Just In
- 4 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 4 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 5 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 6 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- News ನೇಹಾ ಹಿರೇಮಠ ಕೊಲೆ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ
- Movies Bhagyalakshmi: ಭಾಗ್ಯಾ ಗುಡುಗಿದರೆ ತಾಂಡವ್ ಉಸಿರೇ ಬರಲ್ಲ: ಆದ್ರೂ ಡಿವೋರ್ಸ್ ಬೇಕಂತೆ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಗಸ್ಟ್ನಿಂದ ವಿತರಣೆಯಾಗಲಿದೆ 140 ಕಿ.ಮೀ ಮೈಲೇಜ್ ಪ್ರೇರಿತ ಟಿವಿಎಸ್ ಐಕ್ಯೂಬ್ ಎಸ್ಟಿ ವೆರಿಯೆಂಟ್
ಟಿವಿಎಸ್ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ತನ್ನ ಮೊದಲ ಇವಿ ಸ್ಕೂಟರ್ ಮಾದರಿಯಾದ ಐಕ್ಯೂಬ್ 2022ರ ಮಾದರಿಯನ್ನು ಬಿಡುಗಡೆ ಮಾಡಿದ್ದು, ಕಂಪನಿಯು ಈಗಾಗಲೇ ಹೊಸ ಇವಿ ಸ್ಕೂಟರ್ ವಿತರಣೆ ಆರಂಭಿಸಿದೆ.
2022ರ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್ಟಿ ಎನ್ನುವ ಮೂರು ವೆರಿಯೆಂಟ್ಗಳಲ್ಲಿ ಬಿಡುಗಡೆಯಾಗಿದ್ದು, ಸದ್ಯ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್ಗಳ ಬೆಲೆ ಬಹಿರಂಗಪಡಿಸುವ ಮೂಲಕ ವಿತರಣೆಗೆ ಚಾಲನೆ ನೀಡಿದೆ.
ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್ಗಳಿಂತಲೂ ಐಕ್ಯೂಬ್ ಎಸ್ಟಿ ವೆರಿಯೆಂಟ್ ಹೆಚ್ಚಿನ ಫೀಚರ್ಸ್ ಮತ್ತು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದ್ದು, ಕಂಪನಿಯು ಟಾಪ್ ಎಂಡ್ ವೆರಿಯೆಂಟ್ ಬೆಲೆ ಮಾಹಿತಿಯನ್ನು ಇದುವರೆಗೂ ಅಧಿಕೃತವಾಗಿ ಹಂಚಿಕೊಂಡಿಲ್ಲ.
ಸದ್ಯಕ್ಕೆ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್ ಬೆಲೆ ಮಾಹಿತಿ ಬಹಿರಂಗಪಡಿಸಿರುವ ಟಿವಿಎಸ್ ಕಂಪನಿಯು ಮುಂಬರುವ ಅಗಸ್ಟ್ ಹೊತ್ತಿಗೆ ಐಕ್ಯೂಬ್ ಎಸ್ಟಿ ವೆರಿಯೆಂಟ್ ಬೆಲೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದು, ಟಾಪ್ ಎಂಡ್ ವೆರಿಯೆಂಟ್ ಮೊದಲೆರಡು ವೆರಿಯೆಂಟ್ಗಳಿಂತಲೂ ಹೆಚ್ಚಿನ ಬೆಲೆ ಪಡೆದುಕೊಂಡಿರಲಿದೆ.
ಹೊಸ ಐಕ್ಯೂಬ್ ಸಾಮಾನ್ಯ ಮಾದರಿಗಳು ಸದ್ಯ ಬೆಂಗಳೂರಿನಲ್ಲಿ ಆನ್ ರೋಡ್ ಪ್ರಕಾರ ಆರಂಭಿಕವಾಗಿ ರೂ. 1,11,663 ಬೆಲೆ ಹೊಂದಿದ್ದು, ಐಕ್ಯೂಬ್ ಎಸ್ ಮಾದರಿಯು ರೂ. 1,19,663 ಬೆಲೆ ಹೊಂದಿದ್ದು, ಐಕ್ಯೂಬ್ ಎಸ್ಟಿ ವೆರಿಯೆಂಟ್ ಆನ್ ರೋಡ್ ಪ್ರಕಾರ ರೂ. 1.40 ಲಕ್ಷ ಬೆಲೆ ಹೊಂದಬಹುದಾಗಿದೆ.
