Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಇವಿ ಸ್ಕೂಟರ್ ಬಿಡಿಭಾಗಗಳ ಸೇವೆಗಳಿಗಾಗಿ ಹೊಸ ಪಾಲುದಾರಿಕೆ ಪ್ರಕಟಿಸಿದ ಜೈಪ್ ಎಲೆಕ್ಟ್ರಿಕ್
ಲಾಜಿಸ್ಟಿಕ್ಸ್ ಡೆಲಿವರಿ ಸ್ಟಾರ್ಟ್ಅಪ್ ಜೈಪ್ ಎಲೆಕ್ಟ್ರಿಕ್ ಕಂಪನಿಯು ಇವಿ ವಾಹನ ಬಳಕೆಯಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕಂಪನಿಯು ಮುಂಬರುವ ಕೆಲವೇ ವರ್ಷಗಳಲ್ಲಿ ಇವಿ ವಾಹನ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿದೆ.

ಜೈಪ್ ಎಲೆಕ್ಟ್ರಿಕ್ ಕಂಪನಿಯು ಭಾರತದಲ್ಲಿ ಕೊನೆಯ ಮೈಲಿ ತನಕದ ಗೂಡ್ಸ್ ವಿತರಣೆಗಾಗಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಂಡ ಮೊದಲ ಡೆಲಿವರಿ ಕಂಪನಿಯಾಗಿದ್ದು, ಇ-ಕಾಮರ್ಸ್ ಕಂಪನಿಗಳಿಗೆ ವ್ಯಾಪಕವಾದ ವಿತರಣಾ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯು ಈಗಾಗಲೇ ಪ್ರಮುಖ ಕಂಪನಿಗಳೊಂದಿಗೆ ವಿವಿಧ ರೇಂಜ್ ಹೊಂದಿರುವ ಇವಿ ವಾಹನಗಳನ್ನು ಬಳಕೆ ಮಾಡುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ ಬರೋಬ್ಬರಿ 1 ಲಕ್ಷ ಇವಿ ವಾಹನಗಳನ್ನು ಅಳವಡಿಸಿಕೊಳ್ಳುವ ಯೋಜನೆಯಲ್ಲಿದೆ.

ಹೊಸ ಯೋಜನೆಗೆ ಪೂರಕವಾಗಿ ಕಂಪನಿಯು ಇವಿ ವಾಹನಗಳಿಗೆ ಸರಿಯಾದ ಸಮಯಕ್ಕೆ ಬಿಡಿಭಾಗಗಳ ಸೇವೆ ಒದಗಿಸಲು ಮೆಕ್ಯಾನಿಫ್ಲೈಸ್ಪೈರ್(Mechanifyspares) ಕಂಪನಿಯೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ಮೆಕ್ಯಾನಿಫ್ಲೈಸ್ಪೈರ್ ಕಂಪನಿಯು ಇವಿ ವಾಹನಗಳ ಬಿಡಿಭಾಗಗಳ ಸೇವೆಯಲ್ಲಿ ಮುಂಚೂಣಿ ಹೊಂದಿದೆ.

ಹೀಗಾಗಿ ತನ್ನ ಇವಿ ವಾಹನ ಸೇವೆಯನ್ನು ತಡೆರಹಿತಗೊಳಿಸಲು ಮುಂದಾಗಿರುವ ಜೈಪ್ ಎಲೆಕ್ಟ್ರಿಕ್ ಕಂಪನಿಯು ಮೆಕ್ಯಾನಿಫ್ಲೈಸ್ಪೈರ್ನೊಂದಿಗೆ ಪಾಲುದಾರಿಕೆ ಘೋಷಣೆ ಮಾಡಿದ್ದು, ದೇಶಾದ್ಯಂತ ಸೇವಾ ಜಾಲ ಹೊಂದಿರುವ ಮೆಕ್ಯಾನಿಫ್ಲೈಸ್ಪೈರ್ ಕಂಪನಿಯು ಜೈಪ್ ಹೊಸ ಯೋಜನೆಗೆ ಪೂರಕವಾಗಿದೆ.

