137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಇದೀಗ ಸೈಲೆನ್ಸ್ ಕಂಪನಿಯು ಯುಕೆಯಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಗುರಿಯೊಂದಿಗೆ ತನ್ನ ಹೊಸ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು ಜನಪ್ರಿಯ ಎಸ್01 ಎಲೆಕ್ಟ್ರಿಕ್ ಸ್ಕೂಟರ್‌ನ ಸ್ಪೋರ್ಟಿಯರ್ ಆವೃತ್ತಿಯಾಗಿದೆ. ಈ ಬಿಡುಗಡೆಯೊಂದಿಗೆ, ಕಂಪನಿಯ ಪೋರ್ಟ್‌ಫೋಲಿಯೊ ಈಗ ಒಟ್ಟು 6 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೊಂದಿದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸೈಲೆನ್ಸ್ ಕಂಪನಿಯು ಎಸ್01 ಪ್ಲಸ್, ಎಸ್01 ಅರ್ಬನ್, ಎಸ್01 ಕನೆಕ್ಟೆಡ್, ಎಸ್02 ಅರ್ಬನ್, ಎಸ್02 ಬಿಸಿನೆಸ್ ಮತ್ತು ಎಸ್02 ಬಿಸಿನೆಸ್ ಪ್ಲಸ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹೊಂದಿವೆ. 2022 ರಲ್ಲಿ ಸೀಮಿತ ಸಂಖ್ಯೆಯ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾತ್ರ ನೀಡಲಾಗುವುದು.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಬಳಕೆದಾರರು ತಮ್ಮ ಎಸ್01 ಪ್ಲಸ್ ಅನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಕಾಯ್ದಿರಿಸಬಹುದು. ಸ್ಕೂಟರ್ ಅನ್ನು £ 6,795 ಬೆಲೆಯಲ್ಲಿ ನೀಡಲಾಗುತ್ತಿದೆ, ಇದು ಸರಿಸುಮಾರು INR 6.50 ಲಕ್ಷ. ಇಎಂಐ 47 ತಿಂಗಳ ಅವಧಿಗೆ ಸುಮಾರು £124.26 (ಅಂದಾಜು ರೂ. 12 ಸಾವಿರ) ಆಗಿದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸೈಲೆನ್ಸ್ ಎಸ್01 ಪ್ಲಸ್ ಸೈಲೆನ್ಸ್ ಎಸ್01 ಕನೆಕ್ಟೆಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಧರಿಸಿದೆ, ಇದು £5,695 (ಅಂದಾಜು ರೂ. 5.45 ಲಕ್ಷ) ಕ್ಕೆ ಮಾರಾಟವಾಗುತ್ತದೆ. ಕೋರ್ ವಿನ್ಯಾಸವು ಒಂದೇ ಆಗಿದ್ದರೂ, ಎಸ್01 ಪ್ಲಸ್ ಅನ್ನು ಸ್ಪೋರ್ಟಿ ಆಂಥ್ರಾಸೈಟ್ ಬೂದು ಬಣ್ಣದ ಥೀಮ್‌ನಲ್ಲಿ ನೀಡಲಾಗುತ್ತಿದೆ. ಇದು ಹೆಚ್ಚು ರೋಮಾಂಚಕ ನೋಟ ಮತ್ತು ಗ್ಲೋಷಿ ಬ್ಲ್ಯಾಕ್ ವಿವರಗಳನ್ನು ಹೊಂದಿದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಕೆಲವು ಪ್ರಮುಖ ವೈಶಿಷ್ಟ್ಯಗಳಲ್ಲಿ ರೌಂಡ್ ಹೆಡ್‌ಲ್ಯಾಂಪ್, ಸ್ಕಲ್ಪ್ಟೆಡ್ ಫ್ರಂಟ್ ಫಾಸಿಯಾ, ಟಿಂಟೆಡ್ ವಿಂಡ್‌ಸ್ಕ್ರೀನ್, ಟ್ರೆಂಡಿ ರಿಯರ್ ವ್ಯೂ ಮಿರರ್‌ಗಳು, ಸಿಂಗಲ್ ಪೀಸ್ ಸೀಟ್ ಮತ್ತು ಲಾಂಗ್ ಟೈಲ್ ಸೆಕ್ಷನ್ ಸೇರಿವೆ. ಎಸ್01 ಪ್ಲಸ್ ಬ್ರ್ಯಾಂಡಿಂಗ್ ಅಂಶಗಳನ್ನು ಟೇಲ್ ವಿಭಾಗ ಮತ್ತು ವ್ಹೀಲ್ ಗಳಲ್ಲಿ ಕಾಣಬಹುದು

