ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಬಜಾಜ್ ಆಟೋ ಕಳೆದ ಕೆಲವು ತಿಂಗಳುಗಳಿಂದ ತನ್ನ ಪಲ್ಸರ್ ಬೈಕ್‌ಗಳನ್ನು ನವೀಕರಿಸುವುದಾಗಿ ಹೇಳುತ್ತಲೇ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ಪುಣೆ ಬಳಿ ಪರೀಕ್ಷಾರ್ಥ ಸಂಚಾರ ನಡೆಸಿದಾಗ ಹೊಸ ತಲೆಮಾರಿನ ಪಲ್ಸರ್ 125 ಬೈಕ್ ಅನ್ನು ಗುರುತಿಸಲಾಗಿತ್ತು.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಈ ಬೈಕ್ ವಿನ್ಯಾಸದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದ್ದು, ಬಹುತೇಕ ಪಲ್ಸರ್‌ ಸರಣಿಯ ಅದೇ ಡಿಸೈನ್‌ ಅನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಪರ್ಫಾಮೆನ್ಸ್‌, ಪವರ್, ಮತ್ತಿತರರ ಬದಲಾವಣೆಗಳು ಆಕರ್ಷಣೀಯವಾಗಿದ್ದು, ಯುವ ಪೀಳಿಗೆಯನ್ನು ತನ್ನತ್ತ ಸೆಳೆಯುವ ತವಕದಲ್ಲಿದೆ. ಕಂಪನಿಯು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸದಿದ್ದರೂ ಹೊಸ ಪಲ್ಸರ್‌ ಕುರಿತ ಕೆಲವೊಂದು ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ವಿನ್ಯಾಸ ಮತ್ತು ಶೈಲಿ

ಹೊಸ ಪಲ್ಸರ್ 125ನ ಟೆಸ್ಟ್ ಡ್ರೈವ್ ಮಾಡಬೇಕಾದರೆ ತೆಗೆದ ಚಿತ್ರಗಳಲ್ಲಿ ಬೈಕ್ ಸಂಪೂರ್ಣವಾಗಿ ಮರೆಮಾಡಲಾಗಿದೆ. ಆದಾರೂ ಹೊಸ ಪಲ್ಸರ್ 125 ಬೈಕ್‌ನ ಹೆಡ್‌ಲ್ಯಾಂಪ್ ವ್ಯವಸ್ಥೆ, ಸಣ್ಣ ವೈಸರ್, ಸ್ಪೋರ್ಟಿ ವಿಸ್ತರಣೆಗಳೊಂದಿಗೆ ಅಗಲವಾದ ಪೆಟ್ರೋಲ್ ಟ್ಯಾಂಕ್, ನಯವಾದ ಸ್ಲಂ ಪ್ರೊಟೆಕ್ಟರ್, ಸಿಂಗಲ್-ಪೀಸ್ ಸೀಟ್, ಸ್ಲೀಕ್ ರಿಯರ್ ಎಂಡ್ ಮತ್ತು ಪ್ಯಾಸೆಂಜರ್ ವೈರ್‌ನಂತಹ ವೈಶಿಷ್ಟ್ಯಗಳನ್ನು ಗುರುತಿಸಲಾಯಿತು.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಚಾಸಿಸ್

ಹೊಸ ಪಲ್ಸರ್ 125 ಬೈಕ್ ಸಂಪೂರ್ಣವಾಗಿ ಹೊಸ ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿದೆ. ಮುಂಬರುವ ಮತ್ತು ಹೊಸ ಪೀಳಿಗೆಯ ಪಲ್ಸರ್ ಮಾದರಿಗಳು ಒಂದೇ ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿವೆ. ಅಲ್ಲದೇ ಬಲಾಡ್ಯ ಚಾಸಿಸ್ ಕೂಡ ಇದರಲ್ಲಿ ನೋಡಬಹುದಾಗಿದ್ದು, ಹಿಂದೆಂದಿಗಿಂತಲೂ ಭಿನ್ನವಾಗಿದೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಈ ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ಬೈಕ್‌ನಲ್ಲಿ ಯಾವೆಲ್ಲಾ ಯಂತ್ರದ ಬಿಡಿ ಭಾಗಗಳನ್ನು ಅಳವಡಿಸಿದ್ದಾರೆ ಎಂಬುದರ ಕುರಿತು ಸದ್ಯಕ್ಕೆ ಮಾಹಿತಿ ಹೊರಬಿದ್ದಿಲ್ಲ. ಆದರೆ ನಮಗೆ ತಿಳಿದಿರುವಂತೆ ಮುಂಭಾಗವು ಸಾಮಾನ್ಯವಾಗಿದೆ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದಲ್ಲಿ ಹಳೆಯ ಮಾದರಿಗಳಂತೆಯೇ ಮೊನೊಶಾಕ್ ಅನ್ನು ಮುಂದುವರಿಸಲಾಗಿದೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ತಾಂತ್ರಿಕ ವೈಶಿಷ್ಟ್ಯಗಳು

