ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ತನ್ನ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಎಂಬ ಮಿಡ್ ವೈಟ್ ಅಡ್ವೆಂಚರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ 2022ರ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.12.30 ಲಕ್ಷವಾಗಿದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಇದರಲ್ಲಿ ಬಿಎಸ್6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಎಂಜಿನ್ ಮತ್ತು ಹೊಸ ಸುರಕ್ಷತಾ ವೈಶಿಷ್ಟ್ಯಗಳು ಸೇರಿವೆ. 2022ರ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಸಂಪೂರ್ಣವಾಗಿ ಬಿಲ್ಟ್-ಅಪ್ ಯುನಿಟ್ ಆಗಿ (ಸಿಬಿಯು) ಲಭ್ಯವಿರುತ್ತದೆ. ಈ ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಮಿಡ್ ವೈಟ್ ಅಡ್ವೆಂಚರ್ ಬೈಕಿನ ವಿತರಣೆಯು ಈ ವರ್ಷದ ಜೂನ್ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ವಿನ್ಯಾಸ

2022ರ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಲೈಟ್ ವೈಟ್ ಮತ್ತು ಸ್ಟೈಲ್ ಸ್ಪೋರ್ಟ್ ರೇಸಿಂಗ್ ರೆಡ್ ಪೇಂಟ್‌ವರ್ಕ್‌ನಲ್ಲಿ ಲಭ್ಯವಿದೆ, ಈ ಹೊಸ ಬೈಕ್ ಡ್ಯುಯಲ್ ಹೆಡ್‌ಲ್ಯಾಂಪ್‌ಗಳು, ಸಣ್ಣ ವಿಸರ್ ಮತ್ತು ಚೂಪಾದ ಮುಖವನ್ನು ಹೊಂದಿದೆ. ಆದರೆ ವಿಶಿಷ್ಟವಾದ ಅಡ್ವೆಂಚರ್ ಬೀಕ್ ಕಾಣೆಯಾಗಿದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಈ ಬೈಕಿನ ಇಂಧನ ಟ್ಯಾಂಕ್ ಮಸ್ಕಲರ್ ಶೈಲಿಯನ್ನು ಹೊಂದಿದೆ. ಈ ಬೈಕ್ ಅಗಲ ಮತ್ತು ಮಸ್ಕಲರ್ ಸೇರಿಸುತ್ತದೆ. ಹಿಂಭಾಗದ ತುದಿಯು ಕನಿಷ್ಠವಾಗಿದೆ. ವೈಶಿಷ್ಟ್ಯದ ಪಟ್ಟಿಯಲ್ಲಿ, ಎಲ್ಇಡಿ ಲೈಟಿಂಗ್ ಮತ್ತು ಬ್ಲೂಟೂತ್-ಸಕ್ರಿಯಗೊಳಿಸಿದ 6.5-ಇಂಚಿನ ಪೂರ್ಣ-ಬಣ್ಣದ TFT ಡಿಸ್ ಪ್ಲೇಯನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕಿನಲ್ಲಿ 43 ಎಂಎಂ ಗೋಲ್ಡನ್ ಫಿನಿಶ್ ಅಪ್ ಸೈಡ್ ಡೌನ್ ಫೋರ್ಕ್‌ಗಳ ಮೇಲೆ ಮತ್ತು ದಪ್ಪ 120/70 XR 17 ರಬ್ಬರ್‌ನಲ್ಲಿ ಸುತ್ತುವ 17-ಇಂಚಿನ ಡೈ-ಕಾಸ್ಟ್ ಅಲ್ಯೂಮಿನಿಯಂ ವ್ಹೀಲ್ ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ದಪ್ಪವಾದ 180/55 ZR 17 ರಬ್ಬರ್‌ನಲ್ಲಿ ಸುತ್ತುವ 17-ಇಂಚಿನ ಡೈ-ಕಾಸ್ಟ್ ಅಲ್ಯೂಮಿನಿಯಂ ಕೂಡ ಇದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಹೊಸ ಬಿಎಂಡಬ್ಲ್ಯು ಬೈಕ್ 4-ಪಿಸ್ಟನ್ ಬ್ರೆಂಬೊ ರೇಡಿಯಲ್ ಕ್ಯಾಲಿಪರ್‌ಗಳೊಂದಿಗೆ ಟ್ವಿನ್ 320 ಎಂಎಂ ಡಿಸ್ಕ್‌ಗಳನ್ನು ಪಡೆಯುತ್ತದೆ. ಆದರೆ ಹಿಂದಿನ ವ್ಹೀಲ್ ಸಿಂಗಲ್-ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್‌ನೊಂದಿಗೆ 265 ಎಂಎಂ ಡಿಸ್ಕ್ ಅನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಎಂಜಿನ್

ಈ ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕಿನಲ್ಲಿ ಬಿಎಸ್6, 895ಸಿಸಿ, ಲಿಕ್ವಿಡ್-ಕೂಲ್ಡ್, ಪ್ಯಾರಲಲ್-ಟ್ವಿನ್ ಸಿಲಿಂಡರ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 103.2 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 92 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಕೇವಲ 3.6 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳಬಹುದು. ಇನ್ನು ಈ ಬೈಕ್ 200 ಕಿ.ಮೀ ಟಾಪ್ ಸ್ಫೀಡ್ ಅನ್ನು ಹೊಂದಿದೆ. ಇನ್ನು ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ ಮತ್ತು ಆದ್ದರಿಂದ ಹಿಂದಿನ ಮಾದರಿಯಿಂದ ಹೆಚ್ಚಿನ ಅಂಶಗಳನ್ನು ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಉಳಿಸಿಕೊಂಡಿದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಫೀಚರ್ಸ್

