ಓಲಾ ಎಸ್1 ಪ್ರೊ ಸ್ಕೂಟರ್‌ಗೆ ಭರ್ಜರಿ ಡಿಸ್ಕೌಂಟ್ ಘೋಷಣೆ

ದೇಶೀಯ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಓಲಾ, ಎಥರ್ ಹಾಗೂ ಟಿವಿಎಸ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂದಿವೆ. ಇವುಗಳ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಮತ್ತಷ್ಟು ಹೊಸ ಗ್ರಾಹಕರನ್ನು ಆಕರ್ಷಿಸಲು ಅನೇಕ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿರುತ್ತವೆ.

ಬೆಂಗಳೂರು ಮೂಲದ 'ಓಲಾ ಎಲೆಕ್ಟ್ರಿಕ್' ತನ್ನ ಖರೀದಿದಾರರಿಗೆ 74ನೇ ಗಣರಾಜ್ಯೋತ್ಸವದ ಪ್ರಯುಕ್ತ ಡಿಸ್ಕೌಂಟ್ ಆಫರ್ ಘೋಷಿಸಿದೆ. ಕಂಪನಿಯು ಓಲಾ ಎಸ್1 ಪ್ರೊ ಖರೀದಿಯ ಮೇಲೆ ಒಟ್ಟು ರೂ.15,000 ವರೆಗೆ ರಿಯಾಯಿತಿಯನ್ನು ನೀಡುತ್ತದೆ (ಇದರಲ್ಲಿ ರೂ.10,000 ಫ್ಲಾಟ್ ಡಿಸ್ಕೌಂಟ್ ಜೊತೆಗೆ ಖಾಕಿ ಬಣ್ಣದ ಆವೃತ್ತಿ ಮೇಲೆ ರೂ.5,000 ಹೆಚ್ಚುವರಿ ಡಿಸ್ಕೌಂಟ್ ಗ್ರಾಹಕರಿಗೆ ಸಿಗಲಿದೆ). ಈ ಮೂಲಕ ತನ್ನ ಮಾರಾಟ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಗುರಿಯನ್ನು ಓಲಾ ಎಲೆಕ್ಟ್ರಿಕ್ ಹೊಂದಿದೆ.

ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು

ಇಷ್ಟೇಅಲ್ಲದೆ, ಓಲಾ ಎಕ್ಸ್‌ಚೇಂಜ್ ಆಫರ್‌ನೊಂದಿಗೆ ಗ್ರಾಹಕರು ರೂ.10,000 ವರೆಗೆ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ಈ ಡಿಸ್ಕೌಂಟ್ ಆಫರ್ ಗ್ರಾಹಕರಿಗೆ ಜನವರಿ 29ರವರೆಗೆ ಲಭ್ಯವಿರುತ್ತದೆ. ಈ ಬಗ್ಗೆ 'ಓಲಾ ಎಲೆಕ್ಟ್ರಿಕ್' ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, 'ಭಾರತದಲ್ಲಿ ಇವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬಳಕೆ ಮಾಡಬೇಕು. ಅದಕ್ಕಾಗಿ ಈ ಗಣರಾಜ್ಯೋತ್ಸವದ ಪ್ರಯುಕ್ತ ನಾವು ಅನೇಕ ಆಫರ್ ಗಳನ್ನೂ ನೀಡಿದ್ದೇವೆ. ಅವು ನಿಮಗೆ ಖುಷಿ ಕೊಡುತ್ತವೆ ಎಂದು ನಂಬಿದ್ದೇವೆ' ಎಂದು ಬರೆದುಕೊಂಡಿದೆ.

ಓಲಾ ಎಲೆಕ್ಟ್ರಿಕ್, ಎಸ್1 ಪ್ರೊ ಸ್ಕೂಟರ್‌ನ್ನು ಮೊದಲ ಬಾರಿಗೆ ಅಂದರೆ 2021ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತು. ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.40 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಭಾರತದ ಗ್ರಾಹಕರಿಗೆ ಹಲವು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಪೊರ್ಚೆಲೈನ್ ವೈಟ್, ಖಾಕಿ, ನಿಯೋ ಮಿಂಟ್, ಕೋರಲ್ ಗ್ಲಾಮ್, ಜೆಟ್ ಬ್ಲ್ಯಾಕ್, ಮಾರ್ಷ್ಮೆಲೋ, ಲಿಕ್ವಿಡ್ ಸಿಲ್ವರ್, ಮಿಲೇನಿಯಲ್ ಪಿಂಕ್, ಆಂಥ್ರಾಸೈಟ್ ಗ್ರೇ, ಮಿಡ್ನೈಟ್ ಬ್ಲೂ ಮತ್ತು ಮ್ಯಾಟ್ ಬ್ಲಾಕ್.