ಇವಿ ವಾಹನಗಳ ಬಿಡಿಭಾಗಗಳ ಸೇವೆಗಳಿಗಾಗಿ ಪ್ರತ್ಯೇಕ ಕಾರ್ಯಾಚರಣೆ ಆರಂಭಿಸಿರುವ ಮೆಕ್ಯಾನಿಫ್ಲೈಸ್ಪೈರ್ ಕಂಪನಿಯು ಇದುವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಇವಿ ವಾಹನಗಳಿಗೆ ಬಿಡಿಭಾಗಗಳ ಸೇವೆ ಒದಗಿಸಿದ್ದು, ಇವಿ ಬಿಡಿಭಾಗಗಳಿಗಾಗಿಯೇ ಪ್ರತ್ಯೇಕ ಆನ್ಲೈನ್ ಪ್ಲಾಟ್ಫಾರ್ಮ್ ಅನ್ನು ಸಹ ಹೊಂದಿದೆ.

ಇನ್ನು ಬ್ಯುಸಿನೆಸ್ ಟು ಬ್ಯುಸಿನೆಸ್(ಬಿಟುಬಿ) ಉದ್ದೇಶಗಳಿಗೆ ಹೆಚ್ಚಿನ ಸಂಖ್ಯೆಯ ಇವಿ ವಾಹನಗಳನ್ನು ಒದಗಿಸುತ್ತಿರುವ ಜೈಪ್ ಕಂಪನಿಯು ಪ್ರಮುಖ ಇ-ಕಾರ್ಮಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಪ್ರಕಟಿಸಿದ್ದು, ದೇಶಾದ್ಯಂತ ತನ್ನ ಫ್ಲೀಟ್ನಲ್ಲಿ ಒಂದು ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಹೊರತರುವುದಾಗಿ ಘೋಷಿಸಿದೆ.

ಪ್ರಸ್ತುತ ಜೈಪ್ ಎಲೆಕ್ಟ್ರಿಕ್ ಕಂಪನಿಯು ದೆಹಲಿ-ಎನ್ಸಿಆರ್, ಬೆಂಗಳೂರು, ಹೈದರಾಬಾದ್, ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದ್ದು, ಜೈಪ್ ಕಂಪನಿಯ ಸೀರಿಸ್ ಎ ಬಂಡವಾಳ ಹೂಡಿಕೆಯಲ್ಲಿ ವಿವಿಧ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆ ಮಾಡಿವೆ.

ಭವಿಷ್ಯದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳಲಿರುವ ಜೈಪ್ ಎಲೆಕ್ಟ್ರಿಕ್ ಇವಿ ವಾಹನ ಮಾದರಿಗಳಿಗಾಗಿ ಹೊಸದಾಗಿ ಸುಮಾರು ರೂ. 52 ಕೋಟಿಯಷ್ಟು ಹೂಡಿಕೆಯಾಗಿದ್ದು, ಈ ಮೂಲಕ ಜೈಪ್ ಕಂಪನಿಯ ಮೇಲೆ ಇದುವರೆಗೆ ಸುಮಾರು ರೂ.94 ಕೋಟಿ ಬಂಡವಾಳ ಹೂಡಿಕೆಯಾದಂತಾಗಿದೆ.

ಹೊಸ ಬಂಡವಾಳ ಹೂಡಿಕೆಯೊಂದಿಗೆ ಕಂಪನಿಯು ತನ್ನ ಉದ್ಯಮ ವ್ಯಾಪ್ತಿ ವಿಸ್ತರಿಸುವುದರ ಜೊತೆಗೆ ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಹೊರತರುವ ಸಿದ್ದತೆಯಲ್ಲಿದ್ದು, 2022ರಲ್ಲಿ ಜೈಪ್ ಆದಾಯವು 5 ಪಟ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.

