ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಜಪಾನ್ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಎಂಟಿ-15 ವಿ2.0 ಬೈಕ್ ಅನ್ನು ಭಾರತದಲ್ಲಿ ಕಳೆದ ತಿಂಗಳು ಬಿಡುಗಡೆಗೊಳಿಸಿತ್ತು. ಹೊಸ ಮಾದರಿಯು ಹಿಂದಿನ ಆವೃತ್ತಿಗಿಂತ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಜೊತೆಗೆ ಉತ್ತಮ ಫೀಚರ್ಸ್ ಗಳನ್ನು ಹೊಂದಿವೆ. ಹೊಸ ಮಾದರಿಯ ಆಗಮನವು ದೇಶದ ಯುವ ಗ್ರಾಹಕರನ್ನು ಹೆಚ್ಚು ಸೆಳೆದುಕೊಂಡಿದೆ. ಕಳೆದ ತಿಂಗಳು, ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಎಂಟಿ-15 ವಿ2.0 ಮಾದರಿಯ 9,228 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷ ಏಪ್ರಿಲ್‌ನಲ್ಲಿ, ತಯಾರಕರು ಮೋಟಾರ್‌ಸೈಕಲ್‌ನ 5,692 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ, ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಆಧಾರದ ಮೇಲೆ 62.12 ಶೇಕಡಾ ಮಾರಾಟದ ಬೆಳವಣಿಗೆಯನ್ನು ಸಾಧಿಸಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಯಮಹಾ ಎಂಟಿ-15 ವಿ2.0 ಎಂದು ಕರೆಯಲ್ಪಡುವ, ನವೀಕರಿಸಿದ ನೇಕೆಡ್ ಸ್ಟ್ರೀಟ್‌ಫೈಟರ್ ಅದರ ಫೇರ್ಡ್ ಸ್ಪೋರ್ಟ್ಸ್ ಬೈಕ್ ಸಹೋದರ ಮಾದರಿ ಆರ್15 ವಿ4 ಅನ್ನು ಆಧರಿಸಿದೆ, ಈ 2022 ಯಮಹಾ ಎಂಟಿ-15 ವಿ2.0 ಬೈಕ್ ಸಯಾನ್ ಸ್ಟಾರ್ಮ್, ರೇಸಿಂಗ್ ಬ್ಲೂ, ಐಸ್ ಫ್ಲೂ-ವರ್ಮಿಲಿಯನ್ ಮತ್ತು ಮೆಟಾಲಿಕ್ ಬ್ಲ್ಯಾಕ್‌ ಎಂಬ ನಾಲ್ಕು ಬಣ್ಣದ ಆಯ್ಕೆಗಳೊಂದಿಗೆ ಬರುತ್ತದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಈ ಹೊಸ ಯಮಹಾ ಎಂಟಿ-15 ಬೈಕ್ ಅದರ ಹಿಂದಿನ ಅದೇ ಪವರ್‌ಟ್ರೇನ್ ಅನ್ನು ಉಳಿಸಿಕೊಂಡಿದೆ. ಈ ಬೈಕ್ ನೇಕೆಡ್ ಸ್ಟ್ರೀಟ್‌ಫೈಟರ್ ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, SOHC, 4-ವಾಲ್ವ್, 155ಸಿಸಿ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ವೇರಿಯಬಲ್ ವಾಲ್ವ್ ಆಕ್ಚುಯೇಶನ್ (VVA) ಸಿಸ್ಟಮ್‌ ಅನ್ನು ಹೊಂದಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಈ 155ಸಿಸಿ ಎಂಜಿನ್ 10,000 ಆರ್‌ಪಿಎಂನಲ್ಲಿ 18.1 ಬಿಹೆಚ್‍ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 14 ಎನ್ ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಜೋಡಿಸಲಾಗಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಹೊಸ ಯಮಹಾ ಎಂಟಿ-15 ಬೈಕ್ ಅನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಅತ್ಯಂತ ಪ್ರಮುಖವಾದ ಬದಲಾವಣೆಗಳನ್ನು ಸ್ವೀಕರಿಸಿಲ್ಲ.. ವಾಸ್ತವವಾಗಿ, ಹುಬ್ಬು-ಆಕಾರದ ಎಲ್ಇಡಿ ಡಿಆರ್ಎಲಲ್ ಗಳೊಂದಿಗೆ ಸಿಂಗಲ್-ಪಾಡ್ ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್ ಸೇರಿದಂತೆ ಅದರ ಹೆಚ್ಚಿನ ಸಿಗ್ನೇಚರ್ ವಿನ್ಯಾಸ ಅಂಶಗಳನ್ನು ಹೊರಹೋಗುವ ಮಾದರಿಯಿಂದ ಮುಂದಕ್ಕೆ ಸಾಗಿಸಲಾಗಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಈ ಹೊಸ ಯಮಹಾ ಎಂಟಿ-15 ಬೈಕ್ ಇತರ ಸ್ಟೈಲಿಂಗ್ ಮುಖ್ಯಾಂಶಗಳು ಮಸ್ಕಲರ್ ಬಾಡಿ, ಟೇಲ್ ವಿಭಾಗ ಮತ್ತು ಸೈಡ್-ಸ್ಲಂಗ್ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಮಫ್ಲರ್ ಅನ್ನು ಒಳಗೊಂಡಿವೆ. ಒಟ್ಟಾರೆಯಾಗಿ ಈ ಹೊಸ ಯಮಹಾ ಎಂಟಿ-15 ವಿ2.0 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಬ್ರೇಕ್ ಸಿಸ್ಟಂ ಅನ್ನು ಒಳಗೊಂಡಿದೆ. ಇನ್ನು ಇದರ ಜೊತೆಗೆ ಹೆಚ್ಚಿನ ಸುರಕ್ಷ್ತೆಗಾಗಿ, ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ಹೊಂದಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಈ ಹೊಸ ಯಮಹಾ ಎಂಟಿ-15 ವಿ2.0 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಫೋರ್ಕ್‌ಗಳೊಂದಿಗೆ ಯಮಹಾದ ಡೆಲ್ಟಾ ಬಾಕ್ಸ್ ಫ್ರೇಮ್ ಮತ್ತು ಒರಟು ವಿಷಯವನ್ನು ನೋಡಿಕೊಳ್ಳಲು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಒಳಗೊಂಡಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಇನ್ನು ಈ ಬೈಕಿನಲ್ಲಿ ಮುಂಭಾಗ 17-ಇಂಚಿನ ಚಕ್ರಗಳಲ್ಲಿ 100/80-17M/C ಮತ್ತು ಹಿಂಭಾಗ 140/70R17 ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. 2022ರ ಯಮಹಾ ಎಂಟಿ-15 ವಿ2.0 ಬೈಕಿನಲ್ಲಿ ಹೊಸದಾದ, ಸಂಪೂರ್ಣ ಡಿಜಿಟಲ್ ಎಲ್ಸಿಡಿ ಕ್ಲಸ್ಟರ್ ಆಗಿದ್ದು, ಇಗ್ನಿಷನ್ ಆನ್ ಮಾಡಿದಾಗಲೆಲ್ಲಾ ಕಸ್ಟಮೈಸ್ ಗೊಳಿಸಬಹುದಾದ ಅನಿಮೇಟೆಡ್ ಪಠ್ಯವನ್ನು ಪ್ರದರ್ಶಿಸುತ್ತದೆ. ಹೊಸ ಡಿಸ್ ಪ್ಲೇ ಗೇರ್ ಶಿಫ್ಟ್, ಗೇರ್ ಪೋಷಿಸನ್ ಮತ್ತು ವಿವಿಎ ಇಂಡಿಕೇಟರ್ಸ್ ಗಳನ್ನು ಒಳಗೊಂಡಿದೆ. ಹೊಸ ಡಿಸ್ ಪ್ಲೇಯು ಬ್ಲೂಟೂತ್ ಸಕ್ರಿಯಗೊಳಿಸಿದ ವೈ-ಕನೆಕ್ಟ್ ಅಪ್ಲಿಕೇಶನ್ ಮೂಲಕ ಲಭ್ಯವಿರುವ ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಥಿತಿಯೊಂದಿಗೆ ಕರೆ, ಇ-ಮೇಲ್ ಮತ್ತು ಎಸ್ಎಂಎಸ್ ಅಲರ್ಟ್ ಗಳು ಬರುತ್ತದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ವೈ-ಕನೆಕ್ಟ್ ಅಪ್ಲಿಕೇಶನ್‌ನ ಸಹಾಯದಿಂದ, ಮಾಲೀಕರು ಹೊಸ ಯಮಹಾ ಎಂಟಿ-15 ವಿ2.0ಗೆ ಸಂಬಂಧಿಸಿದಂತೆ ನಿರ್ವಹಣೆ ಶಿಫಾರಸುಗಳು, ಪಾರ್ಕಿಂಗ್ ಸ್ಥಳ, ಇಂಧನ ಬಳಕೆ, ಅಸಮರ್ಪಕ ಕಾರ್ಯಗಳು ಮತ್ತು ಇತರ ಡೇಟಾ ಪಾಯಿಂಟ್‌ಗಳ ಕುರಿತು ಮಾಹಿತಿಯನ್ನು ಪಡೆಯಬಹುದು. ಇನ್ನು ಯಮಹಾ ಕಂಪನಿಯ ವೈಝಡ್ಎಫ್ ಆರ್15 ವಿ4 ಬೈಕಿನ ಮಾನ್‌ಸ್ಟರ್ ಎನರ್ಜಿ ಮೋಟೋಜಿಪಿ ಭಾರತೀಯ ಮಾರುಕಟ್ಟೆಯಲ್ಲಿ ಸೋಲ್ಡ್ ಔಟ್ ಆಗಿದೆ. ಈ ಯಮಹಾ ಆರ್15 ವಿ4 ಮೋಟೋಜಿಪಿ ಎಡಿಷನ್ ಮಾದರಿಯು ವೈಝಡ್ಎಫ್-ಆರ್15ಎಂ ರೂಪಾಂತರವನ್ನು ಆಧರಿಸಿದೆ.

ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್

ಎಂಟಿ-15 ವಿ2.0 ಎಂದು ಕರೆಯಲ್ಪಡುವ 2022ರ ಯಮಹಾ ಎಂಟಿ-15 ನೇಕೆಡ್ ಸ್ಟ್ರೀಟ್‌ಫೈಟರ್‌ಗೆ ಅಗತ್ಯವಿರುವ ಕೆಲವು ವೈಶಿಷ್ಟ್ಯಗಳನ್ನು ಸೇರಿಸುತ್ತದೆ, ಹಿಂದಿನ ಮಾದರಿಗೆ ಹೋಲಿಸಿದರೆ ಬೆಲೆ ಏರಿಕೆಯ ಹೊರತಾಗಿಯೂ ಇನ್ನೂ ಉತ್ತಮ ಆಯ್ಕೆಯ ಬೈಕ್ ಆಗಿದೆ. ಹೊಸ ಬಣ್ಣದ ಆಯ್ಕೆಗಳೊಂದಿಗೆ ಈ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ.

Most Read Articles

Kannada
Read more on ಯಮಹಾ yamaha
English summary
Yamaha mt 15 registers 62 percent growth in april 2022 details
Story first published: Wednesday, May 25, 2022, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X