ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಟಿವಿಎಸ್ ಮೋಟಾರ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಾಗಿ ಕಂಪನಿಯು ಇದೀಗ ಗ್ರಾಹಕರ ಬೇಡಿಕೆ ಅನುಸಾರವಾಗಿ ಆಕ್ಸೆಸರಿಸ್ ಪ್ಯಾಕೇಜ್ ಪ್ರಕಟಿಸಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಹೊಸ ರೋನಿನ್ ಬೈಕ್ ಮಾದರಿಗಾಗಿ ಟಿವಿಎಸ್ ಕಂಪನಿಯು ಟೂರ್, ಅರ್ಬನ್ ಮತ್ತು ಸ್ಟೈಲ್ ಎನ್ನುವ ಮೂರು ವಿಧವಾದ ಆಕ್ಸೆಸರಿಸ್ ಪ್ಯಾಕೇಜ್ ಪರಿಚಯಿಸಿದ್ದು, ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಳ್ಳಬಹುದು. ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿರುವ ಬಿಡಿಭಾಗಗಳನ್ನು ಆಧರಿಸಿ ಬೆಲೆಗಳು ರೂ. 2,299 ರಿಂದ ಆರಂಭವಾಗಿ ರೂ. 9,599 ಬೆಲೆ ಹೊಂದಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಬೈಕ್ ಮತ್ತಷ್ಟು ಖದರ್ ಆಗಿ ಸಹಕಾರಿಯಾಗುತ್ತವೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಇದರಲ್ಲಿ ಟೂರ್ ಕಿಟ್ ಬಗ್ಗೆ ಹೇಳುವುದಾದರೇ ಇದು ಸ್ಯಾಡಲ್ ಬ್ಯಾಗ್ ಸ್ಟೇ, ರಿಯರ್ ರಾಕ್, ಸ್ಯಾಡಲ್ ಬ್ಯಾಗ್, ಟೈಲ್ ಬ್ಯಾಗ್ ಸ್ಕ್ರೀನ್ ಅನ್ನು ಒಳಗೊಂಡಿದೆ. ಈ ಕಿಟ್‌ನ ಬೆಲೆ ರೂ. 9,599 ಗಳಾಗಿದೆ. ಹಾಗೆಯೇ ಅರ್ಬನ್ ಕಿಟ್‌ನಲ್ಲಿ ಕಂಪನಿಯು ಯುಎಸ್‌ಬಿ ಚಾರ್ಜರ್, ಹೊಂದಾಣಿಕೆ ಲಿವರ್ ಮತ್ತು ಟ್ಯಾಂಕ್ ಬ್ಯಾಗ್ ಅನ್ನು ನೀಡಲಿದ್ದು, ಇದರ ಬೆಲೆ ರೂ. 4,499 ಗಳಾಗಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಸ್ಟೈಲಿಂಗ್ ಕಿಟ್‌ನಲ್ಲಿ ಕಂಪನಿಯು ಬಾರ್ ಎಂಡ್ ವೆಟ್ಸ್, ಟ್ಯಾಂಕ್ ಪ್ಯಾಡ್, ಫ್ರಂಟ್ ಬ್ರೇಕ್ ರಿಸರ್ವಾಯರ್ ಕವರ್, ಎಂಜಿನ್ ಕವರ್ ಮತ್ತು ಇಎಫ್‌ಐ ಕವರ್ ನೀಡಲಿದ್ದು, ಈ ಕಿಟ್‌ನ ಬೆಲೆ ರೂ. 2,299 ಗಳಾಗಿದೆ. ಹೊಸ ಬೈಕ್ ಖರೀದಿ ಮುನ್ನ ನೀವು ಆನ್‌ಲೈನ್ ಕಾನ್ಫಿಗೇಟರ್ ಮೂಲಕ ಆಕ್ಸೆಸರಿಸ್ ಪ್ಯಾಕೇಜ್ ಆಯ್ಕೆ ಮಾಡಬಹುದಾಗಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ಗಳು ನಿಮ್ಮ ಸವಾರಿ ಅಗತ್ಯತೆಗೆ ಸಹಕಾರಿಯಾಗುತ್ತವೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಹೊಸ ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಬೈಕ್ ಬೆಲೆಯನ್ನು ಬಣ್ಣಗಳ ಆಯ್ಕೆ ಮತ್ತು ಎಬಿಎಸ್ ಸೌಲಭ್ಯ ಆಧರಿಸಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.49 ಲಕ್ಷ ಬೆಲೆ ಹೊಂದಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ರೋನಿನ್ ಬೈಕ್ ಮಾದರಿಯು ಬೆಸ್ ವೆರಿಯೆಂಟ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 1.49 ಲಕ್ಷ ಬೆಲೆ ಹೊಂದಿದ್ದರೆ ಬೆಸ್ ಪ್ಲಸ್ ವೆರಿಯೆಂಟ್ ರೂ. 1,56,500 ಬೆಲೆ ಹೊಂದಿದೆ. ಹಾಗೆಯೇ ಟಾಪ್ ಎಂಡ್ ಮಾದರಿಯಾದ ಟಿಡಿ ವೆರಿಯೆಂಟ್ ಎರಡು ಬಣ್ಣಗಳ ಆಯ್ಕೆಯೊಂದಿಗೆ ಆರಂಭಿಕವಾಗಿ ರೂ. 1,68,750 ಬೆಲೆ ಹೊಂದಿದ್ದರೆ ಮತ್ತೊಂದು ಮಾದರಿಯು ರೂ. 1,70,750 ಬೆಲೆ ಹೊಂದಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಹೊಸ ಬೈಕಿನ ಆರಂಭಿಕ ವೆರಿಯೆಂಟ್ ಸಿಂಗಲ್ ಚಾನೆಲ್ ಎಬಿಎಸ್ ಜೊತೆ ಸಿಂಗಲ್ ಟೋನ್ ಬಣ್ಣದ ಆಯ್ಕೆ ಹೊಂದಿದ್ದರೆ ಬೆಸ್ ಪ್ಲಸ್ ವೆರಿಯೆಂಟ್ ಸಿಂಗಲ್ ಚಾನೆಲ್ ಎಬಿಎಸ್ ಜೊತೆಗೆ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ಟಾಪ್ ಎಂಡ್ ಮಾದರಿಯು ಟ್ರಿಪ್ಲಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಒಟ್ಟು ಆರು ಬಣ್ಣದ ಆಯ್ಕೆ ನೀಡಲಾಗಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಟಿವಿಎಸ್ ಹೊಸ ರೋನಿನ್ ಬೈಕ್ ಮಾದರಿಯು 225.9 ಸಿಸಿ ಫ್ಯೂಲ್-ಇಂಜೆಕ್ಟೆಡ್ ಸಿಂಗಲ್-ಸಿಲಿಂಡರ್ ಎಂಜಿನ್‌ ಆಯ್ಕೆ ಪಡೆದುಕೊಂಡಿದ್ದು, ಇದರಲ್ಲಿ ಕಂಪನಿಯು 66 ಎಂಎಂ ಬೋರ್ ಮತ್ತು ಸ್ಟ್ರೋಕ್‌ನೊಂದಿಗೆ ಮೈಲ್ಡ್-ಹೈಬ್ರಿಡ್ ಸಿಸ್ಟಂ ಜೋಡಣೆ ಮಾಡಿದೆ. ಹೊಸ ಎಂಜಿನ್ ಮಾದರಿಯು 7,750 ಆರ್‌ಪಿಎಂನಲ್ಲಿ 20.12 ಬಿಎಚ್‌ಪಿ ಮತ್ತು 3,750 ಆರ್‌ಪಿಎಂನಲ್ಲಿ 19.93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಹೊಸ ಎಂಜಿನ್ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ ಹಿಂದಿನ ಚಕ್ರಕ್ಕೆ ಶಕ್ತಿಯನ್ನು ಕಳುಹಿಸುತ್ತದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ರೋನಿನ್ ಒಂದು ಸಂಯೋಜಿತ ಸ್ಟಾರ್ಟರ್ ಜನರೇಟರ್ ಸಿಸ್ಟಮ್ ಅನ್ನು ಒಳಗೊಂಡಿದ್ದು, ಇದರ ಮೂಲಕ ಎಂಜಿನ್ ಆರಂಭಕ್ಕೆ ಅನುವು ಮಾಡಿಕೊಡವುದರ ಇಂಧನ ದಕ್ಷತೆಗೆ ಸಹಕರಿಸುತ್ತದೆ.

