ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಟಿವಿಎಸ್ ಮೋಟಾರ್(TVS Motor) ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ್ದ ರೇಸ್ ಪರ್ಫಾರ್ಮೆನ್ಸ್ ಪ್ರೇರಿತ ಅಪಾಚೆ ಆರ್‌ಟಿಆರ್ 165 ಆರ್‌ಪಿ ಮಾದರಿಯು ಬಿಡುಗಡೆಯಾದ ಮೊದಲ ವಾರದಲ್ಲಿಯೇ ಖರೀದಿಗೆ ಲಭ್ಯವಿದ್ದ ಎಲ್ಲಾ ಯುನಿಟ್‌ಗಳು ಮಾರಾಟಗೊಂಡಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಬಿಡುಗಡೆಯಾಗಿದ್ದ ಹೊಸ ಬೈಕ್ ಮಾದರಿಯು ಶೀಘ್ರದಲ್ಲಿಯೇ ಗ್ರಾಹಕರ ಕೈಸೇರಲಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ರೇಸ್ ಪರ್ಫಾರ್ಮೆನ್ಸ್ (RP) ಸರಣಿಯ ಅಡಿಯಲ್ಲಿ ಟಿವಿಎಸ್ ಮೋಟಾರ್ ಕಂಪನಿಯು ಅಪಾಚೆ ಆರ್‍‌ಟಿಆರ್ 165 ಆರ್‌ಪಿ ಮಾದರಿಯನ್ನು ಬಿಡುಗಡೆ ಮಾಡಿತ್ತು. ಸೀಮಿತ ಸಂಖ್ಯೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದ ಹೊಸ ಬೈಕ್ ಮಾದರಿಯನ್ನು ಟಿವಿಎಸ್ ಕಂಪನಿಯು ಕೇವಲ 200 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾರಾಟ ಮಾಡಲು ನಿರ್ಧರಿಸಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.45 ಲಕ್ಷ ಬೆಲೆ ಹೊಂದಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಹೊಸ ಬೈಕ್ ಮಾದರಿಯು ಸ್ಟ್ಯಾಂಡರ್ಡ್ ಅಪಾಚೆ ಆರ್‍‌ಟಿಆರ್ ಮಾದರಿಗಿಂತಲೂ ಹೆಚ್ಚು ಶಕ್ತಿಶಾಲಿ ಎಂಜಿನ್ ಮತ್ತು ರೇಸಿಂಗ್ ಪ್ರೇರಿತ ಬಣ್ಣದ ಆಯ್ಕೆ ಪಡೆದುಕೊಂಡಿದ್ದು, ಹೊಸ ಅಪಾಚೆ ಆರ್‌ಟಿಆರ್ 165 ರೇಸ್ ಪರ್ಫಾರ್ಮೆನ್ಸ್ ಮಾದರಿಯು 160 ಸಿಸಿ ವಿಭಾಗದಲ್ಲೇ ಅತ್ಯಂತ ಶಕ್ತಿಶಾಲಿ ಬೈಕ್ ಎಂದು ಟಿವಿಎಸ್ ಕಂಪನಿಯು ಹೇಳಿಕೊಂಡಿದ್ದು, ಈ ಬೈಕ್ ಅನ್ನು ಹೊಸ ಎಂಜಿನ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲಾಗಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಅಪಾಚೆ ಆರ್‌ಟಿಆರ್ 165 ಆರ್‌ಪಿ ಮಾದರಿಯಲ್ಲಿ ಟಿವಿಎಸ್ ಕಂಪನಿಯು 164.9 ಸಿಸಿ ಸಿಂಗಲ್ ಸಿಲಿಂಡರ್ ಪ್ರೇರಿತ 4 ವಾಲ್ವ್ ಎಂಜಿನ್‌ ಜೋಡಣೆ ಮಾಡಿದ್ದು, ಇದು 10,000 ಆರ್‌ಪಿಎಂನಲ್ಲಿ 19.2 ಬಿಎಚ್‌ಪಿ ಮತ್ತು 8,750 ಆರ್‌ಪಿಎಂನಲ್ಲಿ 14.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಹೊಸ ಬೈಕಿನಲ್ಲಿ ಟಿವಿಎಸ್ ಕಂಪನಿಯು 164.9 ಸಿಸಿ ಸಿಂಗಲ್ ಸಿಲಿಂಡರ್ ಪ್ರೇರಿತ 4 ವಾಲ್ವ್ ಎಂಜಿನ್‌ ಅನ್ನು ವಿಶೇಷವಾಗಿ ರೇಸಿಂಗ್ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಬೈಕ್‌ನಲ್ಲಿ ಹೊಸ ಸಿಲಿಂಡರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ರೇಸಿಂಗ್ ಮಾದರಿಯಲ್ಲಿರುವ ಹೊಸ ಸಿಲಿಂಡರ್ ಶೇಕಡಾ 35ರಷ್ಟು ಕಾರ್ಯಕ್ಷಮತೆ ಹೆಚ್ಚಿಸಲಿದ್ದು, ಇದರ ಜೊತೆಗೆ ಹೊಸ ಎಂಜಿನ್ ನಲ್ಲಿ ನೀಡಲಾಗಿರುವ ಟ್ವಿನ್ ಎಲೆಕ್ಟ್ರೋಡ್ ಸ್ಪಾರ್ಕ್ ಪ್ಲಗ್ ಕೂಡಾ ಉತ್ತಮವಾಗಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಎಂಜಿನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸುಧಾರಿತ ಎಂಜಿನ್ ಜೊತೆಗೆ ಶೇಕಡಾ 15 ರಷ್ಟು ದೊಡ್ಡ ವಾಲ್ವ್‌ಗಳನ್ನು ಅಳವಡಿಸಲಾಗಿದ್ದು, ಇದು ಎಂಜಿನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ. ಇದಲ್ಲದೆ ಎಂಜಿನ್ ಪಿಸ್ಟನ್‌ನ ಸಂಕೋಚನ ಅನುಪಾತವನ್ನು ಸಹ ಹೆಚ್ಚಿಸಲಾಗಿದ್ದು, ಡಿಕಾಲ್, ಸ್ಲಿಪ್ಪರ್ ಕ್ಲಚ್, ಹೊಂದಾಣಿಕೆ ಮಾಡಬಹುದಾದ ಬ್ರೇಕ್ ಲಿವರ್ ಮತ್ತು ಕ್ಲಚ್ ಸಹ ಹೊಂದಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಇನ್ನು ಬೈಕ್ ಪ್ರೀಮಿಯಂ ಲುಕ್ ಹೆಚ್ಚಿಸಲು ಎಲ್ಇಡಿ ಹೆಡ್‌ಲೈಡ್, ಸ್ಲಿಪ್ಪರ್ ಕ್ಲಚ್, ಸಿಗ್ನೇಚರ್ ಎಲ್ಇಡಿ ಲೈಟ್, ಬೈಕ್ ಹಿಂಭಾಗದಲ್ಲಿ ರೇಡಿಯಲ್ ಟೈರ್, ಕೆಂಪು ಮಿಶ್ರಲೋಹದ ಚಕ್ರಗಳು, ಕಸ್ಟಮೈಸ್ ಮಾಡಲಾದ ಸ್ಟಿಕ್ಕರ್, ಬ್ರಾಸ್ ಕೋಟಿಂಗ್ ಮಾಡಲಾದ ಡ್ರೈವ್ ಚೈನ್ ಮತ್ತು ಸ್ಪ್ರಾಕೆಟ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಇದಲ್ಲದೇ 160ಸಿಸಿ ಬೈಕ್ ವಿಭಾಗದಲ್ಲೇ ಮೊದಲ ಬಾರಿಗೆ ಈ ಬೈಕಿನಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಇದರೊಂದಿಗೆ ಇತ್ತೀಚೆಗೆ ಕಂಪನಿಯು ಅಪಾಚೆ ಬೈಕ್ ಸರಣಿಯಲ್ಲಿ ನೀಡಲಾಗುತ್ತಿರುವ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಅನ್ನು ನವೀಕರಿಸಿ ಹೊಸ ಮಾದರಿಯಲ್ಲಿ ಜೋಡಿಸಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಟಿವಿಎಸ್ ಹೊಸ ಕನೆಕ್ಟ್ ಅಪ್ಲಿಕೇಶನ್ ನಲ್ಲಿ What3words ವೈಶಿಷ್ಟ್ಯವನ್ನು ಹೊಸದಾಗಿ ಅಪ್‌ಡೆಟ್ ಮಾಡಲಾಗಿದ್ದು, ಇದು ಜಿಪಿಎಸ್ ನ್ಯಾವಿಗೇಶನ್ ಅನ್ನು ಹೆಚ್ಚು ನಿಖರವಾಗಿ ತಿಳಿಸುತ್ತದೆ. What3words ವೈಶಿಷ್ಟ್ಯವು ಈಗಾಗಲೇ ನಾಲ್ಕು ಚಕ್ರಗಳ ವಿಭಾಗದಲ್ಲಿ ಲಭ್ಯವಿದ್ದು, ಟಿವಿಎಸ್ ಮೋಟಾರ್ ಕಂಪನಿಯು ಈ ವೈಶಿಷ್ಟ್ಯತೆಯನ್ನು ದ್ವಿಚಕ್ರ ವಾಹನ ವಿಭಾಗಕ್ಕೆ ಪರಿಚಯಿಸಿದ ಮೊದಲ ವಾಹನ ತಯಾರಿಕ ಕಂಪನಿಯಾಗಿ ಗುರುತಿಸಿಕೊಂಡಿದೆ.