ಹೊಸ ತಲೆಮಾರಿನ ಪಲ್ಸರ್ 125 ಬೈಕ್ ಅನ್ನು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು LED ಟೈಲ್‌ಲ್ಯಾಂಪ್ ಜೊತೆಗೆ LED DRL ಗಳೊಂದಿಗೆ ನೀಡಲಾಗುವುದು. ಹ್ಯಾಂಡಲ್‌ಬಾರ್ ಸಿಂಗಲ್ ಪೀಸ್ ಆಗಿರುವ ನಿರೀಕ್ಷೆಯಿದೆ. ಆದರೆ ಕ್ಲಿಪ್-ಆನ್ ವೈಶಿಷ್ಟ್ಯದೊಂದಿಗೆ ಇರುವುದಿಲ್ಲ ಎನ್ನಲಾಗಿದ್ದು, ವಾಹನ ಅನಾವರಣದಲ್ಲಿ ಮತ್ತಷ್ಟು ಕುತೂಹಲಕಾರಿ ಅಂಶಗಳು ಹೊರಬರಲಿವೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಪಲ್ಸರ್ 250 ಡ್ಯುಯಲ್ ಬೈಕುಗಳಲ್ಲಿರುವಂತೆ ಹೊಸ ಪಲ್ಸರ್ 125 ನಲ್ಲಿ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಬಹುದು. ಬಜಾಜ್ ಆಟೋ ಕೂಡ ಬೈಕ್‌ನ ಸ್ವಿಚ್ ಗೇರ್ ಅನ್ನು ಹೊಸದರೊಂದಿಗೆ ಬದಲಾಯಿಸಲು ಪ್ರಯತ್ನಿಸುತ್ತಿದೆ. ಇದು ಖಂಡಿತವಾಗಿಯೂ ಪ್ರಸ್ತುತ ಮಾದರಿಗಿಂತ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಎಂಜಿನ್ ವ್ಯವಸ್ಥೆ

ಪುಣೆಯಲ್ಲಿ ಗುರುತಿಸಲಾದ ಪಲ್ಸರ್ 125ನ ಪರೀಕ್ಷಾ ಮಾದರಿಯು ಏರ್-ಕೂಲ್ಡ್ ಎಂಜಿನ್‌ನೊಂದಿಗೆ ಅಳವಡಿಸಲ್ಪಟ್ಟಿರುವುದು ಕಂಡುಬಂದಿದೆ. ಪಲ್ಸರ್ 125 ಮತ್ತು NS125 ಎರಡನ್ನೂ ಪ್ರಸ್ತುತ 125cc ಏರ್-ಕೂಲ್ಡ್ ಎಂಜಿನ್‌ನೊಂದಿಗೆ ಅಳವಡಿಸಲಾಗಿದೆ. ಈ ಎಂಜಿನ್ ಪಲ್ಸರ್ 125 ಬೈಕ್‌ನಲ್ಲಿ ಗರಿಷ್ಠ 11.8 PS ಮತ್ತು 10.8 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಪಲ್ಸರ್ ಎನ್ಎಸ್125 ಬೈಕ್ 11.99 ಪಿಎಸ್ ಮತ್ತು 11 ಎನ್ಎಂ ಟಾರ್ಕ್ ನೀಡುತ್ತದೆ. ಪ್ರಸರಣಕ್ಕಾಗಿ ಎರಡನ್ನೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹೊಸ ತಲೆಮಾರಿನ ಪಲ್ಸರ್ 125 ಬೈಕ್ ಅನ್ನು ಅದೇ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುವುದು ಎಂದು ಕಂಪನಿ ಈಗಾಗಲೇ ಹೇಳಿಕೊಂಡಿದೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಅನಾವರಣ ಯಾವಾಗ?