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ವ್ಹೀಲ್ ಗಳು ಮತ್ತು ಬಾಡಿಯ ಪ್ಯಾನೆಲ್‌ಗಳ ಮೇಲಿನ ಕೆಂಪು ಮುಖ್ಯಾಂಶಗಳು ಬೂದು-ಕಪ್ಪು ಥೀಮ್‌ಗೆ ವಿರುದ್ಧವಾಗಿ ಎದ್ದು ಕಾಣುತ್ತವೆ. ಸೀಟಿನ ಮೇಲೆ ಕೆಂಪು ಹೊಲಿಗೆ ಮತ್ತು ಹೊಸ ಕೆಂಪು ಬ್ಯಾಟರಿ ಎಲ್ಇಡಿ ರಿಂಗ್ನಲ್ಲಿ ಸಹ ಸ್ಪಷ್ಟವಾಗಿ ಕಂಡುಬರುತ್ತದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ರೈಡಿಂಗ್ ನಿಲುವು ಎಸ್01 ನಂತೆಯೇ ಇರುತ್ತದೆ, ಏರೋಡೈನಾಮಿಕ್ ಆಗಿ ಇರಿಸಲಾದ ಹ್ಯಾಂಡಲ್‌ಬಾರ್ ಮತ್ತು ಆರಾಮದಾಯಕ ಸೀಟ್ ಅನ್ನು ಹೊಂದಿದೆ. ಪಿಲಿಯನ್ ಸೀಟ್ ವಿಭಾಗವು ಕಿರಿದಾಗಿ ಕಾಣುತ್ತದೆ, ಆದರೆ ಇದು ನಗರ ಪರಿಸರದಲ್ಲಿ ಹೆಚ್ಚು ಉತ್ತಮವಾಗಿದೆ. ಫ್ಲೋರ್‌ಬೋರ್ಡ್ ಪ್ರದೇಶವು ದಿನಸಿ, ಸಾಮಾನು ಇತ್ಯಾದಿಗಳಂತಹ ದೈನಂದಿನ ಅಗತ್ಯಗಳಿಗಾಗಿ ಸಾಕಷ್ಟು ಸ್ಥಳವನ್ನು ಹೊಂದಿದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಪ್ರಮುಖ ಅಪ್‌ಡೇಟ್‌ಗಳಲ್ಲಿ ಒಂದು 'ಪುಶ್ ಟು ಪಾಸ್ ಮೋಡ್' ಆಗಿದೆ, ಇದರಲ್ಲಿ ಬಳಕೆದಾರರು 68 mph (ಅಂದಾಜು 109 ಕಿ.ಮೀ) ವೇಗವನ್ನು ಸಾಧಿಸಬಹುದು.ಓವರ್‌ಟೇಕ್ ಮಾಡುವಾಗ ಇದು ಬಹುಉಪಯೋಗಿಯಾಗಿದೆ. ಹೊಂದಾಣಿಕೆಯ ಆಯ್ಕೆಯೊಂದಿಗೆ ಸಸ್ಪೆಂಕ್ಷನ್ ಸಿಸ್ಟಂ ಅನ್ನು ಸಹ ನವೀಕರಿಸಲಾಗಿದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಬಳಕೆದಾರರು ಹಿಂಬದಿಯ ಸಸ್ಪೆಂಕ್ಷನ್ ಅನ್ನು ಮೃದುಗೊಳಿಸಲು ಅಥವಾ ಗಟ್ಟಿಗೊಳಿಸಲು ಸಂಕೋಚನವನ್ನು ಸರಿಹೊಂದಿಸಬಹುದು. ಉಷ್ಣ ಗುಣಲಕ್ಷಣಗಳನ್ನು ಹೆಚ್ಚಿಸಿರುವ ಹಗುರವಾದ 'ಡಿಸ್ಕ್ ವೇವ್' ಬ್ರೇಕ್‌ಗಳ ಬಳಕೆಯೊಂದಿಗೆ ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ಸುಧಾರಿಸಲಾಗಿದೆ. ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ದೊಡ್ಡ ಸಾಮರ್ಥ್ಯದ 7.5 kW ಮೋಟಾರ್ ಅನ್ನು ಹೊಂದಿದ್ದು, ಇದು 12.23 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು 5.6 kWh ತೆಗೆಯಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ನಿಯಮಗಳ ಪ್ರಕಾರ ಗರಿಷ್ಠ ವೇಗವು 100 ಕಿ.ಮೀಗೆ ಸೀಮಿತವಾಗಿದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಆದರೆ ಸ್ಕೂಟರ್ ಹೆಚ್ಚಿನ ವೇಗವನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಇಕೋ, ಸಿಟಿ, ಸ್ಪೋರ್ಟ್ ಮತ್ತು ರಿವರ್ಸ್ ಗೇರ್.ಎಂಬ ಒಟ್ಟು 4 ರೈಡ್ ಮೋಡ್‌ಗಳು ಲಭ್ಯವಿದೆ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 320 ಕೆಜಿ ತೂಕವನ್ನು ಸಾಗಿಸಲು ರೇಟ್ ಮಾಡಲಾಗಿದೆ. ಇದು ಸಿಬಿಎಸ್‌ನೊಂದಿಗೆ ಎರಡೂ ಕಡೆಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. WMTC ಮಾನದಂಡಗಳ ಪ್ರಕಾರ , ಇದರ ರೇಂಜ್ ಮೈಲುಗಳವರೆಗೆ (ಅಂದಾಜು. 137 ಕಿಮೀ) ಆಗಿದೆ. ಸ್ಟ್ಯಾಂಡರ್ಡ್ 240V ಸಾಕೆಟ್ನೊಂದಿಗೆ, ಸ್ಕೂಟರ್ ಅನ್ನು 6-8 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಸ್ಕೂಟರ್ ಮತ್ತು ಬ್ಯಾಟರಿಗೆ ವಾರಂಟಿ ಕ್ರಮವಾಗಿ 2 ವರ್ಷ ಮತ್ತು 3 ವರ್ಷಗಳಾಗಿದೆ.

137 ಕಿ.ಮೀ ರೇಂಜ್ ನೀಡುವ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡಿದೆ. ಈ ಹೊಸ ಸೈಲೆನ್ಸ್ ಎಸ್01 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

Most Read Articles

Kannada
English summary
Silence launched new s01 plus electric scooter with 137 km range details
Story first published: Monday, July 25, 2022, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X