ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಎಂಟಿ-15 ಬೈಕ್ ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಯಮಹಾ ಎಂಟಿ-15 ಬೈಕ್ ಒಂದೆರಡು ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಹೊಸ ಯಮಹಾ ಎಂಟಿ-15 ಬೈಕ್ ಬ್ಲೂಟೂತ್-ಸಕ್ರಿಯಗೊಳಿಸಿದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನ ಸೇರ್ಪಡೆಯಾಗಿದೆ. ಈ ಹೊಸ ಬೈಕಿನ ಬಿಡುಗಡೆಯ ದಿನಾಂಕವನ್ನು ಕಂಪನಿಯು ಬಹಿರಂಗಪಡಿಸಿಲ್ಲ, ಕೆಲವು ವರದಿಗಳ ಪ್ರಕಾರ ಈ ಹೊಸ ಯಮಹಾ ಎಂಟಿ-15 ಬೈಕ್ ಈ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗಬಹುದು. ಹೊಸ ಯಮಹಾ ವೈಝಡ್ಎಫ್ ಆರ್15 ವಿ4 ಈಗಾಗಲೇ ಅದರ ಹಿಂದಿನ ಅಪ್‌ಡೇಟ್‌ನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿಯನ್ನು ಪಡೆದಿದೆ ಎಂದು ಪರಿಗಣಿಸಿದರೆ ಇದು ಆಶ್ಚರ್ಯವೇನಿಲ್ಲ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಎಂಟಿ-15 ಬೈಕ್ ಹೆಚ್ಚಿನ ಯುನಿಟ್ ಗಳನ್ನು ಆರ್15 ಮಾದರಿಯೊಂದಿಗೆ ಹಂಚಿಕೊಳ್ಳುವುದರಿಂದ, ಬ್ಲೂಟೂತ್ ಅನ್ನು ಪಡೆಯುವ ಸಮಯವಾಗಿದೆ, ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಅದೇ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 18.5 ಬಿ‍‍ಹೆಚ್‍‍ಪಿ ಪವರ್ ಮತ್ತು 13.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಈ ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಇನ್ನು ಈ ಹೊಸ ಬೈಕಿನ ತೂಕದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಹೊಸ ಯಮಹಾ ಎಂಟಿ-15 ಬೈಕ್ 138 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ರೇಡಿಯಲ್ ಟಯರ್ ಅನ್ನು ಅಳವಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಹೊಸ ಬಿ‍ಎಸ್-6 ಎಂಜಿನ್‍‍ನ ಯಮಹಾ ಎಂಟಿ-15 ಬೈಕ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ 2020ರಲ್ಲಿ ನವೀಕರಿಸಲಾಗಿತ್ತು. ಇದರಿಂದ ಈ ಬೈಕಿನ ಪರ್ಫಾಮೆನ್ಸ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲಾಗಿತ್ತಿಲ್ಲ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಬದಲಾವಣೆಗಳ ಪಟ್ಟಿಯು ಹೊಸ ವೈಶಿಷ್ಟ್ಯಗಳೊಂದಿಗೆ ಮಾತ್ರ ಕೊನೆಗೊಳ್ಳುವುದಿಲ್ಲ. ಹೊಸ ಯಮಹಾ ವೈಝಡ್ಎಫ್ ಆರ್15 ವಿ4 ಹಳೆಯ ಟೆಲಿಸ್ಕೋಪಿಕ್ ಸೆಟಪ್‌ಗೆ ಬದಲಾಗಿ ಫೋರ್ಕ್‌ಗಳನ್ನು ಸಹ ಪಡೆಯುತ್ತದೆ. ಈಗ ಯಮಹಾ ತನ್ನ ಪ್ರೀಮಿಯಂ ಕೊಡುಗೆಗಳೊಂದಿಗೆ ಎಲ್ಲವನ್ನೂ ಹೊರತಂದಿದೆ, ಎಂಟಿ-15 ತನ್ನ ಮುಂದಿನ ಅಪ್‌ಡೇಟ್‌ನಲ್ಲಿ R15 ನಿಂದ ಅಪ್ ಸೈಡ್ ಡೌನ್ ಫೋರ್ಕ್‌ಗಳನ್ನು ಎರವಲು ಪಡೆಯಬಹುದು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಯಮಹಾ ಮೋಟಾರ್ ಇಂಡಿಯಾ ದೇಶೀಯ ಮಾರುಕಟ್ಟೆಯಲ್ಲಿ 2022ರ ಎಫ್‍‍ಜೆಡ್ಎಸ್-ಎಫ್‍ಐ ಬೈಕ್ ಅನ್ನು ಸಂಕ್ರಾಂತಿ ವಿಶೇಷತೆಗಾಗಿ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಯಮಹಾ ಎಫ್‍‍ಜೆಡ್ಎಸ್-ಎಫ್‍ಐ ಬೈಕ್ ಸ್ಟ್ಯಾಂಡರ್ಡ್ ಮತ್ತು ಡಿಎಲ್ಎಕ್ಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಈ ಹೊಸ ಬೈಕ್ ಈ ತಿಂಗಳ ಎರಡನೇ ವಾರದಿಂದ ಎಲ್ಲಾ ಅಧಿಕೃತ ಯಮಹಾ ಡೀಲರ್‌ಶಿಪ್‌ಗಳಿಗೆ ಆಗಮಿಸುತ್ತವೆ. ಈ ಹೊಸ ಬೈಕಿನಲ್ಲಿ 149ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,250 ಆರ್‌ಪಿಎಂನಲ್ಲಿ 12.2 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನಲ್ಲಿ 13.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಹೊಸ ಎಫ್‍‍ಜೆಡ್ಎಸ್-ಎಫ್‍ಐ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಎರಡು ಕಡೆಗಳಲ್ಲಿ ಸಿಂಗಲ್ ಡಿಸ್ಕ್‌ ಬ್ರೇಕ್ ಗಳನ್ನು ನೀಡಲಾಗಿದೆ,

