ಕವಾಸಕಿ ಬೈಕ್ ಖರೀದಿಸುವವರಿಗೆ ಸಿಹಿಸುದ್ದಿ: 2 ಲಕ್ಷ ರಿಯಾಯಿತಿ

ಜಪಾನ್ ಮೂಲದ 'ಕವಾಸಕಿ' ಭಾರತದ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ತನ್ನ ವಿವಿಧ ಮಾದರಿ ಬೈಕ್​ಗಳಿಗೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ ಎಂದು ವರದಿಯಾಗಿದೆ. ಈ ಆಫರ್, ಫೆಬ್ರವರಿ 28 ರವರೆಗೆ ಅಥವಾ ಸ್ಟಾಕ್‌ ಮುಗಿಯುವವರೆಗೆ ಲಭ್ಯವಿರಲಿದ್ದು, ರೂ.15,000ದಿಂದ ರೂ.2 ಲಕ್ಷದವರೆಗೆ ಡಿಸ್ಕೌಂಟ್ ಸಿಗಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುವ ಕವಾಸಕಿ ನಿಂಜಾ 300 (Kawasak Ninja 300) ಬೈಕ್ ಮಾದರಿಗೆ ರೂ.15,000 ರಿಯಾಯಿತಿ ಲಭ್ಯವಿದೆ. ದಶಕಗಳಿಂದ ಇದು ಯುವಕರ ಹಾಟ್ ಫೆವರೇಟ್ ಆಗಿದೆ. ಇದೀಗ ಡಿಸ್ಕೌಂಟ್ ಘೋಷಣೆ ಮಾಡಿರುವುದರಿಂದ ರೂ.3.40 ಲಕ್ಷ ಬೆಲೆ ಇದ್ದ ನಿಂಜಾ 300, ಇದೀಗ ರೂ.3.25 ಲಕ್ಷ ದರದಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್ ಸಾಕಷ್ಟು ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಕೆಟಿಎಂ ಬೈಕ್ ಗೆ ಭಾರೀ ಪೈಪೋಟಿ ನೀಡಲಿದೆ.

ಕವಾಸಕಿ ಬೈಕ್ ಖರೀದಿಸುವವರಿಗೆ ಸಿಹಿಸುದ್ದಿ: 2 ಲಕ್ಷ ರಿಯಾಯಿತಿ

ಕವಾಸಕಿ ತನ್ನ ಮತ್ತೆರೆಡು ಪ್ರಮುಖ ಬೈಕ್ ಗಳಾದ Z650 ಹಾಗೂ Z650RSಗೂ ದೊಡ್ಡ ಮಟ್ಟದಲ್ಲಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಗ್ರಾಹಕರಿಗೆ ರೂ.50,000 ವರೆಗೂ ಡಿಸ್ಕೌಂಟ್ ದೊರೆಯಲಿದೆ. ಮಾರುಕಟ್ಟೆಯಲ್ಲಿ ರೂ.6.43 ಲಕ್ಷ ಬೆಲೆಗೆ ಖರೀದಿಗೆ ದೊರೆಯುತ್ತಿದ್ದ ಕವಾಸಕಿ Z650 ಬೆಲೆ ರೂ.5.93 ಲಕ್ಷಕ್ಕೆ ಇಳಿಕೆಯಾಗಿದೆ. ಇದು ನಿಂಜಾ 400ಕ್ಕಿಂತ ರೂ.79,000 ಅಧಿಕವಾಗಿದೆ. ರೂ.6.92 ಲಕ್ಷ ಬೆಲೆಗೆ ಗ್ರಾಹಕರಿಗೆ ದೊರೆಯುತ್ತಿದ್ದ ಕವಾಸಕಿ Z650RS ಬೆಲೆ ರೂ.6.42 ಲಕ್ಷವಾಗಿದೆ.

ಕವಾಸಕಿ ಕಂಪನಿಯು ದುಬಾರಿ ಬೈಕ್ ಎಂದೇ ಹೇಳಲಾಗುವ ನಿಯೋ ರೆಟ್ರೋ ಮಾದರಿಯ W800 ಭರ್ಜರಿ ರಿಯಾಯಿತಿಯನ್ನು ಪಡೆದುಕೊಂಡಿದೆ. ಬೇರೆ ಯಾವ ಕಾರು ತಯಾರಕ ಕಂಪನಿಗಳೇ ನೀಡದಂತಹ ಡಿಸ್ಕೌಂಟ್ ಅನ್ನು ಹೊಂದಿದ್ದು, ಅದು ಬರೋಬ್ಬರಿ ರೂ.2 ಲಕ್ಷವಿದೆ. ಈ ಮೊದಲು W800 ಬೆಲೆ ಸರಿ ಸುಮಾರು ರೂ.7.33 ಲಕ್ಷ ಇತ್ತು. ಅದು ಸದ್ಯ ರೂ. 5.33 ಲಕ್ಷ ದರದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಈ ಎಲ್ಲ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಆಧರಿಸಿವೆ.

