Just In
Don't Miss!
- Lifestyle
ಆಯುರ್ವೇದ ಔಷಧಿ ಸೇವಿಸುವ ಮುನ್ನ ಈ ಎಚ್ಚರಿಕೆಗಳನ್ನು ನೀವು ತೆಗೆದುಕೊಳ್ಳಲೇಬೇಕು
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಚ್ ಮೂಲದ ಇ-ಬೈಕ್ ಕಂಪನಿಯ ಶೇ.75 ಪಾಲು ಖರೀದಿಸಿದ ಟಿವಿಎಸ್ ಮೋಟಾರ್
ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟ ತೀವ್ರ ಬೆಳವಣಿಗೆ ಸಾಧಿಸುತ್ತಿದ್ದು, ಇ-ಮೊಬಿಲಿಟಿಯಲ್ಲಿ ಮುಂಚೂಣಿಗಾಗಿ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕಾಗಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಹೊಸ ನಿರ್ಣಯದೊಂದಿಗೆ ಇಂಧನ ಆಧರಿತ ವಾಹನ ಬಳಕೆಯನ್ನು ಕಡಿತಗೊಳಿಸಲಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಇವಿ ವಾಹನ ಉದ್ಯಮ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ಡಚ್ ಮೂಲದ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಕೂಡಾ ಇವಿ ವಾಹನ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಲ್ಲಿ ಭಾರತದ ಅತಿ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಟಿವಿಎಸ್ ಮೋಟಾರ್ ಕೂಡಾ ಭಾರೀ ಪ್ರಮಾಣದ ಹೂಡಿಕೆ ಮಾಡಿದೆ.

ಸ್ವಿಸ್ ಇ-ಮೊಬಿಲಿಟಿ ಗ್ರೂಪ್ನಲ್ಲಿ ಶೇ.75ರಷ್ಟು ಸ್ವಾಧೀನಪಡಿಸಿಕೊಂಡಿರುವ ಟಿವಿಎಸ್ ಮೋಟಾರ್ ಕಂಪನಿಯು ಇವಿ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಿದ್ದು, ವಾರ್ಷಿಕವಾಗಿ 100 ಮಿಲಿಯನ್ ಯುಎಸ್ ಡಾಲರ್ ಆದಾಯ ಹೊಂದಿರುವ ಕಂಪನಿಯಲ್ಲಿ ಟಿವಿಎಸ್ ಮೋಟಾರ್ ಹೊಸ ಅಧ್ಯಾಯ ಆರಂಭಿಸಿದೆ.

ಅಂತಾರಾಷ್ಟ್ರೀಯ ಗುಣಮಟ್ಟದ ಇ-ಬೈಕ್ಗಳನ್ನು ಉತ್ಪಾದಿಸುವ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಜರ್ಮನಿ, ಸ್ವಿಜರ್ಲ್ಯಾಂಡ್ ಮತ್ತು ಆಸ್ಟ್ರೀಯಾದಲ್ಲಿ ಉತ್ತಮ ಮಾರಾಟ ಜಾಲ ಹೊಂದಿದ್ದು, ಇದೀಗ ಟಿವಿಎಸ್ ಮೋಟಾರ್ ಒಡೆತನದೊಂದಿನ ಹೊಸ ಯೋಜನೆಗಳ ಮೂಲಕ ಮತ್ತಷ್ಟು ಆದಾಯ ನೀರಿಕ್ಷೆಯಲ್ಲಿದೆ.

ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಕಂಪನಿಯು ಈಗಾಗಲೇ ಇ-ಬೈಕ್ ವಿಭಾಗದಲ್ಲಿ ಜನಪ್ರಿಯವಾಗಿರುವ ಸಿಲೊ, ಸಿಂಪೆಲ್, ಅಲೆಗ್ರೊ ಮತ್ತು ಜೆನಿತ್ ಇ-ಬೈಕ್ ಮಾದರಿಗಳೊಂದಿಗೆ ಭಾರೀ ಬೇಡಿಕೆ ಹೊಂದಿದ್ದು, ಭೌತಿಕವಾದ ಮಾರಾಟ ಮಳಿಗೆಗಳು ಮತ್ತು ಇ-ಕಾಮರ್ಸ್ ಪ್ಲಾಟ್ಫಾರ್ಮ್ ಎರಡು ಪ್ಲಾಟ್ಫಾರ್ಮ್ಗಳಲ್ಲೂ ಮುಂಚೂಣಿಯಲ್ಲಿದೆ.

ಭೌತಿಕ ಮಾರಾಟ ಮಳಿಗೆಗಳ ಮೂಲಕ ತಡೆರಹಿತ ಮತ್ತು ವಿಶ್ವದರ್ಜೆಯ ಗ್ರಾಹಕ ಅನುಭವವನ್ನು ಒದಗಿಸುವಲ್ಲಿ ಮೊದಲ ಸ್ಥಾನದಲ್ಲಿರುವ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಕಂಪನಿಯು ಇದೀಗ ಹೊಸ ಹೂಡಿಕೆಯೊಂದಿಗೆ ಟಿವಿಎಸ್ ಮೋಟಾರ್ ಕಂಪನಿಯೊಂದಿಗೆ ಮತ್ತಷ್ಟು ಹೊಸ ಮಾದರಿಗಳನ್ನು ಅಭಿವೃದ್ದಿಪಡಿಸಲಿದೆ.

