Just In
- 1 hr ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 16 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 17 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 18 hrs ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
Don't Miss!
- News
ಪಾಟ್ನಾ: ಡ್ರಗ್ ಇನ್ಸ್ಪೆಕ್ಟರ್ ಮನೆ ಮೇಲೆ ದಾಳಿ: ನೋಟು ಎಣಿಸಲು ಯಂತ್ರ ಆರ್ಡರ್
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Sports
Ind vs Eng: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊರೊನಾ ವೈರಸ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್ಗಳ ಪಟ್ಟಿ
ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಕ್ರೇಜ್ ಹೆಚ್ಚಾಗಿದೆ. Ola ಮತ್ತು Okinawa ನಂತಹ ಅನೇಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ಗಳ ಮಾರಾಟವನ್ನು ಹೆಚ್ಚಿಸಿವೆ. ಇದು ನೇರವಾಗಿ ಪೆಟ್ರೋಲ್ ಸ್ಕೂಟರ್ಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಹೋಲಿಸಿದರೆ ಇಂಧನ ಚಾಲಿತ ಸ್ಕೂಟರ್ಗಳು ಹೆಚ್ಚು ದುಬಾರಿ ಮತ್ತು ನಿರ್ವವಣಾ ವೆಚ್ಚ ಕೂಡ ಹೆಚ್ಚು. ಇದು ಹೀಗಿದ್ದರೆ ಮತ್ತೊಂದೆಡೆ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಇದೇ ಕಾರಣಕ್ಕೆ ಅನೇಕ ಜನರು ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಇತ್ತೀಚೆಗೆ ಇವಿ ವಾಹನಗಳ ಬೆಂಕಿ ಅವಘಡಗಳಿಂದಾಗಿ ಇವಿ ಮಾರುಕಾಟ್ಟೆ ಒಂದೇ ಬಾರಿ ಕುಸಿದಿದೆ.

ಕಳೆದ ಏಪ್ರಿಲ್ ತಿಂಗಳ ಸ್ಕೂಟರ್ ಮಾರಾಟವೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಕಳೆದ ಏಪ್ರಿಲ್ ಒಂದರಲ್ಲೇ ಭಾರತದಲ್ಲಿ ಒಟ್ಟು 3,43,345 ಸ್ಕೂಟರ್ ಗಳು ಮಾರಾಟವಾಗಿವೆ. ಏಪ್ರಿಲ್ 2021 ರಲ್ಲಿ ಇದರ ಮಾರಾಟ 2,69,477 ಆಗಿತ್ತು. ಅಂದರೆ ಒಟ್ಟಾರೆ ಈ ವಿಭಾಗದಲ್ಲಿ ಒಂದೇ ವರ್ಷದಲ್ಲಿ ಶೇ.25.52ರಷ್ಟು ಬೆಳವಣಿಗೆ ಕಂಡಿದೆ.

ಕಳೆದ ಏಪ್ರಿಲ್ ನಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್ ಗಳ ಪಟ್ಟಿಯಲ್ಲಿ ಹೋಂಡಾದ ಆಕ್ಟಿವಾ ಸ್ಕೂಟರ್ ಅಗ್ರಸ್ಥಾನದಲ್ಲಿದೆ. ಇದು ಒಟ್ಟು 1,63,357 ಸ್ಕೂಟರ್ಗಳನ್ನು ಮಾರಾಟ ಮಾಡಿದೆ. ಕಂಪನಿಯು ಏಪ್ರಿಲ್ 2021 ರಲ್ಲಿ 1,09,627 ಸ್ಕೂಟರ್ಗಳನ್ನು ಮಾರಾಟ ಮಾಡಿದೆ.

ಇದನ್ನು ಪ್ರಸಕ್ತ ವರ್ಷಕ್ಕೆ ಹೋಲಿಸಿಕೊಂಡರೆ ಶೇಕಡಾ 48.94 ರಷ್ಟು ಹೆಚ್ಚಾಗಿದೆ. ಪ್ರಸ್ತುತ ಈ ಸ್ಕೂಟರ್ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇಕಡಾ 47.17 ಪಾಲನ್ನು ಹೊಂದಿದೆ. ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಯ ಸ್ಕೂಟರ್ಗಳು 1 ಲಕ್ಷಕ್ಕಿಂತ ಹೆಚ್ಚು ಯುನಿಟ್ಗಳನ್ನು ಮಾರಾಟ ಮಾಡಿಲ್ಲ.

ಟಿವಿಎಸ್ ಜೂಪಿಟರ್ ಸ್ಕೂಟರ್ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ಕಳೆದ ಏಪ್ರಿಲ್ ನಿಂದ ಇದುವರೆಗೆ 60,957 ಸ್ಕೂಟರ್ ಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷ ಏಪ್ರಿಲ್ನಲ್ಲಿ ಕೇವಲ 25,570 ಸ್ಕೂಟರ್ಗಳನ್ನು ಮಾರಾಟ ಮಾಡಿದೆ. ಈ ಮೂಲಕ ಟಿವಿಎಸ್ ಜೂಪಿಟರ್ ಸ್ಕೂಟರ್ ಶೇ 138.9 ರಷ್ಟು ಬೆಳವಣಿಗೆ ಕಂಡಿದೆ.

