ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ಸ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗಾಗಿ 2023ರ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನ್ನು ಅನಾವರಣಗೊಳಿಸಿದೆ. 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಮ್ಯಾಟ್ ಬಾಜಾ ಆರೆಂಜ್ ಬಣ್ಣವನ್ನು ಹೊಸದಾಗಿ ಪಡೆದುಕೊಂಡಿದೆ. ಉಳಿದಂತೆ ಪ್ರಸ್ತುತ ಮಾದರಿಯಂತೆ ಮ್ಯಾಟ್ ಸಿಲ್ವರ್ ಐಸ್, ಮತ್ತು ಸ್ಯಾಪರ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿರಲಿದೆ. ಹೊಸ ಮ್ಯಾಟ್ ಬಾಜಾ ಆರೆಂಜ್ ಬಣ್ಣದ ಯೋಜನೆಯು ವಿಶಿಷ್ಟವಾದ ಸಿಲ್ವರ್ ಐಸ್ ಮತ್ತು ಗ್ರ್ಯಾಫೈಟ್ 'RS' ಗ್ರಾಫಿಕ್ಸ್‌ನಿಂದ ಪೂರಕವಾಗಿದೆ. ಈ ಹೊಸ ಬಣ್ಣವು ಇಂಧನ ಟ್ಯಾಂಕ್, ಸೈಡ್ ಪ್ಯಾನೆಲ್‌ಗಳು, ಹೆಡ್‌ಲೈಟ್ ಫಿನಿಶರ್, ಹಿಂಭಾಗದ ಬಾಡಿವರ್ಕ್, ಸೀಟ್ ಕೌಲ್ ಮತ್ತು ಬೆಲ್ಲಿ ಪ್ಯಾನ್‌ನಲ್ಲಿ ಕಾಣಿಸಿಕೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಮತ್ತೊಂದೆಡೆ, ಮುಂಭಾಗದ ಮಡ್‌ಗಾರ್ಡ್ ಕಾರ್ಬನ್ ಫೈಬರ್ ಫಿನಿಶ್‌ನಲ್ಲಿ ಗೋಚರಿಸುತ್ತದೆ. 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಬದಲಾವಣೆಗಳು ಹೊಸ ಪೇಂಟ್ ಥೀಮ್‌ನ ರೂಪದಲ್ಲಿ ಸೌಂದರ್ಯವರ್ಧಕ ವರ್ಧನೆಗಳಿಗೆ ಸೀಮಿತವಾಗಿವೆ. ಉಳಿದಂತೆ 2022 ಆವೃತ್ತಿಗೆ ಒಂದೇ ಆಗಿರುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಡ್ಯುಯಲ್ ಹೆಡ್‌ಲ್ಯಾಂಪ್ ಅನ್ನು ಅಳವಡಿಸಿದ್ದಾರೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಇದರೊಂದಿಗೆ ಈ ಬೈಕ್ ತೀಕ್ಷ್ಣವಾದ ಬೆಲ್ಲಿ ಪ್ಯಾನ್, ಕಾರ್ಬನ್-ಫೈಬರ್ ಫ್ರಂಟ್ ಫೆಂಡರ್, ಹಿಂಭಾಗದ ಸೀಟ್ ಕೌಲ್ ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳೊಂದಿಗೆ ಕಾಂಪ್ಯಾಕ್ಟ್ ಟೈಲ್ ವಿಭಾಗದಿಂದ ಈ ಬೈಕಿಗೆ ಹೆಚ್ಚಿನ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಈ ಹೊಸ ಬೈಕ್ ಎಲ್ಲಾ ಹೊಸ ಅಲ್ಯೂಮಿನಿಯಂ ಚಾಸಿಸ್ ಬಳಸಿ ನಿರ್ಮಿಸಲಾಗಿದ್ದು, ಹಳೆಯ ಮಾದರಿಗಿಂತ 10 ಕಿಲೋಗ್ರಾಂಗಳಷ್ಟು ಹಗುರವಾಗಿದೆ. ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಒಟ್ಟು 198 ಕೆಜಿ ತೂಕವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಫುಲ್ ಎಲ್ಇಡಿ ಲೈಟ್ ಹೊರತಾಗಿ, ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಸಹ ಇತರ ಫೀಚರ್ ಗಳೊಂದಿಗೆ ಬರುತ್ತದೆ. ಇದು 5 ಇಂಚಿನ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಸ್ವಿಚ್‌ಗಿಯರ್, ಕೀ ಲೆಸ್ ಇಗ್ನಿಷನ್, ಇಂಟಿಗ್ರೇಟೆಡ್ ಗೋಪ್ರೊ ಕಂಟ್ರೋಲ್ಸ್ ಮತ್ತು ಮೈಟ್ರಿಯಂಫ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನಲ್ಲಿ ಹೊಸ 1160 ಸಿಸಿ ಮೂರು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,750 ಆರ್‌ಪಿಎಂನಲ್ಲಿ 178 ಬಿಹೆಚ್‌ಪಿ ಪವರ್ ಮತ್ತು 9000 ಆರ್‌ಪಿಎಂನಲ್ಲಿ 125 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಈ ಎಂಜಿನ್ ಅನ್ನು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಬೈ-ಡೈರಕ್ಷನಲ್ ಕ್ವಿಕ್-ಶಿಫ್ಟರ್ ಅನ್ನು ಸ್ಟ್ಯಾಂಡರ್ಡ್‌ನಂತೆ ಹೊಂದಿದೆ. ಹೊಸ ಸ್ಪೀಡ್ ಟ್ರಿಪಲ್ ತನ್ನ ಹಿಂದಿನ ಮಾದರಿಗೆ ಹೋಲಿಸಿದರೆ 30 ಬಿಹೆಚ್‌ಪಿ ಪವರ್ ಮತ್ತು 8 ಎನ್ಎಂ ಹೆಚ್ಚು ಟಾರ್ಕ್ ಉತ್ಪಾದಿಸುತದೆ. ಹೊಸ ಎಂಜಿನ್ 7 ಕಿಲೋಗ್ರಾಂಗಳಷ್ಟು ಹಗುರವಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಈ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟಾಪ್-ಸ್ಪೆಕ್ ಓಹ್ಲಿನ್ಸ್ ಎನ್ಐಎಕ್ಸ್ 30 ಯುಎಸ್ಡಿ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ಮೊನೊಶಾಕ್ ಸೆಟಪ್ ಅನ್ನು ನೀಡಿದೆ. ಇನ್ನು ಮುಂಭಾಗ ಮತ್ತು ಹಿಂಭಾಗದ ಸಸ್ಪೆಂಕ್ಷನ್ ಎರಡು ಪ್ರಿ-ಲೋಡ್ ಆಗಿ ಸಂಪೂರ್ಣವಾಗಿ ಹೊಂದಿಸಬಲ್ಲವು.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಇದರೊಂದಿಗೆ ಟ್ರಯಂಫ್ ಮೋಟಾರ್‌ಸೈಕಲ್ ತನ್ನ 2022ರ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಅನ್ನು ಕೂಡ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಮತ್ತು ಮುಂಬರುವ ತಿಂಗಳುಗಳಲ್ಲಿ 2022ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಟ್ರೈಡೆಂಟ್ 660 ರೋಡ್‌ಸ್ಟರ್ ಪಡೆಯುವ ಏಕೈಕ ನವೀಕರಣವೆಂದರೆ ಹೊಸ ಮಾದರಿಯ ವರ್ಷದ ಭಾಗವಾಗಿ ಹೊಸ ಬಣ್ಣದ ಯೋಜನೆಯಾಗಿದೆ. ಟಾಟಾ ಟ್ರೈಡೆಂಟ್ 660 ಬೈಕ್ ಮ್ಯಾಟ್ ಬಾಜಾ ಆರೆಂಜ್/ಮ್ಯಾಟ್ ಸ್ಟಾರ್ಮ್ ಗ್ರೇ ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಹಿಂದಿನ ಆಯ್ಕೆಗಳಾದ ಸಿಲ್ವರ್ ಐಸ್/ಡಯಾಬ್ಲೊ ರೆಡ್, ಮ್ಯಾಟ್ ಜೆಟ್ ಬ್ಲ್ಯಾಕ್/ಸಿಲ್ವರ್ ಐಸ್ ಮತ್ತು ಸಫೈರ್ ಬ್ಲ್ಯಾಕ್ ಜೊತೆಗೆ ಮಾರಾಟ ಮಾಡಲಾಗುತ್ತಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಈ ಹೊಸ ಬೈಕಿನಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಲೈನ್-ಅಪ್‌ನಲ್ಲಿ ಎಂಟ್ರಿ ಲೆವೆಲ್ ಮಾದರಿಯಾಗಿದೆ, ಜೊತೆಗೆ ಟ್ರಯಂಫ್ ಟ್ರಿಪಲ್ ಎಂಜಿನ್ ರೋಡ್‌ಸ್ಟರ್ ಲೈನ್-ಅಪ್ ಆಗಿದೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ 2023ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‍ಎಸ್ ಬೈಕ್ ಅನಾವರಣ

ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್‍ಎಸ್ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್, ಕಾರ್ನರಿಂಗ್ ಎಬಿಎಸ್, 6-ಆಕ್ಸಿಸ್ ಐಎಂಯು, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಲಾಂಚ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ರೋಡ್, ರೈನ್, ಸ್ಪೋರ್ಟ್ಸ್,ಟ್ರ್ಯಾಕ್ ಮತ್ತು ರೈಡರ್ ಎಂಬ ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ.

Most Read Articles

Kannada
English summary
Triumph revealed 2023 speed triple 1200 rs with new colour option details
Story first published: Saturday, May 14, 2022, 20:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X