ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SMIPL) ತನ್ನ ಹೊಸ ಸುಜುಕಿ ಕಟಾನಾ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸುಜುಕಿ ಕಟಾನಾ (Suzuki Katana) ಬೈಕ್ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.13.61 ಲಕ್ಷವಾಗಿದೆ.

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಈ ಬಹುನಿರೀಕ್ಷಿತ ಸುಜುಕಿ ಕಟಾನಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ ಬೈಕ್ 999 ಸಿಸಿ ಇನ್‌ಲೈನ್ ನಾಲ್ಕು-ಸಿಲಿಂಡರ್ DOHC ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ 152 ಬಿಹೆಚ್‍ಪಿ ಪವರ್ ಮತ್ತು 9,250 ಆರ್‌ಪಿಎಂನಲ್ಲಿ 106 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಭಾರತಕ್ಕೆ ಸಂಬಂಧಿಸಿದಂತೆ, ಸುಜುಕಿಯು ಕಟಾನಾ ರೋಡ್‌ಸ್ಟರ್ ಅನ್ನು ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇವುಗಳು ಮೆಟಾಲಿಕ್ ಮಿಸ್ಟಿಕ್ ಸಿಲ್ವರ್ ಮತ್ತು ಮೆಟಾಲಿಕ್ ಸ್ಟೆಲ್ಲರ್ ಬ್ಲೂ ಆಗಿದೆ. ಈ ಹೊಸ ಸೆಮಿ-ಫೇರ್ಡ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ವಿನ್ಯಾಸದ ವಿಷಯದಲ್ಲಿ, ಹೊಸ ಸುಜುಕಿ ಕಟಾನಾ ಹೆಚ್ಚು ನಿಯೋ-ರೆಟ್ರೊ ವಿನ್ಯಾಸವನ್ನು ಹೊಂದಿದೆ, ಇದು ಸೊಗಸಾದ, ಆದರೆ ಆರಾಮದಾಯಕ ಏರೋಗ್ರಾಫಿಕ್ಸ್ ಭಾರತದಲ್ಲಿ ದೈನಂದಿನ ಪರಿಸ್ಥಿತಿಗಳಲ್ಲಿ ಸವಾರಿ ಮಾಡಲು ಸುಲಭವಾಗುತ್ತದೆ.

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಸುಜುಕಿಯು ಕಟಾನಾ ಸೆಮಿ-ಫೇರ್ಡ್ ಮೋಟಾರ್‌ಸೈಕಲ್ ಥ್ರೊಟಲ್-ಬೈ-ವೈರ್ ಸಿಸ್ಟಮ್, ಸ್ಲಿಪ್ಪರ್ ಕ್ಲಚ್, ಐದು-ಹಂತದ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ, ಸುಜುಕಿ ಡ್ರೈವ್ ಮೋಡ್ ಸೆಲೆಕ್ಟರ್, ಲೋ ಆರ್‌ಪಿಎಂ ಅಸಿಸ್ಟ್, ಸುಜುಕಿ ಈಸಿ ಸ್ಟಾರ್ಟ್ ಸಿಸ್ಟಮ್ ಮತ್ತು ಮುಂತಾದವುಗಳೊಂದಿಗೆ ಬೈ-ವೈರ್ ಕ್ವಿಕ್‌ಶಿಫ್ಟರ್ ಅನ್ನು ಹೊಂದಿದೆ.

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಹೊಸ ಸುಜುಕಿ ಕಟಾನಾ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಅಪ್ ಸೈಡ್-ಡೌನ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಲಿಂಕ್-ಟೈಪ್ ಕಾಯಿಲ್ ಸ್ಪ್ರಿಂಗ್ ಅನ್ನು ಒಳಗೊಂಡಿದೆ.