ಹೊಸ ತಲೆಮಾರಿನ ಬಜಾಜ್ ಪಲ್ಸರ್ 125 ಬೈಕ್ ಪ್ರಸ್ತುತ 2022 ರ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಇತ್ತೀಚಿನ ಪರೀಕ್ಷಾ ಮಾದರಿಯು ಬಹುತೇಕ ಎಲ್ಲಾ ವಿನ್ಯಾಸ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಇನ್ನು ಮೈಲೇಜ್ ಮತ್ತು ಪರ್ಫಾಮೆನ್ಸ್ ಕುರಿತ ಟೆಸ್ಟಿಂಗ್ ನಡೆಯುತ್ತಿರುವುದಾಗಿ ತಿಳಿದುಬಂದಿದೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಇತ್ತೀಚೆಗೆ, ಬಜಾಜ್ ಆಟೋ ಭಾರತದಲ್ಲಿ 'ಪಲ್ಸರ್ ಎಲಾನ್' ಮತ್ತು 'ಪಲ್ಸರ್ ಎಲಿಗಾಂಝ್' ಎಂಬ ಎರಡು ಹೊಸ ಪಲ್ಸರ್ ಹೆಸರುಗಳನ್ನು ಟ್ರೇಡ್ಮಾರ್ಕ್ ಮಾಡಿದೆ. ಕಂಪನಿಯು ಮಾರ್ಚ್ 2022ರಲ್ಲಿ ಈ ಹೆಸರುಗಳ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿತ್ತು. ಬಜಾಜ್ ಆಟೋದ ಎರಡು ಹೊಸ ಮೋಟಾರ್‌ಸೈಕಲ್‌ಗಳು ಪ್ರಸ್ತುತ ಪಲ್ಸರ್ ಮಾದರಿ ಸರಣಿಯ ಭಾಗವಾಗುವ ಸಾಧ್ಯತೆಯಿದೆ. ಇವುಗಳನ್ನು ಹೊಸ ತಲೆಮಾರಿನ ಪಲ್ಸರ್ ಬೈಕ್‌ಗಳಿಗೆ ಬಳಸಬಹುದು ಎಂದೂ ಸಹ ಹೇಳಲಾಗುತ್ತಿದೆ.

ಹೊಸ ಪಲ್ಸರ್ 125 ಬೈಕ್‌ನಲ್ಲಿ ಯಾವೆಲ್ಲಾ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು?: ಇಲ್ಲಿದೆ ಮಾಹಿತಿ...!

ಇಲ್ಲದಿದ್ದರೆ, ಇವು ಕ್ಲಾಸಿಕ್ ಪಲ್ಸರ್ ಮಾದರಿಗಳು ಆಗಬಹುದಾಗಿದೆ. ಬಜಾಜ್ ಆಟೋ ಪ್ರಸ್ತುತ ರೆಟ್ರೋ ಮೋಟಾರ್‌ ಸೈಕಲ್‌ಗಳನ್ನು ಹೊಂದಿಲ್ಲ. ಭಾರತದಲ್ಲಿ ರೆಟ್ರೋ ಮೋಟಾರ್‌ ಸೈಕಲ್‌ಗಳ ಮಾರುಕಟ್ಟೆಯು ಇತ್ತೀಚಿನ ದಿನಗಳಲ್ಲಿ ಸ್ಥಿರವಾಗಿ ಬೆಳೆಯುತ್ತಿದೆ. ಆದ್ದರಿಂದ ಬಜಾಜ್‌ನ ಮುಂಬರುವ ಪಲ್ಸರ್ ಎಲಾನ್ ಮತ್ತು ಪಲ್ಸರ್ ಎಲೆಗ್ಯಾಂಝ್ ಮಾದರಿಗಳು ರೆಟ್ರೋ ನೋಟವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

Most Read Articles

Kannada
English summary
Things we expect from next gen bajaj pulsar
Story first published: Friday, May 6, 2022, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X