ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಇವಿ ವಾಹನಗಳ ಮಾರಾಟವು ತಿಂಗಳಿನಿಂದ ತಿಂಗಳಿಗೆ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಕಳೆದ ತಿಂಗಳು ಪ್ರಮುಖ ಇವಿ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಂಡಿವೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಸೆಮಿಕಂಡಕ್ಟರ್ ಕೊರತೆ ಪರಿಣಾಮ ತಗ್ಗಿದ್ದ ಉತ್ಪಾದನಾ ಪ್ರಮಾಣವು ಇದೀಗ ಸಾಕಷ್ಟು ಸುಧಾರಿಸಿದ್ದು, ಜುಲೈನಲ್ಲಿ ಅತಿಹೆಚ್ಚು ಮಾರಾಟವಾದ ಇವಿ ಸ್ಕೂಟರ್ ಮಾದರಿಗಳ ಮಾಹಿತಿ ಇಲ್ಲಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ದುಬಾರಿ ಇಂಧನಗಳ ಪರಿಣಾಮ ಸಾಂಪ್ರದಾಯಿಕ ವಾಹನ ನಿರ್ವಹಣಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗುತ್ತಿದ್ದು, ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸಲು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಕಳೆದ ಕೆಲ ತಿಂಗಳಿನಲ್ಲಿ ಪ್ರಮುಖ ಇವಿ ಮಾದರಿಗಳ ಮಾರಾಟವು ಸಾಕಷ್ಟು ಏರಿಕೆಯಾಗಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಸದ್ಯ ಹೀರೋ ಎಲೆಕ್ಟ್ರಿಕ್, ಒಕಿನಾವಾ, ಆಂಪಿಯರ್, ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ, ಟಿವಿಎಸ್ ಮೋಟಾರ್, ಬಜಾಜ್ ಆಟೋ ಕಂಪನಿಗಳು ಮುಂಚೂಣಿಯಲ್ಲಿದ್ದು, ಕಳೆದ ತಿಂಗಳು ಜುಲೈನಲ್ಲಿ ಇವಿ ಸ್ಕೂಟರ್ ಮಾರಾಟವು ಸಾಕಷ್ಟು ಹೆಚ್ಚಳವಾಗಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಒಕಿನಾವ ಪ್ರೈಸ್ ಪ್ರೊ

ಜುಲೈ ತಿಂಗಳಿನಲ್ಲಿ ಒಕಿನಾವಾ ಕಂಪನಿಯು 10,041 ಯುನಿಟ್ ಪ್ರೈಸ್ ಪ್ರೊ ಇವಿ ಸ್ಕೂಟರ್‌ ಮಾರಾಟ ಮಾಡುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದ್ದು, ವಾರ್ಷಿಕ ಮಾರಾಟದಲ್ಲಿ ಬೃಹತ್ ಬೆಳವಣಿಗೆಯನ್ನು ದಾಖಲಿಸಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಒಕಿನಾವಾ ಕಳೆದ ವರ್ಷ ಜುಲೈನಲ್ಲಿ ಕೇವಲ 2,171 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿತ್ತು. ಆದರೆ ಕಳೆದ ತಿಂಗಳು ಓಲಾ ಎಲೆಕ್ಟ್ರಿಕ್, ಹೀರೋ ಎಲೆಕ್ಟ್ರಿಕ್ ಮತ್ತು ರಿವೋಲ್ಟ್ ಮಾಸಿಕ ಮಾರಾಟದಲ್ಲಿ ಕುಸಿತ ಕಂಡಿವೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಎರಡನೇ ಸ್ಥಾನ ಹೊಂದಿರುವ ಟಿವಿಎಸ್ ಐಕ್ಯೂಬ್ ಹೊಸ ಮಾದರಿಯೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಳೆದ ತಿಂಗಳು 6,304 ಯುನಿಟ್ ಮಾರಾಟದೊಂದಿಗೆ ಉತ್ತಮ ಗ್ರಾಹಕರ ಬೇಡಿಕೆ ಹೊಂದಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಮೂರನೇ ಸ್ಥಾನದಲ್ಲಿರುವ ಬಜಾಜ್ ಚೇತಕ್ ಇವಿ ಮಾದರಿಯು ಉತ್ತಮ ಬೇಡಿಕೆ ಹೊಂದಿದ್ದು, ಕಳೆದ ವರ್ಷದ ಜುಲೈಗಿಂತಲೂ ಕಳೆದ ತಿಂಗಳ ಜುಲೈನಲ್ಲಿ ಉತ್ತಮ ಬೇಡಿಕೆಯೊಂದಿಗೆ 3002 ಯುನಿಟ್ ಮಾರಾಟಗೊಂಡಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಎಥರ್ ಎನರ್ಜಿ ಕಂಪನಿಯು ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, 2714 ಯುನಿಟ್ ಮಾರಾಟದೊಂದಿಗೆ ಪ್ರಮುಖ ಕಂಪನಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಇನ್ನು ಐದನೇ ಸ್ಥಾನದಲ್ಲಿರುವ ಒಕಿನಾವ ಕಂಪನಿಯ ರಿಡ್ಜ್ ಪ್ಲಸ್ ಮಾದರಿಯು 1,302 ಯನಿಟ್ ಮಾರಾಟಗೊಂಡಿದ್ದು, ಕಳೆದ ತಿಂಗಳು ಪ್ರಮುಖ ಇವಿ ಸ್ಕೂಟರ್‌ಗಳಿಗೆ ಒಕಿನಾವ ಕಂಪನಿಯು ಉತ್ತಮ ಪೈಪೋಟಿ ನೀಡಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಇನ್ನು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ರಾಜ್ಯ ಸರ್ಕಾರದ ಸಬ್ಸಡಿ ಯೋಜನೆ ಜಾರಿ ನಂತರ ಇದುವರೆಗೆ ಕರ್ನಾಟಕದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

ಇವಿ ಸ್ಕೂಟರ್ ಮಾರಾಟ: ಕಳೆದ ಮಾರಾಟವಾದ ಟಾಪ್ 5 ಇವಿ ಸ್ಕೂಟರ್‌ಗಳಿವು!

ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಮಾತ್ರವಲ್ಲದೆ ಹೊಸದಾಗಿ ಇವಿ ವಾಹನ ಉತ್ಪಾದನೆಗೆ ಪೂರಕವಾದ ಸ್ಟಾರ್ಟ್‌ಅಪ್ ಕಂಪನಿಗಳಿಗೂ ರಾಜ್ಯ ಸರ್ಕಾರವು ಹಲವಾರು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕರ್ನಾಟಕದಲ್ಲಿ ಇದೀಗ 45ಕ್ಕೂ ಹೆಚ್ಚು ಇವಿ ವಾಹನಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನ ಆಧರಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಮಾರಾಟವು ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ವೇಗವಾಗಿ ಬದಲಾಗುವ ನೀರಿಕ್ಷೆಗಳಿದ್ದು, ಅದರಲ್ಲೂ ಇವಿ ದ್ವಿಚಕ್ರ ವಾಹನಗಳು ಮುಂಬರುವ ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳಲಿವೆ ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Top 5 selling electric scooters in july details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X