Just In
- 13 min ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 1 hr ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 2 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 3 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Movies 3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹುನೀರಿಕ್ಷಿತ ಟಾರ್ಕ್ ಮೋಟಾರ್ಸ್ ನಿರ್ಮಾಣದ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ
ಟಾರ್ಕ್ ಮೋಟಾರ್ಸ್(Tork Motors) ಕಂಪನಿಯು ತನ್ನ ಬಹುನೀರಿಕ್ಷಿತ ಇವಿ ಬೈಕ್ ಮಾದರಿಗಳಾದ ಕ್ರಾಟೋಸ್(Kratos) ಮತ್ತು ಕ್ರಾಟೋಸ್ ಆರ್(Kratos R) ಭಾರತದಲ್ಲಿ ಬಿಡುಗಡೆ ಮಾಡಿದೆ. ಹೆಚ್ಚು ಪೇಟೆಂಟ್ ಮತ್ತು ವಿನ್ಯಾಸಗಳ ಮೇಲೆ ಹಕ್ಕು ಹೊಂದಿದೆ.
ಇಂಧನ ಚಾಲಿತ ವಾಹನಗಳಿಗೆ ಪೈಪೋಟಿಯಾಗಿ ವಿವಿಧ ಇವಿ ವಾಹನಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇವಿ ವಾಹನಗಳ ವಿಭಾಗದಲ್ಲಿ ಸ್ಟಾರ್ಟ್ಅಪ್ ಕಂಪನಿಯು ಗ್ರಾಹಕರ ಪ್ರಮುಖ ಆಕರ್ಷಣೆಯಾಗುತ್ತಿವೆ. ಇದೀಗ ಟಾರ್ಕ್ ಮೋಟಾರ್ಸ್ ಕೂಡಾ ತನ್ನ ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಮಾದರಿಗಳನ್ನು ಬಿಡುಗಡೆಯ ಮೂಲಕ ಇವಿ ಬೈಕ್ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಕಂಪನಿಯು ಹೊಸ ಇವಿ ಬೈಕ್ ಖರೀದಿಗಾಗಿ ರೂ.999 ಮುಂಗಡ ಪಾವತಿಯೊಂದಿಗೆ ಅಧಿಕೃತ ಬುಕ್ಕಿಂಗ್ ಆರಂಭಿಸಿದೆ.
ಟಾರ್ಕ್ ಮೋಟಾರ್ಸ್ ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳು ಪುಣೆ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.07 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.22 ಲಕ್ಷ ಬೆಲೆ ನಿಗದಿಪಡಿಸಿದೆ.
ಹೊಸ ಬೈಕ್ಗಳ ಬೆಲೆಗಳು ಕೇಂದ್ರ ಮತ್ತು ವಿವಿಧ ರಾಜ್ಯಗಳಲ್ಲಿ ಸಬ್ಸಡಿ ಯೋಜನೆಗಳಿಂದ ಕೆಲವು ರಾಜ್ಯಗಳಲ್ಲಿನ ಇವಿ ಬೆಲೆಗಳಲ್ಲಿ ಏರಿಳಿತವಾಗಲಿದ್ದು, ಹೊಸ ಬೈಕ್ ನಮ್ಮ ಬೆಂಗಳೂರಿನಲ್ಲಿ ಆರಂಭಿಕವಾಗಿ ರೂ. 1.32 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 1.47 ಲಕ್ಷ ಬೆಲೆ ಹೊಂದಿರಲಿದೆ.
ಟಾರ್ಕ್ ಮೋಟಾರ್ಸ್ ಕಂಪನಿಯು ಭಾರತದಲ್ಲಿ 2015ರಿಂದ ಇವಿ ವಾಹನಗಳ ಅಭಿವೃದ್ದಿಯಲ್ಲಿ ತೊಡಗಿಕೊಂಡಿದ್ದು, ಸತತ 6 ವರ್ಷಗಳ ಸಂಶೋಧನೆ, ಅಭಿವೃದ್ದಿ ಮತ್ತು ತಂತ್ರಜ್ಞಾನ ಸುಧಾರಣೆ ಆಧರಿಸಿ ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಹೊಸ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಬೈಕ್ ಮಾದರಿಗಳು ರೇಸಿಂಗ್ ತಂತ್ರಜ್ಞಾನವನ್ನು ಆಧರಿಸಿ ಮಾರುಕಟ್ಟೆ ಪ್ರವೇಶಿಸಿದ್ದು, ಕೃತಕ ಬುದ್ದಿ ಮತ್ತೆ ಬಳಸಿ ವಾಹನ ಚಲಾಯಿಸುವ ಟಾರ್ಕ್ ಇನ್ಶೂಟಿವ್ ರೆಸ್ಪಾನ್ಸ್ ಆಪರೇಟಿಂಗ್ ಸಿಸ್ಟಂ- ಟಿಐಆರ್ಒಎಸ್ ಎಂಬ ಡ್ರೈವ್ ಟ್ರೇನ್ ಟೆಕ್ನಾಲಜಿಯನ್ನು ಹೊಂದಿವೆ.
