ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸಿಂಪಲ್ ಎನರ್ಜಿ(Simple Energy) ಕಂಪನಿಯು ತನ್ನ ಬಹುನೀರಿಕ್ಷಿತ ಸಿಂಪಲ್ ಒನ್(Simple One) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ವಿತರಣೆಗೆ ಸಿದ್ದವಾಗುತ್ತಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಮುಂದಿನ ಕೆಲವೇ ದಿನಗಳಲ್ಲಿ ಗ್ರಾಹಕರ ಕೈಸೇರುವ ಸಿದ್ದತೆಯಲ್ಲಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಹೊಸ ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಯು ತಾಂತ್ರಿಕ ಅಂಶಗಳಲ್ಲಿ, ಬ್ಯಾಟರಿ ರೇಂಜ್ ಮತ್ತು ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯುತ್ತಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಎಲ್ಲಾ ಇವಿ ಸ್ಕೂಟರ್‌ಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳೊಂದೆಗೆ ಮಾರುಕಟ್ಟೆ ಪ್ರವೇಶಿಸುವ ನೀರಿಕ್ಷೆಯಲ್ಲಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಹೊಸ ಇವಿ ಸ್ಕೂಟರ್ ಮಾದರಿಯನ್ನು ಮೊದಲ ಬಾರಿಗೆ 2021ರ ಅಗಸ್ಟ್ 14ರಂದು ಅನಾವರಣಗೊಳಿಸಿದ್ದ ಸಿಂಪಲ್ ಎನರ್ಜಿ ಕಂಪನಿಯು ಮೊದಲ 5 ದಿನಗಳಲ್ಲಿ 30,000ಕ್ಕೂ ಹೆಚ್ಚು ಬುಕಿಂಗ್‌ ಪಡೆದುಕೊಂಡಿತ್ತು. ಆದರೆ ಕಳೆದ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಓಲಾ ಇವಿ ಕಂಪನಿಯ ಅಬ್ಬರದಿಂದ ತಗ್ಗಿದ್ದ ಸಿಂಪಲ್ ಇವಿ ಸ್ಕೂಟರ್ ಬುಕಿಂಗ್ ಪ್ರಕ್ರಿಯೆ ಇದೀಗ ಆರಂಭದ ಅವಧಿಗಿಂತಲೂ ಇನ್ನಷ್ಟು ಉತ್ತಮವಾಗಿದೆ ಎಂದು ಕಂಪನಿಯೇ ಮಾಹಿತಿ ನೀಡಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸಿಂಪಲ್ ಒನ್ ಇವಿ ಸ್ಕೂಟರ್ ಮಾದರಿಗಾಗಿ ಬುಕಿಂಗ್ ಸಲ್ಲಿಸುವ ಗ್ರಾಹಕರ ಸಂಖ್ಯೆ ಕಳೆದ ಕೆಲ ದಿನಗಳಿಂದ ದಿನಂಪ್ರತಿ ಸರಾಸರಿಯಾಗಿ ಶೇ.55 ರಷ್ಟು ಹೆಚ್ಚಳವಾಗಿದ್ದು, ಇತ್ತೀಚೆಗೆ ಇವಿ ಸ್ಕೂಟರ್ ಮಾರಾಟದಲ್ಲಿ ಓಲಾ ಕಂಪನಿಯಿಂದ ಆದ ಪ್ರಮಾದಗಳೇ ಸಿಂಪಲ್ ಒನ್ ಮಾದರಿಯತ್ತ ಗ್ರಾಹಕರು ಮುಖಮಾಡುತ್ತಿದ್ದಾರೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಇವಿ ಮಾರುಕಟ್ಟೆಯಲ್ಲಿ ಬೆಳವಣಿಗೆ ಕುರಿತು ಟ್ವೀಟ್ ಮಾಡಿರುವ ಸಿಂಪಲ್ ಎನರ್ಜಿ ಸಿಇಒ ಸುಹಾಸ್ ರಾಜ್‌ಕುಮಾರ್ "ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿನ ಇತ್ತೀಚಿನ ಕೆಲ ಬೆಳವಣಿಗೆಗಳು ಗ್ರಾಹಕರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತವೆ ಎಂದು ನಾನು ಭಾವಿಸಿದ್ದೆನೆ. ಆದರೆ ಸಿಂಪರ್ ಎನರ್ಜಿ ಕಂಪನಿಯ ಈ ವಿಚಾರದಲ್ಲಿ ತುಂಬಾ ವಿಭಿನ್ನವಾಗಿವೆ. ಇದಕ್ಕಾಗಿ ಕಳೆದ ಎರಡು ತಿಂಗಳಲ್ಲಿ ನಮ್ಮ ದೈನಂದಿನ ಬುಕಿಂಗ್ ಪ್ರಮಾಣವು ಶೇ. 