ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ದೇಶೀಯ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್, ಬುಧವಾರ ಆನ್-ಡಿಮಾಂಡ್ ಡೆಲಿವರಿ ಮತ್ತು ಮೊಬಿಲಿಟಿ ಪ್ಲಾಟ್‌ಫಾರ್ಮ್ ರ್‍ಯಾಪಿಡೊದೊಂದಿಗೆ ಎಂಒಯುಗೆ (ತಿಳುವಳಿಕಾ ಒಡಂಬಡಿಕೆ) ಸಹಿ ಹಾಕಿದೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಈ ತಿಳುವಳಿಕಾ ಒಡಂಬಡಿಕೆಯ (ಎಂಒಯು) ಭಾಗವಾಗಿ, ಟಿವಿಎಸ್ ಮೋಟಾರ್ ಮತ್ತು ರ್‍ಯಾಪಿಡೊ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೊಬಿಲಿಟಿ ಮಾರುಕಟ್ಟೆಯಲ್ಲಿ ತಮ್ಮ ವ್ಯವಹಾರಗಳ ಸಿನರ್ಜಿಗಳನ್ನು ಬಳಸಿಕೊಳ್ಳುವ ಮೂಲಕ ಸಹಯೋಗವನ್ನು ಸಾಧಿಸಲು ಮುಂದಾಗಿವೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಈ ಕುರಿತು ಮತ್ತಷ್ಟು ಮಾಹಿತಿ ನೀಡಿದ ಟಿವಿಎಸ್ ಮೋಟಾರ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು, ಟಿವಿಎಸ್ ಮೋಟಾರ್ ಮತ್ತು ರ್‍ಯಾಪಿಡೊ ತಮ್ಮ ಸಾಮರ್ಥ್ಯದಿಂದ ಚಲನಶೀಲತೆ ಮತ್ತು ತಂತ್ರಜ್ಞಾನ ವೇದಿಕೆಗೆ ಕೊಡುಗೆಯನ್ನು ನೀಡಲಿವೆ. ಮಾಹಿತಿಯ ಪ್ರಕಾರ, ಈ ಪಾಲುದಾರಿಕೆಯು ಐಸ್ ಮತ್ತು ಇವಿ ವಿಭಾಗಗಳೆರಡರಲ್ಲೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಒಳಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

"ಇವಿಗಳು ಮತ್ತು ಭವಿಷ್ಯದ ಮೊಬಿಲಿಟಿಯ ಮೇಲೆ ನಮ್ಮ ನಿರಂತರ ಗಮನದೊಂದಿಗೆ ನಾವು ಯಾವಾಗಲೂ ಉದ್ಯಮದಲ್ಲಿ ವಿದ್ಯುದ್ದೀಕರಣವನ್ನು ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿದ್ದೇವೆ. ರ್‍ಯಾಪಿಡೊ, ಕ್ಯಾಪ್ಟನ್ ಮತ್ತು ರೈಡರ್ಸ್ ನ ಬಲವಾದ ಬಳಕೆದಾರರ ನೆಲೆಯನ್ನು ನಿರ್ಮಿಸಿದ್ದು, ಇಂದು ಭಾರತದಲ್ಲಿ ಪ್ರಮುಖ ಬೈಕ್-ಟ್ಯಾಕ್ಸಿ ಪ್ಲಾಟ್ ಫಾರ್ಮ್ ಆಗಿ ಹೊರಹಿಮ್ಮಿದೆ ಎಂದರು. "

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

"ಟಿವಿಎಸ್ ಎಲೆಕ್ಟ್ರಿಕ್ ಪೋರ್ಟ್ಫೋಲಿಯೊದಿಂದ ನಮ್ಮ ಟೀಮ್‌ನಿಂದ ಉತ್ತಮ ಗುಣಮಟ್ಟದ, ಸಂಪರ್ಕಿತ ಉತ್ಪನ್ನಗಳು ಮತ್ತು ಬಂಡವಾಳವನ್ನು ಬಳಸುವ ಮೂಲಕ ನಾವು ಚಲನಶೀಲತೆ ಮತ್ತು ಹೈಪರ್-ಲೋಕಲ್ ವಿಭಾಗಗಳಿಗೆ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಬಹುದೆಂಬ ವಿಶ್ವಾಸ ನಮಗಿದೆ". ಈ ಪರಿಸರ ವ್ಯವಸ್ಥೆ ಮತ್ತಷ್ಟು ಪ್ರಬುದ್ಧವಾಗುತ್ತಿದ್ದಂತೆ ಟಿವಿಎಸ್ ಮೋಟಾರ್, ಟಿವಿಎಸ್ ಕ್ರೆಡಿಟ್ ಮತ್ತು ರ್ಯಾಪಿಡೋ ದೀರ್ಘಕಾಲೀನ ಕಾರ್ಯತಂತ್ರದ ಪಾಲುದಾರರಾಗಬಹುದು ಎಂದು ಅವರು ಹೇಳಿದರು.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ರ್ಯಾಪಿಡೊ ಸಹ-ಸಂಸ್ಥಾಪಕ ಅರವಿಂದ್ ಸಂಕ ಮಾತನಾಡಿ, "ಕಂಪನಿಯು ದೇಶದಲ್ಲಿ ತನ್ನ ಮೊದಲ ಮತ್ತು ಕೊನೆಯ ಮೈಲಿ ದೈನಂದಿನ ಪ್ರಯಾಣದ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕೈಗೆಟಕುವ, ಆರಾಮದಾಯಕ, ಅನುಕೂಲಕರ ಮತ್ತು ಸುರಕ್ಷಿತ ಪರ್ಯಾಯ ಸಾರಿಗೆ ಸಾಧನಗಳ ಮೂಲಕ ಲಕ್ಷಾಂತರ ಭಾರತೀಯರಿಗೆ ಪ್ರಯಾಣಿಸಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. "

