ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಯಮಹಾ ಕಂಪನಿಯು ಮುಂಬರುವ ಹಬ್ಬದ ಋತುವಿನಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡುತ್ತಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಯಮಹಾ ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಮಾದರಿಗಳಾದ ಫ್ಯಾಸಿನೋ 125(Fascino 125 Fi Hybrid) ಮತ್ತು ರೇ ಜೆಡ್ಆರ್ 125(RayZE 125 Fi Hybrid) ಸ್ಕೂಟರ್ ಹೈಬ್ರಿಡ್ ಆವೃತ್ತಿಗಳ ಮೇಲೆ ಆಫರ್ ಘೋಷಣೆ ಮಾಡಿದ್ದು, ಆಯ್ದ ರಾಜ್ಯಗಳಲ್ಲಿ ಮಾತ್ರ ಈ ಹೊಸ ಆಫರ್ ಲಭ್ಯವಿರಲಿದೆ. ಫ್ಯಾಸಿನೋ 125 ಮತ್ತು ರೇ ಜೆಡ್ಆರ್ 125 ಸ್ಕೂಟರ್ ಖರೀದಿದಾರರಿಗೆ ಕಂಪನಿಯು ರೂ. 1,500 ತನಕ ಕ್ಯಾಶ್‌ಬ್ಯಾಕ್ ಸೇರಿದಂತೆ ಹಲವಾರು ಉಳಿತಾಯ ಆಫರ್ ನೀಡುತ್ತಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಹೊಸ ಆಫರ್ ಈ ತಿಂಗಳು ಕೊನೆಯ ತನಕ ಬುಕಿಂಗ್ ಮಾಡುವ ಗ್ರಾಹಕರಿಗೆ ಅನ್ವಯಿಸಲಿದ್ದು, ಹಬ್ಬದ ಋತುಗಳಲ್ಲಿ ಹೆಚ್ಚಲಿರುವ ವಾಹನ ಖರೀದಿಯ ಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ಪ್ರಮುಖ ಆಫರ್‌ಗಳನ್ನು ಘೋಷಣೆ ಮಾಡಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಯಮಹಾದ ಪ್ರಸ್ತುತ ಮಾರುಕಟ್ಟೆಯಲ್ಲಿ YZF R15 V4.0, YZF-R15 V3.0, ಮತ್ತು MT-15 ಸೇರಿದಂತೆ FZ 25, FZS 25, FZ-S Fi, FZX, Aerox ಮ್ಯಾಕ್ಸಿ-ಸ್ಕೂಟರ್, Fascino 125 Fi ಹೈಬ್ರಿಡ್, RayZE 125 Fi ಹೈಬ್ರಿಡ್ ಮತ್ತು ಸ್ಟ್ರೀಟ್ ರ‍್ಯಾಲಿ 125 Fi ಹೈಬ್ರಿಡ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಸದ್ಯ ಮೂರನೇ ಸ್ಥಾನ ಪಡೆದಿರುವ ಫ್ಯಾಸಿನೋ 125 ಮತ್ತು ರೇ ಜೆಡ್ಆರ್ 125 ಮಾದರಿಗಳು ಆಕರ್ಷಕ ವಿನ್ಯಾಸದೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಸ್ಕೂಟರ್ ಮಾದರಿಗಳಾಗಿದ್ದು, ಯಮಹಾ ಹೊಸ ಸ್ಕೂಟರ್ ಖರೀದಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

