120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದು, ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತಿದ್ದಂತೆ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸಲು ಮುಂದಾಗುತ್ತಿವೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳದ ಬಜಾಜ್ ಆಟೋ, ಟಿವಿಎಸ್ ಮೋಟಾರ್ ಸಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈಗಾಗಲೇ ಬಿಡುಗಡೆಗೊಳಿಸಿವೆ. ಬಜಾಜ್‌ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್‌ನಂತಹ ಸ್ಕೂಟರ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಇದರ ನಡುವೆ ಹಲವು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ಬ್ರ್ಯಾಂಡ್ ಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿವೆ. ಆಧುನಿಕ ವೈಶಿಷ್ಟ್ಯಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇದೇ ಪಟ್ಟಿಗೆ ಸೇರುವ ಸ್ವಿಚ್ ಮೋಟೋಕಾರ್ಪ್ ಎಂಬ ಸ್ಟಾರ್ಟ್‌ಅಪ್ ಕಂಪನಿ ಸಿಎಸ್‌ಆರ್ 762 ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಸ್ವಿಚ್ ಮೋಟೋಕಾರ್ಪ್ ಪ್ರೈ. ಲಿಮಿಟೆಡ್ ಸಿಎಸ್ಆರ್ 762 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಯುವ ಬೈಕಿಂಗ್ ಉತ್ಸಾಹಿಗಳಿಗಾಗಿ ಬಿಡುಗಡೆ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ರೂ 1.65 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಫೇಮ್-2 ಯೋಜನೆಯಡಿ, ಈ ಬೈಕ್ ಖರೀದಿಸುವ ಗ್ರಾಹಕರಿಗೆ 40,000 ರೂ.ಗಳ ಸಬ್ಸಿಡಿಯನ್ನು ಸಹ ನೀಡಲಾಗುತ್ತದೆ. ಈ ಬೈಕ್‌ನ ಉತ್ಪಾದನೆಯನ್ನು ಪ್ರಾರಂಭಿಸಲು ಕಂಪನಿಯು 100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಹಲವು ಮಾದರಿಗಳನ್ನು ಪರಿಚಯಿಸುವುದಾಗಿ ತಿಳಿಸಿದೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಗರಿಷ್ಠ ವೇಗ ಗಂಟೆಗೆ 120 ಕಿ.ಮೀ

ಸ್ವಿಚ್ CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಗಂಟೆಗೆ 120 km/h ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಪೂರ್ಣ ಚಾರ್ಜ್ ಮಾಡಿದರೆ 120 ಕಿ.ಮೀ.ವರೆಗೆ ಓಡಿಸಬಹುದು. ಈ ಬೈಕ್‌ನಲ್ಲಿ ಬಹು ಡ್ರೈವ್ ಮೋಡ್‌ಗಳನ್ನು ನೀಡಲಾಗಿದೆ, ಅದರ ಪ್ರಕಾರ ಶ್ರೇಣಿಯನ್ನು ಬದಲಾಯಿಸಬಹುದು.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಬೈಕಿನ ಕರ್ಬ್ ತೂಕವು 155 ಕೆಜಿ ಆಗಿದ್ದು, ಇದು 200 ಕೆ.ಜಿ ಭಾರವನ್ನು ಹೊರುತ್ತದೆ. ಇದು 1,430 ಎಂಎಂ ವ್ಹೀಲ್ ಬೇಸ್ ಮತ್ತು 780 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಪಾರ್ಕಿಂಗ್ ಮೋಡ್, ರಿವರ್ಸ್ ಮೋಡ್ ಮತ್ತು ಸ್ಪೋರ್ಟ್ ಮೋಡ್ ಅನ್ನು ಒಳಗೊಂಡಿರುವ 6 ಡ್ರೈವ್ ಮೋಡ್‌ಗಳನ್ನು ಬೈಕ್ ಪಡೆದುಕೊಂಡಿದೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಈ ಬೈಕ್ ಅನ್ನು ಬಿಡುಗಡೆ ಮಾಡುವುದರ ಜೊತೆಗೆ, ಕಂಪನಿಯು ಬ್ಯಾಟರಿ ವಿನಿಮಯ ಕೇಂದ್ರವನ್ನು ತೆರೆಯುವ ಬಗ್ಗೆಯೂ ಯೋಚಿಸುತ್ತಿದೆ. ಭಾರತ ಸರ್ಕಾರದ ಬ್ಯಾಟರಿ ವಿನಿಮಯ ನೀತಿಗಳ ಅಡಿಯಲ್ಲಿ ತನ್ನ ಸ್ವಾಪಿಂಗ್ ಸ್ಟೇಷನ್‌ಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಅನೇಕ ಆಧುನಿಕ ವೈಶಿಷ್ಟ್ಯಗಳು ಲಭ್ಯ

