ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಮೋಟಾರ್‌ಸೈಕಲ್‌ ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಸ್ಪೈ ಶಾಟ್‌ಗಳು ಮತ್ತೊಮ್ಮೆ ಸೋರಿಕೆಯಾಗಿವೆ. ಇದೀಗ ಹೊರಬಂದಿರುವ ಚಿತ್ರಗಳು ರಾಯಲ್ ಎನ್‌ಫೀಲ್ಡ್‌ನಿಂದ ಮುಂಬರಲಿರುವ 650 ಸಿಸಿ ಮೋಟಾರ್‌ಸೈಕಲ್‌ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಕೆಲವರಿಗೆ ಸೋರಿಕೆಯಾದ ಚಿತ್ರಗಳನ್ನು ಕಂಡಕೂಡಲೇ ಮುಂಬರುವ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಅನ್ನು ಹಾರ್ಲೆ ಡೇವಿಡ್‌ಸನ್ ಎಂದೆನ್ನುಕೊಳ್ಳಬಹುದು. ಏಕೆಂದರೆ ಸೋರಿಕೆಯಾದ ಫೋಟೋಗಳಲ್ಲಿ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಅಂತಹ ಕಮಾಂಡಿಂಗ್ ಸ್ಟ್ರೀಟ್ ಉಪಸ್ಥಿತಿಯೊಂದಿಗೆ ಬರುತ್ತಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಮುಂಬರುವ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಬೈಕಿನ ಸ್ಪೈ ಶಾಟ್ ಅನ್ನು ವಿಶ್ಲೇಷಿಸುಸುವುದಾದರೆ, ಈ ಮೋಟಾರ್‌ಸೈಕಲ್ ಬಹುತೇಕ ನಿರ್ಮಾಣ ಹಂತವನ್ನು ಮುಗಿಸಿದಂತೆ ಕಾಣುತ್ತಿದೆ. ಉಳಿದಂತೆ ಪರ್ಫಾಮೆನ್ಸ್ ಟೆಸ್ಟಿಂಗ್ ಹಾಗೂ ರಾಯಲ್ ಎನ್‌ಫೀಲ್ಡ್ ಸಸ್ಪೆನ್ಶನ್ ಸೆಟಪ್ ಅನ್ನು ಉತ್ತಮಗೊಳಿಸಲು ಈ ಟೆಸ್ಟಿಂಗ್ ನಡೆಸುತ್ತಿರುವಂತೆ ಕಾಣುತ್ತಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಮೋಟಾರ್‌ಸೈಕಲ್‌ನ ಬಿಡುಗಡೆಗಾಗಿ ದೇಶಾದ್ಯಂತ ಅನೇಕ ರಾಯಲ್ ಎನ್‌ಫೀಲ್ಡ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಮುಂಬರುವ ಮೀಟಿಯೋರ್‌ 650 ಮೋಟಾರ್‌ಸೈಕಲ್ ರಾಯಲ್ ಎನ್‌ಫೀಲ್ಡ್ ಲೈನ್‌ಅಪ್‌ನಲ್ಲಿಯೇ ಅತ್ಯಂತ ಶಕ್ತಿಶಾಲಿ ಎಂಜಿನ್ ಸಾಮರ್ಥ್ಯಗದೊಂದಿಗೆ ಟೂರಿಂಗ್ ಬೈಕ್ ಆಗಿ ಹೊರಹೊಮ್ಮಲಿದೆ ಎಂದು ನಿರೀಕ್ಷಿಸಲಾಗಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯೋರ್‌ 650, ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650ನ ಅದೇ ಪವರ್, ಟಾರ್ಕ್ ಮತ್ತು ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ನ ಡಿಸೈನ್‌ ಅನ್ನು ಪಡೆದುಕೊಳ್ಳಲಿದೆ. ಈ ಮೂಲಕ ದೇಶದ ಮೋಟಾರ್‌ಸೈಕಲ್ ಉತ್ಸಾಹಿಗಳಿಗಾಗಿ ಕಂಪನಿಯು ಬಹುತೇಕ ಪರಿಪೂರ್ಣ ಪ್ರವಾಸಿ ಮೋಟಾರ್‌ಸೈಕಲ್ ಅನ್ನು ಕೊಡುಗೆಯಾಗಿ ನೀಡುತ್ತಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಮುಂಬರುವ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಅತ್ಯಂತ ದುಬಾರಿ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಆಗಿರುವುದರಿಂದ, ಇತರ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಿಗಿಂತ ಕೆಲವು ಹೆಚ್ಚುವರಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡು ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ಹೇಳಲಾಗುತ್ತಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಇದಕ್ಕೂ ಕೆಲವು ಆಧಾರಗಳಿವೆ, ಕೆಲ ಸೋರಿಕೆಯಾದ ಚಿತ್ರಗಳು ಈ ಪ್ರೀಮಿಯಂ ವೈಶಿಷ್ಟ್ಯಗಳನ್ನು ದೃಢೀಕರಿಸುತ್ತಿವೆ. ಇತರ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ಗಳಲ್ಲಿ ಬಳಸುವ ಸಾಂಪ್ರದಾಯಿಕ ಫೋರ್ಕ್‌ಗಳ ಬದಲಿಗೆ ಮುಂಭಾಗದಲ್ಲಿ USD ಫೋರ್ಕ್‌ಗಳ ಬಳಕೆಯಾಗಿದೆ. ಇದಲ್ಲದೆ, ಮುಂಬರುವ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಮೋಟಾರ್‌ಸೈಕಲ್ ಕೂಡ ಹೆಚ್ಚು ದಪ್ಪವಾದ ಹಿಂಬದಿಯ ಟೈರ್‌ಗಳನ್ನು ಹೊಂದಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಮುಂಬರುವ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯೋರ್‌ 650 ಮೋಟಾರ್‌ಸೈಕಲ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮೋಟಾರ್‌ಸೈಕಲ್‌ಗಳಿಗೆ ಅದೇ 650cc, ಸಮಾನಾಂತರ-ಟ್ವಿನ್ ಎಂಜಿನ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಈ ಎಂಜಿನ್ 7,100rpm ನಲ್ಲಿ 47bhp ಗರಿಷ್ಠ ಪವರ್ ಮತ್ತು 5,250rpm ನಲ್ಲಿ 52Nm ಟಾರ್ಕ್ ಅನ್ನು ಹೊರಹಾಕುತ್ತದೆ. ಈ ಎರಡೂ ಅಂಕಿಅಂಶಗಳು ಈ ವಿಭಾಗದ ಮೋಟಾರ್‌ಸೈಕಲ್‌ಗೆ ಅತ್ಯಂತ ಶಕ್ತಿಶಾಲಿ ಪರ್ಫಾಮೆನ್ಸ್‌ಗೆ ಅನುವುಮಾಡಿಕೊಡಲಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಉಳಿದಂತೆ 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಕೆಲವು ಸಣ್ಣ ಟ್ವೀಕ್‌ಗಳನ್ನು ಹೊರತುಪಡಿಸಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸುವುದಿಲ್ಲ. ಈ ಟ್ರಾನ್ಸ್‌ಮಿಷನ್‌ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಬರುತ್ತದೆ. ಮುಂಬರುವ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಮೋಟಾರ್‌ಸೈಕಲ್‌ನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಟ್ರಿಪ್ಪರ್ ನ್ಯಾವಿಗೇಷನ್ ಮಾಡ್ಯೂಲ್‌ನಂತಹ ವೈಶಿಷ್ಟ್ಯಗಳು ಪ್ರಮಾಣಿತ ವೈಶಿಷ್ಟ್ಯಗಳಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650, 20 ಲೀಟರ್‌ಗೆ ಹತ್ತಿರವಿರುವ ಇಂಧನ ಸಾಮರ್ಥ್ಯದೊಂದಿಗೆ ದೊಡ್ಡ ಇಂಧನ ಟ್ಯಾಂಕ್ ಅನ್ನು ಒಳಗೊಂಡಿರುವುದು ಕಂಡುಬರುತ್ತಿದೆ. ಇದಲ್ಲದೆ, ಮೀಟಿಯೋರ್‌ 650 ಮೋಟಾರ್‌ಸೈಕಲ್ ಎರಡು ಥೀಮ್‌ಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಒಂದು ಸಾಕಷ್ಟು ಕ್ರೋಮ್‌ನೊಂದಿಗೆ, ಇನ್ನೊಂದು ಬ್ಲ್ಯಾಕ್-ಔಟ್ ಥೀಮ್ ಅನ್ನು ಪಡೆಯಬಹುದು. ರಾಯಲ್ ಎನ್‌ಫೀಲ್ಡ್ ಮುಂಬರುವ ರಾಯಲ್ ಎನ್‌ಫೀಲ್ಡ್ ಮೆಟಿಯರ್ 650 ಮೋಟಾರ್‌ಸೈಕಲ್‌ನ ಆರಂಭಿಕ ಬೆಲೆಯನ್ನು ಸುಮಾರು 3.00 ಲಕ್ಷ ರೂಪಾಯಿಗಳ ಎಕ್ಸ್ ಶೋರೂಂ ಬಲೆಯೊಂದಿಗೆ ಭಾರತದಲ್ಲಿ ಪರಿಚಯಿಸುಬಹುದು.

ಟೆಸ್ಟಿಂಗ್ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದ ಹೊಸ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಇತ್ತಿಚೆಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕನ್ನು ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಕೂಡ ಉತ್ತಮ ಬುಕಿಂಗ್‌ಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಅತಿ ಶೀಘ್ರದಲ್ಲೇ ರಾಯಲ್ ಎನ್‌ಫೀಲ್ಡ್ ಮೀಟಿಯೋರ್‌ 650 ಮೋಟಾರ್‌ಸೈಕಲ್‌ ಕೂಡ ಅನಾವರಣಗೊಳ್ಳಲಿದೆ ಎಂಬುದನ್ನು ಸೋರಿಕೆಯಾದ ಟೆಸ್ಟಿಂಗ್ ಫೋಟೋಗಳು ತಿಳಿಸುತ್ತಿವೆ.

Most Read Articles

Kannada
English summary
Royal Enfield Meteor 650 spotted by camera during testing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X