Just In
- 1 hr ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 15 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 16 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 17 hrs ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
Don't Miss!
- News
ಕಬ್ಬನ್ ಪಾರ್ಕ್ನಲ್ಲಿ ನಾಯಿಗಳ ವಾಯುವಿಹಾರಕ್ಕೆ ನಿಷೇಧ ಹೇರಿದ ಸರ್ಕಾರ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Sports
Ind vs Eng: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊರೊನಾ ವೈರಸ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಭಾರತದಲ್ಲಿ ಬೆಲೆ ಏರಿಕೆ ಪಡೆದುಕೊಂಡ ಯಮಹಾ ಎಫ್ಜೆಡ್-ಎಕ್ಸ್ ಬೈಕ್
ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಹೊಸ ಎಫ್ಜೆಡ್-ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಇದೀಗ ಯಮಹಾ ಕಂಪನಿಯು ಈ ಎಫ್ಜೆಡ್-ಎಕ್ಸ್ ಬೈಕಿನ ಬೆಲೆಯನ್ನು ರೂ.1,600 ವರೆಗೆ ಹೆಚ್ಚಿಸಲಾಗಿದೆ.

ಬೆಲೆ ಏರಿಕೆಯ ಬಳಿಕ ಈ ಯಮಹಾ ಎಫ್ಜೆಡ್-ಎಕ್ಸ್ ಬೈಕಿನ ಬೆಲೆಯು ರೂ.1,30,400 ಆಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಸ್ಟೈಲಿಂಗ್, ಎಂಜಿನ್ ಅಥವಾ ಇತರ ಯಾವುದೇ ನವೀಕರಣಗಳು ಅಥವಾ ಬದಲಾವಣೆಗಳನ್ನು ಹೊಂದಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಕ್ಸ್ಎಸ್ಆರ್ ಮಾದರಿಯಿಂದ ಸ್ಫೂರ್ತಿ ಪಡೆದ ಹೊಸ ಎಫ್ಜೆಡ್-ಎಕ್ಸ್ ಬೈಕ್ ಬೈಕ್ ರೆಟ್ರೊ ಶೈಲಿಯ ವಿನ್ಯಾಸವನ್ನು ಹೊಂದಿದೆ.

ಹೊಸ ಯಮಹಾ ಎಫ್ಜೆಡ್-ಎಕ್ಸ್ ಬೈಕ್ ಅದೇ ಸರಣಿಯ ಎಫ್ಜೆಡ್ ವಿ3 ಹಾಗೂ ಎಫ್ಝಡ್ಎಸ್ ವಿ3 ಮಾದರಿಗಳಿಗಿಂತ ಮೇಲಿನ ಸ್ಥಾನದಲ್ಲಿದೆ. ಯಮಹಾ ಎಫ್ಜೆಡ್-ಎಕ್ಸ್ ಬೈಕ್ ಎಫ್ಜೆಡ್ ವಿ3 ಕಮ್ಯೂಟರ್ ಬೈಕಿನ ಅದೇ ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ.

ಈ ಯಮಹಾ ಎಫ್ಜೆಡ್-ಎಕ್ಸ್ ಮಾದರಿಯು ಖಂಡಿತವಾಗಿಯೂ ತನ್ನ ಸ್ಟೈಲಿಂಗ್ ಅನ್ನು ಎಕ್ಸ್ಎಸ್ಆರ್ 155 ಬೈಕಿನಿಂದ ಎರವಲು ಪಡೆದುಕೊಂಡಿದೆ, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಮತ್ತು ಅನನ್ಯ ಅಲ್ಯೂಮಿನಿಯಂ ಬ್ರಾಕೆಟ್ಗಳೊಂದಿಗೆ ವೃತ್ತಾಕಾರದ ಎಲ್ಇಡಿ ಹೆಡ್ಲ್ಯಾಂಪ್ ಅನ್ನು ಒಳಗೊಂಡಿದೆ.

ಇದರೊಂದಿಗೆ ಟಿಯರ್ ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ಸಿಂಗಲ್-ಪೀಸ್ ಟಕ್ ಮತ್ತು ರೋಲ್ ಸೀಟ್, ಅಂಡರ್ಬೆಲ್ಲಿ ಕೌಲ್ ಮತ್ತು ಕಪ್ಪಾದ ಬಾಡಿ ಪ್ಯಾನೆಲ್ಗಳನ್ನು ಸಹ ಒಳಗೊಂಡಿದೆ. ಹಿಂಭಾಗದಲ್ಲಿ ಗ್ರ್ಯಾಬ್ ರೈಲ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಒಳಗೊಂಡಿದೆ.

ಈ ಹೊಸ ಎಫ್ಜೆಡ್-ಎಕ್ಸ್ ಬೈಕ್ 2020 ಎಂಎಂ ಉದ್ದ, 785 ಎಂಎಂ ಅಗಲ ಮತ್ತು 1115 ಎಂಎಂ ಎತ್ತರವನ್ನು ಹೊಂದಿದೆ. ಇನ್ನು ಈ ಯಮಹಾ ಎಫ್ಝಡ್-ಎಕ್ಸ್ ಬೈಕ್ 1330 ಎಂಎಂ ವ್ಹೀಲ್ಬೇಸ್ ಅನ್ನು ಹೊಂದಿರಲಿದೆ. ಇದೇ ಸರಣಿಯ ಎಫ್ಜೆಡ್ -150 ಬೈಕ್ ಕೂಡ ಇದೇ ರೀತಿಯ ವ್ಹೀಲ್ಬೇಸ್ ಅನ್ನು ಹೊಂದಿರಲಿದೆ.