ಸದ್ಯ ಖರೀದಿಗೆ ಲಭ್ಯವಿರುವ ಕವಾಸಕಿ ನಿಂಜಾ 300 ಭಾರತೀಯ ಮಾರುಕಟ್ಟೆಯಲ್ಲಿ ಒಂದು ರೂಪಾಂತರ ಹಾಗೂ ಮೂರು ಬಣ್ಣಗಳ ಸಿಗಲಿದೆ. ಇದು 296 ಸಿಸಿ BS6 ಎಂಜಿನ್ ಹೊಂದಿದ್ದು, 38.88 bhp ಗರಿಷ್ಠ ಪವರ್ ಹಾಗೂ 26.1 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಒಳಗೊಂಡಿದೆ. ಬರೋಬ್ಬರಿ 179 ಕೆಜಿ ತೂಕವಿದ್ದು, 17 ಲೀಟರ್ ಸಾಮರ್ಥ್ಯದ ಫ್ಯೂಯೆಲ್ ಟ್ಯಾಂಕ್ ಹೊಂದಿದೆ.

ಕವಾಸಕಿ ನಿಂಜಾ 300 ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾಗಿ ಹ್ಯಾಲೊಜೆನ್ ಹೆಡ್‌ಲೈಟ್ ಸೆಟಪ್, ಎಲ್‌ಇಡಿ ಟೈಲ್‌ಲೈಟ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ (ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್), ಸ್ಪ್ಲಿಟ್-ಸ್ಟೈಲ್ ಸೀಟ್ಸ್, ಅಲಾಯ್ ವೀಲ್ಸ್ ಗಳನ್ನು ಹೊಂದಿದೆ. ಅಲ್ಲದೆ, ಲೈಮ್ ಗ್ರೀನ್, ಕ್ಯಾಂಡಿ ಲೈಮ್ ಗ್ರೀನ್ ಮತ್ತು ಎಬೊನಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಈ ಕವಾಸಕಿ ನಿಂಜಾ 300, ಕೆಟಿಎಂ RC390 ಮತ್ತು ಟಿವಿಎಸ್ ಅಪಾಚೆ RR310 ಬೈಕ್ ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಕವಾಸಕಿ ದೊಡ್ಡ ಮಟ್ಟದಲ್ಲಿ ರಿಯಾಯಿತಿ ನೀಡಿರುವ W800, ಒಂದು ರೂಪಾಂತರ ಹಾಗೂ ಒಂದೇ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, 773 ಸಿಸಿ BS6 ಎಂಜಿನ್ ಹೊಂದಿದ್ದು, 50.95 bhp ಗರಿಷ್ಠ ಪವರ್ 62.9 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಹೊಂದಿದೆ. ಜೊತೆಗೆ ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದಿದ್ದು, 224 kg ತೂಕವಿದ್ದು, 15 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ.

ಒಟ್ಟಾರೆ, ದುಬಾರಿ ಬೈಕ್ ಗಳನ್ನೇ ಮಾರಾಟ ಮಾಡುವ ಕವಾಸಕಿ, ಭಾರತದ ಯುವ ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಅಲ್ಲದೆ, ಡಿಸ್ಕೌಂಟ್ ಆಫರ್ ರೂ.15,000 ದಿಂದ ಗರಿಷ್ಠ ರೂ.2 ಲಕ್ಷದವರೆಗೆ ಇದ್ದು, ದೇಶೀಯ ಮಾರುಕಟ್ಟೆಯಲ್ಲಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳಿಗೆ ಪೈಪೋಟಿ ನೀಡಲು ಇದರಿಂದ ಸಾಧ್ಯವಾಗಲಿದೆ. ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದ್ದು, ಕಾದು ನೋಡಬೇಕಾಗಿದೆ.

Most Read Articles

Kannada
English summary
Good news for kawasaki bike buyer 2 lakh discount details kannada
Story first published: Thursday, February 2, 2023, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X