ಇದರೊಂದಿಗೆ ಹೊಸ ರೋನಿನ್ ಮಾದರಿಯು ಡಬಲ್-ಕ್ರೇಡಲ್ ಸ್ಪ್ಲಿಟ್ ಚಾಸಿಸ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಮುಂಭಾಗದಲ್ಲಿ 41-ಎಂಎಂ ಅಪ್‌ಸೈಡ್-ಡೌನ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಗ್ಯಾಸ್-ಚಾರ್ಜ್ಡ್ ಮೊನೊಶಾಕ್ ಹೊಂದಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ರೋನಿನ್ ಬೈಕ್ ಮಾದರಿಯಲ್ಲಿ ಕಂಪನಿಯು ಮುಂಭಾಗದ ಚಕ್ರಗಳಲ್ಲಿ 110/70 ಮತ್ತು ಹಿಂಭಾಗದಲ್ಲಿ 130/70 ಪ್ರೊಫೈಲ್ ಹೊಂದಿರುವ ಟೈರ್‌ಗಳನ್ನು ನೀಡಿದ್ದು, 17-ಇಂಚಿನ 9-ಸ್ಪೋಕ್ ಅಲಾಯ್ ಚಕ್ರಗಳು ಅರಾಮದಾಯಕ ಬೈಕ್ ಸವಾರಿಗೆ ಪೂರಕವಾಗಿವೆ. ಸುರಕ್ಷತೆಗಾಗಿ ಹೊಸ ರೋನಿನ್ ಬೈಕ್ ಮಾದರಿಯಲ್ಲಿ ಸ್ಪೋರ್ಟ್ಸ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸಿಂಗಲ್ ಮತ್ತು ಡ್ಯುಯಲ್-ಚಾನೆಲ್ ಮೂಲಕ ಸ್ವಿಚ್ ಮಾಡಬಹುದಾದ ವಿಧಾನಗಳನ್ನು ಹೊಂದಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ರೋನಿನ್ ಬೈಕ್ ಮಾದರಿಯು ರೌಂಡ್ ಎಲ್ಇಡಿ ಹೆಡ್‌ಲೈಟ್ ಯುನಿಟ್ ಹೊಂದಿದ್ದು, T ಆಕಾರದ ಸಿಗ್ನಿಚೆರ್ ಲ್ಯಾಂಪ್ ಮೂಲಕ ವಿಭಿನ್ನ ನೋಟವನ್ನು ಹೊಂದಿದೆ. ಹಾಗೆಯೇ ಹಿಂಬದಿಯಲ್ಲಿ ಕ್ರಿಸ್ಟಲ್ ಲೈಟ್ ಬಾರ್ ಮೂಲಕ ಹೊಸ ನೋಟ ಹೊಂದಿದ್ದು, ಬಾಣದ ಆಕಾರದ ಎಲ್ಇಡಿ ಟರ್ನ್ ಸಿಗ್ನಲ್ ಲ್ಯಾಂಪ್‌ಗಳನ್ನು ಸಹ ಒಳಗೊಂಡಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಇದೆಲ್ಲದರ ಜೊತೆಗೆ ಹೊಸ ಮಾದರಿಯಲ್ಲಿ ಗೋಲ್ಡ್ ಪೇಂಟ್ ಹೊಂದಿರುವ ಅಪ್‌ಸೈಡ್ ಡೌನ್ ಫೋಕ್ಸ್ ಸ್ಪೋರ್ಟಿ ಲುಕ್ ನೀಡಿದ್ದು, ಟಿಯರ್‌ಡ್ರಾಪ್-ಆಕಾರದ ಇಂಧನ ಟ್ಯಾಂಕ್, ಡ್ಯುಯಲ್-ಪರ್ಪಸ್ ಬ್ಲಾಕ್-ಪ್ಯಾಟರ್ನ್ ಟೈರ್‌ಗಳು, ಬ್ಲ್ಯಾಕ್ಡ್-ಔಟ್ ಎಂಜಿನ್ ಮತ್ತು ಮಲ್ಟಿ-ಟೋನ್ ಪೇಂಟ್ ಆಯ್ಕೆಗಳನ್ನು ಹೊಂದಿದೆ.

