ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ರಾಯಲ್ ಎನ್‌ಫೀಲ್ಡ್ ರೆಟ್ರೊ ಮತ್ತು ಕ್ಲಾಸಿಕ್ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ವಿಶೇಷವಾಗಿ ಭಾರತದಲ್ಲಿ ಹೆಚ್ಚಿನ ಜನರು ಎನ್‌ಫೀಲ್ಡ್ ಅನ್ನು ಖರೀದಿಸುತ್ತಾರೆ. ರಾಯಲ್ ಎನ್‌ಫೀಲ್ಡ್ ಹಲವಾರು ಜನರ ಕನಸಿನ ಬೈಕ್ ಆಗಿದೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತದಲ್ಲಿ ಹಲವಾರು ಜನಪ್ರಿಯ ಬೈಕ್ ಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಬೈಕ್ ಗಳು ವಿದೇಶಿ ಮಾರುಕಟ್ಟೆಯಲ್ಲಿಯು ಬಹುಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಜನಪ್ರಿಯ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350 ಚೆನ್ನೈ ಮೂಲದ ಕಂಪನಿಯ ಪ್ರಮುಖ ಮಾದರಿಗಳಲ್ಲಿ ಒಂದಾಗಿದೆ. ಮಿಟಿಯೊರ್ 350 ಬೈಕ್ ಅನ್ನು 2020 ರಲ್ಲಿ ಪ್ರಾರಂಭವಾದಾಗಿನಿಂದ, ರಾಯಲ್ ಎನ್‌ಫೀಲ್ಡ್ ಹೊಸ ಜೆ- ಸರಣಿ ಎಂಜಿನ್ ಅನ್ನು ಪರಿಚಯಿಸಿದೆ, ಅದು ವೈಬ್-ಫ್ರೀ ಅನುಭವಕ್ಕಾಗಿ ಓವರ್‌ಹೆಡ್ ಕ್ಯಾಮ್‌ಗಳು ಮತ್ತು ಬ್ಯಾಲೆನ್ಸರ್ ಶಾಫ್ಟ್‌ಗಳನ್ನು ಪಡೆಯುತ್ತದೆ. ಈಗ ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಬಿಡುಗಡೆ ಮಾಡಿದೆ, ಇದು ಮಿಟಿಯೊರ್ 350 ಗಿಂತ ಕಡಿಮೆ ಬೆಲೆಯ ವಿಭಾಗದಲ್ಲಿದೆ. ಇನ್ನು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಿಟಿಯೊರ್ 350 ಉತ್ತಮವಾಗಿ ಮಾರಾಟವಾಗುತ್ತಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಚೆನ್ನೈನಲ್ಲಿ ತಯಾರಿಸಲಾಗುತ್ತದೆ. ಇಲ್ಲಿಂದಲೇ ಅವುಗಳನ್ನು ಭಾರತದಾದ್ಯಂತ ಮತ್ತು ಯುರೋಪ್, ಉತ್ತರ ಅಮೇರಿಕಾ ಮತ್ತು ಹೆಚ್ಚಿನ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬ್ರ್ಯಾಂಡ್ ಬ್ರಿಟನ್‌ನಲ್ಲಿಯೂ ಸಹ ಪ್ರಸಿದ್ಧವಾಗಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಮಿಟಿಯೊರ್ 350 ಬ್ರಿಟನ್‌ನಲ್ಲಿ ಮಾರಾಟದಲ್ಲಿದೆ ಮತ್ತು ಗಮನಾರ್ಹವಾದದ್ದನ್ನು ಸಾಧಿಸಿದೆ. ಜನವರಿ 2022 ರಿಂದ ಜುಲೈ 2022 ರವರೆಗೆ, ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಯುಕೆ ಮಾರಾಟವು ಬ್ರಿಟನ್‌ನಲ್ಲಿ 1,135 ಯುನಿಟ್‌ಗಳಷ್ಟಿತ್ತು. ಹಾಗೆ ಮಾಡುವಾಗ, ಇದು ಮೇಲಿನ 125cc ವಿಭಾಗದಲ್ಲಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್ ಆಗಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಯುಕೆಯಲ್ಲಿ BMW R 1250 GS ADV ಬೈಕ್ ಅನ್ನು ಮಾರಾಟದಲ್ಲಿ ಹಿಂದಿಕ್ಕಿದೆ. ಬ್ರಿಟನ್‌ನ ಈ ಸಾಧನೆಗೆ ರಾಯಲ್ ಎನ್‌ಫೀಲ್ಡ್ ಸಂಭ್ರಮ ವ್ಯಕ್ತಪಡಿಸಿದೆ. ಅವರು ಹಿಮಾಲಯನ್, ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ನಂತಹ ಮಾದರಿಗಳೊಂದಿಗೆ ಪ್ರಬಲ ಜಾಗತಿಕ ಉಪಸ್ಥಿತಿಯನ್ನು ಸ್ಥಾಪಿಸಿದ್ದಾರೆ. ಈ ಮಿಟಿಯೊರ್ 350 2021 ರಿಂದ ಹೆಚ್ಚಿನ ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿದೆ .

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಇನ್ನು ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕ್ ಹೊಸ ಮ್ಯಾಟ್ ಗ್ರೀನ್ ಬಣ್ಣದ ಆಯ್ಕೆಯು ಫೈರ್‌ಬಾಲ್ ಯೆಲ್ಲೋ ಮತ್ತು ಫೈರ್‌ಬಾಲ್ ರೆಡ್‌ಗೆ ಹೋಲುವ ಬ್ಲ್ಯಾಕ್ಡ್-ಔಟ್ ಥೀಮ್‌ನೊಂದಿಗೆ ಬರುತ್ತಿದೆ. ಇದಲ್ಲದೆ ವ್ಹೀಲ್ ಗಳ ಮೇಲೆ ಗ್ರೀ ಸ್ಟ್ರೀಪ್ ಉಪಸ್ಥಿತಿಯು ಆಸಕ್ತಿದಾಯಕ ವಿವರವಾಗಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಮತ್ತೊಂದೆಡೆ, ಹೊಸದಾಗಿ ಬಿಡುಗಡೆಗೊಂಡ ಗ್ರೀನ್ ಬಣ್ಣದ ಆಯ್ಕೆಯು ಬ್ಲ್ಯಾಕ್ಡ್-ಔಟ್ ಥೀಮ್ ಅನ್ನು ಸಹ ಹೊಂದಿದೆ. ಆದರೆ ವ್ಹೀಲ್ ಗಳ ಮೇಲಿನ ಬ್ಯಾಡ್ಜಿಂಗ್ ಮತ್ತು ಸ್ಟ್ರೀಪ್ ಯೆಲ್ಲೋ ಬಣ್ಣವನ್ನು ಹೊಂದಿರುತ್ತದೆ. ಅದರ ಜೊತೆಗೆ, ರಾಯಲ್ ಎನ್‌ಫೀಲ್ಡ್ ಸೂಪರ್‌ನೋವಾ ರೆಡ್ ಬಣ್ಣದ ಆಯ್ಕೆಯಲ್ಲಿಯು ಲಭ್ಯವಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಈ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತಾಗಿ ಕ್ರೂಸರ್‌ನಲ್ಲಿ ಯಾವುದೇ ಇತರ ಪ್ರಮುಖ ನವೀಕರಣಗಳನ್ನು ಹೊಸದಾಗಿ ಈ ವರ್ಷ ಪಡೆದುಕೊಂಡಿಲ್ಲ. ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕನ್ನು ತಮಿಳುನಾಡು ಮತ್ತು ಯುಕೆ ಮೂಲದ ಆರ್‌ಇ ತಂಡವು ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಹಿಂದಿನ ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಎಕ್ಸ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಂಡಿರುವ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಬೈಕಿಗಿಂತಲೂ ಸಾಕಷ್ಟು ವಿಭಿನ್ನವಾಗಿ ಮತ್ತು ಆಕರ್ಷಕವಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ 349 ಸಿಸಿ, ಏರ್/ಆಯಿಲ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಇದರಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಕೂಡ ಪಡೆಯುತ್ತದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಈ ಎಂಜಿನ್ 20.2 ಬಿಹೆಚ್‍ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕನ್ನು ಹೊಸ ಜೆ ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಈ ಮಿಟಿಯೊರ್ 350 ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಅನುಭವ ನೀಡುತ್ತದೆ. ಈ ರೆಟ್ರೊ ಕ್ರೂಸರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ಅನ್ನು ಹೊಂದಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಬೈಕಿನ ಮುಂಭಾಗ 19-ಇಂಚಿನ ಮತ್ತು ಹಿಂಭಾಗದಲ್ಲಿ 17-ಇಂಚಿನ ಅಲಾಯ್ ವ್ಹೀಲ್ ಗಳನ್ನು ಜೋಡಿಸಲಾಗಿದೆ. ಇದು ಕ್ರಮವಾಗಿ 100 / 90-19 57 ಪಿ ಮತ್ತು 140 / 70-17 66 ಪಿ ಸಿಯೆಟ್ ಟ್ಯೂಬ್‌ಲೆಸ್ ಟೈರ್ ಅನ್ನು ಹೊಂದಿದೆ. ಇದರೊಂದಿಗೆ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350 ಬೈಕಿನಲ್ಲಿ ಟಿಪ್ಪರ್ ಪಾಡ್ ಒಳಗೊಂಡಿರುವ ಟರ್ನ್-ಬೈ-ಟರ್ನ್ ಗೂಗಲ್ ನ್ಯಾವಿಗೇಷನ್, ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಇದೆ. ಇನ್ನು ಇದರೊಂದಿಗೆ ಹಲವಾರು ಫೀಚರ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಮಾತ್ರವಲ್ಲ ಬ್ರಿಟನ್‌ನಲ್ಲೂ ಸದ್ದು ಮಾಡಿದ ರಾಯಲ್ ಎನ್‍ಫೀಲ್ಡ್ ಮಿಟಿಯೊರ್ 350

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ವರ್ಷ ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕ್‌ಗಳನ್ನು ಬಿಡುಗಡೆಗೊಳಿಸಲಿದೆ. ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ರಾಯಲ್ ಎನ್‌ಫೀಲ್ಡ್ ಕಂಪನಿಯು 350ಸಿಸಿಯಿಂದ 650ಸಿಸಿ ವರೆಗಿನ ಬೈಕ್‌ಗಳನ್ನು ಬಿಡುಗಡೆಗೊಳಿಸಲಿವೆ. ಶೀಘ್ರದಲ್ಲೇ ಈ ಹೊಸ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಬಿಡುಗಡೆಯಗಲಿವೆ ಎಂದು ನಿರೀಕ್ಷಿಸುತ್ತೇವೆ. ಮಿಟಿಯೊರ್ 350 ಬ್ರಿಟನ್‌ನಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ.

Most Read Articles

Kannada
English summary
Royal enfield meteor 350 become bestselling motorcycle in uk details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X