ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕ್ರೇಜ್ ಹೆಚ್ಚಾಗಿದೆ. Ola ಮತ್ತು Okinawa ನಂತಹ ಅನೇಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟವನ್ನು ಹೆಚ್ಚಿಸಿವೆ. ಇದು ನೇರವಾಗಿ ಪೆಟ್ರೋಲ್ ಸ್ಕೂಟರ್‌ಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಇಂಧನ ಚಾಲಿತ ಸ್ಕೂಟರ್‌ಗಳು ಹೆಚ್ಚು ದುಬಾರಿ ಮತ್ತು ನಿರ್ವವಣಾ ವೆಚ್ಚ ಕೂಡ ಹೆಚ್ಚು. ಇದು ಹೀಗಿದ್ದರೆ ಮತ್ತೊಂದೆಡೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೇ ಕಾರಣಕ್ಕೆ ಅನೇಕ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಇತ್ತೀಚೆಗೆ ಇವಿ ವಾಹನಗಳ ಬೆಂಕಿ ಅವಘಡಗಳಿಂದಾಗಿ ಇವಿ ಮಾರುಕಾಟ್ಟೆ ಒಂದೇ ಬಾರಿ ಕುಸಿದಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಕಳೆದ ಏಪ್ರಿಲ್ ತಿಂಗಳ ಸ್ಕೂಟರ್ ಮಾರಾಟವೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಕಳೆದ ಏಪ್ರಿಲ್ ಒಂದರಲ್ಲೇ ಭಾರತದಲ್ಲಿ ಒಟ್ಟು 3,43,345 ಸ್ಕೂಟರ್ ಗಳು ಮಾರಾಟವಾಗಿವೆ. ಏಪ್ರಿಲ್ 2021 ರಲ್ಲಿ ಇದರ ಮಾರಾಟ 2,69,477 ಆಗಿತ್ತು. ಅಂದರೆ ಒಟ್ಟಾರೆ ಈ ವಿಭಾಗದಲ್ಲಿ ಒಂದೇ ವರ್ಷದಲ್ಲಿ ಶೇ.25.52ರಷ್ಟು ಬೆಳವಣಿಗೆ ಕಂಡಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಕಳೆದ ಏಪ್ರಿಲ್ ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್ ಗಳ ಪಟ್ಟಿಯಲ್ಲಿ ಹೋಂಡಾದ ಆಕ್ಟಿವಾ ಸ್ಕೂಟರ್ ಅಗ್ರಸ್ಥಾನದಲ್ಲಿದೆ. ಇದು ಒಟ್ಟು 1,63,357 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಕಂಪನಿಯು ಏಪ್ರಿಲ್ 2021 ರಲ್ಲಿ 1,09,627 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಇದನ್ನು ಪ್ರಸಕ್ತ ವರ್ಷಕ್ಕೆ ಹೋಲಿಸಿಕೊಂಡರೆ ಶೇಕಡಾ 48.94 ರಷ್ಟು ಹೆಚ್ಚಾಗಿದೆ. ಪ್ರಸ್ತುತ ಈ ಸ್ಕೂಟರ್ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇಕಡಾ 47.17 ಪಾಲನ್ನು ಹೊಂದಿದೆ. ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಯ ಸ್ಕೂಟರ್‌ಗಳು 1 ಲಕ್ಷಕ್ಕಿಂತ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿಲ್ಲ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಟಿವಿಎಸ್ ಜೂಪಿಟರ್ ಸ್ಕೂಟರ್ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ಕಳೆದ ಏಪ್ರಿಲ್ ನಿಂದ ಇದುವರೆಗೆ 60,957 ಸ್ಕೂಟರ್ ಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷ ಏಪ್ರಿಲ್‌ನಲ್ಲಿ ಕೇವಲ 25,570 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಟಿವಿಎಸ್ ಜೂಪಿಟರ್ ಸ್ಕೂಟರ್ ಶೇ 138.9 ರಷ್ಟು ಬೆಳವಣಿಗೆ ಕಂಡಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಕಂಪನಿಯು iCube ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದರೆ ಕನಿಷ್ಠ 75 ಕಿ.ಮೀ ಮತ್ತು ಗರಿಷ್ಠ 140 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ ಶೇಕಡಾ 17.6 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಈ ಪಟ್ಟಿಯಲ್ಲಿ ಮುಂದಿನದು ಸುಜುಕಿ ಆಕ್ಸಿಸ್ ಸ್ಕೂಟರ್. ಇದು ಒಟ್ಟು ಕಳೆದ ಏಪ್ರಿಲ್‌ನಲ್ಲಿ 32,932 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 53,285 ಯೂನಿಟ್‌ಗಳನ್ನು ಮಾರಾಟ ಮಾಡಿದ್ದು, ಮಾರಾಟದಲ್ಲಿ ಶೇ.38.20ರಷ್ಟು ಕುಸಿತ ಕಂಡಿದೆ. ಇದು ಕಂಪನಿಗೆ ದೊಡ್ಡ ನ್ಯೂನತೆಯಾಗಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

