ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಇದೀಗ ಈ ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಇಂಟರ್‌ಸೆಪ್ಟರ್ 650 (Interceptor 650) ಮತ್ತು ಕಾಂಟಿನೆಂಟಲ್ ಜಿಟಿ650 (Continental GT 650) ಬೈಕ್‌ಗಳ ಬೆಲೆ ಏರಿಕೆಯನ್ನು ಘೋಷಿಸಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650ಬೈಕ್‌ಗಳ ಬಣ್ಣಗಳನ್ನು ಅವಲಂಬಿಸಿ ಅವುಗಳ ಬೆಲೆಗಳನ್ನು ರೂ.4,000 ದಿಂದ ರೂ.5,000 ಗಳವರೆಗೆ ಬೆಲೆ ಏರಿಕೆ ಪಡೆದುಕೊಂಡಿದೆ. ಇದೀಗ ಇಂಟರ್‌ಸೆಪ್ಟರ್ 650 ಬೈಕಿನ ಆರಂಬಿಕ ಬೆಲೆಯು ರೂ,2.85 ಲಕ್ಷಗಳಾದರೆ, ಕಾಂಟಿನೆಂಟಲ್ ಜಿಟಿ 650 ಬೈಕಿನ ಬೆಲೆಯು ರೂ,3.02 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಭಾರತದಲ್ಲಿ ಇತ್ತೀಚಿಗೆ ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿಗಳಾದಯೆ ಯಜ್ಡಿ ಬೈಕ್‌ಗಳು ಬಿಡುಗಡೆಯಾಗಿವೆ. ಇದರಿಂದ ರಾಯಲ್ ಎನ್‌ಫೀಲ್ಡ್ ಮಾರಾಟದ ಮೇಲೆ ಪರಿಣಾಮ ಬೀರಬಹುದೇ ಎಂಬುವುದು ಕಾದು ನೋಡಬೇಕಿದೆ,