ಕಂಪನಿಯು iCube ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಈ ಸ್ಕೂಟರ್ ಸಂಪೂರ್ಣ ಚಾರ್ಜ್ ಮಾಡಿದರೆ ಕನಿಷ್ಠ 75 ಕಿ.ಮೀ ಮತ್ತು ಗರಿಷ್ಠ 140 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರ್ ಶೇಕಡಾ 17.6 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಈ ಪಟ್ಟಿಯಲ್ಲಿ ಮುಂದಿನದು ಸುಜುಕಿ ಆಕ್ಸಿಸ್ ಸ್ಕೂಟರ್. ಇದು ಒಟ್ಟು ಕಳೆದ ಏಪ್ರಿಲ್ನಲ್ಲಿ 32,932 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ 53,285 ಯೂನಿಟ್ಗಳನ್ನು ಮಾರಾಟ ಮಾಡಿದ್ದು, ಮಾರಾಟದಲ್ಲಿ ಶೇ.38.20ರಷ್ಟು ಕುಸಿತ ಕಂಡಿದೆ. ಇದು ಕಂಪನಿಗೆ ದೊಡ್ಡ ನ್ಯೂನತೆಯಾಗಿದೆ.

TVS ಎನ್ಟಾರ್ಕ್ ಸ್ಕೂಟರ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಒಂದೇ ತಿಂಗಳಲ್ಲಿ ಒಟ್ಟು 25,267 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಏಪ್ರಿಲ್ನಲ್ಲಿ 19,959 ಮಾರಾಟವಾಗಿತ್ತು. ಪ್ರಸ್ತುತ ಅದರ ಮಾರಾಟದಲ್ಲಿ ಶೇ.26.59ರಷ್ಟು ಏರಿಕೆಯಾಗಿದೆ. ಈ ಸ್ಕೂಟರ್ ಶೇ.7.30ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಮುಂದಿನದು ಹೋಂಡಾ ಡಿಯೋ ಸ್ಕೂಟರ್. ಇದು ಒಟ್ಟು 16,033 ಸ್ಕೂಟರ್ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ 17,269 ಯೂನಿಟ್ಗಳನ್ನು ಮಾಡಿತ್ತು. ಈ ಮೂಲಕ ಮಾರಾಟವು ವರ್ಷದಿಂದ ವರ್ಷಕ್ಕೆ 7.16 ಶೇಕಡಾ ಕಡಿಮೆಯಾಗಿದೆ.

ಮುಂದೆ ಹೀರೋ ಬ್ಲಷರ್ ಸ್ಕೂಟರ್ ಕೂಡ ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ಏಪ್ರಿಲ್ನಲ್ಲಿ 13,303 ಸ್ಕೂಟರ್ಗಳು ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್ನಲ್ಲಿ ಇದು 18,298 ಆಗಿತ್ತು. ಒಂದೇ ವರ್ಷದಲ್ಲಿ ಶೇ.32.76ರಷ್ಟು ಮಾರಾಟ ಕುಸಿತವಾಗಿದೆ.

ಪಟ್ಟಿಯಲ್ಲಿ ಮುಂದಿನದು ಸುಜುಕಿಯ ಅವಿನಿಸ್ ಸ್ಕೂಟರ್. ಇದು ಈ ವರ್ಷವಷ್ಟೇ ಪ್ರಾರಂಭವಾಯಿತು. ಸದ್ಯ ಒಂದೇ ತಿಂಗಳಲ್ಲಿ 11,078 ವಾಹನಗಳನ್ನು ಮಾರಾಟ ಮಾಡಿದೆ. ಮುಂದಿನ ಸಾಲಿನಲ್ಲಿ ಸುಜುಕಿ ಬರ್ಗ್ಮನ್ ಸ್ಕೂಟರ್ ಇದೆ. ಇದು ಒಟ್ಟು 9,088 ಸ್ಕೂಟರ್ಗಳನ್ನು ಮಾರಾಟ ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.11.45ರಷ್ಟು ಹೆಚ್ಚಳವಾಗಿದೆ

ಹೀರೋ ಡೆಸ್ಟಿನಿ 125 ಸ್ಕೂಟರ್, ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕಳೆದ ಏಪ್ರಿಲ್ನಲ್ಲಿ ಒಟ್ಟು 8,981 ಸ್ಕೂಟರ್ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷ ಏಪ್ರಿಲ್ನಲ್ಲಿ 9,121 ಯುನಿಟ್ಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಶೇ.1.53ರಷ್ಟು ಮಾರಾಟ ಕುಸಿದಿದೆ.

ಪಟ್ಟಿಯಲ್ಲಿ ಕೊನೆಯ ಸ್ಥಾನ ಟಿವಿಎಸ್ 'ಪೆಪ್ ಪ್ಲಸ್ ಸ್ಕೂಟರ್. ಒಟ್ಟು 6329 ಸ್ಕೂಟರ್ಗಳು ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್ನಲ್ಲಿ 8143 ಸ್ಕೂಟರ್ಗಳನ್ನು ಮಾರಾಟ ಮಾಡಿತ್ತು. ಶೇ 22.28ರಷ್ಟು ಮಾರಾಟ ಇಳಿಕೆಯಾಗಿದೆ.