125ಸಿಸಿ ಸ್ಕೂಟರ್‌ಗಳ ವಿಭಾಗದಲ್ಲಿ ಯಮಹಾ ಸ್ಕೂಟರ್‌ಗಳು ಕೂಡಾ ಮುಂಚೂಣಿಯಲ್ಲಿದ್ದು, ಕಂಪನಿಯು ಫ್ಯಾಸಿನೋ 125 ಮತ್ತು ರೇ ಜೆಡ್ಆರ್ ಮಾದರಿಗಳ ಹೈಬ್ರಿಡ್ ಮಾದರಿಯನ್ನು ಬಿಡುಗಡೆಗೊಳಿಸುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಫ್ಯಾಸಿನೋ ಮಾದರಿಯನ್ನು 125ಸಿಸಿ ಫ್ಯೂಲ್ ಇಂಜೆಕ್ಷೆಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ತದನಂತರ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಡ್ರಮ್ ಮತ್ತು ಡಿಸ್ಕ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಫ್ಯಾಸಿನೋ 125 ಹೈಬ್ರಿಡ್ ಸ್ಕೂಟರಿನ ಡ್ರಮ್ ವೆರಿಯೆಂಟ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 76,100 ಮತ್ತು ಡಿಸ್ಕ್ ವೆರಿಯೆಂಟ್ ಬೆಲೆಯು ರೂ. 77,100 ಕ್ಕೆ ನಿಗದಿಪಡಿಸಲಾಗಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ನವೀಕೃತ ರೇ ಜೆಡ್ಆರ್ ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಹೈಬ್ರಿಡ್ ಸ್ಕೂಟರ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.80,230 ಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 89,330 ಬೆಲೆ ಹೊಂದಿವೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ರೇ ಜೆಡ್ಆರ್ ಎಫ್ಐ ಮಾದರಿಯಲ್ಲಿ ಡ್ರಮ್(ರೂ.80 230) ಮತ್ತು ಡಿಸ್ಕ್(ರೂ. 85 330) ಮಾದರಿಗಳನ್ನು ನೀಡಲಾಗಿದ್ದು, ಸ್ಪೋರ್ಟಿ ವಿನ್ಯಾಸದ ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಹೈಬ್ರಿಡ್ ಆವೃತ್ತಿಯು ಸಿಂಗಲ್ ಮಾದರಿಯೊಂದಿಗೆ ರೂ. 89,330 ಬೆಲೆ ಹೊಂದಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಯಮಹಾ ಕಂಪನಿಯು ಮೂರು ಸ್ಕೂಟರ್ ಮಾದರಿಗಳಲ್ಲೂ ಒಂದೇ ಮಾದರಿಯ 125 ಸಿಸಿ ಬ್ಲೂ ಕೋರ್ ಎಂಜಿನ್ ಆಯ್ಕೆ ಹೊಂದಿದ್ದು, 8.2 ಬಿಎಚ್‌ಪಿ ಮತ್ತು 10.3 ಎನ್ಎಂ ಟಾರ್ಕ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವು ಇಂಧನ ದಕ್ಷತೆಗೆ ಸಹಕಾರಿಯಾಗಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಇದರಲ್ಲಿ ಹೊಸದಾಗಿ ಜೋಡಣೆ ಮಾಡಲಾಗಿರುವ ಸ್ಟಾರ್ಟರ್ ಮೋಟಾರ್ ಜನರೇಟರ್ (ಎಸ್‌ಎಂಜಿ) ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಇಂಧನ ದಕ್ಷತೆಗೆ ಸಾಕಷ್ಟು ಸಹಕಾರಿಯಾಗಿದ್ದು, ಹೈಬ್ರಿಡ್ ತಂತ್ರಜ್ಞಾನವು ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸಲಿದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ಸ್ಕೂಟರ್ ನಿಲುಗಡೆಯಾಗಿ ಸ್ಟಾರ್ಟ್ ಆದ ನಂತರ ಮೂರು ಸೇಕೆಂಡ್‌ಗಳ ಕಾಲ ಎಂಜಿನ್ ಚಾಲನೆಗೆ ಪವರ್ ಅಸಿಸ್ಟ್ ಆಗಿ ಸಹಕರಿಸುವ ಹೈಬ್ರಿಡ್ ತಂತ್ರಜ್ಞಾನವು ಎಂಜಿನ್ ಆರಂಭದಲ್ಲಿನ ಇಂಧನ ದಹಿಸುವಿಕೆಯನ್ನು ಕಡಿಮೆಗೊಳಿಸಿ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

ವಾಹನ ದಟ್ಟಣೆಯ ಸಂದರ್ಭದಲ್ಲಿ ವಾಹನಗಳನ್ನು ಪದೇ ಪದೇ ಎಂಜಿನ್ ಆನ್ ಮತ್ತು ಆಫ್ ಮಾಡಿದಾಗ ಆಗುವ ಇಂಧನ ವ್ಯರ್ಥವು ಮೈಲೇಜ್‌ಗೆ ಹೊಡೆತ ನೀಡಲಿದ್ದು, ಯಮಹಾ ಹೊಸ ತಂತ್ರಜ್ಞಾನವು ಇಂಧನ ವ್ಯರ್ಥ ತಡೆದು ದಕ್ಷತೆಯನ್ನು ಹೆಚ್ಚಿಸಲು (ಪ್ರತಿ ಲೀಟರ್‌ಗೆ 55-60 ಕಿ.ಮೀ) ಸಹಕಾರಿಯಾಗುತ್ತದೆ.

ಯಮಹಾ 125 ಸಿಸಿ ಹೈಬ್ರಿಡ್ ಸ್ಕೂಟರ್‌ಗಳ ಖರೀದಿ ಮೇಲೆ ವಿಶೇಷ ಆಫರ್ ಘೋಷಣೆ

125 ಸಿಸಿ ವಿಭಾಗದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಯು ಯಮಹಾ ಸ್ಕೂಟರ್ ಮಾದರಿಗಳಿಗೆ ಸಲ್ಲಲಿದ್ದು, ಜೊತೆಗೆ ಹೊಸ ಸ್ಕೂಟರ್‌ನಲ್ಲಿ ನೀಡಲಾಗಿರುವ ಎಂಜಿನ್ ಕಟ್ ಆಫ್ ಸ್ವಿಚ್ ತಂತ್ರಜ್ಞಾನವು ಸೈಡ್ ಸ್ಟ್ಯಾಂಡ್ ತೆಗೆಯದ ಹೊರತು ಸ್ಕೂಟರ್ ಚಾಲನೆ ಮಾಡಲು ಸಾಧ್ಯವಿಲ್ಲರುವುದು ಕೂಡಾ ಪ್ರಮುಖ ಫೀಚರ್ ಎನ್ನಬಹುದು.

Most Read Articles

Kannada
Read more on ಯಮಹಾ yamaha
English summary
Yamaha festive season offers announced on 125 cc hybrid scooters
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X