ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಹೊಸ ದ್ವಿಚಕ್ರ ಎಲೆಕ್ಟ್ರಿಕ್ ಮಾದರಿಗಳನ್ನು ಪರಿಚಯಿಸಲು ಸಜ್ಜಾಗಿದೆ. ಇದಕ್ಕಾಗಿ ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ನೂತನ ಇವಿಗಳಿಗಾಗಿ 700 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ, ಕಂಪನಿಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಕೊನೆಯ ತಿಂಗಳಿನಲ್ಲಿ (ಜೂನ್-ಜುಲೈ) ಹೊಸ ದ್ವಿಚಕ್ರ ವಾಹನವನ್ನು ಪರಿಚಯಿಸಬಹುದು. ಹಿರಿಯ ಟಿವಿಎಸ್ ಆಟೋ ಅಧಿಕಾರಿಯೊಬ್ಬರ ಪ್ರಕಾರ, ಕಂಪನಿಯು 5Kw ಮತ್ತು 25Kw ಶ್ರೇಣಿಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಸಂಪೂರ್ಣ ಪೋರ್ಟ್‌ಫೋಲಿಯೊವನ್ನು ನಿರ್ಮಿಸುತ್ತಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಇದು ಮುಂದಿನ ಎಂಟು ತ್ರೈಮಾಸಿಕಗಳಲ್ಲಿ ಬಿಡುಗಡೆಯಾಗಲಿದೆ. ಈ ಉತ್ಪನ್ನಗಳಲ್ಲಿ ಮೊದಲನೆಯದನ್ನು ಈ ವರ್ಷ ಬಿಡುಗಡೆ ಮಾಡಲಾಗುವುದು. ಕಂಪನಿಯು ತನ್ನ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಐಕ್ಯೂಬ್‌ನಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಪ್ರಸ್ತುತ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ತನ್ನ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 10,000 ಯುನಿಟ್‌ಗಳಿಗೆ ಹೆಚ್ಚಿಸಲು ಬಯಸಿದೆ. TVS iQube 4.4 kW Lithium Ion ಬ್ಯಾಟರಿಯಿಂದ ಚಾಲಿತವಾಗಿದ್ದು, ಇದು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 75 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಪ್ರಸ್ತುತ, ಟಿವಿಎಸ್ ಆಟೋ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡಾ 17 ರಷ್ಟು ಪಾಲನ್ನು ಹೊಂದಿದೆ. ಕಂಪನಿಯು ಕಳೆದ ಹಣಕಾಸು ವರ್ಷದಲ್ಲಿ (2021-2022) 20.5 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ, ಕಂಪನಿಯು ಅತಿ ಹೆಚ್ಚು 10.9 ಲಕ್ಷ ವಾಹನಗಳನ್ನು ರಫ್ತು ಮಾಡಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಇತ್ತೀಚೆಗೆ, TVS ತನ್ನ ಸ್ಪೋರ್ಟಿ Ntorq 125 ಸ್ಕೂಟರ್‌ನ XT ರೂಪಾಂತರವನ್ನು ಸಹ ಪರಿಚಯಿಸಿದೆ. ಹೊಸ ಸ್ಕೂಟರ್ ಹೆಚ್ಚು ರೇಸ್ ಆಧಾರಿತ ವಿನ್ಯಾಸ ಮತ್ತು ಹೊಸ ಬಣ್ಣದ ಯೋಜನೆಯೊಂದಿಗೆ ಬರುತ್ತದೆ. Ntorq 125 XT ಅನ್ನು ಭಾರತದಲ್ಲಿ 1,02,823 ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಈ ರೂಪಾಂತರವು ಮುಂಭಾಗದ ಡಿಸ್ಕ್ ಬ್ರೇಕ್‌ನೊಂದಿಗೆ ನಿಯಾನ್ ಗ್ರೀನ್ ಬಣ್ಣದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ರೂಪಾಂತರವು ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಪ್ಲಿಟ್ ಸ್ಟೈಲ್ ಡಿಸ್ಪ್ಲೇ ಮತ್ತು ನವೀಕರಿಸಿದ ಸಂಪರ್ಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಪ್ರಸ್ತುತ ರೂಪಾಂತರದ 124.8cc ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು Ntorq 125 XT ನಲ್ಲಿ ಬಳಸಲಾಗಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಈ ಎಂಜಿನ್ ಗರಿಷ್ಠ 9.25 bhp ಶಕ್ತಿಯನ್ನು ಮತ್ತು 10.5 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಟಿವಿಎಸ್ ಮೋಟಾರ್ ತನ್ನ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏಪ್ರಿಲ್ 2022 ರಲ್ಲಿ ಹೆಚ್ಚಳವನ್ನು ದಾಖಲಿಸಿದೆ. ಟಿವಿಎಸ್‌ನ ಮಾರಾಟ ವರದಿಯನ್ನು ನೋಡುವುದಾದರೆ, ಕಂಪನಿಯು ಏಪ್ರಿಲ್‌ನಲ್ಲಿ ಒಟ್ಟು 2,80,022 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಇದು ಏಪ್ರಿಲ್ 2021 ರಲ್ಲಿ ಮಾರಾಟವಾದ 2,80,022 ಯುನಿಟ್‌ಗಳಿಗಿಂತ ಶೇಕಡಾ 24 ರಷ್ಟು ಹೆಚ್ಚಾಗಿದೆ. ಕಂಪನಿಯು ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 1,80,533 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ, ಇದು ಏಪ್ರಿಲ್ 2021 ರಲ್ಲಿ ಮಾರಾಟವಾದ 1,31,386 ಯುನಿಟ್‌ಗಳಿಗಿಂತ 37% ಹೆಚ್ಚಾಗಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಮೋಟಾರ್‌ಸೈಕಲ್ ಮಾರಾಟದ ಕುರಿತು ಮಾತನಾಡುವುದಾದರೆ, ಟಿವಿಎಸ್‌ನ ಮೋಟಾರ್‌ಸೈಕಲ್ ಮಾರಾಟವು ಏಪ್ರಿಲ್ 2022 ರಲ್ಲಿ 1,39,027 ಯುನಿಟ್‌ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ4 ರಷ್ಟು ಬೆಳವಣಿಗೆಯನ್ನು ಹೊಂದಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 1,33,227 ಯುನಿಟ್‌ಗಳಿಗೆ ಹೋಲಿಸಿದರೆ. ಸ್ಕೂಟರ್ ಮಾರಾಟವು ಕಳೆದ ವರ್ಷ ಏಪ್ರಿಲ್‌ನಲ್ಲಿ ಕೇವಲ 65,213 ಯುನಿಟ್‌ಗಳಿಂದ 1,02,209 ಯುನಿಟ್‌ಗಳಿಗೆ 57% ರಷ್ಟು ಹೆಚ್ಚಾಗಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಇನ್ನು ಇತ್ತೀಚೆಗೆ ತಿಳುವಳಿಕಾ ಒಡಂಬಡಿಕೆಯ (ಎಂಒಯು) ಭಾಗವಾಗಿ, ಟಿವಿಎಸ್ ಮೋಟಾರ್ ಮತ್ತು ರ್‍ಯಾಪಿಡೊ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೊಬಿಲಿಟಿ ಮಾರುಕಟ್ಟೆಯಲ್ಲಿ ತಮ್ಮ ವ್ಯವಹಾರಗಳ ಸಿನರ್ಜಿಗಳನ್ನು ಬಳಸಿಕೊಳ್ಳುವ ಮೂಲಕ ಸಹಯೋಗವನ್ನು ಸಾಧಿಸಲು ಮುಂದಾಗಿವೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಈ ಕುರಿತು ಮತ್ತಷ್ಟು ಮಾಹಿತಿ ನೀಡಿದ ಟಿವಿಎಸ್ ಮೋಟಾರ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು, ಟಿವಿಎಸ್ ಮೋಟಾರ್ ಮತ್ತು ರ್‍ಯಾಪಿಡೊ ತಮ್ಮ ಸಾಮರ್ಥ್ಯದಿಂದ ಚಲನಶೀಲತೆ ಮತ್ತು ತಂತ್ರಜ್ಞಾನ ವೇದಿಕೆಗೆ ಕೊಡುಗೆಯನ್ನು ನೀಡಲಿವೆ. ಮಾಹಿತಿಯ ಪ್ರಕಾರ, ಈ ಪಾಲುದಾರಿಕೆಯು ಐಸ್ ಮತ್ತು ಇವಿ ವಿಭಾಗಗಳೆರಡರಲ್ಲೂ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಒಳಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಪ್ರಮಾಣಿತ ಬ್ಯಾಟರಿ, ಹಲವು ವೈಶಿಷ್ಟ್ಯಗಳೊಂದಿಗೆ ಶೀಘ್ರದಲ್ಲೇ ಬರಲಿದೆ TVSನ ಹೊಸ ಇವಿ ಸ್ಕೂಟರ್

