ.

Most Read Articles

Kannada
English summary
Royal enfield hunter 350 launched at rs 1 50 lakh specs features image
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X