55 ರಷ್ಟು ಸುಧಾರಿಸಿದೆ" ಎಂದಿದ್ದಾರೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಇವಿ ಸ್ಕೂಟರ್ ಮಾರಾಟದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ಓಲಾ ಕಂಪನಿಯು ಕೇವಲ ಭರವಸೆ ನೀಡುವುದರ ಮೂಲಕ ಗ್ರಾಹಕರನ್ನ ಕಾಯಿಸುತ್ತಿರುವುದು ಕೊಟ್ಟ ಮಾತಿನಂತೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ವಿಫಲವಾಗಿರುವುದು ಗ್ರಾಹಕರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತಿದೆ ಎನ್ನುವುದನ್ನು ಸಿಂಪಲ್ ಎನರ್ಜಿ ಕಂಪನಿಯ ಸಿಇಒ ಪರೋಕ್ಷವಾಗಿ ಟೀಕಿಸಿದ್ದಾರೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸದ್ಯ ಸಿಂಪಲ್ ಎನರ್ಜಿ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸಿದರೂ ವಿತರಣೆಗೆ ಯಾವುದೇ ಅವಸರ ಮಾಡದೆ ಎಲ್ಲಾ ಹಂತದಲ್ಲೂ ಪೂರ್ವ ಸಿದ್ದತೆಯೊಂದಿಗೆ ಮಾರಾಟ ಪ್ರಕ್ರಿಯೆ ಆರಂಭಿಸುತ್ತಿದ್ದು, ಗ್ರಾಹಕರಲ್ಲಿ ಗೊಂದಲ ಉಂಟುಮಾಡದೆ ವಿತರಣೆಯ ನಿಖರ ಮಾಹಿತಿ ಹಂಚಿಕೊಂಡಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಬ್ಯಾಟರಿ ರೇಂಜ್ ಮತ್ತು ಬೆಲೆ ವಿಚಾರವಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವ ಎಲ್ಲಾ ಗುಣವೈಶಿಷ್ಟ್ಯತೆ ಹೊಂದಿದ್ದು, ಬಿಡುಗಡೆಯ ನಂತರ ವಿತರಣೆಯನ್ನು ವಿಳಂಬ ಮಾಡುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರು ಅಸಮಾಧಾನಗೊಂಡಿರುವುದನ್ನು ಸಹ ಕಂಪನಿಯು ಅರಿತಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಹೀಗಾಗಿ ಹೊಸ ಇವಿ ಸ್ಕೂಟರ್ ಮಾದರಿಗೆ ಬುಕಿಂಗ್ ಸಲ್ಲಿಸಿ ಕಾಯುತ್ತಿರುವ ಗ್ರಾಹಕರಿಗೆ ಭರವಸೆ ನೀಡಿರುವ ಕಂಪನಿಯು ಪ್ರತಿಸ್ಪರ್ಧಿಗಳಂತೆ ಸಾಮೂಹಿಕ ಉತ್ಪಾದನೆಗೆ ಧಾವಿಸದೆ ಸ್ಕೂಟರ್ ಅನ್ನು ಮತ್ತಷ್ಟು ಸುಧಾರಣೆಗೊಳಿಸಿ ಗ್ರಾಹಕರಿಗೆ ವಿತರಿಸುವುದಾಗಿ ಹೇಳಿಕೊಂಡಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸದ್ಯ ಅನಾವರಣಗೊಳಿಸಲಾದ ಸಿಂಪಲ್ ಒನ್ ಮಾದರಿಗಿಂತಲೂ ನವೀಕರಣಗೊಂಡ ಮಾದರಿಯು ಮತ್ತಷ್ಟು ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದ್ದು, ಹೊಸ ನವೀಕರಣ ಕುರಿತು ಕಂಪನಿಯು ಶೀಘ್ರದಲ್ಲೇ ಇನ್ನಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸಿಂಪಲ್ ಎನರ್ಜಿ ಕಂಪನಿಯು ಮುಂಬರುವ ಜೂನ್‌ನಿಂದ ಹೊಸ ಸ್ಕೂಟರ್ ವಿತರಣೆ ಆರಂಭಿಸುತ್ತಿದ್ದು, ಎಲ್ಲಾ ಹಂತದಲ್ಲೂ ವಿತರಣಾ ಪ್ರಕ್ರಿಯೆಯನ್ನು ಸರಳಗೊಳಿಸಿದ ನಂತರಷ್ಟೇ ಗ್ರಾಹಕರಿಗೆ ವಿತರಿಸಲು ಮುಂದಾಗಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸಿಂಪಲ್ ಎನರ್ಜಿ ಕಂಪನಿಯು ಸಿಂಪಲ್ ಒನ್ ಇವಿ ಸ್ಕೂಟರ್ ಬೆಲೆಯನ್ನು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷಕ್ಕೆ ನಿಗದಿಪಡಿಸಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ವಿಶ್ವದಲ್ಲೇ ಅತಿ ಹೆಚ್ಚು ಮೈಲೇಜ್ ಹೊಂದಿರುವ ಇವಿ ಸ್ಕೂಟರ್ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸಿಂಪಲ್ ಎನರ್ಜಿ ಕಂಪನಿಯು ಆರಂಭಿಕವಾಗಿ ದೇಶದ 13 ರಾಜ್ಯಗಳ ಪ್ರಮುಖ ನಗರಗಳಲ್ಲಿ ಸದ್ಯ ಮಾರಾಟ ಸೌಲಭ್ಯವನ್ನು ಆರಂಭಿಸುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆ ಹೆಚ್ಚಿದಂತೆ ಇವಿ ಸ್ಕೂಟರ್ ಮಾರಾಟ ಸೌಲಭ್ಯವು ಹಂತ-ಹಂತವಾಗಿ ದೇಶದ ಪ್ರಮುಖ ದೇಶಗಳಲ್ಲಿ ವಿಸ್ತರಣೆಯಾಗಲಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಸ್ಕೂಟರ್‌ನಲ್ಲಿ ತ್ರಿಕೊನಾಕಾರದ ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಹೆಡ್‌‌ಲ್ಯಾಂಪ್, ಸೈಡ್ ಬೈ ಟರ್ನ್ ಸಿಗ್ನಲ್ ಇಂಡಿಕೇಟರ್, ಫ್ಲ್ಯಾಟ್ ಫುಟ್‌ಬೋರ್ಡ್, ಅಯಾಲ್ ವ್ಹೀಲ್, ಸ್ಪೋರ್ಟಿ ರಿಯರ್ ವ್ಯೂ ಮಿರರ್, 30-ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹೊಂದಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಸಿಂಪಲ್ ಎನರ್ಜಿ ಇವಿ ಸ್ಕೂಟರ್‌ನಲ್ಲಿ 4.5KW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 4.8kWh ಲೀಥಿಯಂ ಅಯಾನ್ ಬ್ಯಾಟರಿ(ಡ್ಯುಯಲ್ ಬ್ಯಾಟರಿ) ಜೋಡಣೆ ಮಾಡಿದ್ದು, ಪ್ರತಿ ಚಾರ್ಚ್‌ಗೆ ವಿವಿಧ ರೈಡ್ ಮೋಡ್‌ಗಳ ಚಾಲನಾ ಶೈಲಿ ಆಧಾರದ ಮೇಲೆ ಕನಿಷ್ಠ 203 ಕಿ.ಮೀ ನಿಂದ ಗರಿಷ್ಠ 236 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಪ್ರತಿ ಗಂಟೆಗೆ 105 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಸಿಂಪಲ್ ಒನ್ ಸ್ಕೂಟರ್ 72 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಕೇವಲ 2.95 ಸೆಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ಕ್ವಿಕ್ ಸ್ಪೀಡ್ ಪಡೆದುಕೊಳ್ಳಲಿದ್ದು, ಹೊಸ ಸ್ಕೂಟರ್ ಅನ್ನು ಸಿಂಪಲ್ ಕಂಪನಿಯು ಟ್ಯೂಬಲರ್ ಫ್ರೆಮ್ ಬಳಕೆ ಮಾಡಿದೆ.

ಸಿಂಪಲ್ ಒನ್ ಇವಿ ಸ್ಕೂಟರ್ ಬುಕಿಂಗ್ ಹೆಚ್ಚಳ- ಓಲಾ ಕಂಪನಿಯ ಕಾಲಳೆದ ಸಿಂಪಲ್ ಎನರ್ಜಿ ಸಿಇಒ!

ಜೊತೆಗೆ ಸಿಂಪಲ್ ಒನ್ ಸ್ಕೂಟರ್ ಮಾದರಿಯಲ್ಲಿ 1024x600 ಫಿಕ್ಸೆಲ್ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂಥ್ ಮತ್ತು 4ಜಿ ಇಂಟರ್‌ನೆಟ್ ಸಂಪರ್ಕಕ್ಕಾಗಿ ಕನೆಕ್ಟೆಡ್ ಟೆಕ್ನಾಲಜಿ ನೀಡಲಾಗಿದೆ. ಕನೆಕ್ಟೆಡ್ ಫೀಚರ್ಸ್‌ನಲ್ಲಿ ಜಿಯೋ ಫೆನ್ಸಿಂಗ್, ಮ್ಯೂಜಿಕ್ ಕಂಟ್ರೋಲ್, ಎಸ್ಒಎಸ್ ಮೆಸೇಜ್, ವೆಹಿಕಲ್ ಟ್ರ್ಯಾಕಿಂಗ್, ಡ್ಯಾಕುಮೆಂಟ್ ಸ್ಟೋರೇಜ್, ಫೈಂಡ್ ಮೈ ಬೈಕ್ ಸೌಲಭ್ಯಗಳಿವೆ.

Most Read Articles

Kannada
English summary
Simple energy gets 55 percent more booking says ceo suhas rajkumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X