ಸ್ವಿಚ್ ಸಿಎಸ್ಆರ್ 762 ಎಲೆಕ್ಟ್ರಿಕ್ ಬೈಕ್ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಆಂಟಿಥೆಫ್ಟ್ ಅಲಾರ್ಮ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಬ್ಲೂಟೂತ್ ಕನೆಕ್ಟಿವಿಟಿ, ನೇವಿಗೇಷನ್, ಟಿಎಫ್‌ಟಿ ಡಿಜಿಟಲ್ ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯಗಳನ್ನು ಈ ಬೈಕ್‌ನಲ್ಲಿ ನೀಡಲಾಗಿದೆ. ಬೈಕ್‌ನ ಎಲ್ಲಾ ಲೈಟಿಂಗ್ ಎಲ್‌ಇಡಿಯಲ್ಲಿದೆ. ಸುರಕ್ಷತೆಗಾಗಿ, ಇದು ಡ್ಯುಯಲ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿದೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಶಕ್ತಿಯುತ ಮೋಟಾರ್ ಅಳವಡಿಕೆ

ಸ್ವಿಚ್ ಮೋಟೋಕಾರ್ಪ್ ಬೈಕ್ 3kW ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಇದು 1300 rpm ನಲ್ಲಿ 10kW ಶಕ್ತಿಯನ್ನು ಉತ್ಪಾದಿಸುತ್ತದೆ. ಇದು ಕೇಂದ್ರೀಯ ಡ್ರೈವ್ ಬೆಂಬಲ ವ್ಯವಸ್ಥೆಯೊಂದಿಗೆ ಬರುವ PMSM ಮೋಟಾರ್‌ನೊಂದಿಗೆ ಅಳವಡಿಸಲಾಗಿದೆ. ಬೈಕ್ 3.7kWh ಲಿಥಿಯಂ ಐಯಾನ್ ಸ್ವಾಪ್ ಬ್ಯಾಟರಿಯೊಂದಿಗೆ ಬರುತ್ತದೆ, ಇದನ್ನು ರಿಮೋಟ್ ಆಗಿ ಚಾರ್ಜ್ ಮಾಡಬಹುದು.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಬೈಕ್ ಅನ್ನು ಹೊಸ ಮತ್ತು ದೃಢವಾದ ಚಾಸಿಸ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ, ಇದು ಉತ್ತಮ ನಿಯಂತ್ರಣವನ್ನು ನೀಡುತ್ತದೆ. ವಿನ್ಯಾಸವನ್ನು ಸ್ಪೋರ್ಟಿಯಗಿ ಮಾಡಿರುವುದಾಗಿ ಕಂಪನಿ ಹೇಳಿಕೊಂಡಿದೆ. ಇದೊಂದು ಆಧುನಿಕ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಪೆಟ್ರೋಲ್ ಬೈಕ್‌ಗಳನ್ನು ಬಿಟ್ಟು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಈ ಬೈಕ್‌ಗಳ ನಡುವೆ ಪೈಪೋಟಿ

ಸ್ವಿಚ್ ಸಿಎಸ್ಆರ್ 762 ಎಲೆಕ್ಟ್ರಿಕ್ ಬೈಕ್ ಟಾರ್ಕ್ ಕ್ರಾಟೋಸ್ ಮತ್ತು ಪ್ಯೂರ್ ಎಟ್ರಿಸ್ಟ್ 350 ರೊಂದಿಗೆ ಸ್ಪರ್ಧಿಸಬಹುದು. ಈ ಎರಡೂ ಬೈಕ್‌ಗಳು ಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 120 ಕಿ.ಮೀ ಮತ್ತು 140 ಕಿ.ಮೀ ವ್ಯಾಪ್ತಿಯನ್ನು ನೀಡುತ್ತವೆ. ಇದಲ್ಲದೆ, ಅವುಗಳ ಬ್ಯಾಟರಿ, ಮೋಟಾರ್ ಶಕ್ತಿ ಮತ್ತು ವೈಶಿಷ್ಟ್ಯಗಳು ಸಹ ಬಹುತೇಕ ಒಂದೇ ಆಗಿರುತ್ತವೆ.

120 ಕಿ.ಮೀ ಮೈಲೇಜ್ ನೀಡುವ Svitch CSR 762 ಹೈಸ್ಪೀಡ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಸ್ವಿಚ್ ಮೋಟೋಕಾರ್ಪ್ ಭಾರತದಲ್ಲಿ ತನ್ನ ಡೀಲರ್‌ಶಿಪ್ ನೆಟ್‌ವರ್ಕ್ ಅನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ಪ್ರಸ್ತುತ, ಕಂಪನಿಯು ದೇಶಾದ್ಯಂತ 15 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ನಿರ್ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಕೆಲವು ಹೊಸ ನಗರಗಳಲ್ಲಿ ಹೆಚ್ಚಿನ ಡೀಲರ್‌ಶಿಪ್‌ಗಳನ್ನು ತೆರೆಯಬಹುದು.

Most Read Articles

Kannada
English summary
Switch csr 762 electric bike launched price features details
Story first published: Wednesday, June 1, 2022, 15:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X