52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಕೂಟರ್ ಅನಾವರಣ

ಜರ್ಮನಿಯಲ್ಲಿ ನಡೆಯುತ್ತಿರುವ INTERMOT ಕಲೋನ್ ಇಂಟರ್ನ್ಯಾಷನಲ್ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಮೇಳದಲ್ಲಿ ಸುಜುಕಿ ಕಂಪನಿಯು ತನ್ನ ಹೊಸ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಈ ಮೇಳದಲ್ಲಿ ಹೊಸ ಸುಜುಕಿ ಅಡ್ರೆಸ್ 125 ಮತ್ತು ಅವೆನಿಸ್ 125 ಅನ್ನು ಸಹ ಪ್ರದರ್ಶಿಸಲಾಗಿದೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಸುಜುಕಿ ಅಡ್ರೆಸ್ 125 ಸ್ಕೂಟರ್ ಅನ್ನು ಭಾರತದಲ್ಲಿ ಆಕ್ಸೆಸ್ 125 ಎಂದು ಮಾರಾಟ ಮಾಡಲಾಗುತ್ತದೆ ಮತ್ತು ಇದು ದೇಶದಲ್ಲಿ ಹೆಚ್ಚು ಮಾರಾಟವಾಗುವ 125ಸಿಸಿ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಭಾರತದಲ್ಲಿ ಪ್ರೀಮಿಯಂ ಸ್ಕೂಟರ್ ಸರಣಿಗಳ ಮಾರಾಟವು ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದು, ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಬಹುನೀರಿಕ್ಷಿತ ಅವೆನಿಸ್ ಸ್ಪೋರ್ಟಿ ಸ್ಕೂಟರ್ ಅನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಪ್ರೀಮಿಯಂ ಕಾಂಪ್ಯಾಕ್ಟ್ ಸ್ಕೂಟರ್ ಆಗಿ ಸ್ಥಾನ ಪಡೆದಿರುವ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಮ್ಯಾಕ್ಸಿ ಶೈಲಿಯ ಬಾಡಿಯ ವಿನ್ಯಾಸವನ್ನು ಹೊಂದಿದೆ. ಇದು ತೀಕ್ಷ್ಣವಾದ ಪ್ಯಾನೆಲಿಂಗ್ ಮತ್ತು ಉತ್ತಮವಾದ ವಿವರಗಳನ್ನು ಹೊಂದಿದೆ, ಇವೆಲ್ಲವೂ ಸ್ಪೋರ್ಟಿ ಪ್ರೊಫೈಲ್ ಅನ್ನು ಸಾಧಿಸಲು ಸಹಾಯ ಮಾಡುತ್ತದೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಈ ಹೊಸ ಸ್ಕೂಟರ್ ಎಲ್‌ಇಡಿ ಹೆಡ್‌ಲೈಟ್ ಮತ್ತು ಎಲ್‌ಇಡಿ ಪೊಸಿಷನ್ ಲೈಟ್‌ಗಳು, ಎಲ್‌ಇಡಿ ರಿಯರ್ ಕಾಂಬಿನೇಷನ್ ಲೈಟ್, ಬಾಡಿ ಮೌಂಟೆಡ್ ವಿಂಡ್‌ಸ್ಕ್ರೀನ್, ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು 21.5 ಲೀಟರ್‌ನಷ್ಟು ಸೀಟ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಇದರೊಂದಿಗೆ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ವಿಶಾಲವಾದ ಫ್ಲೋರ್‌ಬೋರ್ಡ್ ಪ್ರದೇಶ, ಅಲ್ಯೂಮಿನಿಯಂ ಪಿಲಿಯನ್ ಫುಟ್‌ರೆಸ್ಟ್, ಆರಾಮದಾಯಕ ಸೀಟ್ ಮತ್ತು ಸೊಗಸಾದ ಎಕ್ಸಾಸ್ಟ್, ಮಫ್ಲರ್ ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿವೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125ಇಕ್ಸ್ ಸ್ಖೂಟರ್ ಅನ್ನು ನಿಜವಾಗಿಯೂ ಅನನ್ಯವಾಗಿಸುವುದು ಅದರ ಸುಜುಕಿ ಇಕೋ ಪರ್ಫಾರ್ಮೆನ್ಸ್ ಆಲ್ಫಾ (SEP-?) ಎಂಜಿನ್ ಆಗಿದೆ. ಇದು ಬಹುಶಃ ಅಡ್ರೆಸ್ 125 ಮತ್ತು ಅವೆನಿಸ್ 125 ನೊಂದಿಗೆ ಬಳಕೆಯಲ್ಲಿರುವ SEP ಎಂಜಿನ್‌ನ ಮುಂದುವರಿದ ಆವೃತ್ತಿಯಾಗಿದೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಆಲ್ಫಾ ಎಂಜಿನ್ ಅನ್ನು ಪಡೆದ ಮೊದಲ ಸುಜುಕಿ ದ್ವಿಚಕ್ರ ವಾಹನವಾಗಿದೆ. ಇದು ಕಾರ್ಯಕ್ಷಮತೆ ಮತ್ತು ಒಟ್ಟಾರೆ ರೈಡ್ ಡೈನಾಮಿಕ್ಸ್ ಅನ್ನು ಸುಧಾರಿಸುವುದಲ್ಲದೆ, ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಇಂಧನ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಪರಿಸರಕ್ಕೆ ಸಹಾಯ ಮಾಡುತ್ತದೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125ಇಕ್ಸ್ SEP ಆಲ್ಫಾ ಪವರ್ ಫುಲ್ ಮಾದರಿಯಾಗಿದೆ. ಈ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125ಇಕ್ಸ್ 52.6 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. SEP ಆಲ್ಫಾ ಸುಜುಕಿಯ ಹೊಸ ಎಂಜಿನ್ ಆಟೋ ಸ್ಟಾಪ್-ಸ್ಟಾರ್ಟ್ (EASS) ಐಡ್ಲಿಂಗ್ ಸ್ಟಾಪ್ ಸಿಸ್ಟಮ್ ಮತ್ತು ಸೈಲೆಂಟ್ ಸ್ಟಾರ್ಟರ್ ಸಿಸ್ಟಮ್‌ನೊಂದಿಗೆ ಸಂಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತದೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಈ ಹೊಸ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಕೂಟರ್ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಸ್ವಿಂಗರ್ಮ್ ಮಾದರಿಯ ಹಿಂಭಾಗದ ಸಸ್ಪೆಕ್ಷನ್ ಅನ್ನು ಹೊಂದಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಸಂಯೋಜಿತ ಬ್ರೇಕ್ ಸಿಸ್ಟಮ್‌ನೊಂದಿಗೆ ಡಿಸ್ಕ್-ಡ್ರಮ್ ಸೆಟಪ್ ಅನ್ನು ಹೊಂದಿವೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಇನ್ನು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SMIPL) ತನ್ನ ಹೊಸ ಸುಜುಕಿ ಕಟಾನಾ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಈ ವರ್ಷದ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಬಹುನಿರೀಕ್ಷಿತ ಸುಜುಕಿ ಕಟಾನಾ ಅಂತಿಮವಾಗಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹೊಸ ಬೈಕ್ 999 ಸಿಸಿ ಇನ್‌ಲೈನ್ ನಾಲ್ಕು-ಸಿಲಿಂಡರ್ DOHC ಲಿಕ್ವಿಡ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 11,000 ಆರ್‌ಪಿಎಂನಲ್ಲಿ 152 ಬಿಹೆಚ್‍ಪಿ ಪವರ್ ಮತ್ತು 9,250 ಆರ್‌ಪಿಎಂನಲ್ಲಿ 106 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

52 ಕಿ.ಮೀ ಮೈಲೇಜ್ ನೀಡುವ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಖೂಟರ್ ಅನಾವರಣ

ಭಾರತಕ್ಕೆ ಸಂಬಂಧಿಸಿದಂತೆ, ಸುಜುಕಿಯು ಕಟಾನಾ ರೋಡ್‌ಸ್ಟರ್ ಅನ್ನು ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇವುಗಳು ಮೆಟಾಲಿಕ್ ಮಿಸ್ಟಿಕ್ ಸಿಲ್ವರ್ ಮತ್ತು ಮೆಟಾಲಿಕ್ ಸ್ಟೆಲ್ಲರ್ ಬ್ಲೂ ಆಗಿದೆ. ಈ ಹೊಸ ಸೆಮಿ-ಫೇರ್ಡ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ. ವಿನ್ಯಾಸದ ವಿಷಯದಲ್ಲಿ, ಹೊಸ ಸುಜುಕಿ ಕಟಾನಾ ಹೆಚ್ಚು ನಿಯೋ-ರೆಟ್ರೊ ವಿನ್ಯಾಸವನ್ನು ಹೊಂದಿದೆ. ಇನ್ನು ಹೊಸ ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125 ಇಕ್ಸ್ ಸ್ಕೂಟರ್ ಬಿಡುಗಡೆಯ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

Most Read Articles

Kannada
English summary
Suzuki unveiled new burgman street 125 ex scooter with new features details
Story first published: Thursday, October 6, 2022, 13:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X