ಯುರೋಪ್ನ ಪ್ರಮುಖ ಮಾರುಕಟ್ಟೆಗಳಲ್ಲಿ ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ನಿರ್ಮಾಣದ ಪ್ರಮುಖ ಇ-ಬೈಕ್ ಮಾದರಿಗಳು ಸುಸ್ಥಿರ ಸಾರಿಗೆಯ ಒಟ್ಟಾರೆ ಗ್ರಹಿಕೆಯಿಂದಾಗಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದ್ದು, ಯುರೋಪ್ನಲ್ಲಿ ಮಾರಾಟವಾಗುವ ಒಟ್ಟು ಬೈಸಿಕಲ್ಗಳಲ್ಲಿ ಶೇಕಡಾ 16 ರಷ್ಟು ಪಾಲನ್ನು ಸ್ವಿಸ್ ಇ-ಮೊಬಿಲಿಟಿ ಗ್ರೂಪ್ ಪಡೆದುಕೊಂಡಿದೆ.

ಹೊಸ ಸ್ವಾಧೀನ ಪ್ರಕ್ರಿಯೆ ಕುರಿತಂತೆ ಮಾತನಾಡಿರುವ ಟಿವಿಎಸ್ ಮೋಟಾರ್ ಕಂಪನಿಯ ಜಂಟಿ ಎಂಡಿ ಸುದರ್ಶನ್ ವೇಣು ಅವರು ಹೊಸ ಹೂಡಿಕೆಯೊಂದಿಗೆ ಕಂಪನಿಯು ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ ಭಾರತ ಸೇರಿದಂತೆ ವಿಶ್ವದ ಇತರ ಭಾಗಗಳಿಗೆ ಸ್ವಿಸ್ ಇ-ಮೊಬಿಲಿಟಿ ಉತ್ಪನ್ನಗಳನ್ನು ಪರಿಚಯಿಸುವ ಮಾಹಿತಿ ನೀಡಿದರು.

ಸದ್ಯ ಜರ್ಮನಿ, ಸ್ವಿಜರ್ಲ್ಯಾಂಡ್ ಮತ್ತು ಆಸ್ಟ್ರೀಯಾದಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಸ್ವಿಸ್ ಇ-ಮೊಬಿಲಿಟಿ ಉತ್ಪನ್ನಗಳು ಈ ವರ್ಷಾಂತ್ಯಕ್ಕೆ ಟಿವಿಎಸ್ ಕಾರ್ಯಾಚರಣೆ ಪ್ರಮುಖ ರಾಷ್ಟ್ರಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಇತರೆ ಇ-ಸೈಕಲ್ ಮಾದರಿಗಳಿಂತಲೂ ತುಸು ದುಬಾರಿಯಾದರೂ ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಗ್ರಾಹಕರನ್ನು ಸೆಳೆಯಲಿವೆ.

ಮುಂಬರುವ ದಿನಗಳಲ್ಲಿ ಭಾರತದಲ್ಲಿ ಇ-ಬೈಕ್ಗಳಿಗೆ ದೊಡ್ಡ ಮಾರುಕಟ್ಟೆಯಾಗಲಿದೆ ಎಂದಿರುವ ಸುದರ್ಶನ್ ವೇಣು ಅವರು ಹೊಸ ಸ್ವಾಧೀನ ಪ್ರಕ್ರಿಯೊಂದಿಗೆ ಟಿವಿಎಸ್ ಮೋಟಾರ್ ಕಂಪನಿಯ ಇ-ವೈಯಕ್ತಿಕ ಮೊಬಿಲಿಟಿ ಉತ್ಪನ್ನಗಳ ಬದ್ಧತೆಯು ಹೆಚ್ಚುವುದರ ಜೊತೆಗೆ ನಾವು ವೇಗವಾಗಿ ಬೆಳೆಯುತ್ತಿರುವ ಇ-ಬೈಕ್ ವಿಭಾಗದಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸುತ್ತಿದ್ದೇವೆ" ಸಹಕಾರಿಯಾಗಿದೆ ಎಂದಿದ್ದಾರೆ.

ಇನ್ನು ಯುರೋಪ್ ಮಾರುಕಟ್ಟೆಗಳಲ್ಲಿ ಇಂಧನ ಚಾಲಿತ ವಾಹನಗಳ ಬಳಕೆಯ ಮೇಲೆ ಹಾಕಲಾಗುತ್ತಿರುವ ನಿರ್ಬಂಧಗಳು ಇವಿ ಮೊಬಿಲಿಟಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಕಳೆದ 2 ಎರಡು ವರ್ಷಗಳಲ್ಲಿ ಅವಧಿಯಲ್ಲಿ ಯುರೋಪಿನಲ್ಲಿ ಪ್ರಮುಖ ಇವಿ ವಾಹನ ಮಾರಾಟ ಕಂಪನಿಗಳು ದಾಖಲೆ ಪ್ರಮಾಣದ ಬೆಳವಣಿಗೆ ಸಾಧಿಸಿವೆ.