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ರಾಯಲ್ ಎನ್‌ಫೀಲ್ಡ್ ಕಂಪನಿಯು ಈ 650 ಟ್ವಿನ್ ಬೈಕ್‌ಗಳನ್ನು ಭಾರತದಲ್ಲಿ ಮೊದಲು ಬಿಡುಗಡೆಗೊಳಿಸಲಾಯಿತು. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ 2021ರ ಮಾದರಿಯಾಗಿ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಿತ್ತು. 2021ರ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳು ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿತ್ತು.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಈ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳಲ್ಲಿ ಹಿಂದಿನ ಮಾದರಿಗಳಲ್ಲಿ ಇದ್ದ ಅದೇ, 649ಸಿಸಿ ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 47 ಬಿಹೆಚ್‌ಪಿ ಪವರ್ ಮತ್ತು 5,250 ಆರ್‌ಪಿಎಂನಲ್ಲಿ 52 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಈ ಎರಡು ಟ್ವಿನ್ ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಗ್ಯಾಸ್ ಚಾರ್ಜ್ಡ್ ಶಾಕ್ ಗಳು 5-ಹಂತದ ಹೊಂದಾಣಿಕೆಯೊಂದಿಗೆ ಪ್ರಿ-ಲೋಡ್ ಡ್ಯಾಂಪಿಂಗ್‌ಗಾಗಿ ನಿರ್ವಹಿಸುತ್ತವೆ.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಇನ್ನು ಹೊಸ ರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಈ ಬೈಕ್‌ಗಳಲ್ಲಿ 18 ಇಂಚಿನ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿವೆ. ಎರಡು ಬೈಕ್‌ಗಳ ವಿನ್ಯಾಸವು ಬದಲಾಗದೆ ಉಳಿದಿದೆ. ಇದು ಒಂದೇ ಮಾದರಿಯ ಹೆಡ್‌ಲ್ಯಾಂಪ್‌ಗಳು, ಟೈಲ್‌ಲ್ಯಾಂಪ್‌ಗಳು, ಟ್ವಿನ್ ಎಕ್ಸಾಸ್ಟ್ ಸೆಟಪ್, ಸಿಂಗಲ್-ಪೀಸ್ ಫ್ಲಾಟ್ ಸೀಟ್ ಮತ್ತು ಹೆಚ್ಚಿನದನ್ನು ಕೂಡ ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಈ ಹೊಸ ಇಂಟರ್‍‍ಸೆಪ್ಟರ್ 650 ಬೈಕ್ ಉತ್ತಮ ಸೀಟಿಂಗ್ ಪೊಷಿಷನ್ ಅನ್ನು ಹೊಂದಿದೆ. ಇನ್ನು ಕಾಂಟಿನೆಂಟಲ್ ಜಿಟಿ 650 ಅದರ ಉದ್ದವಾದ ಟ್ಯಾಂಕ್ ವಿನ್ಯಾಸ ಮತ್ತು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳೊಂದಿಗೆ ಹೆಚ್ಚು ಅಗ್ರೇಸಿವ್ ಲುಕ್ ನಿಂದ ಕೂಡಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಇನ್ನುರಾಯಲ್ ಎನ್‍ಫೀಲ್ಡ್ ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿ‍ಟಿ650 ಬೈಕ್‌ಗಳಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ನೀಡಲಾಗಿಲ್ಲ. ಆದರೆ ಕಸ್ಟಮೈಸ್ ಮಾಡಲು ಒಂದು ಆಯ್ಕೆಯನ್ನು ಸಹ ಕಂಪನಿಯು ಒದಗಿಸಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಇನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಡಿಸೆಂಬರ್ ತಿಂಗಳ ಮಾರಾಟದ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತು.. ಕಳೆದ ತಿಂಗಳು ರಾಯಲ್ ಎನ್‌ಫೀಲ್ಡ್ ಕಂಪನಿಯು 65,187 ಯುನಿಟ್‌ಗಳನ್ನು ಮಾರಾಟ ಮಾಡಿದೆ, 2020ರ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 65,492 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.45 ರಷ್ಟು ಬೆಳವಣಿಗೆಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಇನ್ನು 2019ರ ಡಿಸೆಂಬರ್ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯು 48,489 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು 2021ರ ಡಿಸೆಂಬರ್ ಮಾರಾಟಕ್ಕೆ ಹೋಲಿಸಿದರೆ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದಾರೆ. ಕಳೆದ ತಿಂಗಳ ಕಂಪನಿಯು 8,552 ಯುನಿಟ್‌ಗಳನ್ನು ವಿದೇಶಕ್ಕೆ ರಫ್ಟು ಮಾಡಲಾಗಿದೆ. 2020ರ ಡಿಸೆಂಬರ್ ತಿಂಗಳಿನಲ್ಲಿ 3,503 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.144.13 ರಷ್ಟು ಹೆಚ್ಚಳವಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು 2021ರ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 60,898 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ,

ಬೆಲೆ ಏರಿಕೆ ಪಡೆದುಕೊಂಡ Royal Enfield 650 ಟ್ವಿನ್ ಬೈಕ್‌ಗಳು

ಮುಂದಿನ ತಿಂಗಳುಗಳಲ್ಲಿ ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಗೆಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಲಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈಗಾಗಲೇ ಬೈಕ್‌ಗಳ ಹೆಸರಿನ ಟ್ರೇಡ್ ಮಾರ್ಜ್ ಅನ್ನು ನೋಂದಾಯಿಸಿದೆ. ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ಸ್ಕ್ರ್ಯಾಮ್, ಶಾಟ್‌ಗನ್, ಹಂಟರ್, ಫ್ಲೈಯಿಂಗ್ ಫ್ಲಿಯಾ, ಶೆರ್ಪಾ ಮತ್ತು ರೋಡ್ಸ್ಟರ್ ಸೇರಿದಂತೆ ಮುಂಬರುವ ಮಾದರಿಗಳಿಗಾಗಿ ಅನೇಕ ನೇಮ್‌ಪ್ಲೇಟ್‌ಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಬಗ್ಗೆ ಹೆಚ್ಚಿನ ವಿವರಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

Most Read Articles

Kannada
English summary
Royal enfield interceptor 650 and continental gt prices increased details
Story first published: Saturday, January 15, 2022, 15:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X