ಹೊಸ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್ಗಳಲ್ಲಿ ಈ ಹಿಂದಿನ 3.4kwh ಬ್ಯಾಟರಿ ಪ್ಯಾಕ್ ಅನ್ನೇ ನವೀಕರಿಸಿ ಜೋಡಣೆ ಮಾಡಲಾಗಿದ್ದರೆ ಐಕ್ಯೂಬ್ ಎಸ್ಟಿ ವೆರಿಯೆಂಟ್ನಲ್ಲಿ 5.1kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ.
3.4kwh ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳು ಪ್ರತಿ ಚಾರ್ಜ್ಗೆ 100 ಕಿ.ಮೀ ಮೈಲೇಜ್ ನೀಡಿದರೆ ಐಕ್ಯೂಬ್ ಎಸ್ಟಿ ವೆರಿಯೆಂಟ್ ಪ್ರತಿ ಚಾರ್ಜ್ಗೆ ಗರಿಷ್ಠ 140 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.
ಹೊಸ ಇವಿ ಸ್ಕೂಟರಿನಲ್ಲಿರುವ ಬ್ಯಾಟರಿ ಪ್ಯಾಕ್ UL2271, ISO 12405 ಮತ್ತು UN38.3 ಮಾನದಂಡಗಳೊಂದಿಗೆ IP67 ಮತ್ತು AIS156 ನಿಂದ ಪ್ರಮಾಣೀಕರಿಸಲಾಗಿದ್ದು, ಬ್ರಶ್ಲೆಸ್ ಹಬ್ ಮೌಟೆಂಡ್ ಎಲೆಕ್ಟ್ರಿಕ್ ಮೋಟಾರ್ ಸಹ ಸಾಕಷ್ಟು ಸುಧಾರಣೆಗೊಂಡಿದೆ.
ಐಕ್ಯೂಬ್ ಮಾದರಿಯಲ್ಲಿ ಸುಧಾರಿತ ಎಲೆಕ್ಟ್ರಿಕ್ ಮೋಟಾರ್ ಇದೀಗ 5.9 ಬಿಎಚ್ಪಿ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 4.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳುತ್ತವೆ.
ಟಿವಿಎಸ್ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್ಗಳಲ್ಲಿ ಪ್ರತಿ ಗಂಟೆಗೆ 78 ಕಿ.ಮೀ ಟಾಪ್ ಸ್ಪೀಡ್ ನೀಡಿದ್ದರೆ ಐಕ್ಯೂಬ್ ಎಸ್ಟಿ ವೆರಿಯೆಂಟ್ನಲ್ಲಿ ಪ್ರತಿ ಗಂಟೆಗೆ 84 ಕಿ.ಮೀ ಟಾಪ್ ಸ್ಪೀಡ್ ನೀಡಿದೆ.
ಹೊಸ ಇವಿ ಸ್ಕೂಟರ್ನಲ್ಲಿ ಚಾರ್ಜಿಂಗ್ ಸೌಲಭ್ಯಕ್ಕಾಗಿ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್ಗಳಿಗಾಗಿ 650W ಮತ್ತು 950W ಹೋಂ ಚಾರ್ಜಿಂಗ್ ಸೌಲಭ್ಯ ನೀಡಿದ್ದರೆ ಐಕ್ಯೂಬ್ ಎಸ್ಟಿ ವೆರಿಯೆಂಟ್ನಲ್ಲಿ 1.5kW ಸರ್ಪೊಟ್ ಮಾಡುವ ಚಾರ್ಜಿಂಗ್ ಆಯ್ಕೆ ನೀಡಿದ್ದು, ಸಂಪೂರ್ಣ ಚಾರ್ಜಿಂಗ್ಗಾಗಿ ಕನಿಷ್ಠ 4 ಗಂಟೆಗಳನ್ನು ತೆಗೆದುಕೊಳ್ಳಲಿದೆ.
ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್ಗಳು 117.2 ಕೆ.ಜಿ ತೂಕ ಹೊಂದಿದ್ದರೆ ಹೆಚ್ಚಿನ ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಎಸ್ಟಿ ವೆರಿಯೆಂಟ್ 128 ಕೆ.ಜಿ ತೂಕ ಹೊಂದಿದ್ದು, 32 ಲೀಟರ್ ಅಂಡರ್ ಸ್ಟೋರೇಜ್ ಸ್ಪೆಸ್ ಮತ್ತು 157 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.
ಇನ್ನು ಹೊಸ ಸ್ಕೂಟರ್ನಲ್ಲಿ ಕಂಪನಿಯು ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಮತ್ತು ಹೊಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ರಿಯರ್ ಅಬ್ಸಾರ್ವರ್ ನೀಡಲಾಗಿದ್ದು, 220 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ 130 ಎಂಎಂ ಡ್ರಮ್ ಬ್ರೇಕ್ನೊಂದಿಗೆ 12 ಇಂಚಿನ ಅಲಾಯ್ ವ್ಹೀಲ್ ನೀಡಿದೆ.
ಹೊಸ ಸ್ಕೂಟರ್ನಲ್ಲಿ ಟಿವಿಎಸ್ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳಿಗಾಗಿ 5 ಇಂಚಿನ ಫುಲ್ ಕಲರ್ ಟಿಎಫ್ಟಿ ಡಿಸ್ಪ್ಲೇ ನೀಡಿದ್ದರೆ ಐಕ್ಯೂಬ್ ಎಸ್ಟಿ ಮಾದರಿಯಲ್ಲಿ 7 ಇಂಚಿನ ಟಿಎಫ್ಟಿ ಡಿಸ್ಪ್ಲೇ ನೀಡಿದ್ದು, ಎಸ್ಟಿ ಮಾದರಿಗಾಗಿ ಮಾತ್ರ ಟಚ್ಸ್ಕೀನ್ ಸೌಲಭ್ಯ ನೀಡಲಾಗಿದೆ.
ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಹೊಸ ಇವಿ ಸ್ಕೂಟರ್ನಲ್ಲಿ ಟಿವಿಎಸ್ ಕಂಪನಿಯು ಸ್ಮಾರ್ಟ್ಎಕ್ಸ್ಕನೆಕ್ಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಕನೆಕ್ಟಿವಿಟಿ ಸೌಲಭ್ಯದೊಂದಿಗೆ ಬಳಕೆದಾರರು ವೆಹಿಕಲ್ ಹೆಲ್ತ್, ಕ್ಲೌಂಡ್ ಕನೆಕ್ವಿಟಿ, ಮ್ಯೂಜಿಕ್ ಪ್ಲೇಯರ್, ಬ್ಲೂಟೂತ್ ಮತ್ತು ಸೇಫ್ಟಿ ನೋಟಿಫಿಕೇಷನ್ ಒಳಗೊಂಡಿದೆ.
ಐಕ್ಯೂಬ್ ಹೈ ಎಂಡ್ ಮಾದರಿಯು ಅಮೆಜಾನ್ ಅಲೆಕ್ಸಾ ಸರ್ಪೊಟ್ ಹೊಂದಿದ್ದು, ಹೊಸ ಸ್ಕೂಟರ್ಗಳು ಒಟ್ಟು 11 ಬಣ್ಣಗಳ ಆಯ್ಕೆ ಹೊಂದಿದೆ. ಪ್ರತಿ ವೆರಿಯೆಂಟ್ ಪ್ರತ್ಯೇಕ ಬಣ್ಣಗಳ ಆಯ್ಕೆಯಿದ್ದು, ಪ್ರಮುಖ ಇವಿ ಸ್ಕೂಟರ್ ಮಾದರಿಗಳಿಗೆ ಇದು ಉತ್ತಮ ಪೈಪೋಟಿ ನೀಡಲಿದೆ.