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

2023 ರ ಮಧ್ಯದ ವೇಳೆಗೆ 5-25 ಕಿಲೋವ್ಯಾಟ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಎಲೆಕ್ಟ್ರಿಕ್ ಉತ್ಪನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸುವ ಟಿವಿಎಸ್ ಮೋಟಾರ್ ಕಂಪನಿಯ ಘೋಷಣೆಗೆ ಅನುಗುಣವಾಗಿ ಈ ಒಪ್ಪಂದ ನಡೆದಿದೆ. ಡೆಲಿವರಿ, ಪ್ರಯಾಣಿಕರ ಪ್ರೀಮಿಯಂ, ಹೆಚ್ಚಿನ ಕಾರ್ಯಕ್ಷಮತೆಯ ಮತ್ತು ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಂತಹ ವಿಭಾಗಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಗುರಿಯನ್ನು ಕಂಪನಿ ಹೊಂದಿದೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಇದರೊಂದಿಗೆ, ಕಂಪನಿಯು ದೇಶಾದ್ಯಂತ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉಪಸ್ಥಿತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಈ ಹಿಂದೆ, ಟಿವಿಎಸ್ ಮೋಟಾರ್ ಕಂಪನಿಯು ಭಾರತದ ಪ್ರಮುಖ ಆಹಾರ ವಿತರಣಾ ಪ್ಲಾಟ್‌ಫಾರ್ಮ್ ಸ್ವಿಗ್ಗಿಯೊಂದಿಗೆ ವ್ಯೂಹಾತ್ಮಕ ಪಾಲುದಾರಿಕೆಯನ್ನು ಘೋಷಿಸಿತ್ತು.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಈ ಪಾಲುದಾರಿಕೆಯಡಿಯಲ್ಲಿ, ಟಿವಿಎಸ್ ಮೋಟಾರ್ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ವಿಗ್ಗಿಯ ವಿತರಣಾ ಏಜೆಂಟರಿಗೆ ಒದಗಿಸುತ್ತದೆ. ಕಳೆದ ವರ್ಷ, ಸಾಫ್ಟ್ಬ್ಯಾಂಕ್ ಬೆಂಬಲಿತ ಸ್ವಿಗ್ಗಿ 2025ರ ವೇಳೆಗೆ ಎಲೆಕ್ಟ್ರಿಕ್ ವಾಹನಗಳ ಮೂಲಕ ಪ್ರತಿದಿನ 8,00,000 ಕಿ.ಮೀ ಡೆಲಿವರಿಗಳನ್ನು ಕ್ರಮಿಸಲು ಯೋಜಿಸುತ್ತಿದೆ ಎಂದು ಘೋಷಿಸಿದೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಪೆಟ್ರೋನಾಸ್‌ದೊಂದಿಗೆ ಹೊಸ ಪಾಲುದಾರಿಕೆ