TVS ಎನ್‌ಟಾರ್ಕ್ ಸ್ಕೂಟರ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಒಂದೇ ತಿಂಗಳಲ್ಲಿ ಒಟ್ಟು 25,267 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಏಪ್ರಿಲ್‌ನಲ್ಲಿ 19,959 ಮಾರಾಟವಾಗಿತ್ತು. ಪ್ರಸ್ತುತ ಅದರ ಮಾರಾಟದಲ್ಲಿ ಶೇ.26.59ರಷ್ಟು ಏರಿಕೆಯಾಗಿದೆ. ಈ ಸ್ಕೂಟರ್ ಶೇ.7.30ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಮುಂದಿನದು ಹೋಂಡಾ ಡಿಯೋ ಸ್ಕೂಟರ್. ಇದು ಒಟ್ಟು 16,033 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 17,269 ಯೂನಿಟ್‌ಗಳನ್ನು ಮಾಡಿತ್ತು. ಈ ಮೂಲಕ ಮಾರಾಟವು ವರ್ಷದಿಂದ ವರ್ಷಕ್ಕೆ 7.16 ಶೇಕಡಾ ಕಡಿಮೆಯಾಗಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಮುಂದೆ ಹೀರೋ ಬ್ಲಷರ್ ಸ್ಕೂಟರ್ ಕೂಡ ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ಏಪ್ರಿಲ್‌ನಲ್ಲಿ 13,303 ಸ್ಕೂಟರ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಇದು 18,298 ಆಗಿತ್ತು. ಒಂದೇ ವರ್ಷದಲ್ಲಿ ಶೇ.32.76ರಷ್ಟು ಮಾರಾಟ ಕುಸಿತವಾಗಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಪಟ್ಟಿಯಲ್ಲಿ ಮುಂದಿನದು ಸುಜುಕಿಯ ಅವಿನಿಸ್ ಸ್ಕೂಟರ್. ಇದು ಈ ವರ್ಷವಷ್ಟೇ ಪ್ರಾರಂಭವಾಯಿತು. ಸದ್ಯ ಒಂದೇ ತಿಂಗಳಲ್ಲಿ 11,078 ವಾಹನಗಳನ್ನು ಮಾರಾಟ ಮಾಡಿದೆ. ಮುಂದಿನ ಸಾಲಿನಲ್ಲಿ ಸುಜುಕಿ ಬರ್ಗ್‌ಮನ್ ಸ್ಕೂಟರ್ ಇದೆ. ಇದು ಒಟ್ಟು 9,088 ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.11.45ರಷ್ಟು ಹೆಚ್ಚಳವಾಗಿದೆ

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಹೀರೋ ಡೆಸ್ಟಿನಿ 125 ಸ್ಕೂಟರ್, ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ಏಪ್ರಿಲ್‌ನಲ್ಲಿ ಒಟ್ಟು 8,981 ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ 9,121 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಶೇ.1.53ರಷ್ಟು ಮಾರಾಟ ಕುಸಿದಿದೆ.

ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್‌ಗಳ ಪಟ್ಟಿ

ಪಟ್ಟಿಯಲ್ಲಿ ಕೊನೆಯ ಸ್ಥಾನ ಟಿವಿಎಸ್ 'ಪೆಪ್ ಪ್ಲಸ್ ಸ್ಕೂಟರ್. ಒಟ್ಟು 6329 ಸ್ಕೂಟರ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 8143 ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಶೇ 22.28ರಷ್ಟು ಮಾರಾಟ ಇಳಿಕೆಯಾಗಿದೆ.

Most Read Articles

Kannada
English summary
Top 10 scooter sales in april month know full details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X