Just In
- 10 min ago
ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್
- 1 hr ago
ಯಾವುದೇ ಏರ್ಪೋರ್ಟ್ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ
- 1 hr ago
ಹೊಸ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್
- 2 hrs ago
ಮನಕಲುಕುವ ಘಟನೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್ನಲ್ಲೇ ಸಾಗಿಸಿದ ಮಗ
Don't Miss!
- Sports
ಏಷ್ಯಾ ಕಪ್ 2022: ಭಾರತದ ಸಂಭಾವ್ಯ ಸ್ಕ್ವಾಡ್ ಪ್ರಕಟಿಸಿದ ಆಕಾಶ್ ಚೋಪ್ರಾ
- News
ಕರ್ನಾಟಕದ ಪ್ರಮುಖ ಡ್ಯಾಂಗಳ ಒಳ, ಹೊರ ಹರಿವು ಅಧಿಕ
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Movies
ವಿಡಿಯೋ: ಜಗ್ಗೇಶ್ ಮನೆ ನಾಯಿಗೂ ಹಾಡು ಬರುತ್ತೆ!
- Lifestyle
ನಿಶ್ಚಿತಾರ್ಥ ಆದ ಮೇಲೆ ಈ ರೀತಿ ಅನಿಸಿದರೆ ಮದುವೆಯಾಗದಿರುವುದೇ ಬೆಸ್ಟ್
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕ್ ಅಕ್ಸೆಸರೀಸ್ ಮಾಹಿತಿ ಬಹಿರಂಗ
ಜನಪ್ರಿಯ ದ್ವಿಚಕ್ರ ತಯಾರಕ ಸಂಸ್ಥೆಯಾದ ಸುಜುಕಿ ಮೋಟಾರ್ಸೈಕಲ್ ತನ್ನ ಹೊಸ ವಿ-ಸ್ಟ್ರೋಮ್ ಎಸ್ಎಕ್ಸ್ 250ಸಿಸಿ ಅಡ್ವೆಂಚರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.11 ಲಕ್ಷವಾಗಿದೆ.

ಇದೀಗ ಜಪಾನಿನ ದ್ವಿಚಕ್ರ ವಾಹನ ತಯಾರಕರ ಕಂಪನಿಯಾದ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250ಸಿಸಿ ಅಡ್ವೆಂಚರ್ ಬೈಕಿನ ವಿನ್ಯಾಸ ಮತ್ತು ರಕ್ಷಣೆಯನ್ನು ಇನ್ನಷ್ಟು ಹೆಚ್ಚಿಸಲು ಅಕ್ಸೆಸರೀಸ್ ಗಳನ್ನು ಘೋಷಿಸಿದೆ ಸ್ಟೈಲಿಂಗ್ ವರ್ಧನೆಯ ಅಂಶಗಳು ವೀಲ್ ಡಿಕಾಲ್ಗಳನ್ನು ಒಳಗೊಂಡಿವೆ ಆದರೆ ಆಯ್ಕೆಯ ರಕ್ಷಣಾತ್ಮಕ ಯಂತ್ರಾಂಶವು ಕ್ರ್ಯಾಶ್ ಬಾರ್, ಇಂಧನ ಟ್ಯಾಂಕ್ ಪ್ಯಾಡ್ ಮತ್ತು ಇಂಧನ ಟ್ಯಾಂಕ್ ಸೈಡ್ ಪ್ರೊಟೆಕ್ಟರ್ಗಳನ್ನು ಒಳಗೊಂಡಿರುತ್ತದೆ.

