ಹೊಸ ಐಕ್ಯೂಬ್ ಇವಿ ಸ್ಕೂಟರ್‌ಗೆ ಭರ್ಜರಿ ಬೇಡಿಕೆ- ಒಂದೇ ದಿನ 80 ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್..

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಹೊಸ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ದೇಶಾದ್ಯಂತ ತನ್ನ ಪ್ರಮುಖ ಡೀಲರ್‌ಗಳಲ್ಲಿ ವಿತರಣೆ ಆರಂಭಿಸಿದ್ದು, ಹೊಸ ಸ್ಕೂಟರ್ ಮಾದರಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

Recommended Video

ಬೆಂಗಳೂರಿನಲ್ಲಿ ಮೊತ್ತೊಂದು ಹೊಸ BMW Motorrad ಡೀಲರ್‌ಶಿಪ್ ಆರಂಭ | Bikes Price Range, Showroom Walkaround

ಅತ್ಯುತ್ತಮ ಎಂಜಿನ್ ಆಯ್ಕೆ, ಪ್ರತಿಸ್ಪರ್ಧಿ ಮಾದರಿಗಳಿಂತ ಕಡಿಮೆ ಬೆಲೆ ಮತ್ತು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳಿಂದಾಗಿ 2022ರ ಐಕ್ಯೂಬ್ ಮಾದರಿಯು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಟಿವಿಎಸ್ ಮೋಟಾರ್ ಡೀಲರ್‌ವೊಂದರಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 80 ಇವಿ ಸ್ಕೂಟರ್ ವಿತರಿಸಿ ಗಮನಸೆಳೆದಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಕೊಚ್ಚಿಯಲ್ಲಿರುವ ಟಿವಿಎಸ್ ಡೀಲರ್‌ನಲ್ಲಿ ಒಂದೇ ಬಾರಿಗೆ ಹೆಚ್ಚಿನ ಸಂಖ್ಯೆಯ ಇವಿ ಸ್ಕೂಟರ್‌ಗಳನ್ನು ವಿತರಣೆ ಮಾಡಲಾಗಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

2022ರ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಸದ್ಯ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳ ಬೆಲೆ ಬಹಿರಂಗಪಡಿಸುವ ಮೂಲಕ ವಿತರಣೆಗೆ ಚಾಲನೆ ನೀಡಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳಿಂತಲೂ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಹೆಚ್ಚಿನ ಫೀಚರ್ಸ್ ಮತ್ತು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದ್ದು, ಕಂಪನಿಯು ಟಾಪ್ ಎಂಡ್ ವೆರಿಯೆಂಟ್ ಬೆಲೆ ಮಾಹಿತಿಯನ್ನು ಇದುವರೆಗೂ ಅಧಿಕೃತವಾಗಿ ಹಂಚಿಕೊಂಡಿಲ್ಲ. ಸದ್ಯಕ್ಕೆ ಮೊದಲೆಡು ಮಾದರಿಗಳ ಬೆಲೆ ಹಂಚಿಕೊಂಡಿದ್ದು, ಟಾಪ್ ಎಂಡ್ ಮಾದರಿಯನ್ನು ಮುಂದಿನ ತಿಂಗಳು ಅಗಸ್ಟ್‌ನಲ್ಲಿ ಬೆಲೆ ಮಾಹಿತಿ ಬಹಿರಂಗಪಡಿಸುವ ಮೂಲಕ ವಿತರಣೆ ಆರಂಭಿಸಲಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಹೊಸ ಐಕ್ಯೂಬ್ ಮಾದರಿಯ ಮೊದಲ ಎರಡು ಸಾಮಾನ್ಯ ಮಾದರಿಗಳು ಸದ್ಯ ಬೆಂಗಳೂರಿನಲ್ಲಿ ಆನ್‌ ರೋಡ್ ಪ್ರಕಾರ ಆರಂಭಿಕವಾಗಿ ರೂ. 1,11,663 ಬೆಲೆ ಹೊಂದಿದ್ದರೆ ಐಕ್ಯೂಬ್ ಎಸ್ ಮಾದರಿಯು ರೂ. 1,19,663 ಬೆಲೆ ಹೊಂದಿದೆ. ಆದರೆ ಹೆಚ್ಚಿನ ಫೀಚರ್ಸ್ ಹೊಂದಿರುವ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಆನ್ ರೋಡ್ ಪ್ರಕಾರ ರೂ. 1.40 ಲಕ್ಷ ಬೆಲೆ ಪಡೆದುಕೊಳ್ಳಬಹುದಾದ ನೀರಿಕ್ಷೆಗಳಿವೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಹೊಸ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳಲ್ಲಿ ಈ ಹಿಂದಿನ 3.4kwh ಬ್ಯಾಟರಿ ಪ್ಯಾಕ್ ಅನ್ನೇ ನವೀಕರಿಸಿ ಜೋಡಣೆ ಮಾಡಲಾಗಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ 5.1kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

