ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!

ಎಲೆಕ್ಟ್ರಿಕ್ ವಾಹನಗಳು ವಿಶ್ವದ ಮುಂದಿನ ಭವಿಷ್ಯವಾಗಿವೆ. ಸದ್ಯ ಏರುತ್ತಿರುವ ಪೆಟ್ರೋಲ್ ಬೆಲೆ, ವಾಯು ಮಾಲಿನ್ಯವನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಇದರ ಭಾಗವಾಗಿ ಸಬ್ಸಿಡಿ ಕೂಡ ನೀಡಲಾಗುತ್ತಿದ್ದು ಕೈಗೆಟುಕುವ ಬೆಲೆಗೆ ಇವಿಗಳು ಲಭ್ಯವಾಗುತ್ತಿರುವುದರಿಂದ ದೇಶದಲ್ಲಿ ಜನಪ್ರಿಯವಾಗುತ್ತಿವೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಪ್ರಸ್ತುತ ಸ್ಟಾರ್ಟ್‌ಅಪ್‌ ಕಂಪನಿಗಳು ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿವೆ. ಒಂದೆರಡು ದೊಡ್ಡ ಬ್ರಾಂಡ್‌ಗಳು ಬಿಟ್ಟರೇ ಇವಿ ವಾಹನ ವಲಯದಲ್ಲಿ ಉಳಿದೆಲ್ಲವೂ ಸ್ಟಾರ್ಟ್‌ಅಪ್‌ಗಳೇ ಇವೆ. ಇದೀಗ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿರುವುದರಿಂದ ದೊಡ್ಡ ಬ್ರ್ಯಾಂಡ್‌ಗಳು ಸಹ ಮುಂಬರುವ ದಿನಗಳಲ್ಲಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗುತ್ತಿವೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಇದರಲ್ಲಿ ಆರು ಪ್ರಮುಖ ಬ್ರಾಂಡ್‌ಗಳು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿವೆ. ಇವುಗಳಲ್ಲಿ ಕೆಲವು ತಮ್ಮ ಪೆಟ್ರೋಲ್ ಮಾದರಿಯನ್ನೇ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ನೀಡಲು ಯೋಜಿಸುತ್ತಿದ್ದರೇ ಇನ್ನೂ ಕೆಲವು ಹೊಸ ಮಾದರಿಗಳನ್ನು ಪರಿಚಯಿಸಲಿವೆ. ಯಾವೆಲ್ಲಾ ಬ್ರಾಂಡ್‌ಗಳು ಈ ಸಾಲಿನಲ್ಲಿವೆ ಎಂಬುದನ್ನು ಕೆಳಗೆ ನೋಡೋಣ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ಮೋಟೋಕಾರ್ಪ್ ಶೀಘ್ರದಲ್ಲೇ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿಡಾ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ. ಈ ಹೊಸ ಸ್ಕೂಟರ್ ಅಕ್ಟೋಬರ್ 7 ರಂದು ಪ್ರದರ್ಶನಗೊಳ್ಳಲಿದ್ದು, ಬೆಲೆಯು 1 ರಿಂದ 1.20 ಲಕ್ಷ (ಎಕ್ಸ್ ಶೋ ರೂಂ) ರೂ. ನಡುವೆ ಇರಲಿದೆ ಎಂದು ಅಂದಾಜಿಸಲಾಗಿದೆ. ಅಧಿಕೃತ ಶ್ರೇಣಿ, ಬ್ಯಾಟರಿ ಸ್ಪೆಕ್ಸ್ ಮತ್ತು ಮೋಟಾರ್ ಪವರ್ ಔಟ್‌ಪುಟ್ ಸೇರಿದಂತೆ ಹೆಚ್ಚಿನ ವಿವರಗಳು ಇನ್ನೂ ತಿಳಿದುಬಂದಿಲ್ಲ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಹೋಂಡಾದಿಂದ ಮುಂಬರಲಿರುವ ಎಲೆಕ್ಟ್ರಕ್ ಸ್ಕೂಟರ್ ಆಕ್ಟಿವಾ ಹೆಸರಿನಲ್ಲಿ ಮಾರಾಟವಾಗುವ ಸಾಧ್ಯತೆಯಿದೆ, ಮುಂಬರುವ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರದಲ್ಲೇ ಭಾರತಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ ಸುಮಾರು 100 ಕಿ.ಮೀ ಮೈಲೇಜ್ ನೀಡುತ್ತದೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಜೊತೆಗೆ ಬಹು ಚಾರ್ಜಿಂಗ್ ಆಯ್ಕೆಗಳನ್ನು ಹೊಂದಿರಲಿದೆ. ಜಪಾನಿನ ತಯಾರಕರು ಈ ಸ್ಕೂಟರ್‌ನ ಬೆಲೆಯನ್ನು 1.15 ಲಕ್ಷ (ಎಕ್ಸ್-ಶೋರೂಮ್)ರೂ.ನಲ್ಲಿ ಬೆಲೆ ನಿಗಧಿಪಡಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು, ಶೀಘ್ರದಲ್ಲೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿದ್ದಾರೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಯಮಹಾ ಎಲೆಕ್ಟ್ರಿಕ್ ಸ್ಕೂಟರ್