ಈ ಯಮಹಾ ಎಫ್ಜೆಡ್-ಎಕ್ಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ನೊಂದಿಗೆ ಪ್ರಿ-ಲೋಡ್ ಹೊಂದಾಣಿಕೆಯನ್ನು ಹೊಂದಿದೆ.

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಈ ಹೊಸ ಯಮಹಾ ಬೈಕಿನಲ್ಲಿ ಎಲ್ಸಿಡಿ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಸ್ಪೀಡೋ, ಓಡೊ ಮತ್ತು ಟ್ರಿಪ್ ಮೀಟರ್ಗಾಗಿ ದೊಡ್ಡ ಫಾಂಟ್ಗಳಂತಹ ವಿವಿಧ ಮಾಹಿತಿಯನ್ನು ತೋರಿಸುತ್ತದೆ. ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಸ್ಮಾಟ್ ಫೋನ್ ಅನ್ನು ಕನೆಕ್ಟ್ ಮಾಡಬಹುದಾಗಿದೆ. ಯಮಹಾ ಕನೆಕ್ಟ್ ಅಪ್ಲಿಕೇಶನ್ ಫೀಚರ್ ಕೂಡ ಹೊಂದಿದೆ.

ಇನ್ನು ಈ ಯಮಹಾ ಎಫ್ಝಡ್-ಎಕ್ ಬೈಕ್ 149 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 12.2 ಬಿಹೆಚ್ಪಿ ಮತ್ತು 13.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಟ್ರಾನ್ಸ್ಮಿಷನ್ ಅನ್ನು ಜೋಡಿಸಲಾಗಿದೆ. ಈ ಯಮಹಾ ಎಫ್ಜೆಡ್-ಎಕ್ಸ್ ಬೈಕ್ ಮ್ಯಾಟ್ ಬ್ಲೂ, ಮ್ಯಾಟ್ ಬ್ಲ್ಯಾಕ್ ಮತ್ತು ಮ್ಯಾಟ್ ಕೂಪರ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ರೋಡ್ಸ್ಟರ್ ವಿನ್ಯಾಸದಿಂದಾಗಿ ಫ್ಯೂಯಲ್ ಟ್ಯಾಂಕ್ ಮಧ್ಯದಲ್ಲಿ ಬ್ಲ್ಯಾಕ್ ಮೆಟಲ್ ಸ್ಟ್ರಿಪ್ ಅನ್ನು ಹೊಂದಿದೆ.

ಇನ್ನು ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್ನಂತಹ ಸ್ಕೂಟರ್ಗಳು ಭಾರತೀಯ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಇದರ ನಡುವೆ ಹಲವು ಎಲೆಕ್ಟ್ರಿಕ್ ದ್ವಿಚಕ್ರ ಬ್ರ್ಯಾಂಡ್ ಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದೆ. ಇದರಲ್ಲಿ ಯಮಹಾ ಕಂಪನಿಯು ಕೂಡ ಒಳಗೊಂಡಿದೆ. ಜಪಾನ್ ಮೂಲದ ಯಮಹಾ ಕಂಪನಿ ಕೂಡ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆಗೊಳಿಸಲಿದೆ. ಯಮಹಾ ಮೋಟಾರ್ ಇಂಡಿಯಾ ಲಿಮಿಟೆಡ್ ಕೆಲವು ವಾರಗಳ ಹಿಂದೆ ಸ್ಥಳೀಯವಾಗಿ ಇ-01 ಮತ್ತು ನಿಯೋನ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಅನಾವರಣಗೊಳಿಸಿತು. ಮುಂದಿನ ದಿನಗಳಲ್ಲಿ ಇವುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

2030ರ ವೇಳೆಗೆ ಕಂಪನಿಯು ವಾರ್ಷಿಕವಾಗಿ ಸುಮಾರು ಶೇ. 33 ರಷ್ಟು ಇವಿ ವಾಹನಗಳ ಮಾರಾಟವನ್ನು ವಿಸ್ತರಿಸುವ ಗುರಿಹೊಂದಿದೆ. 2050ರ ವೇಳೆಗೆ ತನ್ನ ಶ್ರೇಣಿಯ ಶೇ.90 ರಷ್ಟು ವಾಹನಗಳನ್ನು ಎಲೆಕ್ಟ್ರಿಕರಣ ಗುರಿ ಹೊಂದಿರುವ ಯಮಹಾ ಕಂಪನಿಯು ಭವಿಷ್ಯದ ಯೋಜನೆಗಳಿಗೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಇವಿ ಸ್ಕೂಟರ್ ವಿನೂತನ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಜ್ಜುಗೊಂಡಿದೆ. ಇನ್ನು ಯಮಹಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ. ಇದರಲ್ಲಿ ಪ್ರೀಮಿಯಂ ಮತ್ತು ಅಡ್ವೆಂಚರ್ ಬೈಕ್ ಗಳನ್ನು ಹೊಂದಿರಬಹುದು.