ಇ-ಕಾಮರ್ಸ್ ಕಂಪನಿಗಳ ಸರಕಗಳನ್ನು ಗ್ರಾಹಕರಿಗೆ ತಲುಪಿಸಲು ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸುವಲ್ಲಿ ಮುಂಚೂಣಿ ಸಾಧಿಸುತ್ತಿರುವ ಜೈಪ್ ಕಂಪನಿಯು ಕೊನೆಯ ಹಂತದ ಮೈಲಿ ತನಕ ಸೇವೆಗಳನ್ನು ನೀಡಲಿದ್ದು, ಹೊಸ ಬಂಡವಾಳ ಹೂಡಿಕೆಯು ಉದ್ಯಮ ವಿಸ್ತರಣೆಗೆ ಸಾಕಷ್ಟು ಸಹಕಾರಿಯಾಗಲಿದೆ.

ಜೈಪ್ ಕಂಪನಿಯು ಹೊಸ ಸ್ಕೂಟರ್ ಮಾದರಿಗಳನ್ನು ವಿಶೇಷವಾಗಿ ಬಿಟುಬಿ ಉದ್ದೇಶಗಳಿಗಾಗಿ ಅಭಿವೃದ್ದಿಗೊಳಿಸುತ್ತಿದ್ದು, 2017 ರಲ್ಲಿ ಆರಂಭವಾದ ಜೈಪ್ ಕಂಪನಿಯನ್ನು ಆಕಾಶ್ ಗುಪ್ತಾ ಮತ್ತು ರಾಶಿ ಅಗರ್ವಾಲ್ ಎಂಬುವವರು ಸ್ಥಾಪನೆ ಮಾಡಿದರು.

ಜೈಪ್ ಕಂಪನಿಯು ವಿವಿಧ ಇ-ಕಾಮರ್ಸ್ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗೂಡ್ಸ್ ಡೆಲಿವರಿಗಾಗಿ ಸಂಪೂರ್ಣವಾಗಿ ಎಲೆಕ್ಟಿಕ್ ವಾಹನಗಳನ್ನು ಮಾತ್ರ ಬಳಕೆ ಮಾಡುತ್ತಿದೆ.

ಆರಂಭದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದ ಜೈಪ್ ಕಂಪನಿಯು ಇದೀಗ ತನ್ನದೆ ಆದ ವಾಹನ ಉತ್ಪಾದನಾ ವಿಭಾಗವನ್ನು ತೆರೆದಿದ್ದು, ಡೆಲಿವರಿ ಉದ್ದೇಶಗಳು ಮತ್ತು ಬೇಡಿಕೆ ಅನುಸಾರವಾಗಿ ಹೊಸ ಇವಿ ಸ್ಕೂಟರ್ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.

ಜೈಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸಂಪೂರ್ಣವಾಗಿ ವಾಣಿಜ್ಯ ಬಳಕೆಯ ಸ್ಕೂಟರ್ ಮಾದರಿಯಾಗಿದ್ದು, ಕೆಟರಿಂಗ್, ಸಿಲಿಂಡರ್ ಸಾಗಾಟ, ಇ-ಕಾರ್ಮಸ್ ಗೂಡ್ಸ್ ಸೇರಿದಂತೆ ವಿವಿಧ ಮಾದರಿಯ ಸಣ್ಣ ಪ್ರಮಾಣದ ಸರಕು ಸಾಗಾಣಿಕೆ ಅನುಕೂಲಕವಾಗಿದೆ.

40 ಎಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಗರಿಷ್ಠ 250 ಕೆ.ಜಿ ಲೋಡಿಂಗ್ ಸಾಮರ್ಥ್ಯ ಹೊಂದಿದೆ.ಜೊತೆಗೆ ಹೊಸ ಸ್ಕೂಟರಿನಲ್ಲಿ ಕಂಪನಿಯು ಹೆಚ್ಚುವರಿ ಬ್ಯಾಟರಿ ಪ್ಯಾಕ್ ನೀಡಿದ್ದು, ಒಂದು ಬ್ಯಾಟರಿ ಕಾರ್ಯನಿರ್ವಹಣೆಯಲ್ಲಿರುವಾಗ ಮತ್ತೊಂದು ಬ್ಯಾಟರಿಯನ್ನು ಪ್ಯಾಕ್ ಬ್ಯಾಕ್ಅಪ್ ಆಗಿ ಬಳಕೆ ಮಾಡಬಹುದಾಗಿದೆ.