ಟಾರ್ಕ್ ಮೋಟಾರ್ಸ್ ಸದ್ಯ ಪುಣೆಯಲ್ಲಿರುವ ತನ್ನ ಹೊಸ ಉತ್ಪಾದನಾ ಘಟಕದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಕಂಪನಿಯು ಮೊದಲ ಹಂತದಲ್ಲಿ ಪುಣೆ, ಬೆಂಗಳೂರು, ದೆಹಲಿ, ಹೈದ್ರಾಬಾದ್, ಚೆನ್ನೈ ಮತ್ತು ಅಹಮದಾಬಾದ್ನಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸುತ್ತಿದೆ.
ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಟಾರ್ಕ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಮಾದರಿಗಳನ್ನು ಪರಿಚಯಿಸಿದ್ದು, ಕ್ರಾಟೋಸ್ ಆರ್ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿದೆ.
ಟಾರ್ಕ್ ಮೋಟಾರ್ಸ್ ಕಂಪನಿಯು ಹೊಸ ಬೈಕ್ ಮಾದರಿಗಳಲ್ಲಿ IP67 ಅನುಮೋದಿತ 4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಕ್ರಾಟೋಸ್ ಮಾದರಿಯು 7.5kW ಎಲೆಕ್ಟ್ರಿಕ್ ಮೋಟಾರ್ ಮೂಲಕ 28 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಕ್ರಾಟೋಸ್ ಆರ್ ಮಾದರಿಯು 9kW ಎಲೆಕ್ಟ್ರಿಕ್ ಮೋಟಾರ್ ಮೂಲಕ 38 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
ಸ್ಪ್ಲೀಟ್ ಟೆಲ್ಲಿಸ್ ಫ್ರೆಮ್ ಮೇಲೆ ನಿರ್ಮಾಣವಾಗಿರುವ ಹೊಸ ಕ್ರಾಟೋಸ್ ಮಾದರಿಯು ಪ್ರತಿ ಗಂಟೆಗೆ ಗರಿಷ್ಠ 100ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್ಗೆ 120 ಕಿ.ಮೀ ಮೈಲೇಜ್ ನೀಡಿದರೆ ಕ್ರಾಟೋಸ್ ಆರ್ ಮಾದರಿಯು 120 ಕಿ.ಮೀ ಟಾಪ್ ಸ್ಪೀಡ್ನೊಂದಿಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.
ಹೊಸ ಇವಿ ಬೈಕ್ಗಳಲ್ಲಿ ತಾಂತ್ರಿಕ ವೈಶಿಷ್ಟ್ಯತೆ ಬಗೆಗೆ ಹೇಳುವುದಾದರೇ ಕ್ರಾಟೋಸ್ ಮಾದರಿಗಿಂತಲೂ ಕ್ರಾಟೋಸ್ ಆರ್ ಮಾದರಿಯು ಹೆಚ್ಚಿನ ಮಟ್ಟದ ಫೀಚರ್ಸ್ ಪಡೆದುಕೊಂಡಿದ್ದು, 4ಜಿ ಟೆಲಿಮೆಟ್ರಿ ಜೋಡಣೆಯೊಂದಿಗೆ ಜಿಪಿಎಸ್, ಕ್ಲೌಡ್ ಕನೆಕ್ಟಿವಿಟಿ, ಕ್ರ್ಯಾಶ್ ಅಲರ್ಟ್, ಪವರ್ ಮ್ಯಾನೇಜ್ಮೆಂಟ್, ಪ್ರತಿ ದಿನದ ರೈಡ್ ಹಿಸ್ಟರಿ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.
ಕ್ರಾಟೋಸ್ ಆರ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಜಿಯೋ-ಫೆನ್ಸಿಂಗ್, ಫೈಂಡ್ ಮೈ ವೆಹಿಕಲ್, ಟ್ರ್ಯಾಕ್ ಮೋಡ್ ಮತ್ತು ಅನಾಲಿಟಿಕ್ಸ್ ಮತ್ತು ಇನ್ನೂ ಕೆಲವು ನಿಫ್ಟಿ ವೈಶಿಷ್ಟ್ಯಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳಿಂದ ಕೂಡಿದ್ದು, ಎಲ್ಇಡಿ ಹೆಡ್ಲೈಟ್ಗಳು, ಎಲ್ಇಡಿ ಟೈಲ್ಲ್ಯಾಂಪ್, ಸಂಪೂರ್ಣ ಡಿಜಿಟಲ್ ಡಿಸ್ಪ್ಲೇ, ವಿವಿಧ ರೈಡ್ ಮೋಡ್ಗಳು, ಯುಟಿಲಿಟಿ ಸ್ಟೋರೇಜ್, ಮತ್ತು ಫೋನ್ ಚಾರ್ಜ್ ಸಾಕೆಟ್ ಗಮನಸೆಳೆಯುತ್ತವೆ.
ಜೊತೆಗೆ ಇವಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿರುವ ಟಾರ್ಕ್ ಮೋಟಾರ್ಸ್ ಕಂಪನಿಯು ಹೊಸ ಇವಿ ಉತ್ಪಾದನೆಯಲ್ಲಿ ಆರ್ & ಡಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೆಚ್ಚಿಸಲು 50ಕ್ಕೂ ಹೆಚ್ಚು ಪೇಟೆಂಟ್ ಮತ್ತು ವಿನ್ಯಾಸಗಳ ಮೇಲೆ ಹಕ್ಕು ಹೊಂದಿದೆ.