ಹೊಸ ಓಲಾ ಎಸ್1 ಪ್ರೊ ಕಾರ್ಯವೈಖರಿ ಬಗ್ಗೆ ಹೇಳುವುದಾದರೆ, ಇದು ಸಂಪೂರ್ಣ ಚಾರ್ಜಿನಲ್ಲಿ ಬರೋಬ್ಬರಿ 170 Km ರೇಂಜ್ ನೀಡಲಿದ್ದು, ಕೇವಲ 2.9 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದ್ದು, ಇದರ ಸಂಪೂರ್ಣ ಬ್ಯಾಟರಿ ಚಾರ್ಜ್ ಆಗಲು 6.5 ಗಂಟೆ ಬೇಕಾಗಿದೆ. ಈ ಓಲಾ ಎಸ್1 ಪ್ರೊ ನಾಲ್ಕು ಡ್ರೈವಿಂಗ್ ಮೋಡ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಎಕೋ, ನಾರ್ಮಲ್, ಸ್ಪೋರ್ಟ್ಸ್ ಹಾಗೂ ಹೈಪರ್.

ಇತ್ತೀಚೆಗೆ, ಓಲಾ ಕಂಪನಿಯು ಎಸ್1 ಪ್ರೊಗೆ 'MoveOS 3' ಸಾಫ್ಟ್‌ವೇರ್ ಅಪ್‌ಡೇಟ್‌ನ್ನು ಪರಿಚಯಿಸಿತು. ಇದು ಹಿಲ್-ಅಸಿಸ್ಟ್, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಮುಖವಾಗಿರುವುದು ಹೈಪರ್‌ಚಾರ್ಜಿಂಗ್ ತಂತ್ರಜ್ಞಾನ ಎಂದು ಹೇಳಬಹುದು. ಸವಾರರು, ಕೇವಲ 15 ನಿಮಿಷಗಳ ಚಾರ್ಜಿಂಗ್‌ ಮಾಡುವ ಮೂಲಕ 50 ಕಿಮೀ ದೂರವನ್ನು ಸುಲಭವಾಗಿ ಕ್ರಮಿಸಬಹುದು. ಅಲ್ಲದೆ, ಪ್ರಾಕ್ಸಿಮಿಟಿ ಅನ್‌ಲಾಕ್, ಪಾರ್ಟಿ ಮೋಡ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಓಲಾ ಎಸ್1 ಸಹ ಖರೀದಿಗೆ ಲಭ್ಯವಿದೆ. ಕಂಪನಿಯು ಇದಕ್ಕೆ ಯಾವುದೇ ರೀತಿಯ ರಿಯಾಯಿತಿಯನ್ನು ನೀಡಿಲ್ಲ. ಇದು 3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಮನೆಯಲ್ಲಿ ವಿದ್ಯುತ್ ಬಳಕೆಯಲ್ಲಿ 5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದ್ದು, 95 km/h ಟಾಪ್ ಸ್ವೀಡ್ ಹೊಂದಿದೆ. ಏಳು ಇಂಚಿನ ಟಿಎಫ್‌ಟಿ ಇನ್ಸ್ರುಮೆಟಲ್ ಕ್ಲಸ್ಟರ್, ಬ್ಲೂಟೂತ್, ಜಿಪಿಎಸ್ ಮತ್ತು ವೈಫೈ ಸಂಪರ್ಕ ಸೇರಿದಂತೆ ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು, ರೂ.1,04,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಓಲಾ ಸ್ಕೂಟರ್ ಗಳು, ದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಇವುಗಳ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳು ಪ್ರತಿಯೊಬ್ಬ ಗ್ರಾಹಕರನ್ನು ಆಕರ್ಷಿಸಲಿದ್ದು, ಬೆಲೆಯು ಕೈಗೆಟುಕುವಂತಿರುವುದರಿಂದ ಬಹುತೇಕ ಗ್ರಾಹಕರು ಖರೀದಿಸುತ್ತಾರೆ. ಇದೀಗ 'ಎಸ್1 ಪ್ರೊ' ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಿರುವುದರಿಂದ ಖರೀದಿದಾರರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಲೆಕ್ಕಾಚಾರದಲ್ಲಿ ಕಂಪನಿಯಿದೆ. ಎಥರ್ ಹಾಗೂ ಟಿವಿಎಸ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಓಲಾಗೆ ಪ್ರತಿಸ್ಪರ್ಧಿಯಾಗಿವೆ.

Most Read Articles

Kannada
Read more on ಓಲಾ ola
English summary
Discount announcement ola s1 pro scooter details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X