ರೋನಿನ್ ಸ್ಕ್ರಾಂಬ್ಲರ್ ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಿವಿಎಸ್

ಹೊಸ ಬೈಕಿನಲ್ಲಿ ಕನೆಕ್ವಿಟಿ ಸೌಲಭ್ಯಕ್ಕಾಗಿ ಟಿವಿಎಸ್ ಕಂಪನಿಯು ವಿಶಿಷ್ಟವಾದ ರೌಂಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮೂಲಕ ಸವಾರರು ಟ್ರಿಪ್ ಅಂಕಿಅಂಶಗಳ ಜೊತೆಗೆ ಗೇರ್ ಶಿಫ್ಟ್ ಇಂಡಿಕೇಟರ್, ರೈಡ್ ಮೋಡ್ ಇಂಡಿಕೇಟರ್, ಟಿವಿಎಸ್ ಸ್ಮಾರ್ಟ್ಎಕ್ಸ್‌ಕನೆಕ್ಟ್ ಸಂಪರ್ಕಿತ ಆಯ್ಕೆ(ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕರೆಗಳು ಮತ್ತು ಎಸ್ಎಂಎಸ್ ಎಚ್ಚರಿಕೆಗಳು) ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯವನ್ನು ಹೊಂದಿದೆ.

Most Read Articles

Kannada
English summary
Tvs ronin accessories revealed details
Story first published: Friday, July 8, 2022, 8:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X