ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬರಲಿವೆಯೇ...! ಬಜಾಜ್, ಟಿವಿಎಸ್, ಎಥರ್ ಯೋಜನೆಗಳೇನು?

ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ. ಆದರೆ, ಹೆಚ್ಚಿನ ಬೆಲೆಯ ಕಾರಣ, ಅನೇಕರು ಇನ್ನೂ ಈ ಸ್ಕೂಟರ್‌ಗಳನ್ನು ಖರೀದಿಸಲು ಮನಸ್ಸು ಮಾಡುತ್ತಿಲ್ಲ. ನೀವು ಒಳ್ಳೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸಿದರೆ, 1 ಲಕ್ಷ ರೂಪಾಯಿಗಿಂತ ಹೆಚ್ಚು ಹಣವನ್ನು ವ್ಯಯಿಸಬೇಕಾಗಿದೆ.

ದೇಶದ ಪ್ರಮುಖ ಕಂಪನಿಗಳಾದ ಬಜಾಜ್, ಟಿವಿಎಸ್ ಮತ್ತು ಎಥರ್ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿವೆ. ಮುಂದಿನ 12 - 18 ತಿಂಗಳಲ್ಲಿ ಈ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ರೂ.70,000 ರಿಂದ ರೂ.80,000 ವರೆಗಿನ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಖರೀದಿದಾರರಿಗೆ ಕಾತರತೆ ಹೆಚ್ಚಾಗಿದೆ. ಆ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಭಾರೀ ಅಗ್ಗದ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬರಲಿವೆಯೇ...! ಬಜಾಜ್, ಟಿವಿಎಸ್, ಎಥರ್ ಯೋಜನೆಗಳೇನು?

ಬಜಾಜ್:
ಭಾರತದ ಮಾರುಕಟ್ಟೆಯಲ್ಲಿ ಬಜಾಜ್ 5 ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. 2024 - 25ರ ವೇಳೆಗೆ, ಬಜಾಜ್ ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಶೇಕಡ 15 ರಷ್ಟು ಪಾಲನ್ನು ಹೊಂದುವ ಗುರಿಯನ್ನು ಹಾಕಿಕೊಂಡಿದೆ. ಅದರ ಭಾಗವಾಗಿ, ಮುಂದಿನ ಆರ್ಥಿಕ ವರ್ಷದಲ್ಲಿ ಕಡಿಮೆ ವೆಚ್ಚದ ಎಲೆಕ್ಟ್ರಿಕ್ ಸ್ಕೂಟರ್ (H107 ಕೋಡ್ ನೇಮ್) ಉತ್ಪಾದನೆಯನ್ನು ಕಂಪನಿ ಶುರು ಮಾಡುವ ನಿರೀಕ್ಷೆಯಿದೆ.

ಆರಂಭದಲ್ಲಿ, ಬಜಾಜ್ ತಿಂಗಳಿಗೆ ಕೇವಲ 2,000 ಯೂನಿಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸಲು ಯೋಜಿಸಿದೆ. ಗ್ರಾಹಕರ ಸ್ಪಂದನೆಯನ್ನು ಆಧರಿಸಿ, ಬಜಾಜ್ ಈ ಸಂಖ್ಯೆಯನ್ನು ತಿಂಗಳಿಗೆ 10,000 ಯುನಿಟ್‌ಗಳಿಗೆ ಹೆಚ್ಚಿಸಲು ಯೋಜಿಸಿದೆ. ಕಂಪನಿಯು ಪ್ರಸ್ತುತ ಬಜಾಜ್ ಚೇತಕ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದ್ದು, ಮಾರುಕಟ್ಟೆಯಲ್ಲಿ 1,51,958 ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 85-95 km/h ರೇಂಜ್ ನೀಡಲಿದೆ. 70 km/h ಟಾಪ್ ಸ್ವೀಡ್ ಹೊಂದಿದೆ.