3.4kwh ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳು ಪ್ರತಿ ಚಾರ್ಜ್‌ಗೆ 100 ಕಿ.ಮೀ ಮೈಲೇಜ್ ನೀಡಿದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಪ್ರತಿ ಚಾರ್ಜ್‌ಗೆ ಗರಿಷ್ಠ 140 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಹೊಸ ಇವಿ ಸ್ಕೂಟರಿನಲ್ಲಿರುವ ಬ್ಯಾಟರಿ ಪ್ಯಾಕ್ UL2271, ISO 12405 ಮತ್ತು UN38.3 ಮಾನದಂಡಗಳೊಂದಿಗೆ IP67 ಮತ್ತು AIS156 ನಿಂದ ಪ್ರಮಾಣೀಕರಿಸಲಾಗಿದ್ದು, ಬ್ರಶ್‌ಲೆಸ್ ಹಬ್ ಮೌಟೆಂಡ್ ಎಲೆಕ್ಟ್ರಿಕ್ ಮೋಟಾರ್ ಸಹ ಸಾಕಷ್ಟು ಸುಧಾರಣೆಗೊಂಡಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಐಕ್ಯೂಬ್ ಮಾದರಿಯಲ್ಲಿ ಸುಧಾರಿತ ಎಲೆಕ್ಟ್ರಿಕ್ ಮೋಟಾರ್ ಇದೀಗ 5.9 ಬಿಎಚ್‌ಪಿ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 4.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳುತ್ತವೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಟಿವಿಎಸ್ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್‌ಗಳಲ್ಲಿ ಪ್ರತಿ ಗಂಟೆಗೆ 78 ಕಿ.ಮೀ ಟಾಪ್ ಸ್ಪೀಡ್ ನೀಡಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ ಪ್ರತಿ ಗಂಟೆಗೆ 84 ಕಿ.ಮೀ ಟಾಪ್ ಸ್ಪೀಡ್ ನೀಡಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಹೊಸ ಇವಿ ಸ್ಕೂಟರ್‌ನಲ್ಲಿ ಚಾರ್ಜಿಂಗ್ ಸೌಲಭ್ಯಕ್ಕಾಗಿ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್‌ಗಳಿಗಾಗಿ 650W ಮತ್ತು 950W ಹೋಂ ಚಾರ್ಜಿಂಗ್ ಸೌಲಭ್ಯ ನೀಡಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ 1.5kW ಸರ್ಪೊಟ್ ಮಾಡುವ ಚಾರ್ಜಿಂಗ್ ಆಯ್ಕೆ ನೀಡಿದ್ದು, ಸಂಪೂರ್ಣ ಚಾರ್ಜಿಂಗ್‌ಗಾಗಿ ಕನಿಷ್ಠ 4 ಗಂಟೆಗಳನ್ನು ತೆಗೆದುಕೊಳ್ಳಲಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್‌ಗಳು 117.2 ಕೆ.ಜಿ ತೂಕ ಹೊಂದಿದ್ದರೆ ಹೆಚ್ಚಿನ ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಎಸ್‌ಟಿ ವೆರಿಯೆಂಟ್ 128 ಕೆ.ಜಿ ತೂಕ ಹೊಂದಿದ್ದು, 32 ಲೀಟರ್ ಅಂಡರ್ ಸ್ಟೋರೇಜ್ ಸ್ಪೆಸ್ ಮತ್ತು 157 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಇನ್ನು ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಮತ್ತು ಹೊಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ರಿಯರ್ ಅಬ್ಸಾರ್ವರ್ ನೀಡಲಾಗಿದ್ದು, 220 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ 130 ಎಂಎಂ ಡ್ರಮ್ ಬ್ರೇಕ್‌ನೊಂದಿಗೆ 12 ಇಂಚಿನ ಅಲಾಯ್ ವ್ಹೀಲ್ ನೀಡಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಹೊಸ ಸ್ಕೂಟರ್‌ನಲ್ಲಿ ಟಿವಿಎಸ್ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳಿಗಾಗಿ 5 ಇಂಚಿನ ಫುಲ್ ಕಲರ್ ಟಿಎಫ್‌ಟಿ ಡಿಸ್‌ಪ್ಲೇ ನೀಡಿದ್ದರೆ ಐಕ್ಯೂಬ್ ಎಸ್‌ಟಿ ಮಾದರಿಯಲ್ಲಿ 7 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ನೀಡಿದ್ದು, ಎಸ್‌ಟಿ ಮಾದರಿಗಾಗಿ ಮಾತ್ರ ಟಚ್‌ಸ್ಕೀನ್ ಸೌಲಭ್ಯ ನೀಡಲಾಗಿದೆ.

ಒಂದೇ ದಿನ 80 ಐಕ್ಯೂಬ್ ಇವಿ ಸ್ಕೂಟರ್ ವಿತರಿಸಿದ ಟಿವಿಎಸ್ ಡೀಲರ್

ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಹೊಸ ಇವಿ ಸ್ಕೂಟರ್‌ನಲ್ಲಿ ಟಿವಿಎಸ್ ಕಂಪನಿಯು ಸ್ಮಾರ್ಟ್ಎಕ್ಸ್‌ಕನೆಕ್ಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಕನೆಕ್ಟಿವಿಟಿ ಸೌಲಭ್ಯದೊಂದಿಗೆ ಬಳಕೆದಾರರು ವೆಹಿಕಲ್ ಹೆಲ್ತ್, ಕ್ಲೌಂಡ್ ಕನೆಕ್ವಿಟಿ, ಮ್ಯೂಜಿಕ್ ಪ್ಲೇಯರ್, ಬ್ಲೂಟೂತ್ ಮತ್ತು ಸೇಫ್ಟಿ ನೋಟಿಫಿಕೇಷನ್ ಒಳಗೊಂಡಿದೆ.

Most Read Articles

Kannada
English summary
Tvs dealers delivered over 80 units of iqube electric scooters in a one day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X