ಇವಿಗಳು ಮತ್ತು ಭವಿಷ್ಯದ ಮೊಬಿಲಿಟಿಯ ಮೇಲೆ ನಮ್ಮ ನಿರಂತರ ಗಮನದೊಂದಿಗೆ ನಾವು ಯಾವಾಗಲೂ ಉದ್ಯಮದಲ್ಲಿ ವಿದ್ಯುದ್ದೀಕರಣವನ್ನು ಮುನ್ನಡೆಸುವಲ್ಲಿ ಮುಂಚೂಣಿಯಲ್ಲಿದ್ದೇವೆ. ರ್‍ಯಾಪಿಡೊ, ಕ್ಯಾಪ್ಟನ್ ಮತ್ತು ರೈಡರ್ಸ್ ನ ಬಲವಾದ ಬಳಕೆದಾರರ ನೆಲೆಯನ್ನು ನಿರ್ಮಿಸಿದ್ದು, ಇಂದು ಭಾರತದಲ್ಲಿ ಪ್ರಮುಖ ಬೈಕ್-ಟ್ಯಾಕ್ಸಿ ಪ್ಲಾಟ್ ಫಾರ್ಮ್ ಆಗಿ ಹೊರಹಿಮ್ಮಿದೆ ಎಂದರು.

Most Read Articles

Kannada
English summary
Tvs to launch new electric two wheeler in first quarter fy 2023
Story first published: Tuesday, May 10, 2022, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X