ಟಿವಿಎಸ್:
ಪ್ರಸ್ತುತ ಟಿವಿಎಸ್, 'ಐಕ್ಯೂಬ್' ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ನೀಡುತ್ತಿದೆ. ಕಂಪನಿಯು ತಿಂಗಳಿಗೆ ಸರಾಸರಿ 9,000 ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಅಗ್ಗದ ಆವೃತ್ತಿಯನ್ನು ಲಾಂಚ್ ಮಾಡಲಿದ್ದು, ಇದಕ್ಕೆ U546 ಎಂಬ ಕೋಡ್ ನೀಡಿದೆ. ಟಿವಿಎಸ್ ಈ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯನ್ನು ಜನವರಿ 2024 ರಿಂದ ಪ್ರಾರಂಭಿಸುವ ನಿರೀಕ್ಷೆಯಿದೆ.

ಅಲ್ಲದೆ, ಟಿವಿಎಸ್ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತಿಂಗಳಿಗೆ 25,000 ಯುನಿಟ್ ಉತ್ಪಾದಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ಸದ್ಯ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಪ್ರಾರಂಭಿಕ ಬೆಲೆ ರೂ.99,130 ಇದೆ. ಸಂಪೂರ್ಣ ಚಾರ್ಜ್ ಮಾಡಿದ ಬರೋಬ್ಬರಿ 100 km ರೇಂಜ್ ನೀಡಲಿದ್ದು, 78 km/h ಟಾಪ್ ಸ್ವೀಡ್ ಹೊಂದಿದೆ. 10 ಬಣ್ಣಗಳು ಹಾಗೂ ಮೂರು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದ್ದು, ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಸ್ಮಾರ್ಟ್‌ಫೋನ್ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಎಥರ್ ಎನರ್ಜಿ:
ಎಥರ್‌ನ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್‌ ಅನ್ನು ಲಾಂಚ್ ಮಾಡಲು ಯೋಜಿಸಿದ್ದು, 450U ಎಂಬ ಕೋಡ್ ನೇಮ್ ನೀಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2024ರಲ್ಲಿ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಎಥರ್ ತಿಂಗಳಿಗೆ ತಿಂಗಳಿಗೆ 30,000 - 33,000 ಯುನಿಟ್‌ಗಳನ್ನು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸಲು ಯೋಜಿಸುತ್ತಿದೆ ಎಂದು ಹೇಳಲಾಗಿದೆ. ಇದು ಅಗ್ಗದ ರೂಪಾಂತರವಾಗಿರಲಿದ್ದು, ಗ್ರಾಹಕರು ಈ ಸ್ಕೂಟರ್ ಖರೀದಿ ಮಾಡಲು ಇಷ್ಟಪಡಬಹುದು ಎಂದು ಹೇಳಬಹುದು.

ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಎಥರ್, 450 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಮಾರಾಟ ಮಾಡುತ್ತಿದೆ. ಅವುಗಳೆಂದರೆ, 450 ಪ್ಲಸ್ ಮತ್ತು 450ಎಕ್ಸ್. 450 ಪ್ಲಸ್ ರೂಪಾಂತರದ ಬೆಲೆ ರೂ.1,18,695 ಇದ್ದು, 450ಎಕ್ಸ್ ಬೆಲೆ ರೂ.1,41,705 (ಎಕ್ಸ್ ಶೋ ರೂಂ ದೆಹಲಿ) ಇದೆ. ಎಥರ್ 450X 105 km ರೇಂಜ್ ನೀಡಲಿದ್ದು, 90 km/h ಟಾಪ್ ಸ್ವೀಡ್ ಹೊಂದಿದೆ. ಮುಂಬರುವ ದಿನಗಳಲ್ಲಿ ಕಂಪನಿಗಳು ಅಗ್ಗದ ಬೆಲೆಯ ಸ್ಕೂಟರ್ ತಯಾರಿ ನಡೆಸುತ್ತಿರುವುದರಿಂದ ಗ್ರಾಹಕರಿಗೆ ನೀರಿಕ್ಷೆಗಳು ಹೆಚ್ಚಾಗಿವೆ.

Most Read Articles

Kannada
English summary
Electric scooters coming at very cheap prices
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X