ಟಿವಿಎಸ್ ಮೋಟಾರ್ ತನ್ನ ಫ್ಯಾಕ್ಟರಿ ರೇಸಿಂಗ್ ತಂಡಕ್ಕಾಗಿ ಮಲೇಷಿಯಾ ಮೂಲದ ಹೆಸರಾಂತ ಆಯಿಲ್ ಕಂಪನಿ ಪೆಟ್ರೋನಾಸ್‌ದೊಂದಿಗೆ ಮೊನ್ನೆಯಷ್ಟೇ ಹೊಸ ಪಾಲುದಾರಿಕೆಯನ್ನು ಪ್ರಕಟಸಿದೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಪೆಟ್ರೋಕೆಮಿಕಲ್ಸ್ ದೈತ್ಯ ಪೆಟ್ರೋನಾಸ್‌ನೊಂದಿಗೆ ಮಾಡಿಕೊಂಡಿರುವ ಹೊಸ ಪ್ರಾಯೋಜಕತ್ವದ ಪಾಲುದಾರಿಕೆ ಅಡಿಯಲ್ಲಿ ತಮ್ಮ ರೇಸಿಂಗ್ ಪ್ರೋಗ್ರಾಂನ ಟಿವಿಎಸ್ ರೇಸಿಂಗ್‌ಗೆ ಜನಪ್ರಿಯವಾದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ತಯಾರಕರು PETRONAS TVS ರೇಸಿಂಗ್ ತಂಡವೆಂದು ಮರುಬ್ರಾಂಡ್ ಮಾಡಲಿದ್ದಾರೆ. ಈ ಒಪ್ಪಂದವು ಸಂಪೂರ್ಣವಾಗಿ ಮಲೇಷಿಯಾ ಸರ್ಕಾರದ ಒಡೆತನದಲ್ಲಿರಲಿದ್ದು, ಈ ಮೂಲಕ ಫ್ಯಾಕ್ಟರಿ ರೇಸಿಂಗ್ ತಂಡವು TVS ರೇಸಿಂಗ್‌ನ ಶೀರ್ಷಿಕೆ ಪ್ರಾಯೋಜಕರಾಗಲಿದ್ದಾರೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಹೊಸ ಪ್ರಾಯೋಜಕತ್ವದ ಒಪ್ಪಂದದ ಪ್ರಕಾರ, TVS ಮೋಟಾರ್ ಕಂಪನಿ ಮತ್ತು ಪೆಟ್ರೋನಾಸ್ ಶೀಘ್ರದಲ್ಲೇ ಭಾರತದಲ್ಲಿ TVS Tru4 ರೇಸ್‌ಪ್ರೊ ಎಂದು ಕರೆಯಲ್ಪಡುವ ಕೋ-ಬ್ರಾಂಡೆಡ್ ಎಂಜಿನ್ ಆಯಿಲ್ ಆನ್ನು ಮಾರಾಟ ಮಾಡಲು ಪ್ರಾರಂಭಿಸುತ್ತದೆ. ಹೊಸ ಕೋ-ಬ್ರಾಂಡೆಡ್ (ಸಹ ಬ್ರಾಂಡೆಡ್‌) ಎಂಜಿನ್ ಆಯಿಲ್ ಮೇ 2022 ರಿಂದ ಖರೀದಿಗೆ ಲಭ್ಯವಿರಲಿದೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಪೆಟ್ರೋನಾಸ್ ಹೊಸ ರೇಸಿಂಗ್ ತಂಡಕ್ಕೆ ಅದರ ಉನ್ನತ-ಕಾರ್ಯಕ್ಷಮತೆಯ ಎಂಜಿನ್ ಆಯಿಲ್ ಅನ್ನು ಸ್ಪ್ರಿಂಟಾ ಎಂದು ಕರೆಯಲಾಗುತ್ತದೆ. ಹೊಸ ಪೆಟ್ರೋನಾಸ್ ಟಿವಿಎಸ್ ರೇಸಿಂಗ್ ತಂಡವು ದೇಶದ ಎಲ್ಲಾ ದೇಶೀಯ ದ್ವಿಚಕ್ರ ವಾಹನ ರೇಸಿಂಗ್‌ಗಳಲ್ಲಿ ಭಾಗವಹಿಸಲಿವೆ.

ಟಿವಿಎಸ್-ರ್‍ಯಾಪಿಡೊ ಒಪ್ಪಂದ: ಹೈಪರ್-ಲೋಕಲ್ ವಿಭಾಗಗಳಲ್ಲಿ ತಮ್ಮ ವ್ಯಾಪ್ತಿ ವಿಸ್ತರಿಸುವ ಗುರಿ

ಭಾರತೀಯ ರಾಷ್ಟ್ರೀಯ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್ (INMRC), ಇಂಡಿಯನ್ ನ್ಯಾಷನಲ್ ಸೂಪರ್‌ಕ್ರಾಸ್ ಚಾಂಪಿಯನ್‌ಶಿಪ್ (INSC) ಮತ್ತು ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್ (INRC) ಸೇರಿದಂತೆ ರೋಡ್-ರೇಸಿಂಗ್, ಸೂಪರ್‌ಕ್ರಾಸ್ ಮತ್ತು ರೇಸಿಂಗ್‌ನ ರ್ಯಾಲಿ ಸ್ವರೂಪಗಳಲ್ಲಿ ತಂಡವು ಭಾಗವಹಿಸುತ್ತದೆ.

Most Read Articles

Kannada
English summary
Tvs motor company partnership with rapido to use two wheelers and three wheelers
Story first published: Wednesday, April 27, 2022, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X