ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ: ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ದುಬಾರಿ ಇಂಧನಗಳ ಪರಿಣಾಮ ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗುತ್ತಿದ್ದು, ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಪ್ರಮುಖ ಇವಿ ಮಾದರಿಗಳ ಮಾರಾಟವು ಸಾಕಷ್ಟು ಏರಿಕೆಯಾಗಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯಗಳು ಸಹ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನ ನೋಂದಣಿಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಇವಿ ವಾಹನಗಳ ಮಾರಾಟದಲ್ಲಿ ಸದ್ಯ ಇವಿ ಸ್ಕೂಟರ್‌ಗಳ ಮಾರಾಟವು ಹೆಚ್ಚಿನ ಬೇಡಿಕೆಯಲ್ಲಿದ್ದು, ಕಳೆದ ತಿಂಗಳು ಹೆಚ್ಚು ಮಾರಾಟ ಇವಿ ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ, ಟಿವಿಎಸ್ ಮೋಟಾರ್, ಬಜಾಜ್ ಆಟೋ ಕಂಪನಿಗಳು ಮುಂಚೂಣಿಯಲ್ಲಿದ್ದು, ಕಳೆದ ತಿಂಗಳು ಮೇ ಅವಧಿಯಲ್ಲಿನ ಇವಿ ಸ್ಕೂಟರ್ ಮಾರಾಟವು ಸಾಕಷ್ಟು ಹೆಚ್ಚಳವಾಗಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಓಲಾ ಎಸ್1 ಪ್ರೊ

ಎಲೆಕ್ಚ್ರಿಕ್ ಸ್ಕೂಟರ್ ಮಾರಾಟದಲ್ಲಿ ಸದ್ಯ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಪ್ರೊ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಕಳೆದ ತಿಂಗಳು 9,225 ಯುನಿಟ್ ಮಾರಾಟದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ ಮಾದರಿಗಾಗಿ ಕಂಪನಿಯು ಶೀಘ್ರದಲ್ಲಿಯೇ 2.0 ಸಾಫ್ಟ್‌ವೇರ್ ಅಪ್‌ಡೇಟ್ ನೀಡುತ್ತಿದ್ದು, ಹೊಸ ಮಾದರಿಯು ಇನ್ನಷ್ಟು ಬೇಡಿಕೆ ಪಡೆದುಕೊಳ್ಳಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಎಸ್1 ಪ್ರೊ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.40 ಲಕ್ಷ ಬೆಲೆ ಹೊಂದಿದ್ದು, ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯ ಮೂಲಕ ಪ್ರತಿ ಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಒಕಿನಾವ ಪ್ರೈಸ್ ಪ್ರೊ

ಎಲೆಕ್ಟ್ರಿಕ್ ವಾಹನಗಳ ಮಾರಾಟ ಆರಂಭಿಸಿದ ಏಳು ವರ್ಷಗಳ ಅವಧಿಯಲ್ಲಿ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಒಕಿನಾವ ಕಂಪನಿಯು ಪ್ರೈಸ್ ಪ್ರೊ ಮೂಲಕ ಬೇಡಿಕೆ ದಾಖಲಿಸಿದೆ. ಕಳೆದ ತಿಂಗಳು ಕಂಪನಿಯು ಒಟ್ಟು 7,339 ಯುನಿಟ್ ಪ್ರೈಸ್ ಪ್ರೊ ಇವಿ ಸ್ಕೂಟರ್ ವಿತರಣೆ ಮಾಡಿದ್ದು, ಹೊಸ ಸ್ಕೂಟರ್ ಮಾರಾಟದಲ್ಲಿ ಕಂಪನಿಯು ಶೇ. 684 ರಷ್ಟು ಬೆಳವಣಿಗೆ ಸಾಧಿಸಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಒಕಿನಾವ ಕಂಪನಿಯು ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಯೆಂತೆ ಪ್ರೈಸ್, ಆರ್30, ಲೈಟ್, ರಿಡ್ಜ್ ಪ್ಲಸ್, ಪ್ರೈಸ್ ಪ್ರೊ, ಐ-ಪ್ರೈಸ್ ಪ್ರೊ ಪ್ಲಸ್ ಮತ್ತು ಓಖಿ 90 ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಭವಿಷ್ಯ ಯೋಜನೆಗಳಲ್ಲಿರುವ ಒಕಿ100 ಸೇರಿದಂತೆ ಹೊಸ ಮ್ಯಾಕ್ಸಿ ಸ್ಕೂಟರ್ ಮತ್ತು ಎರಡು ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಬಿಡುಗಡೆಗಾಗಿ ಸಿದ್ದವಾಗುತ್ತಿವೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಎಥರ್ ಎನರ್ಜಿ