ಬಿಡುಗಡೆಯಾದ ಮೊದಲ ವಾರವೇ ಟಿವಿಎಸ್ ಅಪಾಚೆ ಆರ್‌ಟಿಆರ್ 165 ಆರ್‌ಪಿ ಸೋಲ್ಡ್ ಔಟ್

ಅಪಾಚೆ ಶ್ರೇಣಿಯಲ್ಲಿ ಟಿವಿಎಸ್ ಕಂಪನಿಯು ಅಪಾಚೆ ಆರ್‌ಟಿಆರ್ 160 4ವಿ, ಅಪಾಚೆ ಆರ್‌ಟಿಆರ್ 200 4ವಿ ಮತ್ತು ಅಪಾಚೆ ಆರ್‌ಆರ್ 310 ಮಾದರಿಗಳಲ್ಲಿ ಹೊಸ ವೈಶಿಷ್ಟ್ಯತೆಯುಳ್ಳ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಎನ್‌ಟಾರ್ಕ್ 125 ಸ್ಕೂಟರ್‌ನಲ್ಲೂ ಈ ಅಪ್ಲಿಕೇಶನ್ ಲಭ್ಯವಿದೆ.

Most Read Articles

Kannada
English summary
Tvs apache rtr 165 rp imited edition sold out details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X