ಯಮಹಾ ಕಂಪನಿಯು ನಿಯೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2023 ರ ಆರಂಭದಲ್ಲಿ ಭಾರತಕ್ಕೆಯ ತರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಹೊಸ ಯಮಹಾ ಎಲೆಕ್ಟ್ರಿಕ್ ಸ್ಕೂಟರ್ 19.2 Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದ್ದು ಅದು 2.5 kW ಮೋಟಾರ್‌ಗೆ ಶಕ್ತಿಯನ್ನು ನೀಡುತ್ತದೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

136 Nm ಟಾರ್ಕ್ ಉತ್ಪಾದನೆಯೊಂದಿಗೆ ಈ ಸ್ಕೂಟರ್ ಎಥರ್ 450X ನಂತಹ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕುವ ಸಾಧ್ಯತೆಯಿದೆ. ಇದರ ಬೆಲೆ ಸುಮಾರು 1.25 ರಿಂದ 1.3 ಲಕ್ಷ (ಎಕ್ಸ್ ಶೋ ರೂಂ)ರೂ.ವರೆಗೆ ಇರಲಿದೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಸುಜುಕಿ ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್

ಸುಜುಕಿ ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚೆಗೆ ದೇಶದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಶೀಘ್ರದಲ್ಲೇ ಭಾರತಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದ್ದು, ಸುಜುಕಿ ಬರ್ಗ್‌ಮ್ಯಾನ್ ದೇಶದ ಅತ್ಯಂತ ಅಗ್ರೆಸಿವ್ ಲುಕ್‌ ಪಡೆದಿರುವ ಸ್ಕೂಟರ್‌ಗಳಲ್ಲಿ ಒಂದಾಗಿದೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಸ್ಕೂಟರ್‌ನ ಎಲೆಕ್ಟ್ರಿಕ್ ಪುನರಾವರ್ತನೆಯು ಇದೇ ರೀತಿಯ ನಿಲುವನ್ನು ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಅಧಿಕೃತ ವಿವರಣೆಗಳು ಇನ್ನೂ ತಿಳಿದಿಲ್ಲವಾದರೂ, ಒಂದೇ ಚಾರ್ಜ್‌ನಲ್ಲಿ ಸುಮಾರು 100 ಕಿ.ಮೀ ಮೈಲೇಜ್ ನೀಡುವ ಸಾಧ್ಯತೆಯಿದೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿ ಹೊಸ iQube ಅನ್ನು ಪ್ರಾರಂಭಿಸಿದ ನಂತರ, TVS ಈಗ ಮುಂದಿನ ಎರಡು ತಿಂಗಳುಗಳಲ್ಲಿ ಹೊಸ iQube ST ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದರ ಜೊತೆಗೆ ಬ್ರ್ಯಾಂಡ್ 2023 ಅಥವಾ 2024 ರ ಕೊನೆಯಲ್ಲಿ ಹೆಚ್ಚು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ತನ್ನ ಎಲೆಕ್ಟ್ರಿಕ್ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಯೋಜಿಸಿದೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

iQube ST 120-130 km ಗಿಂತ ಹೆಚ್ಚಿನ ವ್ಯಾಪ್ತಿಯೊಂದಿಗೆ ಬಲವಾದ ಪ್ಯಾಕೇಜ್ ಅನ್ನು ನೀಡುತ್ತದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಟಿವಿಎಸ್ ಶೀಘ್ರದಲ್ಲೇ ಹಂಚಿಕೊಳ್ಳಲಿದೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಬಜಾಜ್ ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ಪ್ರಮುಖ ನವೀಕರಣವನ್ನು ಪಡೆಯಲಿದೆ. ಹೊಸ ಚೇತಕ್ ರಿಫ್ರೆಶ್ ಲುಕ್, ಉತ್ತಮ ಫೀಚರ್‌ಗಳು, ದೀರ್ಘ ಶ್ರೇಣಿ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರ ಜೊತೆಗೆ, ಬಜಾಜ್ ಸಣ್ಣ ಬ್ಯಾಟರಿ ಪ್ಯಾಕ್‌ನೊಂದಿಗೆ ಹೆಚ್ಚು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಟಿವಿಎಸ್, ಬಜಾಜ್, ಹೀರೋ, ಹೋಂಡಾ ಬ್ರಾಂಡ್‌ಗಳಿಂದ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಆಯಾ ಬ್ರಾಂಡ್‌ಗಳ ಭವಿಷ್ಯವನ್ನು ನಿರ್ಧರಿಸಲಿರುವ ಕಾರಣ ಹೆಚ್ಚು ಜಾಗರೂಕತೆಯಿಂದ ಈ ಎಲೆಕ್ಟ್ರಿಕ್ ವಾಹನಗಳ ನಿರ್ಮಾವಾಗಲಿದೆ. ಸದ್ಯ ಎದುರಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳ ಬೆಂಕಿ ಅವಘಡಗಳು ದೊಡ್ಡ ಬ್ರಾಂಡ್‌ಗಳಿಗೂ ಕೆಟ್ಟ ಹೆಸರು ತಂದೊಡ್ಡುವ ಕಾರಣದಿಂದಾಗಿ ಹಲವು ಪರೀಕ್ಷೆಗಳ ನಂತರವೇ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ.

Most Read Articles

Kannada
English summary
Upcoming electric scooters from TVS Bajaj Hero Honda brands
Story first published: Thursday, October 6, 2022, 10:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X