ಎಥರ್ ಎನರ್ಜಿ ಕಂಪನಿಯು ಮೇ ಅವಧಿಯಲ್ಲಿ 3,667 ಯುನಿಟ್ ಮಾರಾಟದೊಂದಿಗೆ ಕಳೆದ ಮೇ ಅವಧಿಗಿಂತಲೂ ಶೇ. 4,789.33 ರಷ್ಟು ಬೆಳವಣಿಗೆ ಸಾಧಿಸಿದ್ದು, ಕಂಪನಿಯು ದುಬಾರಿ ಬೆಲೆ ನಡುವೆಯೂ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಕಾಯ್ದುಕೊಂಡಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಪ್ರಸ್ತುತ ಮಾರುಕಟ್ಟೆಯಲ್ಲಿ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟಗೊಳಿಸುತ್ತಿದ್ದು, ಸಬ್ಸಡಿ ಯೋಜನೆಯೊಂದಿಗೆ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಬೆಲೆ ಹೊಂದಿವೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಟಿವಿಎಸ್ ಐಕ್ಯೂಬ್

ಟಿವಿಎಸ್ ಐಕ್ಯೂಬ್ ಮಾದರಿಯು 2,637 ಯುನಿಟ್ ಮಾರಾಟದೊಂದಿಗೆ ಉತ್ತಮ ಬೆಳವಣಿಗೆ ಸಾಧಿಸಿದ್ದು, ಕಳೆದ ಮೇ ಅವಧಿಯಲ್ಲಿ ಕೋವಿಡ್ ಹೆಚ್ಚಳ ಪರಿಣಾಮ ಇವಿ ಸ್ಕೂಟರ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಸದ್ಯ ಕಂಪನಿಯು ಐಕ್ಯೂಬ್ ಹೊಸ ಮಾದರಿಯನ್ನು ಬಿಡುಗಡೆ ಮಾಡಿದ್ದು,ಹೊಸ ಸ್ಕೂಟರ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಹೊಸ ಐಕ್ಯೂಬ್ ಮಾದರಿಯು ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳನ್ನು ಹೊಂದಿದ್ದು, ಬೆಂಗಳೂರಿನಲ್ಲಿ ಆನ್‌ ರೋಡ್ ಪ್ರಕಾರ ಆರಂಭಿಕವಾಗಿ ರೂ. 1,11,663 ಬೆಲೆ ಹೊಂದಿದ್ದು, ಐಕ್ಯೂಬ್ ಎಸ್ ಮಾದರಿಯು ರೂ. 1,19,663 ಬೆಲೆ ಹೊಂದಿದೆ. ಇದರಲ್ಲಿ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಬೆಲೆಯನ್ನು ಇನ್ನು ಬಹಿರಂಗಪಡಿಸದ ಕಂಪನಿಯು ಮುಂಬರುವ ಅಕ್ಟೋಬರ್‌ಗೆ ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಇನ್ನುಳಿದ ಎರಡು ಮಾದರಿಯ ವಿತರಣೆ ಆರಂಭಿಸಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳಲ್ಲಿ ಈ ಹಿಂದಿನ 3.4kwh ಬ್ಯಾಟರಿ ಪ್ಯಾಕ್ ಅನ್ನೇ ನವೀಕರಿಸಿ ಜೋಡಣೆ ಮಾಡಲಾಗಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ 5.1kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, 3.4kwh ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳು ಪ್ರತಿ ಚಾರ್ಜ್‌ಗೆ 100 ಕಿ.ಮೀ ಮೈಲೇಜ್ ನೀಡಿದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಪ್ರತಿ ಚಾರ್ಜ್‌ಗೆ ಗರಿಷ್ಠ 140 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಬಜಾಜ್ ಚೇತಕ್

ಸದ್ಯ ಪ್ರೀಮಿಯಂ ಇವಿ ಸ್ಕೂಟರ್ ಮಾರಾಟದಲ್ಲಿ ಸಾಧರಣ ಬೇಡಿಕೆ ಹೊಂದಿರುವ ಹೊಸ ಚೇತಕ್ ಇವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಸ್ಕೂಟರ್ ಮಾದರಿಗಳು ಕಳೆದ ತಿಂಗಳು ಮೇ ನಲ್ಲಿ 2,544 ಯುನಿಟ್ ಮಾರಾಟಗೊಂಡಿದ್ದು, ಕಳೆದ ವರ್ಷದ ಮೇ ಅವಧಿಗಿಂತಲೂ ಶೇ. 8,106 ರಷ್ಟು ಬೆಳವಣಿಗೆ ಸಾಧಿಸಿದೆ.

ಪ್ರಮುಖ ಬ್ರಾಂಡ್‌ಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಓಲಾ ಎಲೆಕ್ಟ್ರಿಕ್

ಸದ್ಯ ಚೇತಕ್ ಇವಿ ಮಾದರಿಯ ಅರ್ಬೈನ್ ವೆರಿಯೆಂಟ್ ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ರೂ. 1.54 ಲಕ್ಷ ಮತ್ತು ಪ್ರೀಮಿಯಂ ವೆರಿಯೆಂಟ್‌ಗೆ ರೂ. 1.59 ಲಕ್ಷ ಬೆಲೆ ಹೊಂದಿದ್ದು, 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಮೂಲಕ ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ಚಲಿಸುತ್ತದೆ.

Most Read Articles

Kannada
English summary
Top 5 best selling electric scooters in india 2022 may
Story first published: Saturday, June 18, 2022, 14:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X