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಈ 2022ರ ಎಫ್‍‍ಜೆಡ್ಎಸ್-ಎಫ್‍ಐ ಮಾದರಿಯಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಏಕೈಕ ಬದಲಾವಣೆಯೆಂದರೆ ಹೊಸ ಎಲ್ಇಡಿ ಟೈಲ್ ಲ್ಯಾಂಪ್, ಮತ್ತು ಬೈಕ್ ಈಗ ಕೇವಲ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಮ್ಯಾಟ್ ಬ್ಲೂ ಮತ್ತು ಮ್ಯಾಟ್ ರೆಡ್ ಆಗಿದೆ. ಇ ಎಫ್‍‍ಜೆಡ್ಎಸ್-ಎಫ್‍ಐ ಡಿಎಲ್ಎಕ್ಸ್ ಟೈಲ್-ಲ್ಯಾಂಪ್ ಅನ್ನು ಸಹ ಪಡೆಯುತ್ತದೆ, ಇದು ಎಲ್ಇಡಿ ಟರ್ನ್ ಸಿಗ್ನಲ್‌ಗಳೊಂದಿಗೆ ಬರುತ್ತದೆ, ಯಮಹಾ ಹೇಳುವಂತೆ ಡೀಲರ್‌ಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅಕ್ಸೆಸರೀಸ್ ಅಳವಡಿಸಲಾಗುತ್ತದೆ, ಹೊಸ ಹೊಸ ಗ್ರಾಫಿಕ್ಸ್ ಸ್ಕೀಮ್‌ಗಳು, ಅನನ್ಯ ಬಣ್ಣದ ಆಯ್ಕೆಗಳು ಮತ್ತು ಬಣ್ಣದ ವ್ಹೀಲ್ ಗಳು ಡಿಎಲ್ಎಕ್ಸ್ ರೂಪಾಂತರಕ್ಕೆ ಪ್ರತ್ಯೇಕವಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಇನ್ನು ಎಫ್‍‍ಜೆಡ್ಎಸ್-ಎಫ್‍ಐ ಡಿಎಲ್ಎಕ್ಸ್ ರೂಪಾಂತರವು ಮೆಟಾಲಿಕ್ ಬ್ಲ್ಯಾಕ್, ಮೆಟಾಲಿಕ್ ಡೀಪ್ ರೆಡ್ ಮತ್ತು ಸಾಲಿಡ್ ಗ್ರೇ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ, ಈ ಎಫ್‍‍ಜೆಡ್ಎಸ್-ಎಫ್‍ಐ ಡಿಎಲ್ಎಕ್ಸ್ ರೂಪಾಂತರವು ಹೊಸ ಗ್ರಾಫಿಕ್ಸ್ ನೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. 2021ರ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಮಾದರಿಗಳನ್ನು ಕಳೆದ ವರ್ಷ ಫೆಬ್ರವರಿಯಲ್ಲಿ ಎರಡು ಕಿಲೋಗ್ರಾಂಗಳಷ್ಟು ಕಡಿಮೆ ಕರ್ಬ್ ತೂಕದೊಂದಿಗೆ ಬಿಡುಗಡೆಗೊಳಿಸಲಾಯಿತು.

ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ Yamaha MT-15 ಬೈಕ್

ಯಮಹಾ ಎಂಟಿ-15 ಬೈಕ್ ಹೊಸ ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಲಿದೆ, ಈ ಹೊಸ ಯಮಹಾ ಎಂಟಿ-15 ಬೈಕಿನ ಬೆಲೆಯು ಪ್ರಸ್ತುತ ಮಾದರಿಗಿಂತ ತುಸು ದುಬಾರಿಯಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಯಮಹಾ yamaha
English summary
Yamaha planning to launch updated mt 15 soon in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X