ಕಡಿಮೆ ಎತ್ತರದ ಸವಾರನಿಗೆ ಆಯ್ಕೆಯ ಕಡಿಮೆ ಎತ್ತರದ ಸೀಟ್ ಅನ್ನು ಹೊಂದಿದೆ. ಈ ಅಕ್ಸೆಸರೀಸ್ 835 ಎಂಎಂ ಎತ್ತರದಲ್ಲಿರುವ ಸ್ಟಾಕ್ ಯೂನಿಟ್ನಲ್ಲಿ ಸೀಟ್ ಎತ್ತರವನ್ನು 25 ಎಂಎಂ ಕಡಿಮೆ ಮಾಡುತ್ತದೆ.ಈ ಎಲ್ಲಾ ಅಕ್ಸೆಸರೀಸ್ ಗಳನ್ನು ಸುಜುಕಿ ಡೀಲರ್ಶಿಪ್ಗಳಲ್ಲಿ ಖರೀದಿಸಬಹುದು.

ಈ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕ್ ಯೆಲ್ಲೋ, ಆರೇಂಜ್ ಮತ್ತು ಬ್ಲ್ಯಾಕ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಸುಜುಕಿ ಕಂಪನಿಯು ವಿ-ಸ್ಟ್ರೋಮ್ 250 ಅಡ್ವೆಂಚರ್ ಬೈಕ್ ಅನ್ನು 2017 ರಿಂದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ.

ಈ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕಿನಲ್ಲಿ ಜಿಕ್ಸರ್ ನಲ್ಲಿರುವ ಅದೇ 249 ಸಿಸಿ, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ SOHC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 29.5 ಬಿಹೆಚ್ಪಿ ಪವರ್ ಮತ್ತು 22.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ.

ಈ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ 167 ಕೆಜಿ ತೂಕವನ್ನು ಹೊಂದಿದೆ. ಈ ಬೈಕ್ 12-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಹೊಂದಿದೆ.

ಈ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಮ್ನೊಂದಿಗೆ ಡಿಸ್ಕ್ ಬ್ರೇಕ್ಗಳನ್ನು ಪಡೆಯುತ್ತದೆ. ಇದು 19-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಚಕ್ರಗಳಲ್ಲಿ ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ 100/90 ಮತ್ತು 140/70 ವಿಭಾಗದ ಟೈರ್ಗಳನ್ನು ಹೊಂದಿದೆ. ಇದು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಪಡೆಯುತ್ತದೆ.

ಪ್ರಮುಖವಾಗಿ ಈ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ಗಳನ್ನು ಹೊಂದಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಹೊಂದಿದೆ. ಇದು 19-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಚಕ್ರಗಳಲ್ಲಿ ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ 100/90 ಮತ್ತು 140/70 ವಿಭಾಗದ ಟೈರ್ಗಳನ್ನು ಒಳಗೊಂಡಿವೆ.

ಈ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕ್ ಆರಾಮದಾಯಕವಾದ, ನೇರವಾಗಿ ಸವಾರಿ ಮಾಡುವ ನಿಲುವು ಹೊಂದಿದೆ ಎಂದು ಹೇಳಲಾಗುತ್ತದೆ. ಮೋಟಾರ್ಸೈಕಲ್ ಅಗಲವಾದ ಹ್ಯಾಂಡಲ್ಬಾರ್ ಮತ್ತು ಸ್ಪ್ಲಿಟ್ ಸೀಟ್ಗಳನ್ನು ಪಡೆಯುತ್ತದೆ. ಫೀಚರ್ಸ್ ಗಳ ವಿಷಯದಲ್ಲಿ, ಬೈಕ್ ಎಲ್ಇಡಿ ಹೆಡ್ಲ್ಯಾಂಪ್, ವಿಂಡ್ಸ್ಕ್ರೀನ್, ಎಲ್ಇಡಿ ಟೈಲ್-ಲೈಟ್ಗಳು, ನ್ಯೂಕ್ಲ್ ಕವರ್ಗಳು, ಡ್ಯುಯಲ್ ಎಕ್ಸಿಟ್ ಮಫ್ಲರ್, ಎಂಜಿನ್ ಅಡಿಯಲ್ಲಿ ಕೌಲಿಂಗ್ ಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಅನ್ನು ಹೊಂದಿದೆ.

ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ನೊಂದಿಗೆ ಬರುತ್ತದೆ ಅದು ಸುಜುಕಿ ರೈಡ್ ಕನೆಕ್ಟ್ ಅಪ್ಲಿಕೇಶನ್ ಬಳಸಿಕೊಂಡು ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಬೆಂಬಲಿಸುತ್ತದೆ. ಮೋಟಾರ್ಸೈಕಲ್ ಯುಎಸ್ಬಿ ಚಾರ್ಜರ್ ಅನ್ನು ಹೊಂದಿದೆ.

ಈ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕ್ 2,180 ಎಂಎಂ ಉದ್ದ, 880 ಅಗಲ ಮತ್ತು 1,355 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಬೈಕ್ 1,440 ಎಂಎಂ ವ್ಹೀಲ್ಬೇಸ್ ಅನ್ನು ಹೊಂದಿದೆ. ಈ ಬೈಕಿನ 835 ಸೀಟ್ ಎತ್ತರವನ್ನು ಹೊಂದಿದೆ. ಸಾಫ್ಟ್ ರೋಡರ್ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಈ ಹಿಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬಹು-ಉಪಯುಕ್ತ ಮೋಟಾರ್ಸೈಕಲ್ ಆಗಿದ್ದು ಅದು ಒರಟಾದ ಭೂಪ್ರದೇಶಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲದು. ಅಲ್ಲದೇ ಈ ಬೈಕ್ ಅನ್ನು ದೈನಂದಿನ ಪ್ರಯಾಣಕ್ಕೂ ಬಳಸಲು ಉತ್ತಮವಾಗಿದೆ ಮತ್ತು ಕೆಲವು ಮೈಲ್ಡ್ ಆಫ್-ರೋಡಿಂಗ್ ಮತ್ತು ದೂರದ ಹೆದ್ದಾರಿಯಲ್ಲಿ ಪ್ರಯಾಣಿಸಲು ಸೂಕ್ತ ಬೈಕ್ ಆಗಿದೆ,

ಈ ಹೊಸ ಬೈಕ್ ಬಿಡುಗಡೆಯ ವೇಳೆ, ಸುಜುಕಿ ಮೋಟಾರ್ಸೈಕಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಸತೋಶಿ ಉಚಿಡಾ ಅವರು ಮಾತನಾಡಿ, ವಿ-ಸ್ಟ್ರೋಮ್ ಎಸ್ಎಕ್ಸ್ ಬಿಡುಗಡೆಯೊಂದಿಗೆ 250 ಸಿಸಿ ಅಡ್ವೆಂಚರ್ ಸ್ಪೋರ್ಟ್ಸ್ ಭಾಗದಲ್ಲಿ ನಮ್ಮ ಪ್ರವೇಶವನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಬಹುಮುಖ ಸ್ಪೋರ್ಟ್ಸ್ ಅಡ್ವೆಂಚರ್ ಬೈಕ್ ಗಳನ್ನು ಇಷ್ಟಪಡುವ ಸವಾರರ ಅಗತ್ಯಗಳನ್ನು ಪೂರೈಸಲು ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಬೈಕ್ ಅನ್ನು ತಯಾರಿಸಲಾಗಿದೆ. ಈ ಬೈಕ್ ನಗರ ಮತ್ತು ಹೆದ್ದಾರಿ ಸವಾರಿ ಮತ್ತು ವಿವಿಧ ರೀತಿಯ ಸಾಹಸ ಭೂಪ್ರದೇಶಗಳನ್ನು ಸಾಗಲು ಸಂಪೂರ್ಣವಾಗಿ ಸೂಕ್ತವಾಗಿದೆ ಎಂದು ಹೇಳಿದರು.

ಈ ಹೊಸ ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್ 250 ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 250, ಬೆನೆಲ್ಲಿ ಟಿಆರ್ಕೆ 251, ಯಜ್ಡಿ ಅಡ್ವೆಂಚರ್ ಮತ್ತು ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.