ಈ ಐಷಾರಾಮಿ ಮಿಡ್ ವೈಟ್ ಅಡ್ವೆಂಚರ್ ಬೈಕಿನಲ್ಲಿ ಹೊಸ ಗುಣಮಟ್ಟದ ಫೀಚರ್ಸ್ ಗಳು, ಕಂಫರ್ಟ್ ಪ್ಯಾಕೇಜ್‌ನ ಭಾಗವಾಗಿ ಕೀಲೆಸ್ ರೈಡ್ ಮತ್ತು ಸೆಂಟರ್ ಸ್ಟ್ಯಾಂಡ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ, ಆದರೆ ಡೈನಾಮಿಕ್ ಪ್ಯಾಕೇಜ್ ಹೆಡ್‌ಲೈಟ್ ಪ್ರೊ, ಡೇಟೈಮ್ ರೈಡಿಂಗ್ ಲೈಟ್‌ಗಳು ಮತ್ತು ಗೇರ್ ಶಿಫ್ಟ್ ಅಸಿಸ್ಟ್ ಪ್ರೊ ಅನ್ನು ಪಡೆಯುತ್ತದೆ. ರೈಡಿಂಗ್ ಮೋಡ್ಸ್ ಪ್ರೊ, ಡೈನಾಮಿಕ್ ಎಂಜಿನ್ ಬ್ರೇಕ್ ಕಂಟ್ರೋಲ್ (MSR), ಹೀಟೆಡ್ ಗ್ರಿಪ್ಸ್, ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್, ಎಬಿಎಸ್ ಪ್ರೊ ಮತ್ತು ಕೇಸ್ ಹೋಲ್ಡರ್‌ಗಳನ್ನು ತರುವ ಸಕ್ರಿಯ ಪ್ಯಾಕೇಜ್ ಸಹ ಹೊಂದಿದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಈ ಬೈಕ್ ಬಿಡುಗಡೆಯ ಸಮಾರಂಭದಲ್ಲಿ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವಾಹ್ ಅವರು ಮಾತನಡಿ, ಸ್ಪೋರ್ಟ್ಸ್ ಅಡ್ವೆಂಚರ್ ಟೂರರ್ ಬಿಎಂಡಬ್ಲ್ಯು ಎಫ್ 900 ಎಕ್ಸ್‌ಆರ್‌ನ ಹೊಸ ಪ್ರೊಫೈಲ್ ವಿಶಿಷ್ಟವಾದ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ನಿಜವಾದ ಎಕ್ಸ್‌ಆರ್‌ನ ವಿಶಿಷ್ಟ ಮತ್ತು ಭವಿಷ್ಯದ-ಆಧಾರಿತ ಶೈಲಿಯಲ್ಲಿ ಸವಾರಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸ್ಪೋರ್ಟಿ ರೈಡಿಂಗ್ ಮೋಜು, ನೇರವಾದ ನಿರ್ವಹಣೆ ಮತ್ತು ವಿಶಿಷ್ಟ ವೈಶಿಷ್ಟ್ಯಗಳು ಈ ಬೈಕನ್ನು ಅಂತಿಮ ಥ್ರಿಲ್-ಅನ್ವೇಷಕರಿಗೆ ಮೌಲ್ಯವರ್ಧಿತ ಪ್ಯಾಕೇಜ್ ಹೊಂದಿದೆ ಎಂದು ಹೇಳಿದರು.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಇತ್ತೀಚೆಗೆ ತನ್ನ ಜನಪ್ರಿಯ ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳ ಬೆಲೆಯಗಳನ್ನು ಹೆಚ್ಚಿಸಿದೆ. ಬಿಎಂಡಬ್ಲ್ಯು ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಈ ಜಿ 310 ಟ್ವಿನ್ ಬೈಕುಗಳ ಬೆಲೆಯನ್ನು ರೂ.5,000.ಗಳಷ್ಟು ಹೆಚ್ಚಿಸಿದೆ. ಇದರಿಂದ ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಬೆಲೆ ಏರಿಕೆಯ ನಂತರ, ಬಿಎಂಡಬ್ಲ್ಯು ಜಿ 310 ಆರ್ ಬೈಕಿನ ಬೆಲೆಯು ರೂ.2.65 ಲಕ್ಷಗಳಾದರೆ, ಬಿಎಂಡಬ್ಲ್ಯು ಜಿ 310 ಜಿಎ ಬೈಕಿನ ಬೆಲೆಯು ರೂ.3.05 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ವಿಶೇಷತೆಗಳು

ಐಷಾರಾಮಿ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಖರೀದಿದಾರರು ಆಯ್ಕೆಯ ಉಪಕರಣಗಳು ಮತ್ತು ಮೂಲ ಬಿಎಂಡಬ್ಲ್ಯು ಅಕ್ಸೆಸರೀಸ್ ಮೋಟಾರ್‌ಸೈಕಲ್ ಅನ್ನು ಮತ್ತಷ್ಟು ಕಸ್ಟಮೈಸ್ ಮಾಡಬಹುದು. ಅದು ಬಿಎಂಡಬ್ಲ್ಯು ಮೋಟರ್‌ರಾಡ್ ಡೀಲರ್‌ಶಿಪ್‌ಗಳ ಮೂಲಕ ಲಭ್ಯವಿರುತ್ತದೆ.

Most Read Articles

Kannada
English summary
Top highlights of 2022 bmw f 900 xr details
Story first published: Friday, April 15, 2022, 18:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X