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್‌ಗಳು ಮತ್ತು ಬ್ರೆಂಬೊ ಜೊತೆಗೆ ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಅನ್ನು ನೀಡಲಾಗಿದೆ. ಇನ್ನು ಕ್ಯಾಲಿಪರ್ಗಳು ಬೈಕ್ ನೊಂದಿಗೆ ಮೂರು ವಿಭಿನ್ನ ಥ್ರೊಟಲ್ ಮ್ಯಾಪ್ಸ್ ಲಭ್ಯವಿವೆ ಅವುಗಳೆಂದರೆ ಆಕ್ಟಿವ್, ಬೇಸಿಕ್ ಮತ್ತು ಕಂಫರ್ಟ್.ಆಗಿದೆ.

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಸೆಮಿ-ಫೇರ್ಡ್ ಫ್ಲ್ಯಾಗ್‌ಶಿಪ್ ಮೋಟಾರ್‌ಸೈಕಲ್‌ನಲ್ಲಿರುವ ಇತರ ವೈಶಿಷ್ಟ್ಯಗಳ ಮುಖ್ಯಾಂಶಗಳು ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಎಲ್‌ಇಡಿ ಹೆಡ್‌ಲ್ಯಾಂಪ್, ಶಾರ್ಪ್ ಬಾಡಿ ಪ್ಯಾನೆಲ್‌ಗಳು, ಗೋಲ್ಡನ್ ಬಣ್ಣದ ಅಲಾಯ್ ವ್ಹೀಲ್ ಗಳು, ವಿನ್ಯಾಸಗೊಳಿಸಿದ ಫ್ಯೂಯಲ್ ಟ್ಯಾಂಕ್, ಬ್ಲ್ಯಾಕ್ ಫಿನಿಶಿಂಗ್ ಎಕ್ಸಾಸ್ಟ್ ಸಿಸ್ಟಮ್ ಮತ್ತು ಎಂಜಿನ್ ಪ್ರದೇಶ, ಎರಡು-ಟೋನ್ ಸೀಟ್ ಫಿನಿಶ್, ಎಲ್‌ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಮತ್ತು ಇತ್ಯಾದಿಗಳನ್ನು ಹೊಂದಿದೆ,

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸತೋಶಿ ಉಚಿಡಾ ಅವರು ಮಾತನಾಡಿ, ಕಟಾನಾ ಸುಜುಕಿಯ ಉತ್ತಮ ಕರಕುಶಲತೆಯ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಹೊಸ ಬಿಡುಗಡೆಯು ದೇಶದಲ್ಲಿ ನಮ್ಮ ದೊಡ್ಡ ಬೈಕ್ ಪೋರ್ಟ್‌ಫೋಲಿಯೊವನ್ನು ಗಟ್ಟಿಗೊಳಿಸುವ ನಮ್ಮ ಕಾರ್ಯತಂತ್ರದ ಒಂದು ಭಾಗವಾಗಿದ ಎಂದು ಹೆಳಿದರು

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಇನ್ನು ಸುಜುಕಿ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಇನ್‌ಟ್ರುಡರ್ ಬೈಕ್ ಅನ್ನು 2017 ರಲ್ಲಿ ಬಿಡುಗಡೆಗೊಳಿಸಿತ್ತು. ವಿಭಿನ್ನ ಶೈಲಿಯ ಸುಜುಕಿ ಇನ್‌ಟ್ರುಡರ್ ಬೈಕ್ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಸುಜುಕಿ ಇನ್‌ಟ್ರುಡರ್ ಬೈಕ್ ವ್ಯಾಪಾರದ ದೃಷ್ಟಿಕೋನದಿಂದ ಮೌಲ್ಯಯುತವಾಗಿರಲಿಲ್ಲ. 2021ರ ಡಿಸೆಂಬರ್ ರಿಂದ ಮೇ 2022 ರವರೆಗೆ ದೇಶೀಯ ಮಾರುಕಟ್ಟೆಯಲ್ಲಿ ಒಂದೇ ಒಂದು ಯುನಿಟ್ ಕೂಡ ಮಾರಾಟವಾಗದ ಕಾರಣ ಸುಜುಕಿ ಇನ್‌ಟ್ರುಡರ್ ಬೈಕ್ ಅನ್ನು ಕಂಪನಿಯು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಬೇಡಿಕೆ ಕುಸಿತ ಕಾರಣ ಸುಜುಕಿ ಕ್ರೂಸರ್ ಶೈಲಿಯ ಮೋಟಾರ್‌ಸೈಕಲ್‌ ಅನ್ನು ಇತರೆ ಆಯ್ಕೆಗಳು ಇಲ್ಲದೇ ಕಂಪನಿಯು ಸ್ಥಗಿತಗೊಳಿಸಿದೆ. ಇದು ಬಜಾಜ್ ಅವೆಂಜರ್ ಕ್ರೂಸ್ 220 ಗಿಂತ ಸುಮಾರು ರೂ.10,000 ಕಡಿಮೆ ಬೆಲೆಯನ್ನು ಹೊಂದಿದ್ದರೂ ಸಹ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿದೆ. ಸುಜುಕಿ ಇನ್‌ಟ್ರುಡರ್ ಬೈಕ್ 155 ನಿರೀಕ್ಷೆಗಳನ್ನು ಏಕೆ ಪೂರೈಸಲಿಲ್ಲ ಎಂಬುದನ್ನು ವಿವರಿಸಲು ಹಲವು ಕಾರಣಗಳಿವೆ. ವಿನ್ಯಾಸದಿಂದ ಪ್ರಾರಂಭಿಸಿ, ವಿಭಿನ್ನ ಶೈಲಿಯ ಬಾಡಿ ಸ್ಟೈಲ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಕರ್ವಿ ಪ್ಯಾನೆಲಿಂಗ್ ಆಕರ್ಷಕವಾಗಿ ತೋರುತ್ತದೆಯಾದರೂ, ಇದು 155cc ಬೈಕ್‌ಗೆ ತುಂಬಾ ದೊಡ್ಡದಾಗಿದೆ ಸಣ್ಣ ಗಾತ್ರದ ಎಂಜಿನ್ ಅನ್ನು ಮರೆಮಾಡಲು ಫೇರಿಂಗ್ ಮೂಲಭೂತವಾಗಿ ಇರುತ್ತದೆ. ಈ ಬೈಕ್ ಟ್ವಿನ್ ಎಕ್ಸಾಸ್ಟ್ ಮತ್ತು ವಿಶಾಲವಾದ ಹಿಂಭಾಗದ ವಿಭಾಗವಿದೆ,

ಭಾರತದಲ್ಲಿ 999 ಸಿಸಿಯ ಸುಜುಕಿ ಕಟಾನಾ ಬೈಕ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಒಟ್ಟಾರೆಯಾಗಿ ಈ ಬಹುನಿರೀಕ್ಷಿತ ಸುಜುಕಿ ಕಟಾನಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹೊಸ ಬೈಕ್ ಆಕರ್ಷಕ ಲುಕ್ ಮತ್ತು ಪವರ್ ಫುಲ್ ಎಂಜಿನ್ ಅನ್ನು ಹೊಂದಿದೆ, ಈ ಸುಜುಕಿ ಕಟಾನಾ ಲೀಟರ್-ಕ್ಲಾಸ್ ಮೋಟಾರ್‌ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಫ್ 900 XR ಮತ್ತು ಕವಾಸಕಿ ನಿಂಜಾ 1000 SX ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಈ ಬೈಕ್‌ಗಳ ಬೆಲೆಗಳು ಕ್ರಮವಾಗಿ ರೂ. 12.3 ಲಕ್ಷ ಮತ್ತು ರೂ. 11.86 ಲಕ್ಷವಾಗಿದೆ.

Most Read Articles

Kannada
English summary
Suzuki launched new katana litre class motorcycle in india engine specs details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X